Winter Eye Care: ಚಳಿಗಾಲದಲ್ಲಿ ಕಣ್ಣಿನ ಆರೋಗ್ಯ ಕಾಪಾಡಲು ಮಿಸ್ ಮಾಡ್ದೇ ಇವುಗಳನ್ನು ತಿನ್ನಿ

Foods For Eye Health: ನಿರ್ದಿಷ್ಟವಾಗಿ, ಹೆಚ್ಚಿನ ಜನರು ಒಣ ಕಣ್ಣಿನ ಸಮಸ್ಯೆಯಿಂದ ಬಳಲುತ್ತಾರೆ. ಕಣ್ಣಿನಲ್ಲಿ ಕಣ್ಣೀರಿನ ಅಸಮರ್ಪಕ ಉತ್ಪಾದನೆ ಮತ್ತು ತಾಪಮಾನ ಕಡಿಮೆಯಾಗುವುದು ಒಣ ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು. ಮತ್ತೊಂದೆಡೆ, ನವದೆಹಲಿಯ ವೈದ್ಯಕೀಯ ನಿರ್ದೇಶಕರಾದ ಡಾ ತುಷಾರ್ ಗ್ರೋವರ್, "ಕೆಲವು ಆಧಾರವಾಗಿರುವ ಪರಿಸ್ಥಿತಿಗಳು ಆಗಾಗ ಒಣ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಂದರವಾಗಿ ಕಾಣಲು ಸುಂದರ ಮುಖವಿದ್ದರೆ(Beautiful Face) ಸಾಲದು. ಸುಂದರ ಕಣ್ಣುಗಳೂ(Eyes) ಇರಬೇಕು. ಆದರೆ, ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗಳ ಜೊತೆಗೆ ಕಣ್ಣಿನ ಸಮಸ್ಯೆಗಳೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂದರೆ ಇತರ ಋತುಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ(Winter) ನಿಮ್ಮ ಕಣ್ಣುಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವುಗಳ ಆರೈಕೆಗಾಗಿ ಆರೋಗ್ಯಕರ ಆಹಾರ(Healthy Food) ಮತ್ತು ಆರೋಗ್ಯಕರ ಜೀವನಶೈಲಿಯನ್ನು(Lifestyle) ಅನುಸರಿಸಬೇಕು. ದೇಹದ ಪ್ರಮುಖ ಅಂಗವಾದ ಕಣ್ಣಿನ ಸಮಸ್ಯೆಯಿಂದ(Eye Problem) ಬಳಲುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ನಮ್ಮಲ್ಲಿ ಹಲವರಿಗೆ ಒಣ ಕಣ್ಣುಗಳು, ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಇತರ ಕಣ್ಣಿನ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣವೆಂದರೆ ಹೆಚ್ಚಿನ ಒತ್ತಡ, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ.  ಇತರವುಗಳು ಕಾಲೋಚಿತ ಅಥವಾ ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಕಾರಣದಿಂದಾಗಿರಬಹುದು.  

ನಿರ್ದಿಷ್ಟವಾಗಿ, ಹೆಚ್ಚಿನ ಜನರು ಒಣ ಕಣ್ಣಿನ ಸಮಸ್ಯೆಯಿಂದ ಬಳಲುತ್ತಾರೆ. ಕಣ್ಣಿನಲ್ಲಿ ಕಣ್ಣೀರಿನ ಅಸಮರ್ಪಕ ಉತ್ಪಾದನೆ ಮತ್ತು ತಾಪಮಾನ ಕಡಿಮೆಯಾಗುವುದು ಒಣ ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು. ಮತ್ತೊಂದೆಡೆ, ನವದೆಹಲಿಯ ವೈದ್ಯಕೀಯ ನಿರ್ದೇಶಕರಾದ ಡಾ ತುಷಾರ್ ಗ್ರೋವರ್, "ಕೆಲವು ಆಧಾರವಾಗಿರುವ ಪರಿಸ್ಥಿತಿಗಳು ಆಗಾಗ ಒಣ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತವೆ, ಆದರೆ ಅವುಗಳಲ್ಲಿ ಕೆಲವು ಕಡಿಮೆ ಆರ್ದ್ರತೆ, ಶೀತ ತಾಪಮಾನ ಮತ್ತು ಗಾಳಿಯ ವಾತಾವರಣದಂತಹ ಸಾಮಾನ್ಯ ಕಾರಣಗಳಿಂದ ಹೆಚ್ಚಾಗುತ್ತದೆ ಎಂದಿದ್ದಾರೆ.

ಆದ್ದರಿಂದ, ಆರೋಗ್ಯ ತಜ್ಞರು ಚಳಿಗಾಲದಲ್ಲಿ ಕಣ್ಣುಗಳಿಗೆ ವಿಶೇಷ ಗಮನ ಕೊಡಬೇಕೆಂದು ಸಲಹೆ ನೀಡುತ್ತಾರೆ. ಅಲ್ಲದೆ, ಅವರುನಿಮ್ಮ ಸಮಸ್ಯೆಗೆ ತಕ್ಕಂತೆ ಕಣ್ಣಿನ ಡ್ರಾಪ್​ಗಳನ್ನು ಬಳಕೆ ಮಾಡುವಂತೆ ಸಲಹೆ ನೀಡುತ್ತಾರೆ. ಜೊತೆಗೆ ಇದು ಆರೋಗ್ಯಕರ ಕಣ್ಣುಗಳ ಪೌಷ್ಟಿಕಾಂಶದ ಅಗತ್ಯತೆಗಳನ್ನು ಒತ್ತಿಹೇಳುತ್ತದೆ. ಈ ಚಳಿಗಾಲದಲ್ಲಿ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಈ ಆಹಾರಗಳನ್ನು ಸೇವಿಸಿ ಎಂದು ಸಹ ಅವರು ಹೇಳುತ್ತಾರೆ.

ಹಾಗಾದ್ರೆ ಚಳಿಗಾಲದಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಯಾವ ಆಹಾರವನ್ನು ಸೇವನೆ ಮಾಡಬೇಕು ಎಂಬುದು ಇಲ್ಲಿದೆ. 

ಇದನ್ನೂ ಓದಿ:ಮಕ್ಕಳಲ್ಲಿ ಈ ಲಕ್ಷಣ ಕಂಡು ಬಂದ್ರೆ ಎಚ್ಚರ- ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ

ನೆಲ್ಲಿಕಾಯಿ

ವಿಟಮಿನ್ 'ಸಿ' ಪೋಷಕಾಂಶ ಹೆಚ್ಚಿರುವ ನೆಲ್ಲಿಕಾಯಿ ನಿಮ್ಮ ಆರೋಗ್ಯಕ್ಕೆ ಹೆಚ್ಚು ಉತ್ತಮ. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ, ಇದು ನಿಮ್ಮ ಕಣ್ಣುಗಳು ಅದ್ಭುತವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರೆಟಿನಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಮಾಡಿ.

 ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ಸಹ ವಿಟಮಿನ್ ಸಿ ಅಧಿಕವಾಗಿದ್ದು, ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಿತ್ತಳೆ ನಿಮ್ಮ ಕಣ್ಣುಗಳಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಕಿತ್ತಳೆಯಲ್ಲಿರುವ ಹೆಚ್ಚಿನ ನೀರಿನ ಅಂಶವು ಕಣ್ಣುಗಳನ್ನು ಯಾವಾಗಲೂ ತೇವಾಂಶದಿಂದ ಇಡಲು ಸಹಾಯಕ. ಇದು ಒಣ ಕಣ್ಣುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕ.

ಸೀಬೆಹಣ್ಣು

ಚಳಿಗಾಲದಲ್ಲಿ ಹೆಚ್ಚು ಸಿಗುವ ಪೇರಲ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುವಲ್ಲಿ ಮತ್ತು ವಯಸ್ಸಿನೊಂದಿಗೆ ಬರುವ ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸು ವಿಟಮಿನ್ 'ಎ' ಮತ್ತು ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದೆ. ಇವೆರಡೂ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಚೆನ್ನಾಗಿ ಕೆಲಸ ಮಾಡುತ್ತವೆ. ನಿರ್ದಿಷ್ಟವಾಗಿ, ಬೀಟಾ ಕ್ಯಾರೋಟಿನ್ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ವಿಟಮಿನ್ 'ಎ' ವಿಷಯಕ್ಕೆ ಬಂದರೆ ಇದು ಕಣ್ಣಿನ ಶುಷ್ಕತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಪಾಲಕ್ ಸೊಪ್ಪು

ಇದನ್ನೂ ಓದಿ: ಅತಿಯಾದ್ರೆ ಲವಂಗ ಕೂಡ ಆರೋಗ್ಯಕ್ಕೆ ಹಾನಿಕಾರಕ

ಪಾಲಕ್ ಅತ್ಯಂತ ಜನಪ್ರಿಯ ಚಳಿಗಾಲದ ಹಸಿರು  ಸೊಪ್ಪುಗಳಲ್ಲಿ ಒಂದಾಗಿದೆ. ಆಪ್ಟಿಕ್ ನರಗಳ ಸಮಸ್ಯೆಯಿಂದ ಪರಿಹಾರ ಪಡೆಯಲು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಇದರಲ್ಲಿರುವ ಫೋಲಿಕ್ ಆಮ್ಲ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದ್ದರಿಂದ, ಆರೋಗ್ಯಕರ ಕಣ್ಣುಗಳಿಗಾಗಿ ನಿಮ್ಮ ನಿಯಮಿತ ಆಹಾರದಲ್ಲಿ ಪಾಲಕವನ್ನು ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.
Published by:Sandhya M
First published: