ನೀವು ಇಡೀ ದಿನ ಲವಲವಿಕೆಯಿಂದ ಇರಬೇಕಾ..?: ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿ

ನೀವು ಮಲಗುವ ಕೋಣೆ ಅಥವಾ ಜಾಗದಲ್ಲಿ ಒಂದಿಷ್ಟು ಬೆಳಕಿದ್ದರೆ ಉತ್ತಮ. ಇದು ನಿಮ್ಮಲ್ಲಿ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

news18-kannada
Updated:March 30, 2020, 9:54 AM IST
ನೀವು ಇಡೀ ದಿನ ಲವಲವಿಕೆಯಿಂದ ಇರಬೇಕಾ..?: ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • Share this:
ಅನೇಕ ಮಂದಿಗೆ ಬೆಳಗಿನ ಜಾವ ಎಂದರೆ ಅದು ಸವಿಯಾಗಿ ನಿದ್ದೆ ಮಾಡುವ ಸಮಯ. ಯಾರಾದರು ಬಂದು ಎಬ್ಬಸಿದರೆ ಬೈಯಲು ಕಷ್ಟವಾಗುವ ವೇಳೆ. ಈಗಿನ ಕೆಲವರಂತು ಸೂರ್ಯ ಹುಟ್ಟುವ ಮೊದಲು ಎದ್ದೇಳ ಬೇಕು ಎಂಬ ಹಿರಿಯರ ಮಾತನ್ನು ಗಾಳಿಗೆ ತೂರಿ ಬಿಟ್ಟಿದ್ದಾರೆ.

ಅಂತೆಯೆ ಪ್ರತಿದಿನ ಎದ್ದ ಕೂಡಲೆ ಈ ದಿನ ಚೆನ್ನಾಗಿ ಇರಲಿ ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಬೆಳಗ್ಗೆ ಎದ್ದ ತಕ್ಷಣ ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ದಿನ ತೀರ್ಮಾನವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ಎದ್ದ ಕೂಡಲೆ ಕೆಲವೊಂದು ಕೆಲಸ ಮಾಡಿದರೆ ದಿನವಿಡಿ ಉಲ್ಲಾಸದಿಂದ ಇರಬಹುದು.

ವ್ಯಾಯಾಮ ಮಾಡಿ: ಬೆಳಗ್ಗೆ ಎದ್ದ ನಂತರ ಒಂದಿಷ್ಟು ವ್ಯಾಯಾಮ ಅಥವಾ ಯೋಗ ಮಾಡಿ. ಈ ರೀತಿ ಮಾಡುವುದಿಂದ ನಿಮಗೆ ಫಿಟ್‍ನೆಸ್ ದೊರೆಯುತ್ತದೆ. ಜತೆಗೆ ನಿಮ್ಮನ್ನು ದಿನವಿಡಿ ಲವಲವಿಕೆಯಲ್ಲಿ ಇರುವಂತೆ ಮಾಡುತ್ತದೆ.

ಮೊಸರು ಸೇವಿಸುವುದರಿಂದ ಸಿಗಲಿದೆ ಈ ಐದು ಪ್ರಯೋಜನಗಳು

ಬೆಳಗಿನ ಉಪಾಹಾರ: ಬೆಳಗಿನ ಜಾವ ನೀವು ಸೇವಿಸುವ ಆಹಾರವು ದಿನದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ನೀವು ಉಪಹಾರಕ್ಕೆ ಬ್ರೆಡ್ ಸೇವಿಸುತ್ತೀರಿ ಎಂದಾದರೆ, ಬ್ರೆಡ್ ಜತೆ ಮೊಟ್ಟೆಯನ್ನು ಮಿಶ್ರಣ ಮಾಡಿ ಸೇವಿಸಿ. ಇದರಲ್ಲಿ ಹೆಚ್ಚಿನ ಪೋಷಕಾಂಶವಿದ್ದು, ಇನ್ನಷ್ಟು ಎನರ್ಜಿ ನೀಡುತ್ತದೆ.

ಈ ದಿನ ಏನು ಮಾಡಬೇಕೆಂದು ಯೋಚಿಸಿ: ಬೆಳಗ್ಗೆ ಎದ್ದು ಈ ದಿನ ಏನೇನು ಮಾಡಬೇಕು ಎಂಬ ಬಗ್ಗೆ ಯೋಚಿಸಿ. ಇಲ್ಲವಾದರೆ ಉಪಹಾರ ಮಾಡುವ ಸಂದರ್ಭ ನಿಮ್ಮವರೊಂದಿಗೆ ಚರ್ಚಿಸಿ. ಇದರಿಂದ ನಿಮ್ಮಲ್ಲಿ ಶಿಸ್ತು ಮೂಡುತ್ತದೆ. ಜತೆಗೆ ನಿಮ್ಮ ಕೆಲಸಗಳು ಸಹ ಸುಗಮವಾಗುತ್ತದೆ.

ಒಂದಿಷ್ಟು ಬೆಳಕಿರಲಿ: ನೀವು ಮಲಗುವ ಕೋಣೆ ಅಥವಾ ಜಾಗದಲ್ಲಿ ಒಂದಿಷ್ಟು ಬೆಳಕಿದ್ದರೆ ಉತ್ತಮ. ಇದು ನಿಮ್ಮಲ್ಲಿ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬೆಳಗಿನ ಜಾವ ಏಳಲು ಸುಲಭವಾಗುತ್ತದೆ. ಹೊರಗಿನ ಕಿರಣಗಳನ್ನು ಸಹಿಸಿಕೊಳ್ಳುವಂತಹ ಶಕ್ತಿ ಸಹ ನಮ್ಮ ಕಣ್ಣುಗಳಿಗೆ ಇರುತ್ತದೆ.ಈ ಚಿಕ್ಕ ಪುಟ್ಟ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ಮಾರಕ: ಕೆಲವನ್ನು ತೊರೆದು ಕೆಲವನ್ನು ರೂಡಿಸಿ ಹೆಲ್ದಿಯಾಗಿರಿ

ನೀರು ಕುಡಿಯಿರಿ: ಬೆಳಗಿನ ಜಾವ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಜಠರದ ಆರೋಗ್ಯ ಸುಧಾರಿಸುತ್ತದೆ. ಖಾಲಿ ಹೊಟ್ಟೆಗೆ ನೀರು ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ನಾಶವಾಗಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.

ಸ್ನಾನ ಮಾಡಿ: ಬೆಳಗಿನ ಜಾವ ನೀವು ಸ್ನಾನ ಮಾಡುವುದು ಕೇವಲ ಶುದ್ಧಕ್ಕಷ್ಟೇ ಅಲ್ಲಾ. ಇದು ನಿಮ್ಮ ಮನಸ್ಸಿಗೂ ಚೈತನ್ಯ ನೀಡುತ್ತದೆ. ದಿನವಿಡಿ ನೀವು ಫ್ರೆಶ್ ಆಗಿರುವಂತೆ ನೋಡಿಕೊಳ್ಳುತ್ತದೆ.
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading