Breast Cancer: ಈ ಆಹಾರಗಳನ್ನು ಸೇವಿಸಿದ್ರೆ ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು

Foods that Prevent Breast Cancer: ಅರಿಶಿಣದಲ್ಲಿರುವ ಕುರ್ಕ್ಯೂಮಿನ್ ಸಕ್ರೀಯವಾಗಿರುವ ಪದಾರ್ಥವಾಗಿದ್ದು ಆಂಟಿ-ಕ್ಯಾನ್ಸರ್ ಗುಣ ಹೊಂದಿರುವುದನ್ನು ಈಗಾಗಲೇ ಸಾಬೀತುಪಡಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ತನದ ಕ್ಯಾನ್ಸರ್ (Breast Cancer) ಎಂಬುದು ಜಾಗತಿಕ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ (Women) ಕಂಡುಬರುತ್ತಿದೆ.ಭಾರತದ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ವರದಿಯ ಪ್ರಕಾರ, ಭಾರತ ದೇಶದಲ್ಲಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರ ಸಂಖ್ಯೆ 179,790 ಆಗಿದ್ದು ಇದು ಕಂಡುಬರುವ ಎಲ್ಲ ಕ್ಯಾನ್ಸರ್ ಗಳಲ್ಲಿ ಶೇ. 10 ರಷ್ಟಾಗಿದೆ ಎಂದು ಹೇಳಿದೆ. 

ಪ್ರತಿ 22 ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವನಾವಧಿಯಲ್ಲಿ ಸ್ತನ ಕ್ಯಾನ್ಸರ್ ರೋಗಕ್ಕೆ ಈಡಾಗುತ್ತಾರೆ ಎಂದು ತಿಳಿದುಬಂದಿದೆ. ಅಷ್ಟೆ ಅಲ್ಲದೆ ಕಾಲ ಕಳೆದಂತೆ ಸ್ತನ ಕ್ಯಾನ್ಸರ್ ನಿಂದ ಬಳಲುವ ಮಹಿಳೆಯರ ಸಂಖ್ಯೆಯಲ್ಲಿ ನಿಧಾನಗತಿಯಲ್ಲಿ ಏರಿಕೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾದ ಬೆಳವಣಿಗೆಯೇ ಹೌದು. ಹಾಗಾಗಿ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಹಾಗೂ ಅದು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇವಲ ಮಹಿಳೆಯರಷ್ಟೆ ಅಲ್ಲದೆ ಪ್ರತಿ ಜವಾಬ್ದಾರಿಯುತ ನಾಗರಿಕರಲ್ಲಿ ಸ್ಪಷ್ಟವಾದ ಅರಿವು ಮೂಡಿಸಬೇಕಾದ ಸಮಯ ಇದಾಗಿದೆ. ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಕೆಲ ಮಹತ್ತರ ಬದಲಾವಣೆಗಳನ್ನು ದೃಢ ಮನಸ್ಸಿನಿಂದ ಮಾಡಿಕೊಳ್ಳೂವುದರ ಮೂಲಕ ಸ್ತನ ಕ್ಯಾನ್ಸರ್ ಬರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ. ಅಂತಹ ಬದಲಾವಣೆಗಳ ಪೈಕಿ ಒಂದಾಗಿದೆ ಆಹಾರ ಪದ್ಧತಿ. 

ಈ ಕೆಳಗೆ ನೀಡಲಾಗಿರುವ ವಿವಿಧ ಆಹಾರಗಳು ನಿಮಗೆ ಸ್ತನದ ಕ್ಯಾನ್ಸರ್ ಉಂಟಾಗದಂತೆ ತಡೆಯಲು ಸಹಕರಿಸುತ್ತವೆ. ಇವುಗಳಲ್ಲಿ ಬಹಳಷ್ಟು ಆಹಾರ ನಿಮಗೆ ಸುಲಭವಾಗಿ ದೊರೆಯುತ್ತವೆ. ನೆನಪಿಡಿ ಕಡಿಮೆ ತಿನ್ನುವುದಕ್ಕಿಂತ ಸರಿಯಾದುದನ್ನು ತಿನ್ನುವುದು ಆರೋಗ್ಯಕ್ಕೆ ಸಹಕಾರಿ. ಈ ನಿಟ್ಟಿನಲ್ಲಿ ಹಣ್ಣು ಹಾಗೂ ತರಕಾರಿಗಳ ಸೇವನೆಯು ಸ್ತನದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖವಾಗಿ ಸಹಕರಿಸುತ್ತವೆ. ಈ ಫೈಟೋಕೆಮಿಕಲ್ ಯುಕ್ತ ಪದಾರ್ಥಗಳು ಹೇರಳವಾದ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದಲ್ಲದೆ ಕ್ಯಾನ್ಸರ್ ತಡೆಗಟ್ಟೂವ ಗುಣಗಳನ್ನು ಹೊಂದಿವೆ. ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಹಣ್ಣು ಹಾಗೂ ತರಕಾರಿಗಳ ಸೇವನೆ ಹೆಚ್ಚಿದ್ದಷ್ಟು ಉತ್ತಮ. 

ಸಿಟ್ರಸ್ ಅಂಶ ಹೇರಳವಾಗಿರುವ ಹಣ್ಣುಗಳು

ಜೀವಸತ್ವ ಸಿ, ಫೊಲೇಟ್, ಕ್ಯಾರೋಟಿನಾಯಿಡ್ಸ್ ಹಾಗೂ ಆಂಟಿ-ಆಕ್ಸಿಡಂಟ್ ಗಳಿಂದ ತುಂಬಿರುವ ಸಿಟ್ರಸ್ ಹಣ್ಣುಗಳು ಸ್ತನದ ಕ್ಯಾನ್ಸರ್ ಬರದಂತೆ ಸಹಕರಿಸುವಲ್ಲಿ ಉತ್ತಮ ಪಾತ್ರವಹಿಸುತ್ತದೆ. ಆಂತಿ-ಕ್ಯಾನ್ಸರ್ ಗುಣಗಳನ್ನಷ್ಟೆ ಅಲ್ಲದೆ ಆಂಟಿ-ಇನ್ಫ್ಲಾಮೆಟರಿ ಗುಣಗಳನ್ನು ಸಿಟ್ರಸ್ ಹಣ್ಣುಗಳು ಹೊಂದಿರುತ್ತವೆ. ಹಾಗಾಗಿ ಆರೆಂಜ್, ನಿಂಬೆ, ದ್ರಾಕ್ಷಿಗಳಂತಹ ಹಣ್ಣುಗಳನ್ನು ನಿಮ್ಮ ಮಧ್ಯಾಹ್ನದ ಊಟದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಅಭ್ಯಾಸ.

ಬೀನ್ಸ್

ನಾವು ಸಾಮಾನ್ಯವಾಗಿ ನಮ್ಮ ದಿನ ನಿತ್ಯದ ಅಡಿಗೆಯಲ್ಲಿ ಬಳಸುವ ಬೀನ್ಸ್ ಹೇರಳ ಪ್ರಮಾಣದಲ್ಲಿ ಫೈಬರ್, ವೈಟಮಿನ್ ಹಾಗೂ ಮಿನೆರಲ್ ಅಂಶಗಳನ್ನು ಹೊಂದಿದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಪ್ರಮಾಣವು ಸ್ತನದ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಬಹುದೆನ್ನಲಾಗಿದೆ. 2,571 ಮಹಿಳೆಯರ ಮೇಲೆ ನಡೆಸಲಾದ ಅಧ್ಯಯನವೊಂದರ ಪ್ರಕಾರ, ಬೀನ್ಸ್ ಸೇವನೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಶೇ. 20 ರಷ್ಟು ಸಹಕರಿಸಿರುವ ಬಗ್ಗೆ ಫಲಿತಾಂಶದಿಂದ ಕಂಡುಬಂದಿದೆ. ಇಲ್ಲಿ ಕೆಲ ಮಹಿಳೆಯರಿಗೆ ಕಡಿಮೆ ಬೀನ್ಸ್ ಸೇವಿಸಲು ನೀಡಿದ್ದರೆ ಮಿಕ್ಕ ಮಹಿಳೆಯರಿಗೆ ಹೆಚ್ಚಿನ ಬೀನ್ಸ್ ಅನ್ನು ಸೇವಿಸಲು ನೀಡಲಾಗಿತ್ತು. 

ಹಸಿರು ಎಲೆ ತರಕಾರಿಗಳು

ಪಾಲಕ್, ನುಗ್ಗೆ ಸೊಪ್ಪು, ಮೇಥಿ ಹಾಗೂ ಮಸ್ಟರ್ಡ್ ಗ್ರೀನ್ಸ್ ನಂತಹ ಸೊಪ್ಪುಗಳನ್ನು ನಿಮ್ಮ ಖಾದ್ಯದಲ್ಲಿ ಹೇರಳವಾಗಿ ಬಳಸಿ. ನೀವು ತಯಾರಿಸುವ ಬೇಳೆ ಯಲ್ಲಿ(ದಾಲ್) ಅವುಗಳನ್ನು ಹಾಕಿ ಕೂಡ ಬಳಸಬಹುದು. ಈ ಹಸಿರು ಎಲೆ ತರಕಾರಿಗಳು ಬೀಟಾ ಕ್ಯಾರೋಟಿನ್, ಲುಟೀನ್, ಜೆಕ್ಸಾಂಥೀನ್ ಸೇರಿದಂತೆ ಕ್ಯಾರೋಟಿನಾಯ್ಡ್ ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಈ ಗುಣಗಳು ಆಂಟಿ-ಬ್ರೀಸ್ಟ್ ಕ್ಯಾನ್ಸರ್ ಗುಣಗಳನ್ನು ಹೊಂದಿವೆ ಎನ್ನಲಾಗಿದೆ. ಅಧ್ಯಯನವೊಂದರ ಪ್ರಕಾರ ಹೆಚ್ಚಿನ ಪ್ರಮಾಣದ ಕ್ಯಾರೋಟಿನಾಯ್ಡ್ಸ್ ಹೊಂದಿದ ಮಹಿಳೆಯರು ಸ್ತನದ ಕ್ಯಾನ್ಸರ್ ಸಮಸ್ಯೆಗೆ ಒಳಪಡುವ ಸಾಧ್ಯತೆ ಬಹಳಷ್ಟು ಕಡಿಮೆ ಎಂದು ತಿಳಿದುಬಂದಿದೆ.  

ಹಣ್ಣುಗಳು - ಪೀಚ್, ಸೇಬು ಹಾಗೂ ಪಿಯರ್

ಪೀಚ್, ಸೇಬು ಹಾಗೂ ಪಿಯರ್ ಹಣ್ಣುಗಳ ಸೇವನೆ ಸ್ತನದ ಕ್ಯಾನ್ಸರ್ ತಡೆಯುವಲ್ಲಿ ಸಹಕರಿಸುತ್ತದೆಂದು ತಿಳಿದುಬಂದಿದೆ. 75,929 ಮಹಿಳೆಯರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಅವರಿಗೆ ಪ್ರತಿ ವಾರ ಎರಡು ಸರ್ವಿಂಗ್ ಆಗುವಷ್ಟು ಪೀಚ್ ಹಣ್ಣುಗಳನ್ನು ಸೇವಿಸಲು ನೀಡಲಾಗಿತ್ತು. ತದನಂತರ ಕಂಡುಬಂದಿದ್ದ ವಿಷಯವೆಂದರೆ ಅವರಲ್ಲಿ ER-ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆಯಲ್ಲಿ ಶೇ. 41 ರಷ್ಟು ಕುಸಿತ ಉಂಟಾಗಿತ್ತು, ಇನ್ನೊಂದು ಆಸಕ್ತಿಕರ ವಿಷಯವೆಂದರೆ ಟೆಸ್ಟ್ ಟ್ಯೂಬ್ ನಲ್ಲಿ ಮಾಡಲಾದ ಪರೀಕ್ಷೆಯಲ್ಲಿ, ಪೀಚ್ ನಲ್ಲಿರುವ ಪಾಲಿಫಿನಾಲ್ ಅಂಶಗಳು ಕ್ಯಾನ್ಸರ್ ಜೀವಕೋಶಗಳ ಹರಡುವಿಕೆ ಹಾಗೂ ಬೆಳವಣಿಗೆಗೆ ತಡೆ ಒಡ್ಡುವುದು ಕಂಡುಬಂದಿತ್ತು. 

ಮೀನುಗಳ ಸೇವನೆ

ಮೀನು ಪ್ರಬೇಧಗಳಾದ ಸಲಮಾನ್, ಸರಡೈನ್ ಹಾಗೂ ಮ್ಯಾಕರೆಲ್ ತಳಿಗಳು ತಮ್ಮ ಅದ್ಭುತವಾದ ಆರೋಗ್ಯವರ್ಧಕ ಗುಣಗಳಿಗಾಗಿ ಹೆಸರುವಾಸಿಯಾಗಿವೆ. ಈ ಮೀನುಗಳಲ್ಲಿ ಕಂಡುಬರುವ ಒಮೆಗಾ-3 ಫ್ಯಾಟ್, ಸಿಲೇನಿಯಂ ಹಾಗೂ ಆಂಟಿ-ಆಕ್ಸಿಡಂಟ್ ಗಳಾದ ಕ್ಯಾಂತಾಕ್ಸಾಂಥೀನ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಾಕಷ್ಟು ಸಹಕರಿಸಬಹುದೆನ್ನಲಾಗಿದೆ. ಕೆಲ ಅಧ್ಯಯನಗಳು ನಿರ್ದಿಷ್ಟವಾಗಿ ಮೀನುಗಳ ಸೇವನೆಯು ಸ್ತನದ ಕ್ಯಾನ್ಸರ್ ಬರದಂತೆ ಮಾಡುತ್ತವೆ ಎಂದು ಹೇಳಿವೆ. 

ಬೆರ್‍ರಿಗಳು

ವಿವಿಧ ರೀತಿಯ ಬೆರ್‍ರಿ ಹಣ್ಣುಗಳು ಕೇವಲ ಸ್ವಾದವನ್ನಷ್ಟೆ ಅಲ್ಲದೆ ಉತ್ತಮವಾದ ಆಂಟಿ ಆಕ್ಸಿಡಂಟ್ ಗಳಿಗೆ ಮೂಲವಾಗಿದೆ ಎನ್ನಬಹುದು. ಈ ರೀತಿಯ ಹಣ್ಣುಗಳಲ್ಲಿ ಅಂಥೋಸಿಯಾನಿನ್ ಹಾಗೂ ಫ್ಲಾವನಾಯ್ಡ್ ಗಳು ಹೆಚಾಗಿರುತ್ತವೆ. ಇವು ಮನುಷ್ಯನ ಜೀವಕೋಶಗಳಿಗೆ ಯಾವುದೆ ಹಾನಿಯುಂಟಾಗದಂತೆ ತಡೆಯುತ್ತವೆ ಹಾಗೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ನೀಲಿ ಬೆರ್‍ರಿ ಹಣ್ಣುಗಳ ಸೇವನೆ ಸ್ತನದ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಾಕಷ್ಟು ಸಹಕಾರಿಯಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ: ಈ ಬಾರಿ ಓಣಂ ವಿಶೇಷ ಊಟಕ್ಕೆ ಬೆಂಗ್ಳೂರಿನ ಈ ರೆಸ್ಟೊರೆಂಟ್​ಗಳು ರೆಡಿಯಾಗಿವೆ, ನೀವು ಬುಕ್ ಮಾಡಿದ್ರಾ?

ಕ್ರೂಸಿಫೆರಸ್ ತರಕಾರಿಗಳು

ಕ್ರೂಸಿಫೆರಸ್ ತರಕಾರಿಗಳಾದಂತಹ ಕ್ಯಾಬೇಜ್, ಕಾಲಿ ಫ್ಲವರ್ ಹಾಗೂ ಬ್ರೊಕೋಲಿಗಳನ್ನು 'ಫೊಟೊಕೆಮಿಕಲ್ಸ್ ಗಳ ಶಕ್ತಿಮನೆಗಳು' ಎಂದೆ ಕರೆಯಲಾಗುತ್ತದೆ. ಈ ತರಕಾರಿಗಳಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್-ವಿರೋಧಿ ತತ್ವಗಳನ್ನು ಹೊಂದಿವೆ ಎನ್ನಲಾಗಿದೆ. 

ಫರ್ಮೆಂಟ್ ಮಾಡಲಾದ ಆಹರಗಳು

ಫರ್ಮೆಂಟೆಡ್ ಆಹಾರಗಳಾದ ಯಾಗರ್ಟ್, ಕಿಮ್ಚಿ, ಮಿಸೊ ಹಾಗೂ ಸೌರ್ ಕ್ರಾಟ್ ಪ್ರೊಬಯೋಟಿಕ್ ತತ್ವಗಳನ್ನು ಹೊಂದಿದ್ದು ಜೀವನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕರಿಸುತ್ತವೆ. ಅಧ್ಯಯನದ ಪ್ರಕಾರ, ಇದರಲ್ಲಿರುವ ಪೋಷಕಾಂಶಗಳು ಪಾಶ್ಚಿಮಾತ್ಯ ಹಾಗೂ ಏಷಿಯಾ ಮೂಲದ ಹೆಣ್ಣು ಮಕ್ಕಳಿಬ್ಬರಲ್ಲೂ ಸ್ತನದ ಕ್ಯಾನ್ಸರ್ ತಡೆಗಟ್ಟಲು ಸಹಕರಿಸಿರುವುದು ಕಂಡುಬಂದಿದೆ. 

ಹರ್ಬ್ಸ್ ಮತ್ತು ಸ್ಪೈಸಸ್

ನಾವು ಇಂದು ಅಡಿಗೆಯಲ್ಲಿ ಬಳಸುವ ಪಾರ್ಸ್ಲೆ, ರೋಸ್ ಮೇರಿ, ಒರೆಗಾನೊ, ಅರಿಶಿಣ, ಶುಂಠಿ ಮುಂತಾದವುಗಳು ಪ್ಲ್ಯಾಂಟ್ ಕಂಪೌಂಡ್ಸ್ ಗಳನ್ನು ಹೇರಳವಾದ ಪ್ರಮಾಣದಲ್ಲಿ ಹೊಂದಿದ್ದು ಇವು ಸ್ತನದ ಕ್ಯಾನ್ಸರ್ ಬರದಂತೆ ರಕ್ಷಣೆ ಒದಗಿಸುತ್ತವೆ. ಈ ಹರ್ಬ್ಸ್ ಗಳು ವೈಟಮಿನ್, ಆಂಟಿ ಆಕ್ಸಿಡಂಟ್ ಹಾಗೂ ಫ್ಯಾಟಿ ಆಸಿಡ್ಸ್ ಹಾಗೂ ಪಾಲಿ ಫೆನಾಲ್ ಆಂಟಿ-ಆಕ್ಸಿಡಂಟ್ ಗಳನ್ನು ಹೊಂದಿವೆ.

ಅರಿಶಿಣದಲ್ಲಿರುವ ಕುರ್ಕ್ಯೂಮಿನ್ ಸಕ್ರೀಯವಾಗಿರುವ ಪದಾರ್ಥವಾಗಿದ್ದು ಆಂಟಿ-ಕ್ಯಾನ್ಸರ್ ಗುಣ ಹೊಂದಿರುವುದನ್ನು ಈಗಾಗಲೇ ಸಾಬೀತುಪಡಿಸಿದೆ. 

ಇದನ್ನೂ ಓದಿ: ಬೆಳ್ಳುಳ್ಳಿ ಇದ್ರೆ ಸಾಕು ನಿಮ್ಮ ಬಾತ್​ ರೂಂ ಲಕ ಲಕ ಅಂತ ಹೊಳೆಯುತ್ತೆ

ಅಲಿಯಂ ತರಕಾರಿಗಳು

ಬೆಳ್ಳುಳ್ಳಿ, ಈರುಳ್ಳಿ ಸೊಪ್ಪು, ಹಾಗೂ ಈರುಳ್ಳಿಯನ್ನು ಅಲಿಯಂ ತರಕಾರಿಗಳೆನ್ನುತ್ತಾರೆ. ಇವು ಸೂಪರ್ ಹೆಲ್ದಿ ಫುಡ್ ಗಳು, ಕಾರಣ ಇವುಗಳಲ್ಲಿ ಒರ್ಗ್ಯಾನೋಸಲ್ಫರ್ ಕಂಪೌಂಡುಗಳು, ಫ್ಲ್ಯಾವನಾಯಿಡ್ಸ್ ಆಂಟಿ ಆಕ್ಸಿಡಂಟ್ ಗಳು ಮತ್ತು ವೈಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಇವುಗಳಲ್ಲಿರುವ ಪೋಷಕಾಂಶ ತತ್ವಗಳು ದೇಹಕ್ಕೆ ಬೇಕಾದ ಶಕ್ತಿ ನೀಡುವುದಲ್ಲದೆ ಸ್ತನದ ಕ್ಯಾನ್ಸರ್ ಬರದಂತೆ ಸಹಕರಿಸುತ್ತದೆ. 
Published by:Sandhya M
First published: