ಕರ್ನಾಟಕದ (Karnataka) ‘ಸಿನಿ ಶೆಟ್ಟಿ’ (Sini Shetty) ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 (Femina Miss India World -2022) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 21 ವರ್ಷ ವಯಸ್ಸಿನ ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (CFA) ಕೋರ್ಸ್ ಮಾಡುತ್ತಿದ್ದಾರೆ. ಸಿನಿ ಶೆಟ್ಟಿ ಈಗ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಆಗಿ ಹೊರ ಹೊಮ್ಮಿದ್ದಾರೆ. ಮತ್ತು ಈಗ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಜಸ್ಥಾನದ ರೂಬಲ್ ಶೇಖಾವತ್ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾನ್ ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಆಗಿ ಮಿಂಚಿದ್ದಾರೆ.
ಹಾಗಾದ್ರೆ ನಾವಿಂದು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022ರ ಕಿರೀಟ ಧರಿಸಿರುವ ಸಿನಿ ಶೆಟ್ಟಿ ಯಾರು? ಅವರ ಜೀವನಶೈಲಿ ಬಗ್ಗೆ ಇಲ್ಲಿ ತಿಳಿಯೋಣ.
ಸಿನಿ ಶೆಟ್ಟಿ ಯಾರು?
ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಆಗಿರುವ ಸಿನಿ ಶೆಟ್ಟಿ ಮೂಲತಃ ಕರ್ನಾಟಕದವರು. ಅವರು ಮುಂಬೈನಲ್ಲಿ ಜನಿಸಿದರು. ನೃತ್ಯ ಯಾವಾಗಲೂ ಅವರ ನೆಚ್ಚಿನ ಕಲೆ ಆಗಿದೆ. ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು.
ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?
ಮತ್ತು ಹದಿನಾಲ್ಕನೆಯ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ತಮ್ಮ ಅರಂಗಾಟಮ್ ಪೂರ್ಣಗೊಳಿಸಿದರು. ನೃತ್ಯದ ಜೊತೆಗೆ ಸಿನಿ ಶೆಟ್ಟಿ ನಟಿ, ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿಯೂ ಕೆಲಸ ಮಾಡ್ತಿದ್ದಾರೆ. ಸಿನಿ ಶೆಟ್ಟಿ ತುಂಬಾ ಸುಂದರಿ. ಅವರ ಸೌಂದರ್ಯ ರಹಸ್ಯದಲ್ಲಿ ಮುಖ್ಯವಾದ ಹಾಗೂ ದೊಡ್ಡ ಪಾತ್ರವೆಂದರೆ ಅವರ ಅದ್ಭುತ ಫಿಟ್ನೆಸ್.
ಸಿನಿ ಶೆಟ್ಟಿಯ ಅದ್ಭುತ ಫಿಟ್ನೆಸ್
ಸಿನಿ ಶೆಟ್ಟಿಯ ಎಲ್ಲಾ ಫೋಟೋಗಳು ಅವರ ಫಿಟ್ನೆಸ್ ಬಗೆಗಿನ ಕಾಳಜಿಯನ್ನು ಎದ್ದು ಕಾಣುವಂತೆ ಮಾಡಿವೆ. ಸಿನಿ ಶೆಟ್ಟಿ ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಾರೆ. ನಿಸ್ಸಂಶಯವಾಗಿ ಸ್ಲಿಮ್ ಮತ್ತು ಟ್ರಿಮ್ ಫಿಗರ್ ಪಡೆಯುವುದು ಪ್ರತಿ ಹುಡುಗಿಯ ಕನಸು. ಆದರೆ ಇದಕ್ಕಾಗಿ ದೈಹಿಕ ಚಟುವಟಿಕೆಯ ಮೇಲೆ ಸಾಕಷ್ಟು ಗಮನ ಕೇಂದ್ರೀಕರಿಸುವುದು ಮುಖ್ಯವಾಗಿದೆ.
ಮಿಸ್ ಇಂಡಿಯಾ ಸ್ಥಾನಕ್ಕೆ ಬಂದಿರುವ ಸಿನಿ ಶೆಟ್ಟಿ ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಯಾವ ರೀತಿಯ ಫಿಟ್‌ನೆಸ್ ದಿನಚರಿ ಅನುಸರಿಸುತ್ತಾರೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ.
ಸಿನಿ ಶೆಟ್ಟಿಯ ಫಿಟ್ನೆಸ್ ರಹಸ್ಯ - ನೃತ್ಯ
ಸಿನಿ ಶೆಟ್ಟಿಗೆ ನೃತ್ಯವೆಂದರೆ ತುಂಬಾ ಪ್ರೀತಿ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಅವರು ನೃತ್ಯ ಮಾಡುವ ಅನೇಕ ವೀಡಿಯೊಗಳಿವೆ. ವೃತ್ತಿಪರ ಡ್ಯಾನ್ಸರ್ ಆಗಿರುವ ಅವರು ಕೋರ್ಸ್ ಕೂಡ ಮಾಡಿದ್ದಾರೆ. ನೃತ್ಯವು ಆರೋಗ್ಯಕರ ಮತ್ತು ಫಿಟ್ ಆಗಿರಲು ಅತ್ಯಂತ ಆನಂದದಾಯಕ ಮಾರ್ಗವಾಗಿದೆ ಅಂತಾರೆ ಸಿನಿ ಶೆಟ್ಟಿ.
ನೃತ್ಯ ಮಾಡುವುದು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಜೊತೆಗೆ ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸುವ ಮೂಲಕ ವ್ಯಕ್ತಿಯನ್ನು ಮನಸ್ಸಿನಾಳದಿಂದ ಸಂತೋಷವಾಗಿಡಲು ಸಹಾಯ ಮಾಡುತ್ತದೆ.
ಸಿನಿ ಶೆಟ್ಟಿ ಪ್ರತಿನಿತ್ಯ ಯೋಗ ಮಾಡುತ್ತಾರೆ
ಇಂಡಿಯಾ ಟೈಮ್ಸ್ ವರದಿಯ ಪ್ರಕಾರ, ಸಿನಿ ಶೆಟ್ಟಿ ನೃತ್ಯದ ಹೊರತಾಗಿ ಯೋಗ ಕೂಡ ಮಾಡುತ್ತಾರೆ. ಯೋಗವು ಆರೋಗ್ಯಕರ ಮತ್ತು ಫಿಟ್ ಆಗಿರಲು ಉತ್ತಮ ಮಾರ್ಗ. ಪ್ರತಿನಿತ್ಯ ಯೋಗ ಮಾಡುವುದು ದೈಹಿಕ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಅನೇಕ ಬಾಲಿವುಡ್ ನಟಿಯರು ತಮ್ಮ ಫಿಗರ್ ಕಾಪಾಡಿಕೊಳ್ಳಲು ಪ್ರತಿದಿನ ಯೋಗ ಮಾಡ್ತಾರೆ.
ಇದನ್ನೂ ಓದಿ: ಮಧುಮೇಹ ನಿಯಂತ್ರಣ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಶುಂಠಿ !
ಆರೋಗ್ಯಕರ ಅಡುಗೆ ಮತ್ತು ಆಹಾರ ಸೇವನೆ
ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ವ್ಯಾಯಾಮ, ಯೋಗ, ಚಟುವಟಿಕೆಯ ಜೊತೆಗೆ ಆಹಾರ ಕ್ರಮವೂ ತುಂಬಾ ಮುಖ್ಯ. ಸಿನಿ ತನ್ನ ಆಹಾರ ಕ್ರಮದ ಬಗ್ಗೆ ಸಂಪೂರ್ಣ ಗಮನಹರಿಸುತ್ತಾರೆ. ತಾವೇ ಖುದ್ದು ಅಡುಗೆ ಮಾಡಲು ಇಷ್ಟಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ