ಯಾರಿಗೆ ತಾನೆ ಮುತ್ತುಗಳಂತೆ ಬಿಳಿ ಮತ್ತು ಹೊಳೆಯುವ ಹಲ್ಲುಗಳನ್ನು (Teeth) ಇಷ್ಟ (Like) ಪಡಲ್ಲ ಹೇಳಿ. ಹೊಳೆಯುವ (Shining) ಬಿಳಿ ಹಲ್ಲುಗಳು (White Teeth) ನಿಮ್ಮ ಸೌಂದರ್ಯ (Beauty) ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ವ್ಯಕ್ತಿತ್ವವನ್ನು ಕೂಡ ಹೆಚ್ಚಿಸಲು ಸಹಕಾರಿ ಆಗಿದೆ. ಆದರೆ ನಿಮ್ಮ ಹಲ್ಲುಗಳು ಚೆನ್ನಾಗಿ ಫಳ ಫಳ ಹೊಳೆಯುವಂತೆ ಮಾಡುವ ಟೂತ್‌ಪೇಸ್ಟ್‌ನಲ್ಲಿ ಏನಿದೆ ಎಂದು ನಿಮಗೆ ಗೊತ್ತಾ? ಯಾವ ಪದಾರ್ಥಗಳನ್ನು ಅದರಲ್ಲಿ ಬಳಸಿರುತ್ತಾರೆ ಎಂದು ಎಂದಾದರೂ ತಿಳಿಯುವ ಗೋಜಿಗೆ ಹೋಗಿದ್ದೀರಾ? ಈ ಬಗ್ಗೆ ನೀವು ಯೋಚಿಸಲೇ ಬೇಕು. ಅಂದ ಹಾಗೆ, ನಮ್ಮ ಹಲ್ಲುಗಳು ಸದಾ ಹೊಳೆಯುತ್ತಿರಲು ನಾವು ಎಲ್ಲಾ ರೀತಿಯ ಟೂತ್ ಪೇಸ್ಟ್ ಗಳನ್ನು ಬಳಸುತ್ತೇವೆ.
ಹಲ್ಲುಗಳು ಹೊಳೆಯಲು ಯಾವ ವಸ್ತುಗಳು ಬೇಕು?
ಮುಂಬೈನ ಡೀಸೆಲ್ ಡೆಂಟಲ್ ಕ್ಲಿನಿಕ್ ಸಂಸ್ಥಾಪಕ ಡಾ.ರಾಜೇಶ್ ಶೆಟ್ಟಿ ಅವರ ಪ್ರಕಾರ, ಟೂತ್‌ಪೇಸ್ಟ್ ಸಕ್ರಿಯ ಮತ್ತು ಸಕ್ರಿಯವಲ್ಲದ ಅಂಶಗಳನ್ನು ಒಳಗೊಂಡಿದೆ. ಸಕ್ರಿಯ ಪದಾರ್ಥಗಳು ಬ್ಯಾಕ್ಟೀರಿಯಾ ಮತ್ತು ಪ್ಲೇಕ್ ವಿರುದ್ಧ ಹೋರಾಡುವಾಗ, ನಿಷ್ಕ್ರಿಯ ಪದಾರ್ಥಗಳು ಟೂತ್ಪೇಸ್ಟ್ನ ಸುವಾಸನೆ ಮತ್ತು ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?
ಟೂತ್‌ಪೇಸ್ಟ್ ಬಾಕ್ಸ್‌ನ ಹಿಂಭಾಗದಲ್ಲಿರುವ ಪದಾರ್ಥಗಳನ್ನು ಓದಿಕೊಳ್ಳಿ
ಮುಂದಿನ ಬಾರಿ ನೀವು ಟೂತ್ ಪೇಸ್ಟ್ ಖರೀದಿಸಲು ಹೋದಾಗ, ಟೂತ್‌ಪೇಸ್ಟ್ ಬಾಕ್ಸ್‌ನ ಹಿಂಭಾಗದಲ್ಲಿರುವ ಪದಾರ್ಥಗಳನ್ನು ಓದುವುದು ರೂಢಿ ಮಾಡಿಕೊಳ್ಳಿ. ಇದರಿಂದ ನೀವು ಬಳಸುತ್ತಿರುವ ಟೂತ್ ಪೇಸ್ಟ್ ನಿಮ್ಮನ್ನು ರಕ್ಷಿಸುತ್ತದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಫ್ಲೋರೈಡ್ ಹಲ್ಲಿನ ಕೊಳೆತ ತಡೆಯುತ್ತದೆ
ಕುಳಿಗಳ ವಿರುದ್ಧ ಹೋರಾಡುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರ ವಹಿಸುತ್ತದೆ. ಫ್ಲೋರೈಡ್ ಒಂದು ಖನಿಜವಾಗಿದೆ. ಇದನ್ನು ಹೆಚ್ಚಾಗಿ ಟೂತ್ಪೇಸ್ಟ್ ನಲ್ಲಿ ಸೇರಿಸಲಾಗುತ್ತದೆ. ಇದು ದಂತ ಕವಚ ಬಲಪಡಿಸುತ್ತದೆ ಮತ್ತು ಪ್ಲೇಕ್ ಮೇಲೆ ಆಮ್ಲವನ್ನು ನಿರ್ಮಿಸುವ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ.
ಹೀಗಾಗಿ ಹಲ್ಲುಗಳಲ್ಲಿ ಕೊಳೆತ ಇರುವುದಿಲ್ಲ. ನೀವು ಯಾವುದೇ ಟೂತ್ಪೇಸ್ಟ್ ಖರೀದಿ ಮಾಡಿದರೂ ಅದರಲ್ಲಿ ಫ್ಲೋರೈಡ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
ಅಪಘರ್ಷಕ ಕಲೆ ತೆಗೆದು ಹಾಕಲು ಸಹಕಾರಿ
ಅಪಘರ್ಷಕ ಒಂದು ಘಟಕಾಂಶ. ಇದು ಹಲ್ಲುಗಳಿಂದ ಕಸ ಮತ್ತು ಕಲೆ ತೆಗೆದು ಹಾಕಲು ತಾಂತ್ರಿಕವಾಗಿ ಸಹಾಯ ಮಾಡುತ್ತದೆ. ಅಪಘರ್ಷಕಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ ಕಾರ್ಬೋನೇಟ್, ನಿರ್ಜಲೀಕರಣಗೊಂಡ ಸಿಲಿಕಾ ಜೆಲ್ ಮತ್ತು ಹೈಡ್ರೀಕರಿಸಿದ ಅಲ್ಯೂಮಿನಿಯಂ ಆಕ್ಸೈಡ್ ಅನ್ನು ಹೊಂದಿವೆ. ನಿಮ್ಮ ಹಲ್ಲುಗಳಿಗೆ ಹಾನಿಯಾಗದಂತೆ ಹಲ್ಲುಗಳ ಮೇಲ್ಮೈಯನ್ನು ನಿಧಾನವಾಗಿ ಸ್ವಚ್ಛಗೊಳಿಸುತ್ತದೆ.
ಟೂತ್ ಪೇಸ್ಟ್ ರುಚಿ ಹೇಗಿರುತ್ತದೆ?
ಫ್ಲೋರೈಡ್ ಮತ್ತು ಅಪಘರ್ಷಕಗಳು ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ರಕ್ಷಿಸುತ್ತವೆ. ಈ ಎರಡು ಪದಾರ್ಥಗಳು ಉತ್ತಮ ರುಚಿ ಹೊಂದಿರುವುದಿಲ್ಲ. ಬ್ರಷ್ ಮಾಡುವಾಗ ಸುವಾಸನೆ ಬರಲು ವಿವಿಧ ರುಚಿ ಸೇರಿಸಲಾಗುತ್ತದೆ.
ಟೂತ್ ಪೇಸ್ಟ್‌ನ ಸಿಹಿ ರುಚಿಯು ಸ್ಯಾಕ್ರರಿನ್ ಮತ್ತು ಸೋರ್ಬಿಟೋಲ್‌ನಂತಹ ಏಜೆಂಟ್‌ಗಳಿಂದ ಬರುತ್ತದೆ. ಈ ಟೂತ್‌ಪೇಸ್ಟ್‌ಗಳು ಸಕ್ಕರೆ ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ಹಲ್ಲುಗಳು ಬೇಗನೆ ಕೊಳೆಯದಂತೆ ಉಳಿಸುತ್ತವೆ.
ಸೂಕ್ಷ್ಮವಾಗಿ ಪರಿಹಾರ ಪಡೆಯುವುದು
ವೈದ್ಯರು ಸಾಮಾನ್ಯವಾಗಿ ಹಲ್ಲಿನ ನೈರ್ಮಲ್ಯಕ್ಕೆ ಶಿಫಾರಸು ಮಾಡುತ್ತಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಹಲ್ಲುಗಳನ್ನು ಬೇಗ ಹಾಳು ಮಾಡುತ್ತದೆ. ಟೂತ್ಪೇಸ್ಟ್ ತೆಗೆದುಕೊಳ್ಳುವ ಸೂಕ್ಷ್ಮತೆಯಿಂದ ಪರಿಹಾರ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು.
ಇದನ್ನೂ ಓದಿ: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ
ಪೊಟ್ಯಾಸಿಯಮ್ ನೈಟ್ರೇಟ್, ಸ್ಟ್ಯಾನಸ್ ಫ್ಲೋರೈಡ್ ಮತ್ತು ಸ್ಟ್ರಾಂಷಿಯಂ ಕ್ಲೋರೈಡ್ ಅನ್ನು ಇದಕ್ಕೆ ಸೇರಿಸಲಾಗುತ್ತದೆ. ಟೂತ್‌ಪೇಸ್ಟ್‌ನಲ್ಲಿರುವ ಈ ಸಕ್ರಿಯ ಪದಾರ್ಥಗಳು ಹಲ್ಲು ನರಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ