Diet Tips: ಅನಾರೋಗ್ಯಕರ ಎಂದು ಕರೆಯಿಸಿಕೊಳ್ಳುವ ಆಹಾರ ಪದಾರ್ಥಗಳಿಂದ ಇಷ್ಟೆಲ್ಲಾ ಅನುಕೂಲತೆಗಳಿವೆ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನಾರೋಗ್ಯಕರ ಎಂದು ಪರಿಗಣಿಸಲಾದ ಈ ಪದಾರ್ಥಗಳು ನಿಜವಾಗಿಯೂ ಆರೋಗ್ಯಕರ ಎಂದು ತಜ್ಞರು ಹೇಳಿದರೆ ನಿಮಗೆ ಆಶ್ಚರ್ಯ ಆಗುತ್ತದೆ. ಅದನ್ನು ಮಾಡಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು.

  • Share this:

ಪಿಜ್ಜಾ (Pizza), ಬರ್ಗರ್ (Burger), ಫ್ರೆಂಚ್ ಫ್ರೈಸ್, ಕೇಕ್ (Cake) ಮತ್ತು ಕುಕೀಸ್ ಗಳಂತಹ ಆಹಾರ ಪದಾರ್ಥಗಳ (Food Ingredients) ಸೇವನೆಯನ್ನು ಅನಾರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳ ನಿಯಮಿತ ಸೇವನೆಯು ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಕಾರಣ ಆಗುತ್ತದೆ ಎಂಬುದು ಸಂಪೂರ್ಣ ನಿಜ ಸಂಗತಿ. ಇದು ಗೊತ್ತಿದ್ದರೂ ಸಹ ಪ್ರಪಂಚದಾದ್ಯಂತ ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಈ ಆಹಾರ ಪದಾರ್ಥಗಳನ್ನು ತುಂಬಾ ಇಷ್ಟ ಪಡುತ್ತಾರೆ. ಆದರೆ ಪ್ರತಿ ಕೆಟ್ಟ ವಿಷಯವು ಹಾನಿಕರ ಆಗಿರುತ್ತದೆ ಎಂಬುದು ಅನಿವಾರ್ಯವಲ್ಲ.


ಅನಾರೋಗ್ಯಕರ ಎಂದು ಕರೆಯಿಸಿಕೊಳ್ಳುವ ಪದಾರ್ಥಗಳು ಆರೋಗ್ಯಕರ!


ಅನಾರೋಗ್ಯಕರ ಎಂದು ಪರಿಗಣಿಸಲಾದ ಈ ಪದಾರ್ಥಗಳು ನಿಜವಾಗಿಯೂ ಆರೋಗ್ಯಕರ ಎಂದು ತಜ್ಞರು ಹೇಳಿದರೆ ನಿಮಗೆ ಆಶ್ಚರ್ಯ ಆಗುತ್ತದೆ. ಅದನ್ನು ಮಾಡಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಈಗ ನೀವು ಯೋಚಿಸುತ್ತಿರಬಹುದು. ಪ್ರತಿಯೊಬ್ಬರೂ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದಾಗ ಅವರಲ್ಲಿ ಆರೋಗ್ಯಕರ ಆದದ್ದು ಯಾವುದು ಇದೆ?


ವಾಸ್ತವದಲ್ಲಿ ಈ ಪದಾರ್ಥಗಳನ್ನು ಮೈದಾ ಅಥವಾ ಹಿಟ್ಟಿನ ಜೊತೆಗೆ ತರಕಾರಿ, ತುಪ್ಪ ಅಥವಾ ಬೆಣ್ಣೆಯೊಂದಿಗೆ ತಯಾರಿಸಲಾಗುತ್ತದೆ. ನೀವು ಅದನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಮಾಡಿದರೆ, ನಿಮ್ಮ ಆರೋಗ್ಯಕ್ಕೆ ಮಾತ್ರ ಪ್ರಯೋಜನ ಆಗುತ್ತದೆ. ಇದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.


ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ


ಪಿಜ್ಜಾ ಇದು ಉತ್ಕರ್ಷಣ ನಿರೋಧಕಗಳ ಮೂಲ


ವರದಿ ಪ್ರಕಾರ, ಪಿಜ್ಜಾದಲ್ಲಿ ಟೊಮೆಟೊ ಸಾಸ್ ಅನ್ನು ಬಳಕೆ ಮಾಡುತ್ತಾರೆ. ಟೊಮೆಟೊಗಳಲ್ಲಿ ಲೈಕೋಪೀನ್ ಇದೆ. ಇದು ಶಕ್ತಿಯುತ ಉತ್ಕರ್ಷಣ ನಿರೋಧಕ ಆಗಿದೆ. ಇದು ನಿಮ್ಮನ್ನು ಹೃದ್ರೋಗದಿಂದ ರಕ್ಷಿಸುತ್ತದೆ. ಯೀಸ್ಟ್‌ನ ರಾಸಾಯನಿಕ ಕ್ರಿಯೆಯಿಂದಾಗಿ ಪಿಜ್ಜಾ ಡಫ್ ಆಂಟಿ ಆಕ್ಸಿಡೆಂಟ್‌ಗಳನ್ನು ಸಹ ಹೊಂದಿದೆ. ಅಲ್ಲದೆ ಇದು ಅನೇಕ ತರಕಾರಿಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕರ.


ಫ್ರೆಂಚ್ ಫ್ರೈಸ್ ಇದು ಪ್ರೋಟೀನ್ ಗಳ ನಿಧಿ


ವರದಿ ಪ್ರಕಾರ, ಫ್ರೆಂಚ್ ಫ್ರೈಗಳು ಪ್ರೋಟೀನ್‌ ಉತ್ತಮ ಮೂಲ. ಇದರ ಸೇವನೆ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಸುಧಾರಿಸುತ್ತದೆ. ಸ್ನಾಯು ಸೆಳೆತ ಸಹ ತಪ್ಪಿಸಬಹುದು. ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಹೆಚ್ಚಿಸಬಹುದು.


ಪಾಪ್ ಕಾರ್ನ್ ಇದು ಹೃದಯ ಸಂಬಂಧಿ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ


ಒಂದು ವರದಿ ಪ್ರಕಾರ, ಪಾಪ್‌ ಕಾರ್ನ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಮೂಲಕ ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. 3 ಕಪ್ ಪಾಪ್ ಕಾರ್ನ್ 1 ಕಪ್ ಓಟ್ ಮೀಲ್ ಗೆ ಸಮ. ಇದು ಫೈಬರ್ನಲ್ಲಿ ಸಮೃದ್ಧ. ಮತ್ತು ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೊರಿ ಹೊಂದಿದೆ.


ಹ್ಯಾಂಬರ್ಗರ್ ಇದು ಕಬ್ಬಿಣದ ಅತ್ಯುತ್ತಮ ಮೂಲ


ಕೆಂಪು ಮಾಂಸದಿಂದ ಮಾಡಿದ ಹ್ಯಾಂಬರ್ಗರ್ಗಳು ಕಬ್ಬಿಣದ ಅತ್ಯುತ್ತಮ ಮೂಲ. ಮನೆಯಲ್ಲಿ ತಯಾರಿಸಿದ ಹ್ಯಾಂಬರ್ಗರ್‌ಗಳಲ್ಲಿ ನೇರ ಮಾಂಸ ಬಳಸಿ. ಇದು ನರವೈಜ್ಞಾನಿಕ ಕಾಯಿಲೆ ತಡೆಯಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸಲು ಸಹಾಯ ಮಾಡುತ್ತದೆ.


ಅವು 2.5 ಮೈಕ್ರೋಗ್ರಾಂ ವಿಟಮಿನ್ ಬಿ-12 ಅನ್ನು ಸಹ ಹೊಂದಿವೆ. ಪ್ಯಾಟೀಸ್ ಅನ್ನು ಹುರಿಯುವ ಬದಲು, ಅವುಗಳನ್ನು ಗ್ರಿಲ್ ಮಾಡುವ ಮೂಲಕ ನೀವು ಅವುಗಳನ್ನು ಆರೋಗ್ಯಕರವಾಗಿಸಿ.


ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?


ಕೇಕ್ ಇದು ತೂಕ ಕಡಿಮೆ ಮಾಡುತ್ತದೆ


ಒಂದು ಸ್ಲೈಸ್ ಕೇಕ್ ಅನ್ನು ಒಳಗೊಂಡಿರುವ 600-ಕ್ಯಾಲೋರಿ ಉಪಹಾರ ನಿಮ್ಮ ತೂಕ ಕಡಿಮೆ ಮಾಡುತ್ತದೆ ಎಂದು ಒಂದು ಅಧ್ಯಯನ ಹೇಳಿದೆ. ಕೇಕ್ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

top videos
    First published: