News18 India World Cup 2019

ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ

ಗರ್ಭಾವಸ್ಥೆಯ ಸಮಯದಲ್ಲಿ ಸೋಯಾ ಸಾಸ್​ ಅನ್ನು ಆಹಾರದಲ್ಲಿ ಬಳಸಬೇಡಿ. ಇದರಿಂದ ಗರ್ಭಿಣಿಯರ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಗರ್ಭಧಾರಣೆ ಮೇಲೆ ಪರಿಣಾಮ ಬೀರಬಹುದು.

zahir | news18
Updated:April 15, 2019, 5:15 PM IST
ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಆಹಾರಗಳನ್ನು ತಿನ್ನಬೇಡಿ
@Health Magazine
zahir | news18
Updated: April 15, 2019, 5:15 PM IST
ಗರ್ಭಧಾರಣೆ ಎಂಬುದು ಮಹಿಳೆಯರ ಬದುಕಿನ ಅತ್ಯಂತ ಸೂಕ್ಷ್ಮವಾದ ಅವಧಿ. ಈ ಅವಧಿಯಲ್ಲಿ ಕೇವಲ ದೇಹದ ಬದಲಾವಣೆ ಮಾತ್ರವಲ್ಲ, ಮಾನಸಿಕವಾಗಿಯು ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಗರ್ಭಿಣಿಯರು ತಮ್ಮ ಆಹಾರದ ಮೇಲೆ ನಿಗಾವಹಿಸದಿದ್ದರೆ ಗರ್ಭಪಾತ ಆಗಬಹುದು. ಅಥವಾ ಜನಿಸುವ ಮಗುವಿನ ಮೇಲೆ ನೇರ ಪರಿಣಾಮ ಬೀರಬಹುದು. ಅಂತಹ ಕೆಲವೊಂದು ಆಹಾರಗಳನ್ನು ಇಲ್ಲಿ ತಿಳಿಸಿದ್ದು, ಈ ಆಹಾರಗಳಿಂದ ದೂರವಿರುವುದು ಉತ್ತಮ.

ಅಲೋವೆರಾ : ಗರ್ಭಿಣಿ ಮಹಿಳೆಯರು ಯಾವುದೇ ಕಾರಣಕ್ಕೂ ಅಲೋವೆರಾವನ್ನು ಸೇವಿಸಬಾರದು. ಅಲೋವೆರಾ ಮಿಶ್ರಿತ ಪಾನೀಯ ಅಥವಾ ಇದರ ಅಂಶ ಹೊಂದಿರುವ ಆಹಾರವನ್ನು ಸೇವಿಸಬೇಡಿ. ಇದನ್ನು ಸೇವಿಸಿದರೆ ರಕ್ತಸ್ರಾವಕ್ಕೆ ಉಂಟಾಗಬಹುದು. ಅಲ್ಲದೆ ಇದುವೇ  ಗರ್ಭಪಾತದ ಅಪಾಯಕ್ಕೂ ಕಾರಣವಾಗಬಹುದು.

ಪಪ್ಪಾಯ : ತಾಯ್ತನವನ್ನು ಎದುರು ನೋಡುತ್ತಿರುವ ಮಹಿಳೆಯರು ಪಪ್ಪಾಯವನ್ನು ತಿನ್ನುವುದು ಒಳ್ಳೆಯದಲ್ಲ. ಪಪ್ಪಾಯ ಕಾಯಿಯ ಪದಾರ್ಥಗಳನ್ನು ತಿಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವ ಕಣಗಳು ಗರ್ಭಾಶಯವನ್ನು ಕುಗ್ಗಿಸುವುದಲ್ಲದೆ, ಗರ್ಭಪಾತವನ್ನು ಉಂಟು ಮಾಡಬಹುದು.

ಅನಾನಸ್- ಪೈನಾಪಲ್ : ಗರ್ಭಾವಸ್ಥೆಯ ಸಂದರ್ಭದಲ್ಲಿ ಅನಾನಸ್ ಹಣ್ಣು ತಿನ್ನುವುದು ಉತ್ತಮವಲ್ಲ. ಪೈನಾಪಲ್​ ಹಣ್ಣಿನಲ್ಲಿ ಬ್ರೊಮಲೆನ್ ಎಂಬ ಅಂಶವಿದ್ದು, ಇದು ಗರ್ಭಾಶಯದ ಸ್ನಾಯುವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಹ ಗರ್ಭಪಾತದ ಅಪಾಯವಿದೆ.

ಸೋಯಾ ಸಾಸ್: ಗರ್ಭಾವಸ್ಥೆಯ ಸಮಯದಲ್ಲಿ ಸೋಯಾ ಸಾಸ್​ ಅನ್ನು ಆಹಾರದಲ್ಲಿ ಬಳಸಬೇಡಿ. ಇದರಿಂದ ಗರ್ಭಿಣಿಯರ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಗರ್ಭಧಾರಣೆ ಮೇಲೆ ಪರಿಣಾಮ ಬೀರಬಹುದು.

ಮೊನೊ ಸೋಡಿಯಂ ಗ್ಲುಟಮೇಟ್ (MSG): ಎಂಎಸ್​ಜಿ ಅಥವಾ ಅಜಿನೊಮೊಟೊವನ್ನು ಚೈನೀಸ್ ಫುಡ್​ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಫಾಸ್ಟ್​ ಫುಡ್ ಹಾಗೂ ರೆಸ್ಟೊರೆಂಟ್​ಗಳಲ್ಲಿ ಇದನ್ನು ಬಳಸುವುದರಿಂದ ಎಚ್ಚರಿಕೆಯಿಂದ ಇರುವುದು ಉತ್ತಮ. ಗರ್ಭಿಣಿಯರು ಇದನ್ನು ತಿಂದರೆ ಬೆಳೆಯುವ ಮಕ್ಕಳಲ್ಲಿ ದೋಷ ಕಂಡು ಬರುತ್ತದೆ.
Loading...

ಹಸಿ ಮೊಟ್ಟೆ : ಗರ್ಭಿಣಿ ಮಹಿಳೆಯರು ಹಸಿ ಮೊಟ್ಟೆ ಮತ್ತು ಮೊಟ್ಟೆಯ ಹಳದಿಯನ್ನು ಸೇವಿಸಲೇಬಾರದು. ಇದರಿಂದ ಸಹ ಗರ್ಭಪಾತ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ ಮೆಯೊನಿಸ್​ಗಳಲ್ಲೂ ಮೊಟ್ಟೆ ಪದಾರ್ಥಗಳನ್ನು ಬಳಸುವುದರಿಂದ ಇದನ್ನು ಸೇವಿಸುವುದು ಕೂಡ ಅಪಾಯಕಾರಿ.

ಇದನ್ನೂ ಓದಿ: 32MP ಸೂಪರ್ ಸೆಲ್ಫಿ ಕ್ಯಾಮೆರಾ: ಅಗ್ಗದ ದರದಲ್ಲಿ ಬರಲಿದೆ ಶಿಯೋಮಿಯ ನೂತನ ಸ್ಮಾರ್ಟ್​ಫೋನ್

ದ್ರಾಕ್ಷಿ: ತಾಯ್ತನವನ್ನು ಎದುರು ನೋಡುತ್ತಿರುವ ಮಹಿಳೆಯರು ದ್ರಾಕ್ಷಿಯನ್ನು ಸೇವಿಸಬಾರದು. ಇದು ಗರ್ಭಾಶಯದಲ್ಲಿರುವ ಮಗುವಿಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಇದರಿಂದ ಮಗುವಿನ ಬೆಳವಣಿಗೆ ಮೇಲೆ ಅಪಾಯ ಉಂಟು ಮಾಡಬಹುದು. ಹೀಗಾಗಿ ಗರ್ಭಿಣಿಯರು ದ್ರಾಕ್ಷಿ ಹಣ್ಣಿನಿಂದ ದೂರ ಇರುವುದು ಉತ್ತಮ.

ಇದನ್ನೂ ಓದಿ: ಪಂದ್ಯ ಗೆಲ್ಲಿಸಿದ್ದು ಇಮ್ರಾನ್ ತಾಹಿರ್: ಶ್ರೇಯಸ್ಸು ನಾಯಕ ಧೋನಿಗೆ..!
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...