• Home
  • »
  • News
  • »
  • lifestyle
  • »
  • Collagen Foods: ಯಂಗ್‌ ಆಗಿ ಕಾಣೋಕೆ ಕಾಲಜನ್ ಇರೋ ಈ ಆಹಾರಗಳನ್ನು ತಿನ್ಬೇಕಂತೆ

Collagen Foods: ಯಂಗ್‌ ಆಗಿ ಕಾಣೋಕೆ ಕಾಲಜನ್ ಇರೋ ಈ ಆಹಾರಗಳನ್ನು ತಿನ್ಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foods to Boost Collagen: ಕಾಲಜನ್ ಉತ್ಪಾದನೆಗೆ ಸಹಾಯ ಮಾಡುವ ಜೀವಸತ್ವಗಳು ಮತ್ತು ಖನಿಜಗಳು ವಯಸ್ಸಾದ ಪ್ರಕ್ರಿಯೆಯನ್ನು ಹೋಗಲಾಡಿಸುವ ರಹಸ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಯುರ್ವೇದ ತಜ್ಞರಾದ ಡಾ ಡಿಂಪಲ್ ಜಂಗ್ಡಾ, ಸತು, ವಿಟಮಿನ್ ಸಿ ಮತ್ತು ಐರನ್ ಅನ್ನು ಊಟದಲ್ಲಿ ಸೇರಿಸಲು ಸಲಹೆ ನೀಡುತ್ತಾರೆ.

ಮುಂದೆ ಓದಿ ...
  • Share this:

ಕಾಲಜನ್ (Collagen) ನಮ್ಮ ದೇಹದಲ್ಲಿ (Body)ಹೆಚ್ಚು ಹೇರಳವಾಗಿರುವ, ನೈಸರ್ಗಿಕವಾಗಿ ಕಂಡುಬರುವ ಪ್ರೋಟೀನ್ ಆಗಿದ್ದು, ನಮ್ಮ ಚರ್ಮಕ್ಕೆ (Skin) ರಚನೆ ಮತ್ತು ಶಕ್ತಿಯನ್ನು ಒದಗಿಸುವುದರ ಜೊತೆಗೆ ಚರ್ಮವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಕಾಲಜನ್ ಸರಿಯಾದ ಪ್ರಮಾಣದಲ್ಲಿದ್ದರೆ ನಮ್ಮ ಚರ್ಮವು ನಯವಾಗಿ, ಮೃದುವಾಗಿ ಮತ್ತು ದೃಢವಾಗಿ ಉಳಿಯುತ್ತದೆ. ವಯಸ್ಸಾದಂತೆ, ಕಾಲಜನ್ ಉತ್ಪಾದನೆಯು ಕಡಿಮೆಯಾಗುತ್ತದೆ ಮತ್ತು ಚರ್ಮದ ಸ್ಥಿತಿಸ್ಥಾಪಕತ್ವದ ನಷ್ಟವಾಗುತ್ತದೆ. ಪರಿಣಾಮ ನಮ್ಮ ಚರ್ಮವು ಸುಕ್ಕುಸುಕ್ಕಾಗಲು ಪ್ರಾರಂಭಿಸುತ್ತದೆ ಮತ್ತು ಮುಖದ ಮೇಲೆ ಸೂಕ್ಷ್ಮವಾದ ಗೆರೆಗಳು  ಕಾಣಿಸಿಕೊಳ್ಳುತ್ತವೆ ಎಂಬುದಾಗಿ ಹೇಳ್ತಾರೆ ಚರ್ಮರೋಗ ತಜ್ಞರು ಮತ್ತು ಎಸ್ಟಿಕ್ ಕ್ಲಿನಿಕ್ ಸಂಸ್ಥಾಪಕಿ ಡಾ.ನೇಹಾ ಶರ್ಮಾ.


ಕಾಲಜನ್ ಉತ್ಪಾದನೆಗೆ ಸಹಾಯ ಮಾಡುವ ಜೀವಸತ್ವಗಳು ಮತ್ತು ಖನಿಜಗಳು ವಯಸ್ಸಾದ ಪ್ರಕ್ರಿಯೆಯನ್ನು ಹೋಗಲಾಡಿಸುವ ರಹಸ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಯುರ್ವೇದ ತಜ್ಞರಾದ ಡಾ ಡಿಂಪಲ್ ಜಂಗ್ಡಾ, ಸತು, ವಿಟಮಿನ್ ಸಿ ಮತ್ತು ಐರನ್ ಅನ್ನು ಊಟದಲ್ಲಿ ಸೇರಿಸಲು ಸಲಹೆ ನೀಡುತ್ತಾರೆ. "ವಿಟಮಿನ್ ಸಿ ಪ್ರೊ-ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಅವರ ಪ್ರಕಾರ ಕೆಲವು ಹಣ್ಣು ತರಕಾರಿಗಳು ಹೆಚ್ಚಿನ ಕೊಲಾಜೆನ್‌ ಉತ್ಪಾದನೆಗೆ ಸಹಾಯ ಮಾಡುತ್ತವೆ.


ಸಿಟ್ರಸ್ ಹಣ್ಣುಗಳು: ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ನಿಂಬೆಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ತುಂಬಿರುತ್ತವೆ. ಇದು ಕೊಲಾಜೆನ್‌ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ ವಯಸ್ಸಾಗುವ ಪ್ರಕ್ರಿಯೆಯ ವೇಗವನ್ನು ತಡೆಯುತ್ತವೆ.


ಟೊಮ್ಯಾಟೋ : ಟೊಮ್ಯಾಟೋ ಕೊಲಾಜೆನ್‌ ಗೆ 30% ರಷ್ಟು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ಟೊಮೆಟೊದಲ್ಲಿ ಲೈಕೋಪೀನ್ ಕೂಡ ಇದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ.


ಬೆಲ್ ಪೆಪರ್: ಬೆಲ್ ಪೆಪರ್ ವಿಟಮಿನ್ ಸಿ ಮತ್ತು ಕ್ಯಾಪ್ಸೈಸಿನ್ ಅನ್ನು ಹೊಂದಿರುತ್ತದೆ. ಇದು ವಯಸ್ಸಾದ ಚಿಹ್ನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.


ಉಷ್ಣವಲಯದ ಹಣ್ಣುಗಳು: ಆರೋಗ್ಯಕರ ಚರ್ಮಕ್ಕಾಗಿ ಮಾವು, ಕಿವಿ, ಅನಾನಸ್ ಮತ್ತು ಪೇರಲವನ್ನು ಸೇವಿಸಬೇಕು. ಅವು ವಿಟಮಿನ್ ಸಿ ಯ ಉತ್ತಮ ಮೂಲಗಳಾಗಿವೆ.


ಹಣ್ಣುಗಳು: ಸೇಬು, ಚೆರ್ರಿ, ಸ್ಟ್ರಾಬೆರಿ, ಭಾರತೀಯ ನೆಲ್ಲಿಕಾಯಿ, ರಾಸ್ಬೆರಿ ಮತ್ತು ಬ್ಲ್ಯಾಕ್ಬೆರಿಗಳಂತಹ ಸಂಕೋಚಕ ಹಣ್ಣುಗಳು ಅಂಗಾಂಶ ಮತ್ತು ಚರ್ಮವನ್ನು ಬಿಗಿಗೊಳಿಸಲು ಮತ್ತು ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸಲು ಸಹಾಯ ಮಾಡುತ್ತದೆ.


ಬೆಳ್ಳುಳ್ಳಿ: ಬೆಳ್ಳುಳ್ಳಿಯು ಕೊಲಾಜೆನ್‌ ಉತ್ಪಾದನೆಯನ್ನು ಹೆಚ್ಚಿಸುವ ಮತ್ತೊಂದು ಆಹಾರವಾಗಿದೆ. ಇದರಲ್ಲಿ ಗಂಧಕ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.


ಸೂಪ್‌ಗಳು: ಪಾಲಕ್, ಕೇಲ್, ಸ್ವಿಸ್ ಚಾರ್ಡ್ ಮತ್ತು ಇತರ ಸಲಾಡ್ ಗ್ರೀನ್‌ಗಳಂತಹ ಎಲೆಗಳ ಸೊಪ್ಪಿನಿಂದ ತಯಾರಿಸಿದ ಸೂಪ್‌ಗಳು ಕ್ಲೋರೊಫಿಲ್ ಅನ್ನು ಹೊಂದಿರುತ್ತವೆ. ಇದು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.


ಇದನ್ನೂ ಓದಿ: ಈ ಹಣ್ಣುಗಳನ್ನು ಪ್ರತಿದಿನ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತಂತೆ


ಬೀನ್ಸ್: ಬೀನ್ಸ್ ಹೆಚ್ಚಿನ ಪ್ರೋಟೀನ್‌ ಯುಕ್ತ ಆಹಾರವಾಗಿದ್ದು ಅದು ಕೊಲ್ಯಾಜೆನ್‌ ಸಂಶ್ಲೇಷಣೆಗೆ ಅಗತ್ಯವಾದ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಜೊತೆಗೆ, ಅವುಗಳಲ್ಲಿ ಹಲವು ತಾಮ್ರದಲ್ಲಿ ಸಮೃದ್ಧವಾಗಿವೆ. ಕೊಲಾಜೆನ್‌ ಉತ್ಪಾದನೆಗೆ ಅಗತ್ಯವಾದ ಮತ್ತೊಂದು ಪೋಷಕಾಂಶವಾಗಿದೆ.
ಗೋಡಂಬಿ: ಗೋಡಂಬಿಯು ಸತು ಮತ್ತು ತಾಮ್ರವನ್ನು ಹೊಂದಿರುತ್ತದೆ. ಇವೆರಡೂ ಕಾಲಜನ್ ಅನ್ನು ರಚಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.


ಮೇಲಿನ ಆಹಾರಗಳ ಜೊತೆಗೆ, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ಕೆಲವು ವಿಧಾನಗಳನ್ನು ಡಾ. ನೇಹಾ ಸೂಚಿಸಿದ್ದಾರೆ.


* ವಿಟಮಿನ್ ಎ ಯ ಉತ್ಪನ್ನಗಳು, ಕೊಲಾಜೆನ್‌ ಉತ್ಪಾದನೆಯಲ್ಲಿ ತೊಡಗಿರುವ ಜೀನ್‌ಗಳನ್ನು ನಿಯಂತ್ರಿಸುವ ಮೂಲಕ ಅವು ಕಾರ್ಯನಿರ್ವಹಿಸುತ್ತವೆ. ಕ್ಯಾರೊಟಿನಾಯ್ಡ್​ಗಳಲ್ಲಿ ಸಮೃದ್ಧವಾಗಿರುವ ಆಹಾರಗಳೆಂದರೆ ಪಾಲಕ್‌, ಸಿಹಿ ಆಲೂಗಡ್ಡೆ, ಕುಂಬಳಕಾಯಿಗಳು ಮತ್ತು ಕ್ಯಾರೆಟ್‌ ಗಳು.


* ಪೆಪ್ಟೈಡ್‌ಗಳು ಅಮೈನೋ ಆಮ್ಲಗಳ ಸಣ್ಣ ಸರಪಳಿಯಾಗಿದ್ದು ಅದು ಪ್ರೋಟೀನ್‌ಗಳ ಬಿಲ್ಡಿಂಗ್ ಬ್ಲಾಕ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ಪೆಪ್ಟೈಡ್‌ಗಳೊಂದಿಗಿನ ಉತ್ಪನ್ನಗಳು ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


*UV ಕಿರಣಗಳು ಚರ್ಮದ ಮೇಲಿನ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ಸನ್‌ಸ್ಕ್ರೀನ್ ಅನ್ನು ಹಚ್ಚಿ.


ಇದನ್ನೂ ಓದಿ: ಧುಮ್ಮಿಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್​


*ಫ್ರಾಕ್ಷನಲ್ ಲೇಸರ್, ಮೈಕ್ರೊನೀಡ್ಲಿಂಗ್, ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ, ಎಲ್ಇಡಿ ಥೆರಪಿ ಮತ್ತು ಕೆಮಿಕಲ್ ಪೀಲ್ಗಳಂತಹ ವಿವಿಧ ಚರ್ಮದ ಚಿಕಿತ್ಸೆಗಳು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಹೆಸರುವಾಸಿಯಾಗಿದೆ.

Published by:Sandhya M
First published: