ಈ ಆಹಾರಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಮಾರಕ

health tips: ಸೀ ಫುಡ್ ಅಥವಾ ಸಮುದ್ರಾಹಾರದಲ್ಲಿ ಪ್ಯಾರಿನ್ಸ್ ಪ್ರಚುರ್ ಅಂಶಗಳು ಹೇರಳವಾಗಿರುತ್ತವೆ. ನೀವು ದಿನನಿತ್ಯ ಸೀ ಫುಡ್​ಗಳನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲವು ಅಧಿಕವಾಗುತ್ತದೆ.

zahir | news18-kannada
Updated:August 16, 2019, 5:32 PM IST
ಈ ಆಹಾರಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಮಾರಕ
health
  • Share this:
ಉತ್ತಮ ಆರೋಗ್ಯಕ್ಕಾಗಿ ಅತ್ಯುತ್ತಮ ಆಹಾರ ಸೇವನೆ ಅತ್ಯವಶ್ಯಕ. ನಾವು ಸೇವಿಸುವ ದೈನಂದಿನ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಆದರೆ ಇಂದಿನ ಜೀವನ ಶೈಲಿಯಲ್ಲಿ ವೈವಿದ್ಯಮಯ ಭಕ್ಷಣಗಳನ್ನು ತೊರೆಯುವವರು ಯಾರು?. ಅಂದರೆ ನೀವು ಅಜಾಗರೂಕತೆಯಿಂದ ಸೇವಿಸುವ ಕೆಲ ಆಹಾರಗಳಿಂದಲೇ ಅನೇಕ ರೀತಿಯ ರೋಗಗಳು ಸೃಷ್ಟಿಯಾಗುತ್ತವೆ ಎಂದರೆ ತಪ್ಪಾಗಲಾರದು.

ಇನ್ನು ಮನೆಯಲ್ಲೇ ತಯಾರಿಸುವ ಕೆಲ ಆಹಾರ ಪದಾರ್ಥಗಳಿಂದಲೂ ಸಹ ಅನಾರೋಗ್ಯದ ಸಮಸ್ಯೆ ತಲೆದೂರಬಹುದು. ಮುಖ್ಯವಾಗಿ ನಾವು ಪ್ರತಿದಿನ ಸೇವಿಸುವ ಕೆಲ ಆಹಾರದಿಂದ ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಂತಹ ಕೆಲ ಆಹಾರಗಳ ಪಟ್ಟಿ ಇಲ್ಲಿ ನೀಡಲಾಗಿದೆ.

ಶಿಮ್ಲಾ ಮಿರ್ಚಿ ಅಥವಾ ಕ್ಯಾಪ್ಸಿಕಂ. ಈ ಮೆಣಸು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದರಲ್ಲಿ ಆಕ್ಸಲೇಟ್ ಹರಳುಗಳು (ಆಕ್ಸಲೇಟ್ ಕ್ರಿಸ್ಟಲ್ಸ್​) ಇರುತ್ತವೆ ಎಂಬುದು ನಿಮಗೆ ತಿಳಿದಿರಲಿ. ಈ ಹರಳುಗಳು ದೇಹದಲ್ಲಿರುವ ಕ್ಯಾಲ್ಸಿಯಂನೊಂದಿಗೆ ಸೇರಿ ಕ್ಯಾಲ್ಸಿಯಂ ಆಕ್ಸಲೇಟ್ ಬಂಧಗಳನ್ನು ಹೆಚ್ಚಿಸುತ್ತದೆ. 'ದಿ ಹೆಲ್ತ್' ವರದಿಯ ಪ್ರಕಾರ, ನೀವು ಅತಿಯಾದ ಕ್ಯಾಪ್ಸಿಕಂ ಸೇವಿಸಿದರೆ, ಕಿಡ್ನಿ ಸ್ಟೋನ್ ಸಮಸ್ಯೆಗೆ ತುತ್ತಾಗುವಿರಿ.

ಸಾಮಾನ್ಯವಾಗಿ ಟೊಮ್ಯಾಟೊಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಇನ್ನು ಇದನ್ನು ಚಟ್ನಿ ರೂಪದಲ್ಲಿ ಅಥವಾ ಪ್ಯೂರಿಯಾಗಿಯು ಸಹ ಉಪಯೋಗಿಸುತ್ತಾರೆ. ಆಹಾರದ ರುಚಿ ಹೆಚ್ಚಿಸುವ ಟೊಮ್ಯಾಟೊ ಬೀಜಗಳಲ್ಲೂ ಸಹ ಆಕ್ಸಲೇಟ್​ಗಳು ಕಂಡು ಬರುತ್ತವೆ. ಇದನ್ನು ಅತಿಯಾಗಿ ಬಳಕೆ ಮಾಡುವುದರಿಂದ ಮೂತ್ರಪಿಂಡ ಸಮಸ್ಯೆ ಕಾಣಿಸಬಹುದು. ಹೀಗಾಗಿ ಆಹಾರದಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಟೊಮ್ಯಾಟೊಗಳನ್ನು ಬಳಸುವುದು ಉತ್ತಮ.

ಸೀ ಫುಡ್ ಅಥವಾ ಸಮುದ್ರಾಹಾರದಲ್ಲಿ ಪ್ಯಾರಿನ್ಸ್ ಪ್ರಚುರ್ ಅಂಶಗಳು ಹೇರಳವಾಗಿರುತ್ತವೆ. ನೀವು ದಿನನಿತ್ಯ ಸೀ ಫುಡ್​ಗಳನ್ನು ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲವು ಅಧಿಕವಾಗುತ್ತದೆ. ಇದು ಯೂರಿಕ್ ಆಸಿಡ್ ರೂಪ ಪಡೆದು ಕಲ್ಲುಗಳಾಗಿ ಮಾರ್ಪಡುತ್ತದೆ. ಇದರಿಂದ ಮೂತ್ರಪಿಂಡದ ಸಮಸ್ಯೆಗೆ ಕಿಡ್ನಿ ಸ್ಟೋನ್ ತೊಂದರೆ ಉಂಟಾಗುತ್ತದೆ.

ಚಾಕೊಲೇಟ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ ನೆನಪಿಟ್ಟುಕೊಳ್ಳಿ ಚಾಕೊಲೇಟ್​ನಲ್ಲೂ ಆಕ್ಸಲೇಟ್ ಅಂಶಗಳಿರುತ್ತವೆ. ನಿಮಗೆ ಮೂತ್ರಪಿಂಡ ಸಮಸ್ಯೆ ಅಥವಾ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ದಯವಿಟ್ಟು ಚಾಕೊಲೇಟ್​ಗಳಿಂದ ದೂರವಿರಿ. ಹಾಗೆಯೇ ಹೆಚ್ಚು ಚಾಕೊಲೇಟ್ ತಿನ್ನುವುದರಿಂದ ಸಹ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ)


First published: August 16, 2019, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading