• Home
 • »
 • News
 • »
 • lifestyle
 • »
 • Health Tips: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಬೆಸ್ಟ್ ಆಹಾರಗಳು

Health Tips: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಬೆಸ್ಟ್ ಆಹಾರಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

cholesterol Control foods: ಚಳಿಗಾಲದಲ್ಲಿ ದ್ರಾಕ್ಷಿ ಸೇವನೆ ನಿಮ್ಮ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ

 • Share this:

  ಯಾವಾಗ ನಾವೆಲ್ಲರೂ ನಮ್ಮ ಸಾಂಪ್ರದಾಯಿಕ ಅಡುಗೆ (Food) ಪದಾರ್ಥಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿದೆವು ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಕೂಡ ಆರೋಗ್ಯ ಸಮಸ್ಯೆಗಳು (Health Problem) ಹುಟ್ಟಿಕೊಂಡವು. ಆಧುನಿಕ ಜೀವನ ಶೈಲಿಗೆ (Modern Life Style) ಮಾರು ಹೋಗಿ ಯಾವಾಗಲೂ ಬೇಡದ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾ ಹೋದರೆ ನಮ್ಮ ದೇಹ (Body) ಎಂದಿಗೂ ನಮ್ಮ ಮಾತು ಕೇಳುವುದಿಲ್ಲ. ದೇಹದ ಹಲವು ಭಾಗಗಳಲ್ಲಿ ಬೊಜ್ಜು ಶೇಖರಣೆ ಆಗಿ, ಅತಿಯಾದ ಕೊಲೆಸ್ಟ್ರಾಲ್ ಅಂಶ ತುಂಬಿಕೊಂಡು, ಮುಖ್ಯವಾಗಿ ಹೃದಯದ ಕಾರ್ಯ ಚಟುವಟಿಕೆಗೆ ತೊಂದರೆ ಮಾಡುತ್ತದೆ. ಇದರಿಂದ ದೇಹದ ತುಂಬಾ ಸರಿಯಾಗಿ ರಕ್ತ ಹರಿಯುವುದು ಸಾಧ್ಯವಾಗುವುದಿಲ್ಲ.


  ಕೊಲೆಸ್ಟ್ರಾಲ್ (Cholesterol) ಬಂದರೆ ಸಾಕು ಅದರೊಂದಿಗೆ ನಾನಾ ರೋಗಗಳೂ ಪ್ರಾರಂಭವಾಗುತ್ತದೆ. ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ, ರಕ್ತ ಗಟ್ಟಿಗೊಳ್ಳುವುದು ಮುಂತಾದ ಗಂಭೀರ ಸಮಸ್ಯೆಗಳನ್ನು ತರುತ್ತದೆ. ಕೊಲೆಸ್ಟ್ರಾಲ್ ಬಂದರೆ ಯಾವುದೇ ಪಥ್ಯದ ಊಟ ಮಾಡಬೇಕಾಗಿಲ್ಲ, ಆದರೆ ಆಹಾರಕ್ರಮದ ಎಚ್ಚರಿಕೆವಹಿಸಬೇಕು. ಬಾಯಿ ರುಚಿಗಾಗಿ ಕೊಬ್ಬಿನಂಶದ ಆಹಾರ ತಿಂದರೆ ದೇಹದ ಆರೋಗ್ಯ ಹಾಳಾಗುವುದು.


  ಉತ್ತಮ ಆಹಾರಕ್ರಮ ಪಾಲಿಸಿದರೆ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಅದರಲ್ಲೂ ಈ ಕೆಳಗಿನ ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ.


  1) ಬಟರ್ ಫ್ರೂಟ್: ಹಲವೆಡೆ ಬಟರ್ ಫ್ರೂಟ್ ಎಂದೂ ಕರೆಯಲ್ಪಡುವ ಬೆಣ್ಣೆಹಣ್ಣು ಒಂದು ಪರಿಪೂರ್ಣ ಹಣ್ಣಾಗಿದ್ದು ದೇಹಕ್ಕೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಇದರ ತಿರುಳನ್ನು ನೀರುಳ್ಳಿ ಮತ್ತಿತರ ಸಾಮಾಗ್ರಿಗಳನ್ನು ಸೇರಿಸಿ ಮಾಡಿದ Guacamole ಎಂಬ ಸಿಹಿಹುಳಿ ಪದಾರ್ಥದ ಸೇವನೆ ಹಸಿವನ್ನು ತಣಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದರಲ್ಲಿರುವ ಓಲಿಕ್ ಅಮ್ಲ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಡಿಲಗೊಳಿಸಿ ನಿವಾರಿಸುವ ಗುಣ ಹೊಂದಿದೆ.


  ಇದನ್ನೂ ಓದಿ: ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ, ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ


  2) ದ್ರಾಕ್ಷಿ ಹಣ್ಣು: ಚಳಿಗಾಲದಲ್ಲಿ ದ್ರಾಕ್ಷಿ ಸೇವನೆ ನಿಮ್ಮ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಸಮೃದ್ದವಾದ ವಿಟಮಿನ್ ಸಿ ಮತ್ತು ಕೆ ಯನ್ನು ಹೊಂದಿರುವ ದ್ರಾಕ್ಷಿ ಹಣ್ಣಗಳು ಕೆಲವು ಹಂತದ ಕ್ಯಾನ್ಸರ್​ಗಳನ್ನೂ ನಿಯಂತ್ರಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.


  3) ಡ್ರೈ ಫ್ರೂಟ್ಸ್: ಉತ್ತಮ ಪ್ರಮಾಣದ ಕ್ಯಾಲೋರಿಗಳ ಆಗರವಾದ ಒಣಫಲಗಳಲ್ಲಿ ಫ್ಯಾಟಿ ಆಸಿಡ್ ಎಂಬ ಆಮ್ಲಗಳಿದ್ದು ಇವು ಕೊಲೆಸ್ಟ್ರಾಲ್ ಕಣಗಣಲ್ಲಿ ಸಡಿಲಗೊಳಿಸಲು ನೆರವಾಗುತ್ತವೆ. ಬಾದಾಮಿ, ಅಕ್ರೋಟು, ಪಿಸ್ತಾ ಮೊದಲಾದ ಒಣಫಲಗಳು ಉತ್ತಮ ಫಲ ನೀಡುತ್ತವೆ.


  ಇವುಗಳನ್ನು ಹಾಗೇ ಅಥವಾ ಚಿಕ್ಕದಾಗಿ ಪುಡಿಗೊಳಿಸಿ ನಿಮ್ಮ ನೆಚ್ಚಿನ ಸಾಲಾಡ್ ಅಥವಾ ತಿನಿಸುಗಳಲ್ಲಿ ಸಿಂಪಡಿಸಿ ಸೇವಿಸುವುದರಿಂದ ಖಾದ್ಯದ ರುಚಿ ಹೆಚ್ಚುವುದರೊಂದಿಗೇ ಆರೋಗ್ಯವೂ ವೃದ್ಧಿಯಾಗುತ್ತದೆ.


  4) ಹಸಿ ತರಕಾರಿ: ಯಾವ ತರಕಾರಿ ಹಸಿಯಾಗಿ ಸೇವಿಸಲು ಸಾಧ್ಯವೋ, ಅವನ್ನೆಲ್ಲಾ ಹಸಿಯಾಗಿ ಮತ್ತು ಉಳಿದ ತರಕಾರಿಗಳನ್ನು ಬೇಯಿಸಿ ಸೇವಿಸಿ. ಅಂದರೆ ನಿಮ್ಮ ದಿನದ ಆಹಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿಧದ ತರಕಾರಿಗಳಿರಲಿ. ಏಕೆಂದರೆ ವಿವಿಧ ತರಕಾರಿಗಳ ಮೂಲಕ ಲಭ್ಯವಾದ ಭಿನ್ನವಾದ ನಾರುಗಳ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ.


  5) ಸೇಬು: ಪ್ರತಿದಿನ ಒಂದು ಸೇಬು ಸೇವನೆ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸೇಬುವಿನಲ್ಲಿರುವ ಪೈಬರ್​ ಮತ್ತು ಪ್ಯಾಕ್ಟಿನ್​ ಅಂಶಗಳು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್​ ಅನ್ನು ಕರಗಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಶೂನ್ಯ ಪ್ರಮಾಣದಲ್ಲಿ ಕೊಲೆಸ್ಟ್ರಾಲ್​ ಅಂಶವನ್ನು ಹೊಂದಿರುವ ಸೇಬು ಎಲ್ಲಾ ಕಾಲದಲ್ಲೂ ದೇಹವನ್ನು ಆರೋಗ್ಯವಾಗಿಸಲು ಸಹಾಯಕವಾಗಿದೆ.


  6) ಮೀನು: ಮೀನಿನಲ್ಲಿ ಅಪಾರ ಪ್ರಮಾಣದ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಅಡಗಿದೆ. ಇದು ಹೆಚ್ಚಿನ ಪ್ರಮಾಣದ ಒಮೆಗಾ 3 ಫ್ಯಾಟಿ ಆಸಿಡ್ ಅಂಶವನ್ನು ತನ್ನಲ್ಲಿ ಹೊಂದಿದೆ. ಹೀಗಾಗಿ ನೈಸರ್ಗಿಕವಾಗಿ ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ಮತ್ತು ಹೃದಯದ ಕಾರ್ಯಚಟುವಟಿಕೆಯನ್ನು ವೃದ್ಧಿಸುತ್ತದೆ.


  7) ಬೀನ್ಸ್: ಬೀನ್ಸ್ ನಲ್ಲಿ ತಿನ್ನಬಹುದಾದ ನಾರಿನಂಶವಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.


  ಇದನ್ನೂ ಓದಿ: ಯಾವುದೇ ವ್ಯಾಯಾಮ ಮಾಡದೇ ಹೀಗೆ ತೂಕ ಇಳಿಸಿ


  8) ಟೊಮೇಟೊ: ಟೊಮೆಟೊದಲ್ಲಿ ಲೈಕೋಪೆನೆ, ವಿಟಮಿನ್ ಸಿ ಮತ್ತು ನಾರಿನಂಶವಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


  9) ಸ್ಟ್ರಾಬೆರಿ: ಸಮೃದ್ಧವಾದ ಆಯಂಟಿ ಆಕ್ಸಿಡೆಂಟ್ (Antioxidant) ​​ ಗುಣ ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯಕಾವಗಿದೆ. ವಿಭಿನ್ನ ರುಚಿಯ ಹೊಂದಿದ್ದು, ಎಲ್ಲರೂ ಇಷ್ಟಪಡುವ ಹಣ್ಣಾಗಿದೆ. ಚರ್ಮದ ಆರೋಗ್ಯಕ್ಕೂ ಸ್ಟ್ರಾಬೆರಿ ಹಣ್ಣುಗಳು ಸಹಕಾರಿಯಾಗಿದೆ. ವಿಟಮಿನ್​ ಮತ್ತು ಪೈಬರ್​ ಅಂಶಗಳ ಮೂಲಕ ಈ ಹಣ್ಣು ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಇದರಲ್ಲಿರುವ ಪೈಬರ್​ ಅಂಶ ಅಧಿಕ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

  Published by:ranjumbkgowda1 ranjumbkgowda1
  First published: