Onam Food Recipe: ಓಣಂ ವಿಶೇಷ: ಕೇರಳ ಸ್ಟೈಲ್ ಬಾದಾಮಿ, ಸೇಬು ಪಾಯಸ ಸವಿಯಿರಿ

ಸೇಬು ಮತ್ತು ಬಾದಾಮಿ ಪಾಯಸ

ಸೇಬು ಮತ್ತು ಬಾದಾಮಿ ಪಾಯಸ

ಕೇರಳದ ಅತ್ಯಂತ ಜನಪ್ರಿಯ ಸಿಹಿ ಖಾದ್ಯವಾದ ಸೇಬು ಮತ್ತು ಬಾದಾಮಿ ಹಾಕಿ ಮಾಡುವ ಪಾಯಸ ತಿನ್ನಲು ಬಹು ಸೊಗಸಾಗಿರುತ್ತದೆ. ಈ ತಿಂಡಿಯನ್ನು ತಯಾರಿಸಲು ಮರೆಯಬೇಡಿ. ಈ ಪಾಯಸವೂ ನಿಮ್ಮ ಓಣಂ ಹಬ್ಬಕ್ಕೆ ಮತ್ತಷ್ಟು ಸಿಹಿಯನ್ನು ನೀಡುತ್ತದೆ. ಸ್ವಲ್ಪ ದಪ್ಪನಾದ, ಕೆನೆಭರಿತವಾದ ಈ ಪಾಯಸವನ್ನು ಶುದ್ಧವಾದ ಕೆನೆಭರಿತವಾದ ಹಾಲು, ಸಕ್ಕರೆ, ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಹಾಗಾದರೆ ತಡ ಏಕೆ, ಈ ಪಾಯಸವನ್ನು ತಯಾರಿಸುವ ಬಗೆ ಹೇಗೆ? ಎಂದು ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ಕೇರಳದಲ್ಲಿ ಈಗ ಓಣಂ (Onam) ಹಬ್ಬದ ಕಲರವ ಆರಂಭವಾಗಿದೆ. ಓಣಂ ಎಂಬುದು ಒಂದು ಸುಗ್ಗಿ ಹಬ್ಬವಾಗಿದ್ದು, ಅಪಾರ ಶ್ರದ್ಧೆ ಮತ್ತು ಭಕ್ತಿಗಳಿಂದ ಇದನ್ನು ಆಚರಿಸಲಾಗುತ್ತದೆ. ಅದರಲ್ಲೂ ತಿಂಡಿಗಳನ್ನು (Snacks) ತಿನ್ನಲು ಬಯಸುವ ಭೋಜನ ಪ್ರಿಯರಿಗೆ ಓಣಂ ನಿಜಕ್ಕೂ ದೊಡ್ಡ ಹಬ್ಬವೇ (Festival), ಏಕೆಂದರೆ ಇದರಲ್ಲಿ ತಿನ್ನಲು ದೊರೆಯುವ ಊಟ-ತಿಂಡಿಗಳ ಪಟ್ಟಿಯೇ ಈ ಹಬ್ಬದ ಪ್ರಧಾನ ಆಕರ್ಷಣೆ. ಕೇರಳಿಗರಿಗೆ ಓಣಂ ಕೇವಲ ಹಬ್ಬ ಮಾತ್ರವಲ್ಲ ಸಮೃದ್ಧಿಯ ದಿನ. ‌ ಓಣಂ ದಕ್ಷಿಣ ಭಾರತದ ಕೇರಳ (Kerala) ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಸಡಗರ, ಸಂಭ್ರಮದಿಂದ ಆಚರಿಸುವ ಓಣಂ ಹಬ್ಬ ತನ್ನದೇ ಆದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಎಲ್ಲ ದುಃಖ ದುಮ್ಮಾನಗಳನ್ನು ಮರೆಯುವ ಕಾಲ.


ಈ ಹಬ್ಬವನ್ನು ಮಲಯಾಳಿ ಪಂಚಾಂಗದ ಮೊದಲ ತಿಂಗಳು ಚಿಂಗಮ್ ಅಂದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ


ಕೇರಳದ ಫೇಮಸ್ ಸೇಬು ಮತ್ತು ಬಾದಾಮಿ ಪಾಯಸ
ಅದರಲ್ಲೂ ಕೇರಳದ ಅತ್ಯಂತ ಜನಪ್ರಿಯ ಸಿಹಿ ಖಾದ್ಯವಾದ ಸೇಬು ಮತ್ತು ಬಾದಾಮಿ ಹಾಕಿ ಮಾಡುವ ಪಾಯಸ ತಿನ್ನಲು ಬಹು ಸೊಗಸಾಗಿರುತ್ತದೆ. ಈ ತಿಂಡಿಯನ್ನು ತಯಾರಿಸಲು ಮರೆಯಬೇಡಿ. ಈ ಪಾಯಸವೂ ನಿಮ್ಮ ಓಣಂ ಹಬ್ಬಕ್ಕೆ ಮತ್ತಷ್ಟು ಸಿಹಿಯನ್ನು ನೀಡುತ್ತದೆ. ಸ್ವಲ್ಪ ದಪ್ಪನಾದ, ಕೆನೆಭರಿತವಾದ ಈ ಪಾಯಸವನ್ನು ಶುದ್ಧವಾದ ಕೆನೆಭರಿತವಾದ ಹಾಲು, ಸಕ್ಕರೆ, ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಹಾಗಾದರೆ ತಡ ಏಕೆ, ಈ ಪಾಯಸವನ್ನು ತಯಾರಿಸುವ ಬಗೆ ಹೇಗೆ? ಎಂದು ತಿಳಿಯೋಣ ಬನ್ನಿ.


ಸೇಬು ಮತ್ತು ಬಾದಾಮಿ ಪಾಯಸವನ್ನು ತಯಾರಿಸುವ ಕುರಿತು ಮಾಹಿತಿ ಇಲ್ಲಿದೆ:
ಅಗತ್ಯವಾದ ಪದಾರ್ಥಗಳು:


  • 1 ಕಪ್‌ ಸೇಬು

  • 1 ಕಪ್‌ ಬಾದಾಮಿ

  • 1 ಲೀಟರ್‌ ಕೆನೆ ಭರಿತ ಹಾಲು

  • 1 ಕಪ್‌ ಸಾಮಾನ್ಯ ಹಾಲು

  • 1 ಕಪ್‌ ಪುಡಿ ಮಾಡಿದ ಸಕ್ಕರೆ

  • 10 ಕೇಸರಿ ಎಳೆಗಳು

  • 2 ಟೇಬಲ್‌ ಸ್ಪೂನ್‌ ಏಲಕ್ಕಿ ಪುಡಿ

  • 2 ರಿಂದ 3 ಚಮಚ ಗೋಡಂಬಿ ಮತ್ತು ಪಿಸ್ತಾ (ಸಣ್ಣದಾಗಿ ಕತ್ತರಿಸಿಕೊಂಡಿದ್ದು)

  • ಅಗತ್ಯಕ್ಕೆ ತಕ್ಕಂತೆ ನೀರು


ಇದನ್ನೂ ಓದಿ: High-Protein Lunch: ಚಿತ್ರಾನ್ನ, ವಡೆ ಬಿಟ್ಟು ಕಡಲೆ ಬೇಳೆಯಲ್ಲಿ ಮಾಡಬಹುದು ಈ ಟೇಸ್ಟಿ ತಿಂಡಿಗಳನ್ನು


ತಯಾರಿಸುವ ವಿಧಾನ:


  • ಬಾದಾಮಿಗಳನ್ನು 8 ರಿಂದ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.

  • ಸೇಬಿನ ಸಿಪ್ಪೆಯನ್ನು ತೆಗೆದು ನಂತರ ಸಣ್ಣದಾಗಿ ಕತ್ತರಿಸಿಕೊಳ್ಳಿ.

  • 2 ಟೇಬಲ್‌ ಸ್ಫುನ್‌ ತುಪ್ಪವನ್ನು ಒಂದು ಪ್ಯಾನ್‌ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.

  • ಸಣ್ಣದಾಗಿ ಕತ್ತರಿಸಿಕೊಂಡ ಸೇಬಿನ ತುಂಡುಗಳನ್ನು ಪ್ಯಾನ್‌ ನಲ್ಲಿ ಹಾಕಿ.

  • ಆ ಸೇಬು ಹಣ್ಣಿನಲ್ಲಿರುವ ನೀರಿನಾಂಶ ಹೋಗುವರೆಗೂ ಚೆನ್ನಾಗಿ ಹುರಿಯಿರಿ.

  • ನಂತರ ತಣ್ಣಗಾಗುವುದಕ್ಕೆ ಬಿಡಿ.

  • ಇದರ ನಂತರ ನೆನೆ ಹಾಕಿದ ಬಾದಾಮಿಗಳನ್ನು ತೆಗೆದುಕೊಂಡು ಅವುಗಳ ಸಿಪ್ಪೆಯನ್ನು ತೆಗೆಯಿರಿ.

  • ಸಿಪ್ಪೆ ತೆಗೆದ ಬಾದಾಮಿಗಳನ್ನು ಹಾಲಿನ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.

  • ಇದರ ನಂತರ ಕೆನೆ ಭರಿತ ಹಾಲನ್ನು ಚೆನ್ನಾಗಿ ಕುದಿಸಿ.

  • ಚೆನ್ನಾಗಿ ಕುದಿಸಿದ ಹಾಲಿಗೆ ಕೇಸರಿ ಎಳೆಗಳನ್ನು ಹಾಕಿಕೊಳ್ಳಿ. ಹಾಲಿನ ಜೊತೆ ಕೇಸರಿ ಎಳೆಗಳು ಚೆನ್ನಾಗಿ ಮಿಶ್ರಣ ಆಗುವವರೆಗೂ ಕುದಿಸಿ.

  • ಆಮೇಲೆ ಈ ಕುದಿಸಿದ ಹಾಲಿಗೆ ಪುಡಿ ಮಾಡಿದ ಸಕ್ಕರೆಯನ್ನು ಸೇರಿಸಿ.

  • ಇದಕ್ಕೆ ನುಣ್ಣಗೆ ರುಬ್ಬಿಕೊಂಡ ಬಾದಾಮಿ ಪೇಸ್ಟ್‌ ಅನ್ನು ಸೇರಿಸಿ.


ಇದನ್ನೂ ಓದಿ: Breakfast Recipe: ಚಪಾತಿ ಉಳಿದಿದೆ ಅಂತ ಬಿಸಾಡಬೇಡಿ, ಈ ವೆರೈಟಿ ತಿಂಡಿ ಮಾಡಿ ಸವಿಯಿರಿ!

  • ಈ ಮಿಶ್ರಣವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಎಲ್ಲಿಯವರೆಗೆ ಎಂದರೆ ಈ ಮಿಶ್ರಣದಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಬರುವವರೆಗೂ ಕುದಿಸಿಕೊಳ್ಳಿ.

  • ಈ ಮಿಶ್ರಣಕ್ಕೆ ಈಗ ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ ಚೆನ್ನಾಗಿ ಕಲಕಿ.

  • ಪಾಯಸ ದಪ್ಪವಾಗುವವರೆಗೂ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿಕೊಳ್ಳಿ.

  • ಪಾಯಸದ ವಾಸನೆ ಘಮ್ಮೆಂದು ಬರುವಾಗ ಗ್ಯಾಸ್‌ ಅನ್ನು ಆಫ್‌ ಮಾಡಿ.

  • ಅದಕ್ಕೆ ಆಗ ಈಗಾಗಲೇ ಸಣ್ಣದಾಗಿ ಕತ್ತರಿಸಿಟ್ಟುಕೊಂಡ ಸೇಬನ್ನು ಸೇರಿಸಿ.

  • ಅಂತಿಮವಾಗಿ ರುಚಿ-ರುಚಿಯಾದ ಸೇಬು ಮತ್ತು ಬಾದಾಮಿಯ ಪಾಯಸ ರೆಡಿ ಆಯಿತು.

top videos
    First published: