Coconut Simple Recipes: ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತಂತೆ! ತೆಂಗಿನಕಾಯಿಯ ಸಿಂಪಲ್ ರೆಸಿಪಿ ಇಲ್ಲಿದೆ!

ತೆಂಗಿನ ಬರ್ಫಿ

ತೆಂಗಿನ ಬರ್ಫಿ

ತೆಂಗಿನಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೇ ತೆಂಗಿನಕಾಯಿಂದ ಮಾಡಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ತೆಂಗಿನಕಾಯಿ ಆಧಾರಿತ ಭಕ್ಷ್ಯ, ತೆಂಗಿನಕಾಯಿ ಅನ್ನ ತಯಾರಿಸುವುದು ಹೇಗೆ?

  • Share this:

ಸೆಪ್ಟೆಂಬರ್ 2 (September 2) ಅನ್ನು ವಿಶ್ವ ತೆಂಗಿನಕಾಯಿ ದಿನ (World Coconut Day) ಎಂದು ಆಚರಿಸಲಾಗುತ್ತದೆ. ತೆಂಗಿನಕಾಯಿಯ ಪ್ರಾಮುಖ್ಯತೆಯನ್ನು ತಿಳಿಪಡಿಸುವುದು, ಮತ್ತು ಅವುಗಳ ವಿವಿಧ ಪ್ರಯೋಜನಗಳ (Benefits) ಬಗ್ಗೆ ಮಾಹಿತಿಯನ್ನು ತಿಳಿಸುವುದು ಇದರ ಗುರಿಯಾಗಿದೆ. ಸೆಪ್ಟೆಂಬರ್ 2, 2009 ರಂದು, ತೆಂಗಿನಕಾಯಿಯ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಏಷ್ಯಾ ಪೆಸಿಫಿಕ್ ತೆಂಗಿನಕಾಯಿ ಸಮುದಾಯದಿಂದ ಮೊದಲ ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಯಿತು. 2022 ರ ವಿಶ್ವ ತೆಂಗಿನಕಾಯಿ ದಿನದ ಥೀಮ್ "ಉತ್ತಮ ಭವಿಷ್ಯ ಮತ್ತು ಜೀವನಕ್ಕಾಗಿ ತೆಂಗಿನಕಾಯಿ ಬೆಳೆಯುವುದು". ತೆಂಗಿನಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೇ ತೆಂಗಿನಕಾಯಿಂದ ಮಾಡಿದ ಆಹಾರ (Food) ಆರೋಗ್ಯಕ್ಕೆ (Health) ಒಳ್ಳೆಯದು.  ತೆಂಗಿನಕಾಯಿಯ ವಿವಿಧ ರೆಸಿಪಿಗಳು ಇಲ್ಲಿವೆ ನೋಡಿ


ತೆಂಗಿನಕಾಯಿ ಅನ್ನ ತಯಾರಿಸುವುದು ಹೇಗೆ?
ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಕಡಲೆಬೇಳೆ, ಸಾಸಿವೆ ಮತ್ತು ಜೀರಿಗೆಯನ್ನು ಹುರಿಯಿರಿ. ಕರಿಬೇವಿನ ಎಲೆಗಳು, ಮೆಣಸಿನಕಾಯಿ ಮತ್ತು ಮುರಿದ ಗೋಡಂಬಿ ಸೇರಿಸಿ ಮತ್ತು ಹುರಿಯಿರಿ. ತುರಿದ ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬೇಯಿಸಿದ ಅನ್ನದೊಂದಿಗೆ ಬೆರೆಸಿ ತಿನ್ನಿ ಚೆನ್ನಾಗಿರುತ್ತೆ.


ತೆಂಗಿನಕಾಯಿ ಲಡ್ಡು
ಇದು ರುಚಿಕರವಾದ ಸಿಹಿ ಖಾದ್ಯ ಮತ್ತು ಅನೇಕರ ನೆಚ್ಚಿನ ಭಕ್ಷ್ಯವಾಗಿದೆ. ಬಂಗಾಳದಲ್ಲಿ, ಇದನ್ನು ನಾರ್ಕೋಲ್ ನಾಡು ಎಂದು ಕರೆಯಲಾಗುತ್ತದೆ ಮತ್ತು ಇದು ದುರ್ಗಾ ಪೂಜೆಗೆ ಜನಪ್ರಿಯ ಸಿಹಿ ಭಕ್ಷ್ಯವಾಗಿದೆ.


ಇದನ್ನೂ ಓದಿ: World Coconut Day 2022: ತೆಂಗಿನಕಾಯಿಗೂ ಇದೆ ಸ್ಪೆಷಲ್ ದಿನ! ಈ ದಿನದ ಮಹತ್ವ ಗೊತ್ತೇ?


ತೆಂಗಿನಕಾಯಿ ಲಡ್ಡು ತಯಾರಿಸುವುದು ಹೇಗೆ?
ಬಾಣಲೆಯಲ್ಲಿ, ಹೊಸದಾಗಿ ತುರಿದ ತೆಂಗಿನಕಾಯಿ ಸೇರಿಸಿ. ಚೆನ್ನಾಗಿ ಹುರಿಯಿರಿ, ಕಂದು ಬಣ್ಣಕ್ಕೆ ತಿರುಗಲು ಬಿಡಬೇಡಿ. ಬೆಲ್ಲವನ್ನು ಬೆರಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ನಿಮ್ಮ ಅಂಗೈಗೆ ತುಪ್ಪ ಹಚ್ಚಿಕೊಂಡು ತೆಂಗಿನ ಲಡ್ಡುವಿನ ಸಣ್ಣ ಉಂಡೆಗಳನ್ನು ಮಾಡಿ. ಅವುಗಳನ್ನು ಗಾಳಿ ಆಡದ ಬಿಗಿಯಾದ ಜಾಡಿಗಳಲ್ಲಿ ಸಂಗ್ರಹಿಸಿ ಬೇಕಾದಾಗ ತಿನ್ನಿ.


ತೆಂಗಿನ ಬರ್ಫಿ ತಯಾರಿಸುವುದು ಹೇಗೆ?
ಸಕ್ಕರೆ ಪಾಕಕ್ಕೆ ಒಣಗಿದ ತೆಂಗಿನಕಾಯಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ತುಪ್ಪ ಮತ್ತು ಖೋಯಾ ಸೇರಿಸಿ ಚೆನ್ನಾಗಿ ಬೆರೆಸಿ. ತುಪ್ಪ ಸವರಿದ ಬಾಣಲೆಯಲ್ಲಿ ಮಿಶ್ರಣವನ್ನು ಹಾಕಿ ಚಪ್ಪಟೆ ಮಾಡಿ. ತಣ್ಣಗಾಗಲು ಬಿಡಿ. ನಂತರ ಅವುಗಳನ್ನು ಬರ್ಫಿ ಆಕಾರದ ತುಂಡುಗಳಾಗಿ ಕತ್ತರಿಸಿ ರುಚಿಕರವಾದ ತೆಂಗಿನಕಾಯಿ ಬರ್ಫಿಯನ್ನು ಆನಂದಿಸಿ.


ಈ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು


ಸೆಪ್ಟೆಂಬರ್ 1 ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ವಾರ
ಸೆಪ್ಟೆಂಬರ್ 2 - ವಿಶ್ವ ತೆಂಗಿನಕಾಯಿ ದಿನ
ಸೆಪ್ಟೆಂಬರ್ 3 - ಗಗನಚುಂಬಿ ದಿನ
ಸೆಪ್ಟೆಂಬರ್ 5- ಶಿಕ್ಷಕರ ದಿನ (ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ), ಅಂತರಾಷ್ಟ್ರೀಯ ದತ್ತಿ ದಿನ
ಸೆಪ್ಟೆಂಬರ್ 7 - ಬ್ರೆಜಿಲಿಯನ್ ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 8- ಅಂತರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ದೈಹಿಕ ಚಿಕಿತ್ಸಾ ದಿನ
ಸೆಪ್ಟೆಂಬರ್ 10 - ವಿಶ್ವ ಆತ್ಮಹತ್ಯೆ ತಡೆ ದಿನ
ಸೆಪ್ಟೆಂಬರ್ 11 - ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
ಸೆಪ್ಟೆಂಬರ್ 14 - ಹಿಂದಿ ದಿವಸ್, ವಿಶ್ವ ಪ್ರಥಮ ಚಿಕಿತ್ಸಾ ದಿನ
ಸೆಪ್ಟೆಂಬರ್ 15 - ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಭಾರತದಲ್ಲಿ ಇಂಜಿನಿಯರ್ ದಿನ


ಇದನ್ನೂ ಓದಿ: Bakeries Near Me: ಸ್ಮೂಥ್​ ಬ್ರೆಡ್​ನಿಂದ, ಸ್ವೀಟ್​ ಕೇಕ್​ವರೆಗೆ - ಬೆಂಳೂರಿನ ಬೆಸ್ಟ್​ ಬೇಕರಿಗಳಿವು


ಸೆಪ್ಟೆಂಬರ್ 16 - ವಿಶ್ವ ಓಝೋನ್ ದಿನ
ಸೆಪ್ಟೆಂಬರ್ 17 - ವಿಶ್ವ ರೋಗಿಗಳ ಸುರಕ್ಷತಾ ದಿನ
ಸೆಪ್ಟೆಂಬರ್ 21 - ಅಂತರಾಷ್ಟ್ರೀಯ ಶಾಂತಿ ದಿನ
ಸೆಪ್ಟೆಂಬರ್ 26 - ವಿಶ್ವ ಪರಿಸರ ಆರೋಗ್ಯ ದಿನ,
ಸೆಪ್ಟೆಂಬರ್ 26 - ವಿಶ್ವ ಗರ್ಭನಿರೋಧಕ ದಿನ, ಕಿವುಡರ ದಿನ
ಸೆಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ
ಸೆಪ್ಟೆಂಬರ್ 28 - ವಿಶ್ವ ರೇಬೀಸ್ ದಿನ
ಸೆಪ್ಟೆಂಬರ್ 29 - ವಿಶ್ವ ಹೃದಯ ದಿನ, ಆಹಾರ ನಷ್ಟ ಮತ್ತು ತ್ಯಾಜ್ಯದ ಬಗ್ಗೆ ಅಂತರಾಷ್ಟ್ರೀಯ ಜಾಗೃತಿ ದಿನ
ಸೆಪ್ಟೆಂಬರ್ 30 - ವಿಶ್ವ ಸಾಗರ ದಿನ, ಅಂತರಾಷ್ಟ್ರೀಯ ಅನುವಾದ ದಿನ

top videos
    First published: