ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಇಲ್ಲಿವೆ ಮನೆಮದ್ದು

news18
Updated:June 27, 2018, 11:38 AM IST
ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಇಲ್ಲಿವೆ ಮನೆಮದ್ದು
news18
Updated: June 27, 2018, 11:38 AM IST
-ನ್ಯೂಸ್ 18 ಕನ್ನಡ

ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದೆ. ವೈದ್ಯಕೀಯ ಜಗತ್ತಿನ ಸವಾಲಾಗಿರುವ ಈ ರೋಗಕ್ಕೆ ನಿರ್ದಿಷ್ಟ ಔಷಧವಿಲ್ಲ. ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಈ ಮಹಾಮಾರಿಗೆ ಬಲಿಯಾಗುವವರೇ ಹೆಚ್ಚು. ಆದರೆ ಕೆಲ ಆಹಾರಗಳ ಸೇವನೆಯಿಂದ ಕ್ಯಾನ್ಸರ್​ ರೋಗ ಬರದಂತೆ ಎಚ್ಚರವಹಿಸಬಹುದು. ಅವುಗಳಲ್ಲಿ ಮುಖ್ಯವಾದ ಕೆಲ ಆಹಾರ ಪದಾರ್ಥಗಳು ಇಂತಿವೆ.

ಅಶ್ವಗಂಧ - ಸುಮಾರು 40 ವರ್ಷಗಳ ಹಿಂದೆಯೇ ವಿಜ್ಞಾನಿಗಳು ಅಶ್ವಗಂಧದಲ್ಲಿ ಕ್ಯಾನ್ಸರ್​ ನಿರೋಧಕ ಅಂಶಗಳಿರುವುದು ಪತ್ತೆ ಹಚ್ಚಿದ್ದರು. ಕ್ಯಾನ್ಸರ್ ರೋಗಾಣುಗಳನ್ನು ನಿರ್ನಾಮ ಮಾಡುವಲ್ಲಿ ಅಶ್ವಗಂಧದಲ್ಲಿರುವ ಔಷಧೀಯ ಗುಣಗಳು ಪ್ರಮುಖ ಪಾತ್ರವಹಿಸುತ್ತದೆ.

ಅರಿಶಿನ - ದೈನಂದಿನ ಆಹಾರದಲ್ಲಿ ಬಳಸುವ ಅರಿಶಿನದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವ ಶಕ್ತಿ ಇದೆ. ಇದರಲ್ಲಿರುವ ಕರ್ಕ್ಯುಮಿನ್ ಅಂಶವು ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ನೆಲ್ಲಿಕಾಯಿ - ನೆಲ್ಲಿಕಾಯಿಯಲ್ಲಿರುವ ಕಾರ್ಸಿನೊಜೆನಿಕ್ ಅಂಶಗಳು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಯಕೃತ್ ಬಲಗೊಳ್ಳುತ್ತದೆ. ಇದು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಶುಂಠಿ- ಕ್ಯಾನ್ಸರ್​ ರೋಗದ ಮನೆಮದ್ದು ಎಂದು ಶುಂಠಿಯನ್ನು ಕರೆಯಲಾಗುತ್ತದೆ. ದೇಹದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಶುಂಠಿಯ ಪಾತ್ರ ಪ್ರಮುಖವಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುವ ಶುಂಠಿಯಲ್ಲಿ ಅಂಟಿ ಫಂಗಲ್ ಅಂಶವಿದ್ದು, ಇದು ಕ್ಯಾನ್ಸರ್ ರೋಗವನ್ನು ತಡೆಯುತ್ತದೆ.

ಬೆಳ್ಳುಳ್ಳಿ - ಆಯುರ್ವೇದದ ಪ್ರಕಾರ, ಪ್ರತಿನಿತ್ಯ ಒಂದು ಸಣ್ಣ ಬೆಳ್ಳುಳ್ಳಿ ಸೇವನೆಯಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ಶೇ.80ರಷ್ಟು ಕಡಿಮೆಗೊಳಿಸಬಹುದು. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಅಂಶವು ಕ್ಯಾನ್ಸರ್ ರೋಗದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...