• ಹೋಂ
  • »
  • ನ್ಯೂಸ್
  • »
  • lifestyle
  • »
  • Golo Diet: ಈ ಡಯೆಟ್ ಕ್ರಮಗಳನ್ನು ಅನುಸರಿಸಿದರೆ ನೀವು ಬೇಗ ತೂಕ ಇಳಿಸಿಕೊಳ್ಳಬಹುದು

Golo Diet: ಈ ಡಯೆಟ್ ಕ್ರಮಗಳನ್ನು ಅನುಸರಿಸಿದರೆ ನೀವು ಬೇಗ ತೂಕ ಇಳಿಸಿಕೊಳ್ಳಬಹುದು

Weight Loss: ಇದುವರೆಗೂ ಅದೆಷ್ಟೇ ವ್ಯಾಯಾಮ ಮಾಡಿದರೂ ಹಾಗೂ ಆಹಾರ ಕ್ರಮಗಳನ್ನು ಪಾಲನೆ ಮಾಡಿದರೂ ಕೂಡ ನಿಮ್ಮ ದೇಹದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಾಣದಿದ್ದಲ್ಲಿ ನೀವು ಗೋಲೋ ಡಯೆಟ್ ಪ್ರಯತ್ನ ಮಾಡುವುದು ಒಳ್ಳೆಯದು.

Weight Loss: ಇದುವರೆಗೂ ಅದೆಷ್ಟೇ ವ್ಯಾಯಾಮ ಮಾಡಿದರೂ ಹಾಗೂ ಆಹಾರ ಕ್ರಮಗಳನ್ನು ಪಾಲನೆ ಮಾಡಿದರೂ ಕೂಡ ನಿಮ್ಮ ದೇಹದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಾಣದಿದ್ದಲ್ಲಿ ನೀವು ಗೋಲೋ ಡಯೆಟ್ ಪ್ರಯತ್ನ ಮಾಡುವುದು ಒಳ್ಳೆಯದು.

Weight Loss: ಇದುವರೆಗೂ ಅದೆಷ್ಟೇ ವ್ಯಾಯಾಮ ಮಾಡಿದರೂ ಹಾಗೂ ಆಹಾರ ಕ್ರಮಗಳನ್ನು ಪಾಲನೆ ಮಾಡಿದರೂ ಕೂಡ ನಿಮ್ಮ ದೇಹದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಾಣದಿದ್ದಲ್ಲಿ ನೀವು ಗೋಲೋ ಡಯೆಟ್ ಪ್ರಯತ್ನ ಮಾಡುವುದು ಒಳ್ಳೆಯದು.

  • Share this:

    ತೂಕ ಇಳಿಸಲು ಹಲವಾರು ಜನರು ವಿವಿಧ ರೀತಿ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಪೂರ್ಣ ಪ್ರಮಾಣದ ಡಯೆಟ್ ಮಾಡಿದರೆ ಕೆಲವರು ಇನ್ನೊಂದು ವಿಧದಲ್ಲಿ. ಸಧ್ಯ ಸಾಮಾಜಿಕ ಜಾಲಾತಾಣದಲ್ಲಿ ಗೋಲೋ ಡಯೆಟ್ ಬಗ್ಗೆ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಂದರೆ ಏನು, ಅದನ್ನು ಹೇಗೆ ಮಾಡುವುದು ಎಂಬುದನ್ನ ಹುಡುಕಾಡುತ್ತಿದ್ದಾರೆ. ಗೋಲೋ ಡಯೆಟ್​ ಹೆಚ್ಚು ಶ್ರಮವಿಲ್ಲದೇ, ಬಹು ಬೇಗನೆ ತೂಕ ಇಳಿಸುವ ಒಂದು ಪ್ರಕ್ರಿಯೆ. ಕಾರ್ಬೋಹೈಡ್ರೇಟು, ಕೊಬ್ಬು ಅಥವಾ ಇತರ ಯಾವುದೇ ಪೋಷಕಾಂಶಗಳನ್ನು ಸೀಮಿತವಾಗಿ ಸೇವನೆ ಮಾಡುವ ಬದಲು  ಗೋಲೋ ಆಹಾರ ಕ್ರಮದಲ್ಲಿ ಹೆಚ್ಚು  ಪೋಷಕಾಂಶಗಳನ್ನು ಸಮತೋಲನಗೊಳಿಸಿ, ದೇಹ ನೈಸರ್ಗಿಕವಾಗಿ ತೂಕ ಕಡಿಮೆ ಮಾಡುವಂತೆ ಮಾಡುವುದು ಉತ್ತಮ ಆಯ್ಕೆ.  


    ದೇಹದಲ್ಲಿ ರಸದೂತಗಳ ಅಸಮತೋಲನದಿಂದಾಗಿ ಮಾನಸಿಕ ಒತ್ತಡ, ಆತಂಕ ಉಂಟಾಗುತ್ತದೆ, ಅಲ್ಲದೇ ನಿದ್ರೆಯ ಸಮಸ್ಯೆ, ತೂಕ ಹೆಚ್ಚಾಗುವುದು ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆಲ್ಲ ಪರಿಹಾರ ಮಾಡಿ, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವು ಗೋಲೋ ಡಯೆಟ್ ನಿಯಮಗಳನ್ನು ಪಾಲನೆ ಮಾಡುವುದು ಒಳ್ಳೆಯದು.


    ಇದುವರೆಗೂ ಅದೆಷ್ಟೇ ವ್ಯಾಯಾಮ ಮಾಡಿದರೂ ಹಾಗೂ ಆಹಾರ ಕ್ರಮಗಳನ್ನು ಪಾಲನೆ ಮಾಡಿದರೂ ಕೂಡ ನಿಮ್ಮ ದೇಹದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಾಣದಿದ್ದಲ್ಲಿ ನೀವು ಗೋಲೋ ಡಯೆಟ್ ಪ್ರಯತ್ನ ಮಾಡುವುದು ಒಳ್ಳೆಯದು. ಈ ಗೋಲೋ ಆಹಾರ ಕ್ರಮದ ಜೊತೆಗೆ ರಿಲೀಸ್ ಎನ್ನುವ ಮಾತ್ರೆಯನ್ನು ಕೂಡ ಸಿದ್ಧ ಮಾಡಲಾಗಿದ್ದು, ಇದನ್ನು ಗೋಲೋ ಆಹಾರ ಕ್ರಮದ ಒಂದು ಭಾಗ ಎಂದು ಹೇಳಲಾಗುತ್ತದೆ.


    ಗೋಲೋ ಆಹಾರಕ್ರಮದಲ್ಲಿ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎಂಬುದು ಇಲ್ಲಿದೆ.


    ಪ್ರೋಟೀನ್ಮೊಟ್ಟೆ, ಮಾಂಸ, ಕೋಳಿ, ಸಮುದ್ರದ ಆಹಾರಗಳು,  ನಟ್ಸ್


     ಕಾರ್ಬೋಹೈಡ್ರೇಟುಗಳುಹಣ್ಣುಗಳು, ಬೆರ್ರಿ, ಸಿಹಿಗೆಣಸು, ಆಲೂಗಡ್ಡೆ, ಬೀನ್ಸ್ ಮತ್ತು ಧಾನ್ಯಗಳು.


     ತರಕಾರಿಗಳುಎಲೆಕೋಸು, ಪಾಲಕ್, ಮೊಳಕೆ ಕಾಳುಗಳು, ಹೂಕೋಸು, ಸೆಲರಿ ಎಲೆಗಳು, ಸೌತೆಕಾಯಿ,


    ಇದನ್ನೂ ಓದಿ: ಇಡ್ಲಿ , ದೋಸೆ ತಿಂದು ಬೋರ್ ಆಗಿದೆಯಾ? ವೆರೈಟಿ ತಿಂಡಿಗಳ ಪಟ್ಟಿ ಇಲ್ಲಿದೆ


    ಕೊಬ್ಬುಗಳು: ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ, ಚಿಯಾ ಬೀಜಗಳು, ಅಗಸೆ ಬೀಜಗಳು


    ಹಾಗೆಯೆ ನೀವು ದಿನದಲ್ಲಿ ಮೂರು ಹೊತ್ತು ಮಾತ್ರ ಆಹಾರ ಸೇವನೆ ಮಾಡಬೆಕು. ಮಧ್ಯದಲ್ಲಿ ಆಹಾರ ಸೇವನೆ ಒಳ್ಳೆಯದಲ್ಲ.


    ಇನ್ನು ಈ ಆಹಾರ ಕ್ರಮದಲ್ಲಿ ಕೆಲ ಆಹಾರಗಳನ್ನು ಸೇವನೆ ಮಾಡಬಾರದು ಎಂದು ನಿಯಮಗಳಿವೆ. ಕೆಲ ಆಹಾರ ಪದಾರ್ಥಗಳ ಸೇವನೆ ನಿಮ್ಮ ತೂಕ ಇಳಿಸುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.


    ಯಾವುದೇ ಸಂಸ್ಕರಿತ ಮತ್ತು ಜಂಕ್ ಆಹಾರಗಳನ್ನು ಸೇವಿಸಬಾರದು. ಅದರ ಬದಲಿಗೆ  ಧಾನ್ಯಗಳನ್ನು, ಮತ್ತು ತರಕಾರಿಗಳನ್ನು ಸೇವನೆ ಮಾಡಿ.


    ಆಲೂಗಡ್ಡೆ ಚಿಪ್ಸ್, ಕುಕೀಸ್, ಕುರುಕು ತಿಂಡಿಗಳು , ಎಣ್ನೆಯಲ್ಲಿ ಕರಿದ ಪದಾರ್ಥಗಳು


    ಕೊಬ್ಬು ಇರುವ ಯಾವುದೇ ಮಾಂಸಗಳು, ಗೋಮಾಂಸ, ಕುರಿಮಾಂಸ, ಹಂದಿಮಾಂಸವನ್ನು ಸೇವನೆ ಮಾಡಬಾರದು.


    ಸೋಡಾ, ಎನರ್ಜಿ ಡ್ರಿಂಕ್,  ಸಕ್ಕರೆ ಹಾಕಿದ ಕಾಫಿ ಮತ್ತು  ಚಹಾ,ರೆಡಿಮೇಟ್ ಹಣ್ಣಿನ ಜ್ಯೂಸ್​ ಸೇವನೆ ಒಳ್ಳೆಯದಲ್ಲ.


    ಬ್ರೆಡ್, ಬಾರ್ಲಿ, ಅಕ್ಕಿ, ಓಟ್ಸ್, ಪಾಸ್ಟಾ, ರಾಗಿ ಹಾಗೂ ಡೈರಿ ಉತ್ಪನ್ನಗಳಾದ  ಚೀಸ್, ಹಾಲು, ಮೊಸರು, ಬೆಣ್ಣೆ, ಐಸ್ ಕ್ರೀಮ್ ಗಳಿಂದ ದೂರವಿರಬೇಕು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

    top videos


       

      First published: