Sindhi Recipe: ಮನೆಯಲ್ಲಿಯೇ ತಯಾರಿಸಿ ಈ 5 ಟೇಸ್ಟಿ ಸಿಂಧಿ ರೆಸಿಪಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಸಿಂಧಿ ಆಹಾರ ಪದ್ಧತಿಯು ಬಾಯಲ್ಲಿ ನೀರೂರಿಸುವ ಮಾಂಸದ ಊಟದಿಂದ ಸಾಂಪ್ರದಾಯಿಕ ಸಸ್ಯಾಹಾರಿ ದಾಲ್‌ಗಳು ಮತ್ತು ಸಬ್ಜಿಗಳವರೆಗೆ ಎಲ್ಲವನ್ನೂ ಹೊಂದಿದೆ. ಆದ್ದರಿಂದ, ನೀವು ವಿವಿಧ ರೀತಿಯ ಅಡುಗೆ ಮಾಡಲು ಬಯಸಿದ್ದರೆ, ಈ ಲೇಖನವು ನಿಮಗೆ ಇಂದು ಉತ್ತಮ ಮಾಹಿತಿ ನೀಡುತ್ತದೆ.

  • Share this:

ಭಾರತವು ಅನೇಕಾನೇಕ ತಿಂಡಿ-ತಿನಿಸುಗಳ ದೇಶವೆಂದೇ ಹೇಳಬಹುದು. ಅಡುಗೆ (Cooking) ವಿಷಯದಲ್ಲಿ ಭಾರತವು ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿರುವ ವಿಶೇಷ ದೇಶ ಎಂದೇ ಖ್ಯಾತಿ ಪಡೆದಿದೆ. ಭಾರತೀಯ ಸಂಸ್ಕೃತಿಯಂತೆಯೇ, ಆಹಾರವು (Food) ಹಲವಾರು ಅಂಶಗಳ ಪ್ರಭಾವವನ್ನು ಹೊಂದಿರುತ್ತದೆ. ಅಂತಹ ಪ್ರಭಾವವನ್ನು ಹೊಂದಿರುವ ವಿಶೇಷ ಪಾಕಪದ್ಧತಿಯಲ್ಲಿ ಸಿಂಧಿ ಪಾಕಪದ್ಧತಿಯೂ (Sindhi cuisine) ಒಂದಾಗಿದೆ. ಇದು ಮೊಘಲರು, ರಜಪೂತರು, ಅರಬ್ಬರು, ತುರ್ಕರು ಮತ್ತು ಇತರ ರಾಜವಂಶಗಳ ಅಡುಗೆ ಸಂಸ್ಖತಿಯನ್ನು ಪ್ರತಿಬಿಂಬಿಸುತ್ತದೆ. ಈ ರಾಜವಂಶವದವರು ಸಿಂಧ್ ಪ್ರದೇಶವನ್ನು ವಿವಿಧ ಸಮಯಗಳಲ್ಲಿ ಆಳಿದ ಕಾರಣಕ್ಕೆ ಇವರ ಆಡಳಿತದಲ್ಲಿ ಸಿಂಧಿ ಸಂಸ್ಕೃತಿಯು ಹಾಸು ಹೊಕ್ಕಾಗಿತ್ತು. ಈ ಸಿಂಧಿ ಪಾಕಪದ್ಧತಿಯಲ್ಲಿ ಪ್ರಧಾನವಾಗಿ ಮಾಂಸಾಹಾರಿ (Non Veg) ಆಹಾರ ಹೆಚ್ಚು ಎಂದು ಹೇಳಬಹುದು. ಆದರೂ ಸಹ ಕೆಲವು ಸಸ್ಯಹಾರಿ ಅಡುಗೆಗಳನ್ನು ಇದು ಹೊಂದಿದೆ.


ಈ ಸಿಂಧಿ ಆಹಾರ ಪದ್ಧತಿಯು ಬಾಯಲ್ಲಿ ನೀರೂರಿಸುವ ಮಾಂಸದ ಊಟದಿಂದ ಸಾಂಪ್ರದಾಯಿಕ ಸಸ್ಯಾಹಾರಿ ದಾಲ್‌ಗಳು ಮತ್ತು ಸಬ್ಜಿಗಳವರೆಗೆ ಎಲ್ಲವನ್ನೂ ಹೊಂದಿದೆ. ಆದ್ದರಿಂದ, ನೀವು ವಿವಿಧ ರೀತಿಯ ಅಡುಗೆ ಮಾಡಲು ಬಯಸಿದ್ದರೆ, ಈ ಲೇಖನವು ನಿಮಗೆ ಇಂದು ಉತ್ತಮ ಮಾಹಿತಿ ನೀಡುತ್ತದೆ. ಇಲ್ಲಿ ನಾವಿಂದು ನಿಮಗೆ ಸಾಂಪ್ರದಾಯಿಕ ಸಿಂಧಿ ರೆಸಿಪಿಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೆವೆ. ಈ ಸಿಂಧಿ ಅಡುಗೆಗಳ ಇನ್ನೊಂದು ವಿಶೇಷತೆ ಎಂದರೆ ಇವು ಅತ್ಯಂತ ಸುವಾಸನೆ ಭರಿತ ಮತ್ತು ಕಡಿಮೆ ಮಸಾಲೆ ಹೊಂದಿರುವ ಅಡುಗೆಗಳಾಗಿವೆ.


ಇಲ್ಲಿವೆ ನಿಮಗಾಗಿ 5 ಸಿಂಧಿ ರೆಸಿಪಿಗಳು:
1)ಸಿಂಧಿ ತಿದ್ಲಿ ದಾಲ್ : ಅತ್ಯಂತ ಸುವಾಸನೆಯ ದಾಲ್ - ಈ ಸಿಂಧಿ ತಿದ್ಲಿ ದಾಲ್ ಆಗಿದೆ. ಇದು ಮೂರು ವಿಭಿನ್ನ ದಾಲ್‌ಗಳನ್ನು ಒಟ್ಟಿಗೆ ಬಳಸಿ ತಯಾರಿಸಲಾಗುತ್ತದೆ. ಅವುಗಳೆಂದರೆ ಕಡ್ಲೆ ಬೇಳೆ ದಾಲ್‌, ಉದ್ದಿನ ಬೇಳೆ ದಾಲ್‌ ಮತ್ತು ಹಸಿರು ಚಿಲ್ಕಾ ದಾಲ್. ಇದರಲ್ಲಿ ತುಪ್ಪ, ಇಂಗು, ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ಬಳಸಲಾಗುತ್ತದೆ. ಇದು ಆರೋಗ್ಯಕರ ಊಟವು ಆಗಿದೆ.


ಇದನ್ನೂ ಓದಿ: Breakfast Recipe: ಕೇವಲ 15 ನಿಮಿಷದಲ್ಲಿ ಮಾಡಿ ಸ್ಪೆಷಲ್ ರವಾ ದೋಸೆ, ಇಲ್ಲಿದೆ ರೆಸಿಪಿ


2) ಸಿಂಧಿ ಸೇಯಲ್ ಚಿಕನ್ : ಈ ಸಿಂಧಿ ಸೇಯಲ್ ಚಿಕನ್ ಸಿಂಧಿ ಪಾಕಪದ್ಧತಿಯ ಜನಪ್ರಿಯ ಅಡುಗೆ ಆಗಿದೆ. ಇದರಲ್ಲಿ ಚಿಕನ್, ಮೊಸರು, ಟೊಮೆಟೊಗಳು ಮತ್ತು ಆಲಿವ್ ಎಣ್ಣೆಯಲ್ಲಿ ಬೇಯಿಸಿದ ಬೆಚ್ಚಗಿನ ಮಸಾಲೆಗಳ ಕೆನೆ ಮಿಶ್ರಣದ ವಿಶೇಷ ಅಡುಗೆ ಆಗಿದೆ. ಇದನ್ನು ಒಮ್ಮೆ ಟ್ರೈ ಮಾಡಿ.


3) ಸಿಂಧಿ ಎಲೈಚಿ ಚಿಕನ್: ಸಿಂಧಿ ಎಲೈಚಿ ಚಿಕನ್ ಮತ್ತೊಂದು ಜನಪ್ರಿಯ ಚಿಕನ್ ಖಾದ್ಯ ಆಗಿದೆ. ಈ ಅಡುಗೆ ಅಷ್ಟೊಂದು ಮಸಾಲೆ ಹೊಂದಿಲ್ಲದಿದ್ದರೂ, ಅತ್ಯಂತ ರುಚಿಕರವಾದ ಅಡುಗೆ ಎಂದು ಹೇಳಬಹುದು. ಇದನ್ನು ತುಂಬಾ ಕಡಿಮೆ ಪದಾರ್ಥಗಳನ್ನು ಬಳಸಿ ಮಾಡಬಹುದು. ಇದು ಹೆಚ್ಚಿನ ಪ್ರೋಟಿನ್‌ ಅನ್ನು ಹೊಂದಿದೆ.


4) ಸಿಂಧಿ ಸಾಯಿ ಭಾಜಿ : ನೀವು ಟ್ರೈ ಮಾಡಲೇಬೇಕಾದ ಮತ್ತೊಂದು ಖಾದ್ಯವೆಂದರೆ ಈ ಸಿಂಧಿ ಸಾಯಿ ಭಾಜಿ ಆಗಿದೆ. ದಾಲ್ ಮತ್ತು ಹಸಿರು ಪಲ್ಯ ತರಕಾರಿಗಳೊಂದಿಗೆ ಮಾಡಿದ ಸಸ್ಯಾಹಾರಿ ಖಾದ್ಯ ಆಗಿದೆ. ಇದನ್ನು ಮಡಕೆಯಲ್ಲಿ ತಯಾರಿಸುತ್ತಾರೆ. ಇದು ತುಂಬಾ ಆರೋಗ್ಯಕರವಾಗಿದೆ. ಇದು ಸಿಂಧಿ ಬ್ರೆಡ್‌, ಬೇಯಿಸಿದ ಅನ್ನ, ಖಿಚಡಿ ಮತ್ತು ರೊಟ್ಟಿಯೊಂದಿಗೆ ಬಹಳ ರುಚಿ ಆಗಿರುತ್ತದೆ.


5) ಸಿಂಧಿ ಆಲೂ ಸಬ್ಜಿ: ಈ ಸಿಂಧಿ ಆಲೂ ಸಬ್ಜಿ ಅತ್ಯಂತ ರುಚಿಕರವಾದ ಅಡುಗೆ ಆಗಿದೆ. ಇದನ್ನು ತುಮ್ ಪಟಾಟಾ ಎಂದೂ ಕರೆಯುತ್ತಾರೆ. ಇದು ನೀವು ಒಮ್ಮೆ ಟ್ರೈ ಮಾಡಲೇಬೇಕಾದ ವಿಶೇಷ ಖಾದ್ಯ ಆಗಿದೆ. ಹಸಿ ಬೆಳ್ಳುಳ್ಳಿಯ ಬಳಕೆಯು ಈ ಖಾದ್ಯಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ರೊಟ್ಟಿ, ಪರಾಠ ಅಥವಾ ನಿಮ್ಮ ಆಯ್ಕೆಯ ಯಾವುದೇ ಇತರ ಬ್ರೆಡ್‌ನೊಂದಿಗೆ ಜೋಡಿಸಿಕೊಂಡು ತಿನ್ನಬಹುದು.


ಇದನ್ನೂ ಓದಿ: Momo ತಯಾರಿಸಲು ಬರೀ ಅರ್ಧ ಗಂಟೆ ಸಾಕು! ನೀವೂ ಟ್ರೈ ಮಾಡಿ ನೋಡಿ

top videos


    ನಿಮ್ಮ ಮನೆಯಲ್ಲಿ ಈ ಖಾದ್ಯಗಳನ್ನು ತಯಾರಿಸಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಆರೋಗ್ಯಕರ ಆಹಾರದ ಊಟ ನೀಡಿ.

    First published: