Blocked Veins: ಉಬ್ಬಿದ ರಕ್ತನಾಳಗಳ ಸಮಸ್ಯೆ ಇದೆಯೇ? ಆ ಸಮಸ್ಯೆಗೆ ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಕ್ತನಾಳಗಳು ಮುಚ್ಚಲ್ಪಟ್ಟಾಗ ನರಗಳ ತಡೆ ಉಂಟಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆ ಇದೆ. ಆದರೆ ನಿರ್ಬಂಧಿಸಲಾದ ಸಿರೆಗಳ ಸಮಸ್ಯೆ ಗುರುತಿಸಲು ಯಾವ ರೋಗ ಲಕ್ಷಣಗಳ ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಯಬೇಕು.

  • Share this:

ಆರೋಗ್ಯಕರ ರಕ್ತ (Healthy Blood) ಮತ್ತು ಆಮ್ಲಜನಕವು (Oxygen) ರಕ್ತನಾಳಗಳ (Blood Vessels) ಒಳಗೆ ಹರಿಯುತ್ತದೆ. ಈ ರಕ್ತನಾಳಗಳು ಮುಚ್ಚಲ್ಪಟ್ಟಾಗ ಸಾಕಷ್ಟು ಮಾರಕ ಕಾಯಿಲೆಗೆ (Disease) ಇದು ನಿಮ್ಮನ್ನು ತುತ್ತಾಗುವಂತೆ ಮಾಡುತ್ತದೆ. ರಕ್ತನಾಳಗಳು ಮುಚ್ಚಲ್ಪಟ್ಟಾಗ ಹೃದಯ ಮತ್ತು ಮೆದುಳು (Heart And Brain) ಪೋಷಣೆ ರಕ್ತ ಪಡೆಯುವುದನ್ನು ನಿಲ್ಲಿಸುತ್ತದೆ. ನರಗಳ ತಡೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆ ಇದೆ. ಆದರೆ ನಿರ್ಬಂಧಿಸಲಾದ ಸಿರೆಗಳ ಸಮಸ್ಯೆ ಗುರುತಿಸಲು ಯಾವ ರೋಗ ಲಕ್ಷಣಗಳ ಮೇಲ್ವಿಚಾರಣೆ ಮಾಡಬೇಕು ಮತ್ತು ರಕ್ತನಾಳಗಳನ್ನು ತೆರೆಯಲು ಏನು ಮಾಡಬೇಕು ಎಂದು ತಿಳಿಯುವುದು ತುಂಬಾ ಮುಖ್ಯ.


ಇಲ್ಲಿ ನಾವು ನಿರ್ಬಂಧಿಸಲಾದ ಸಿರೆಗಳ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ತಿಳಿಯೋಣ. ನಿರ್ಬಂಧಿಸಿದ ರಕ್ತನಾಳಗಳ ಲಕ್ಷಣಗಳು ಯಾವವು ಮತ್ತು ರಕ್ತನಾಳಗಳು ನಿರ್ಬಂಧಿಸಲ್ಪಟ್ಟಿದ್ದರೆ ಅದನ್ನು ಗುರುತಿಸುವುದು ಹೇಗೆ? ರೋಗದ ಬಗ್ಗೆ ತಿಳಿಯುವುದು ತುಂಬಾ ಮುಖ್ಯ.


ನಿರ್ಬಂಧಿಸಿದ ರಕ್ತನಾಳಗಳ ಲಕ್ಷಣಗಳು ಯಾವವು?


ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಒಂದು ಅಥವಾ ಹೆಚ್ಚಿನ ನರಗಳನ್ನು ನಿರ್ಬಂಧಿಸಿದಾಗ ದೇಹವು ವಿವಿಧ ರೀತಿಯ ಸಂಕೇತ ನೀಡುತ್ತದೆ ಎಂದು ಅಧ್ಯಯನ ಹೇಳುತ್ತದೆ. ಕಾಲುಗಳಲ್ಲಿ, ವಿಶೇಷವಾಗಿ ಒಳ ತೊಡೆಯಲ್ಲಿ ನಿರ್ಬಂಧಿಸಿದ ರಕ್ತನಾಳಗಳು ಉಂಟಾಗುತ್ತವೆ.


ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


ಪಾದಗಳು ಅಥವಾ ಕೈಗಳ ಊತ, ಎದೆ ನೋವು, ದೇಹದ ಒಂದು ಬದಿಯಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ, ಮಾನಸಿಕ ಆರೋಗ್ಯದಲ್ಲಿ ಹಠಾತ್ ಬದಲಾವಣೆ ಉಂಟಾಗುತ್ತದೆ. ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರಕ್ತನಾಳದ ಬ್ಲಾಕ್ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.


ರಕ್ತನಾಳಗಳಲ್ಲಿ ಅಡಚಣೆ ಉಂಟಾಗಲು ಯಾವೆಲ್ಲಾ ಕಾರಣಗಳಿವೆ?


ಜೆಎಚ್ ಎಮ್ ಅದರ ಕಾರಣಗಳು ಸಿರೆಗಳ ತಡೆಗಟ್ಟುವಿಕೆ ಚಿಹ್ನೆಗಳ ಬಗ್ಗೆ ವಿವರಣೆ ನೀಡುತ್ತದೆ. ಕಾಲಿನ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆ ಅಥವಾ ಗಾಯವಿದ್ದರೆ ನಿಮ್ಮ ಕಾಲಿನ ರಕ್ತನಾಳವು ನಿರ್ಬಂಧಿಸಲ್ಪಡಬಹುದು.


ಜೊತೆಗೆ ಬೊಜ್ಜು, ಸ್ವಯಂ ನಿರೋಧಕ ಅಸ್ವಸ್ಥತೆ, ವೃದ್ಧಾಪ್ಯ, ಧೂಮಪಾನ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಕೂಡ ರಕ್ತನಾಳಗಳಲ್ಲಿ ಅಡಚಣೆಗೆ ಇದು ಪ್ರಮುಖ ಕಾರಣ ಆಗಿದೆ.


ನಿರ್ಬಂಧಿಸಿದ ರಕ್ತನಾಳಗಳನ್ನು ಹೇಗೆ ತೆರೆಯುವುದು?


ರಕ್ತನಾಳಗಳಲ್ಲಿನ ಅಡೆತಡೆ ನೈಸರ್ಗಿಕ ಗಿಡಮೂಲಿಕೆ ಜೊತೆಗೆ ಚಿಕಿತ್ಸೆ ನೀಡಬಹುದು ಎಂದು ಹೆಲ್ತ್ಲೈನ್ ​​ಹೇಳುತ್ತದೆ. ಇದರಲ್ಲಿ ಶುಂಠಿ ಮತ್ತು ಅರಿಶಿನವು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರ ಆಗಿದೆ. ಆದರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಗಿಡಮೂಲಿಕೆ ಅಥವಾ ಮನೆಮದ್ದು ಅಳವಡಿಸಿಕೊಳ್ಳಬಾರದು.


ಶುಂಠಿ ಮತ್ತು ತೆರೆದ ಸಿರೆಗಳು


ReasearchGate ನಲ್ಲಿ ಪ್ರಕಟವಾದ ವರದಿ ಪ್ರಕಾರ, ಶುಂಠಿ ಸ್ಯಾಲಿಸಿಲೇಟ್ ಆಮ್ಲ ಹೊಂದಿದೆ. ಮತ್ತು ಈ ಅಸಿಟೈಲ್ ಸ್ಯಾಲಿಸಿಲಿಕ್ ಆಮ್ಲದಿಂದ ರಕ್ತ ತೆಳುವಾಗಿಸುವ ಔಷಧಿ ತಯಾರಿಸಲಾಗುತ್ತದೆ. ಶುಂಠಿಯನ್ನು ಸಕ್ಕರೆ ರಹಿತ ಚಹಾ ಜೊತೆಗೆ ಬೆರೆಸಿ ಅಥವಾ ರಕ್ತನಾಳಗಳ ನಿರ್ಬಂಧ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಅದನ್ನು ಆಹಾರದಲ್ಲಿ ಸೇರಿಸುವ ಮೂಲಕ ಸೇವನೆ ಮಾಡಬಹುದು.


ರಕ್ತ ತೆಳುವುಗೊಳಿಸುವ ಗುಣ ಹೊಂದಿದೆ ಅರಿಶಿನ


ಅರಿಶಿನದಲ್ಲಿರುವ ಕರ್ಕ್ಯುಮಿನ್ ರಕ್ತ ತೆಳುಗೊಳಿಸುವ ಗುಣ ಹೊಂದಿದೆ. ಈ ಅಂಶವು ನರಗಳ ಒಳ ಪದರವನ್ನು ಬಲಪಡಿಸುತ್ತದೆ. ಇದರಿಂದ ಅಭಿಧಮನಿಯೊಳಗೆ ಯಾವುದೇ ಅಡೆತಡೆ ಇದ್ದರೆ ಅದು ಕೂಡ ಸುಲಭವಾಗಿ ಕರಗಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


ಅದೇ ವೇಳೆ ಅಧಿಕ ರಕ್ತದೊತ್ತಡದ ಸಮಸ್ಯೆ ಇಲ್ಲ. ನಿರ್ಬಂಧಿಸಿದ ರಕ್ತನಾಳಗಳು ತೆರೆಯಲು ಅರಿಶಿನ ಆಹಾರಕ್ಕೆ ಸೇರಿಸಬಹುದು. ಅಥವಾ ಹಾಲಿನ ಜೊತೆ ಜೇನುತುಪ್ಪ ಬೆರೆಸಿ ಸೇವನೆ ಮಾಡಬಹುದು.

top videos
    First published: