• ಹೋಂ
  • »
  • ನ್ಯೂಸ್
  • »
  • lifestyle
  • »
  • Truly Desi: ತಾಯಿ ಸಾಧನೆಗೆ ಕಾರಣವಾಯ್ತು ಮಗಳ ಅಲರ್ಜಿ! ಸ್ಟಾರ್ಟ್‌ ಅಪ್ ಶುರು ಮಾಡಿ 2 ಕೋಟಿ ವಹಿವಾಟು!

Truly Desi: ತಾಯಿ ಸಾಧನೆಗೆ ಕಾರಣವಾಯ್ತು ಮಗಳ ಅಲರ್ಜಿ! ಸ್ಟಾರ್ಟ್‌ ಅಪ್ ಶುರು ಮಾಡಿ 2 ಕೋಟಿ ವಹಿವಾಟು!

ರೂಪಾಲಿ ಕಾಕಡೆಯವರ ಹೊಸ ಸ್ಟಾರ್ಟ್ ಅಪ್

ರೂಪಾಲಿ ಕಾಕಡೆಯವರ ಹೊಸ ಸ್ಟಾರ್ಟ್ ಅಪ್

ರೂಪಾಲಿ ಕಾಕಡೆ ಮೂಲತಃ ಶಿಕ್ಷಕಿ. ಅದು 2016 ರ ಹೊತ್ತಿಗೆ ಆಕೆಯ 5 ವರ್ಷದ ಮಗಳು ಪದೇ ಪದೇ ಆರೋಗ್ಯ ತಪ್ಪುತ್ತಿದ್ದದು ಅವರ ಚಿಂತೆಗೆ ಕಾರಣವಾಗಿತ್ತು. ಹಲವಾರು ಪರೀಕ್ಷೆಗಳಾದ ಮೇಲೆ ವೈದ್ಯರು ಹೇಳಿದ್ದೆಂದರೆ ಆ ಮಗುವಿಗೆ ಡೈರಿ ಉತ್ಪನ್ನಗಳಿಂದ ಅಲರ್ಜಿ ಇದೆ ಅಂತ. ಇದಕ್ಕೆ ಪರ್ಯಾಯವನ್ನು ಹುಡುಕೋದಕ್ಕೆ ಸ್ಟಾರ್ಟ್‌ ಮಾಡಿದರು, ಈಗ ಈ ಸ್ಟಾರ್ಟ್ ಅಪ್‌ ಹೇಗಿದೆ ನೋಡಿ...

ಮುಂದೆ ಓದಿ ...
  • Share this:

ಆಕೆಯ ಮಗಳಿಗೆ (Daughter) ಅದೊಂದು ಅಲರ್ಜಿ ಇತ್ತು. ಕಲಬೆರಿಕೆ ಡೈರಿ ಉತ್ಪನ್ನಗಳಿಂದ (Dairy Products) ಆಗುವಂಥ ಅಲರ್ಜಿ. ಹಾಲು ಹಾಗೂ ಹಾಲಿನ ಉತ್ಪನ್ನ ಯಾವುದನ್ನೂ ಆಕೆಗೆ ಬಳಸೋಕೆ ಆಗ್ತಾ ಇರಲಿಲ್ಲ. ಇದರಿಂದ ಬೇಸತ್ತ ಆ ಮಗುವಿನ ತಾಯಿ (Mother) ಪರ್ಯಾಯ ಮಾರ್ಗವೊಂದನ್ನು ಕಂಡುಕೊಂಡಳು. ಅದೇ ಈಗ ಸ್ಟಾರ್ಟ್‌ ಅಪ್‌ ಆಗಿ ಪಡಿವರ್ತನೆಗೊಂಡು ವರ್ಷಕ್ಕೆ ಸುಮಾರು ಎರಡು ಕೋಟಿ ಟರ್ನ್  ಓವರ್‌ ಆಗುತ್ತೆ. ರೂಪಾಲಿ ಕಾಕಡೆ ಮೂಲತಃ ಶಿಕ್ಷಕಿ. ಅದು 2016 ರ ಹೊತ್ತಿಗೆ ಆಕೆಯ 5 ವರ್ಷದ ಮಗಳು ಪದೇ ಪದೇ ಆರೋಗ್ಯ (Health) ತಪ್ಪುತ್ತಿದ್ದದು ಅವರ ಚಿಂತೆಗೆ ಕಾರಣವಾಗಿತ್ತು. ಹಲವಾರು ಪರೀಕ್ಷೆಗಳಾದ ಮೇಲೆ ವೈದ್ಯರು ಹೇಳಿದ್ದೆಂದರೆ ಆ ಮಗುವಿಗೆ ಡೈರಿ ಉತ್ಪನ್ನಗಳಿಂದ ಅಲರ್ಜಿ (Allergy) ಇದೆ ಅಂತ.


ಕಲಬೆರಕೆ ಉತ್ಪನ್ನಗಳಿಂದ ದೂರವಿರಲು ಈ ನಿರ್ಧಾರ
ಅವರ ಪ್ರಕಾರ, ಡೈರಿ ಉತ್ಪನ್ನಗಳು ಕಲಬೆರಕೆಯಾದಾಗ, ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆನಂತರ ರೂಪಾಲಿ ಹಾಗೂ ಆಕೆಯ ಪತಿ ಹಾಲನ್ನು ಕೊಳ್ಳುವುದನ್ನೇ ನಿಲ್ಲಿಸಿಬಿಟ್ಟರು. ಆದ್ರೆ ಹಾಲು ಅನ್ನೋದು ಮಕ್ಕಳಿಗೆ ಸಂಪೂರ್ಣ ಆಹಾರ. ಹಾಗಾಗಿ ಅವರು ಇದಕ್ಕೆ ಪರ್ಯಾಯವನ್ನು ಹುಡುಕೋದಕ್ಕೆ ಸ್ಟಾರ್ಟ್‌ ಮಾಡಿದರು. ಕಲಬೆರಕೆ ಉತ್ಪನ್ನಗಳಿಂದ ಹೀಗಾಗುತ್ತದೆ ಎಂದು ಅರಿತ ರೂಪಾಲಿ ದಂಪತಿ ಪುಣೆಗೆ ತೆರಳಿ ರೈತರಿಂದ ಆಕಳುಗಳನ್ನು ಕೊಂಡರು. ನಗರದಿಂದ 90 ಕಿಮೀ ದೂರದಲ್ಲಿರುವ ಜುನ್ನಾರ್‌ನಲ್ಲಿರುವ ತಮ್ಮ ಪೂರ್ವಜರ ಭೂಮಿಗೆ ಇವುಗಳನ್ನು ತಂದು ಕಟ್ಟಿದರು.


ಅವರು ಲಾಲ್‌ ಕಂದರ್‌ ಹಸುಗಳನ್ನು ಸಾಕಿ ಹಾಲು ಕರೆಯಲು ಶುರು ಮಾಡಿದರು. ಪರಿಶುದ್ಧ ಹಾಲನ್ನು ಅವರೂ ಸೇವಿಸುವುದರೊಂದಿಗೆ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಮಾರಾಟ ಮಾಡಿದರು. 'ಟ್ರೂಲಿ ದೇಸಿ' ಅನ್ನೋ ಬ್ರಾಂಡ್‌ ನೊಂದಿಗೆ ಹೆಲ್ತ್‌ ಕೇರ್‌ ಹಾಗೂ ಆರ್ಗ್ಯಾನಿಕ್‌ ಉತ್ಪನ್ನಗಳ ಮಾರಾಟವನ್ನು 2018ರ ಜೂನ್‌ ನಲ್ಲಿ ಆರಂಭಿಸಿದರು.


ಟ್ರೂಲಿ ದೇಸಿ ಬಳಿ ಇವೆ 800 ಆಕಳುಗಳು
ಟ್ರೂಲಿ ದೇಸಿ ಆರಂಭವಾಗಿದ್ದು ಕೆಲವೇ ಆಕಳುಗಳಿಂದ. ಈಗ ನಮ್ಮ ಬಳಿ 800 ಆಕಳುಗಳಿವೆ ಎನ್ನುತ್ತಾರೆ ರೂಪಾಲಿ. ತನ್ನದೇ ಆದ ಸ್ಟಾರ್ಟ್‌ ಅಪ್‌ ಆರಂಭಿಸಿದ ಈ ಯುವ ತಾಯಿ, ಹಾಲಿನ ಜೊತೆಗೆ ಮತ್ತಷ್ಟು ಹಾಲಿನ ಉತ್ಪನ್ನಗಳನ್ನು ಅದಕ್ಕೆ ಸೇರಿಸಲು ಯೋಚಿಸಿದರು. ಹೆಚ್ಚಿನ ಪ್ರೊಫೆಷನಲ್‌ ಆಗೋದಕ್ಕೋಸ್ಕರ ಮ್ಯಾನೇಜ್‌ ಮೆಂಟ್‌ ಕನ್ಸಲ್ಟೆಂಟ್‌ ಮೋಹಿತ್‌ ರಾಥೋಡ್‌ ಅವರನ್ನು ಸಂಪರ್ಕಿಸಿದರು.


ಇದನ್ನೂ ಓದಿ: Bio-Fencing: ರೈತರ ಹೊಲದ ರಕ್ಷಣೆಗೆ ಇದೆ ಜೈವಿಕ ಬೇಲಿ! ಕಡಿಮೆ ವೆಚ್ಚದಲ್ಲಿ ಸಿಗಲಿದೆ ಅಧಿಕ ಲಾಭ!


ಟ್ರೂಲಿ ದೇಸಿಯ ಐಡಿಯಾಗಳನ್ನು ಮೆಚ್ಚಿದ ಮೋಹಿತ್‌ ರೂಪಾಲಿಯೊಂದಿಗೆ ಟ್ರೂಲಿ ದೇಸಿಯ ಕೋ ಫೌಂಡರ್‌ ಆದರು. ಅಂದಹಾಗೆ ಟ್ರೂಲಿ ದೇಸಿಯು ತನ್ನ ಗ್ರಾಹಕರಿಗೆ ತಾಜಾ ಉತ್ಪನ್ನ ಹಾಗೂ ಶೇ. 100 ರಷ್ಟು ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ನೀಡುವ ಗುರಿ ಹೊಂದಿದೆ ಅಂತಾರೆ ರೂಪಾಲಿ ಹಾಗೂ ಮೋಹಿತ್.‌




ನಾವು ಸಾವಯವ ದೇಶೀಯ ಡೈರಿ ಉತ್ಪನ್ನಗಳಾದ ತುಪ್ಪ, ಬೆಣ್ಣೆ, A2 ಪನ್ನೀರ್‌ ಜೊತೆಗೆ ಕೆಲವು ಆರೋಗ್ಯಕರ ಡೈರಿ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತೇವೆ, ಅಲ್ಲದೇ ಕಲಬೆರಕೆ ಉತ್ಪನ್ನಗಳಿಗೆ ಪರ್ಯಾಯವನ್ನು ಕಂಡುಹಿಡಿಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಅಂತ ಹೇಳುತ್ತಾರೆ ರೂಪಾಲಿ.


ಈ ಡೈರಿ ಉತ್ಪನ್ನಗಳನ್ನು ಹೇಗೆ ತಯಾರಿಸಲಾಗುತ್ತದೆ 
ಅಂದಹಾಗೆ ಟ್ರೂಲಿ ದೇಸಿಯಲ್ಲಿ ಬೆಳಗಿನ ಜಾವ 4.30ಕ್ಕೆ ಒಮ್ಮೆ ಹಾಗೂ ಸಂಜೆ ಮತ್ತೊಮ್ಮೆ ಹಾಲು ಕರೆಯಲಾಗುತ್ತದೆ. ಅದಕ್ಕೂ ಮೊದಲು ಶೆಡ್‌ ನಲ್ಲಿರುವ ಕರುಗಳಿಗೆ ಬೇಕಾದಷ್ಟು ಹಾಲನ್ನು ನೀಡಲಾಗುತ್ತದೆ. ನಾವು ಹಾಲನ್ನು ಹೆಚ್ಚಿಸಲು ಹಸುಗಳಿಗೆ ಯಾವುದೇ ಹಾರ್ಮೋನು ಬದಲಾಗುವಂಥ ಚುಚ್ಚುಮದ್ದನ್ನಾಗಲಿ, ಆಂಟಿಬಯೋಟಿಕ್ಸ್‌ ಗಳನ್ನಾಗಲಿ ನೀಡುವುದಿಲ್ಲ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಅಂತ ರೂಪಾಲಿ ಸ್ಪಷ್ಟಪಡಿಸುತ್ತಾರೆ. ಹಾಲು ಕರೆದಾದ ನಂತರ ಹಾಲನ್ನು ಚಿಲ್ಲರ್‌ಗಳಲ್ಲಿ ನಾಲ್ಕು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತದೆ. ಆನಂತರದಲ್ಲಿ ಅದನ್ನು ಪಾಶ್ಚರೀಕರಿಸಲಾಗುತ್ತದೆ.




ಇನ್ನು ವಿತರಿಸಬೇಕಾದ ಹಾಲನ್ನು ಪಾಶ್ಚರೀಕರಣದ ನಂತರ ಚಿಲ್ಲಿಂಗ್ ಟ್ಯಾಂಕ್‌ಗೆ ವರ್ಗಾಯಿಸಲಾತ್ತೆ. ನಂತರ ಪ್ಯಾಕೇಜಿಂಗ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದನ್ನು ಅನುಸರಿಸಿ, ಕೋಲ್ಡ್ ಚೈನ್ ಮುರಿಯದಂತೆ ನೋಡಿಕೊಳ್ಳಲು ಅದನ್ನು ಮತ್ತೊಮ್ಮೆ ತಣ್ಣನೆಯ ಕೋಣೆಯಲ್ಲಿ ಸಂಗ್ರಹಿಸಲಾಗುತ್ತೆ. ನಂತರ ವಿತರಣಾ ವಾಹನಗಳನ್ನು ಲೋಡ್ ಮಾಡಲಾಗುತ್ತದೆ. ಪ್ರಸ್ತುತ, ಬ್ರ್ಯಾಂಡ್ ಸುಮಾರು 8-10 ಗೋಶಾಲೆಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತು ಪ್ರತಿ ಗೋಶಾಲೆಯಲ್ಲಿ ಸುಮಾರು 100 ಹಸುಗಳಿವೆ ಎಂದು ರೂಪಾಲಿ ಹೇಳುತ್ತಾರೆ.


ಇದನ್ನೂ ಓದಿ: Business Idea: ಒಮ್ಮೆಈ ಗಿಡ ನೆಟ್ರೆ 5 ವರ್ಷ ಫಲ ನೀಡುತ್ತೆ, 2 ಲಕ್ಷ ಆದಾಯ ಬರೋದು ಪಕ್ಕಾ!


ಇನ್ನು ಪಾಶ್ಚರೀಕರಿಸಿದ ಹಾಲನ್ನು ಪುಣೆಯ ಮಾವಲ್ ತಾಲೂಕಿನ ಬೇಬದೊಹಾಲ್ ಗ್ರಾಮದಲ್ಲಿರುವ ಉತ್ಪಾದನಾ ಘಟಕದಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ ಅಂತ ಮೋಹಿತ್ ಹೇಳುತ್ತಾರೆ. ಅಲ್ಲಿ ಕುಲ್ಹಾದ್‌ ದಹಿ, ಖಾವಾ, ಪನ್ನೀರ್‌ ಗಳನ್ನು ಉತ್ಪಾದಿಸಲಾಗುತ್ತದೆ. ಟ್ರೂಲಿ ದೇಸಿಯ ಉತ್ಪನ್ನಗಳಲ್ಲಿ A2 ಹಸುವಿನ ತುಪ್ಪ ಮತ್ತು ಕುಲ್ಹಾದ್ ದಹಿ ಹೆಚ್ಚು ಜನಪ್ರಿಯವಾಗಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ಮೊಸರು, ಬಲವರ್ಧಿತ ಹಾಲು, ಮಿಲ್ಕ್‌ ಬಾರ್‌ ಗಳು ಮುಂತಾದ ಸೂಪರ್‌ಫುಡ್‌ ಗಳನ್ನು ಉತ್ಪಾದಿಸಲು ಯೋಜಿಸಲಾಗಿದೆ. ಅಲ್ಲದೇ ಕಡಿಮೆ ಕೊಬ್ಬು ಹಾಗೂ ತಯಾರು ಮಾಡುವ ಯೋಜನೆ ಹೊಂದಿದ್ದೇವೆ ಅಂತ ರೂಪಾಲಿ ಹೇಳುತ್ತಾರೆ.


ರೈತರೊಂದಿಗೆ ಕೈಜೋಡಿಸಿದ್ದೇವೆ
ಇನ್ನು ಟ್ರೂಲಿ ದೇಸೀ ಬ್ರಾಂಡ್‌ ಗ್ರಾಮೀಣ ಭಾರತದ ರೈತರೊಂದಿಗೆ, ಅದರಲ್ಲೂ ವಿಶೇಷವಾಗಿ ಪುಣೆಯ ಹಳ್ಳಿಗಳ ರೈತರೊಂದಿಗೆ ಕೈಜೋಡಿಸಿದೆ. ಪ್ರಸ್ತುತ, 100 ರೈತರೊಂದಿಗೆ ಕೈಜೋಡಿಸಲಾಗಿದೆ. ಇದರಿಂದ ರೈತರು ನೇರವಾಗಿ ಗ್ರಾಹಕರನ್ನು ತಲುಪಬಹುದು ಅಂತಾ ಹೇಳ್ತಾರೆ ರೂಪಾಲಿ. ಅಲ್ಲದೇ ಹಸುಗಳ ಸಗಣಿ ಹಾಗೂ ಗೋಮೂತ್ರದಿಂದ ಗೊಬ್ಬರ ತಯಾರಿಸಿ ಅದನ್ನೂ ಸಾವಯವ ಕೃಷಿಗೆ ಬಳಸಿಕೊಳ್ಳವಂತೆ ಮಾಡಲಾಗಿದೆ. ಅಲ್ದೇ, "ನಿಜವಾಗಿಯೂ ದೇಸಿ ಈಗ ಸಾವಯವ ತರಕಾರಿಗಳನ್ನು ಉತ್ಪಾದಿಸುತ್ತಿರುವ ಕನಿಷ್ಠ 50-60 ರೈತರಿಗೆ ಟ್ರೂಲಿ ದೇಸಿ ಸಹಾಯ ಮಾಡಿದೆ" ಅಂತ ರೂಪಾಲಿ ಹೇಳುತ್ತಾರೆ.




ಸದ್ಯ ಸಾವಯವ ಕೃಷಿಗೆ ಬದಲಾವಣೆಗೊಂಡ ರೈತ ಸಂದೀಪ್‌ ಪುಟಕ್‌ ಪ್ರಕಾರ, 'ನಾನು ಈಗ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಮೊದಲಿಗಿಂತ ಶೇಕಡಾ 30 ರಷ್ಟು ಹೆಚ್ಚು ಲಾಭ ಪಡೆಯುತ್ತಿದ್ದೇನೆ. ಟ್ರೂಲಿ ದೇಸಿಯವರು ನಮಗೆ ಸಾವಯವ ಗೊಬ್ಬರ ಮತ್ತು ಕೀಟನಾಶಕಗಳನ್ನು ಕೈಗೆಟುಕುವ ವೆಚ್ಚದಲ್ಲಿ ನೀಡುತ್ತಿದ್ದಾರೆ' ಅಂತ ಧನ್ಯವಾದ ಅರ್ಪಿಸುತ್ತಾರೆ.


ಇನ್ನು ಮೋಹಿತ್‌ ಹೇಳೋ ಪ್ರಕಾರ, ಸಾವಯವ ಗೊಬ್ಬರದ ಜೊತೆಗೆ ಅವರು ಜಮೀನಿನಿಂದ ಸಂಗ್ರಹಿಸಲಾದ ಗೋವಿನ ಸಗಣಿ ಮತ್ತು ಮೂತ್ರವನ್ನು ಬಯೋಗ್ಯಾಸ್ ಡೈಜೆಸ್ಟರ್‌ನಲ್ಲಿ ಹಾಕುವ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಅನಿಲವನ್ನು ಕಂಪನಿಯ ಕೆಲಸಗಾರರು ತಮ್ಮ ಮನೆಗಳಲ್ಲಿ ಅಡುಗೆ ಮತ್ತು ಇತರ ಉದ್ದೇಶಗಳಿಗಾಗಿ ಬಳಸುತ್ತಾರೆ. ಅಲ್ದೇ, ಪ್ರತಿದಿನ ಸುಮಾರು 15 ಕ್ಯೂಬಿಕ್ ಮೀಟರ್ ಬಯೋಗ್ಯಾಸ್ ಉತ್ಪಾದಿಸಲಾಗುತ್ತದೆ ಎಂದಿದ್ದಾರೆ. "ಶೀಘ್ರದಲ್ಲೇ, ಹೆಚ್ಚುವರಿ ಜೈವಿಕ ಅನಿಲದ ಮೂಲಕ ವಿದ್ಯುತ್ ಉತ್ಪಾದಿಸಲು ಮತ್ತು ಅದನ್ನು ಜಮೀನಿನಲ್ಲಿ ಬಳಸಲು ನಾವು ಉದ್ದೇಶಿಸಿದ್ದೇವೆ" ಎಂದೂ ಮೋಹಿತ್‌ ಹೇಳುತ್ತಾರೆ.


ಸುಲಭವಾಗಿರಲಿಲ್ಲ ಸಾಧನೆ!
ಕಲಬೆರಕೆಯಿಲ್ಲದೇ ನಿಜವಾದ ಸಾವಯವ ಬ್ರಾಂಡ್‌ ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಸಾವಯವ ಉತ್ಪನ್ನ ಯಾವುದು.. ಅದನ್ನು ಸೇವಿಸೋದರಿಂದ ಪ್ರಯೋಜನಗಳೇನು.. ಅದರ ಬೆಲೆ ಏಕೆ ಹೆಚ್ಚು ಅನ್ನೋದ್ರ ಬಗ್ಗೆ ಜನರಿಗೆ ಅರಿವಿನ ಕೊರತೆ ಇತ್ತು. ಈ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಶ್ರಮ ವಹಿಸಬೇಕಾಯಿತು ಅಂತಾರೆ ರೂಪಾಲಿ. ಸದ್ಯ ಟ್ರೂಲಿ ದೇಸಿ ದೇಶಾದ್ಯಂತ ರವಾನೆಯಾಗುತ್ತಿದೆ. ಎಲ್ಲಾ ಪ್ರಮುಖ ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.




ಇದನ್ನೂ ಓದಿ:  Business Idea: ಈ ಬ್ಯುಸಿನೆಸ್​ಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​, ನೋಡೋಕೆ ಸಿಂಪಲ್​-ಆದಾಯ ​ಸೂಪರ್​!


ಎ2 ಹಸುವಿನ ಹಾಲು ಲೀಟರ್‌ ಗೆ 90 ರೂಪಾಯಿಯಾದರೆ, ಎಮ್ಮೆಯ ಹಾಲು 70 ರೂಪಾಯಿ. ಇನ್ನು 200ಗ್ರಾಂ ಪನ್ನೀರ್‌ ಗೆ 140 ರೂಪಾಯಿ ದರವಿದೆ. ಈ ಬ್ರಾಂಡ್‌ ಗೆ ತಿಂಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಆರ್ಡರ್‌ ಗಳು ಬರುತ್ತಿವೆ. ಸದ್ಯ ಟ್ರೂಲಿ ದೇಸಿ ಕಳೆದ ವರ್ಷ 2.7 ಕೋಟಿ ವಹಿವಾಟು ನಡೆಸಿದೆ ಎಂದಿದ್ದಾರೆ ರೂಪಾಲಿ. ಇದು ರೂಪಾಲಿ ಕಾಕಡೆ ಅವರ ಸಾಧನೆಯ ಕಥೆ. ಮಗಳಿಗಾಗಿ ಮಾಡಿದ ಕೆಲಸವಿಂದು ದೊಡ್ಡ ಮಟ್ಟದ ಸಾಧನೆಯಾಗಿ ಬದಲಾಗಿದೆ. ರೂಪಾಲಿಯ ಈ ಸಾಧನೆ ಅನೇಕರಿಗೆ ಸ್ಪೂರ್ತಿಯಂತೂ ಹೌದು.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು