ಬೇಸಿಗೆಕಾಲ (Summer) ಶುರುವಾಯಿತು ಎಂದರೆ ಸಾಕು ನಮಗೆಲ್ಲಾ ನೆನಪಾಗುವ ಏಕೈಕ ಹಣ್ಣು ಎಂದರೆ ಅದು ಮಾವಿನಹಣ್ಣು (Mango) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಎಲ್ಲರಿಗೂ ಇಷ್ಟವಾಗುವ ಮಾವಿನಹಣ್ಣನ್ನು ಜನರು ಅನೇಕ ರೀತಿಯಲ್ಲಿ ಸೇವಿಸಲು ಇಷ್ಟ ಪಡುತ್ತಾರೆ. ಅರೇ ಮಾವಿನಹಣ್ಣಿನ ಬಗ್ಗೆ ನಾವು ಇಂದು ಇಷ್ಟೊಂದು ಪೀಠಿಕೆ ಏಕೆ ಹಾಕುತ್ತಿದ್ದೇವೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಕಾರಣ ಇದೆ. ಈಗಂತೂ ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತಮ್ಮ ವೀಡಿಯೋವನ್ನು (Video) ತುಂಬಾ ಜನರು ನೋಡಬೇಕು ಮತ್ತು ಬೇಗನೆ ವೈರಲ್ (Viral) ಆಗಬೇಕು ಎಂಬ ಕಾರಣಕ್ಕೆ ಈ ಬೀದಿ ಬದಿಯಲ್ಲಿ ಹೋಟೆಲ್ (Hotel) ನಡೆಸುವವರು ಮತ್ತು ಈ ತಳ್ಳುಗಾಡಿಯಲ್ಲಿ ಫಾಸ್ಟ್ ಫುಡ್ (Fast Food) ಐಟಂ ಗಳನ್ನು ಮಾಡಿಕೊಡುವ ಬಾಣಸಿಗರು ಅನೇಕ ವಿಚಿತ್ರವಾದ ಮಿಶ್ರ ಭಕ್ಷ್ಯಗಳನ್ನು ತಯಾರಿಸುತ್ತಿದ್ದಾರೆ.
ಐಸ್‌ಕ್ರೀಮ್ ದೋಸೆ
ಈ ವೀಡಿಯೋಗಳಲ್ಲಿ ಒಂದು ತಿಂಡಿಯೊಂದಿಗೆ ಇನ್ನೊಂದು ಭಕ್ಷ್ಯವನ್ನು ಸೇರಿಸಿ ಅದನ್ನು ವಿಲಕ್ಷಣ ಮಾಡುತ್ತಿರುವುದನ್ನು ನಾವು ಇತ್ತೀಚೆಗೆ ತುಂಬಾನೇ ನೋಡಿದ್ದೇವೆ ಎಂದು ಹೇಳಬಹುದು. ಹಿಂದೊಮ್ಮೆ ವೈರಲ್ ಆದ ವೀಡಿಯೋಗಳಲ್ಲಿ ನಾವು ಇಡ್ಲಿಯೊಂದಿಗೆ ಐಸ್‌ಕ್ರೀಮ್ ಅನ್ನು ಸೇರಿಸಿ ಐಸ್‌ಕ್ರೀಮ್ ಇಡ್ಲಿ ಮಾಡಿದ್ದು, ದೋಸೆಯ ಜೊತೆಗೆ ಐಸ್‌ಕ್ರೀಮ್ ಅನ್ನು ಸೇರಿಸಿ ಐಸ್‌ಕ್ರೀಮ್ ದೋಸೆ ಮಾಡಿದ್ದು ನೋಡಿದ್ದೆವು.
ಮ್ಯಾಂಗೋ ಮ್ಯಾಗಿ
ಇಂತಹ ವಿಲಕ್ಷಣ ವೀಡಿಯೋಗಳನ್ನು ನೋಡಿ ನೆಟ್ಟಿಗರು ‘ಸಾಕ್ರಪ್ಪಾ ಸಾಕು, ಈ ರೀತಿಯಾಗಿ ನಮಗೆ ಇಷ್ಟವಾದ ತಿಂಡಿಯನ್ನು ಕೆಡಿಸಬೇಡಿ’ ಎಂದು ಪರಿ ಪರಿಯಾಗಿ ಕಾಮೆಂಟ್ ನಲ್ಲಿ ಹಾಕಿ ಕೇಳಿಕೊಂಡರೂ, ಇವರಿಗೆ ಕಿಂಚಿತ್ತೂ ಅರ್ಥವಾದಂತಿಲ್ಲ. ಈಗ ಮತ್ತೊಮ್ಮೆ ಇವರು ಒಂದು ತಿಂಡಿಯೊಂದಿಗೆ ಹಣ್ಣನ್ನು ಸೇರಿಸಿದ್ದಾರೆ, ಹೌದು.. ಈ ಬಾರಿ ಇವರು ಮಾಡಿದ್ದು ‘ಮ್ಯಾಂಗೋ ಮ್ಯಾಗಿ’ ಎಂದರೆ ಮಾವಿನಹಣ್ಣಿನ ಮ್ಯಾಗಿ.
ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿರುವ ಮ್ಯಾಂಗೋ ಮ್ಯಾಗಿ ವಿಡಿಯೋ
ಈ ಹೊಸ ರೀತಿಯ ಬೀದಿ ಬದಿಯ ಆಹಾರದ ವೀಡಿಯೋವನ್ನು ನೋಡಿದ ನಂತರ, ನಿಮಗೆ ಮಾವಿನ ಹಣ್ಣುಗಳ ಬಗ್ಗೆ ಇರುವ ಆಸಕ್ತಿ ಮತ್ತು ಉತ್ಸಾಹ ನಿಧಾನವಾಗಿ ಕಡಿಮೆಯಾಗುವುದಂತೂ ನಿಜ. ‘ದಿ ಗ್ರೇಟ್ ಇಂಡಿಯನ್ ಫುಡ್ಡಿ’ ಎಂಬ ಫುಡ್ ಬ್ಲಾಗಿಂಗ್ ಪುಟವು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿರುವ ಈ ವೀಡಿಯೋವು ಮ್ಯಾಗಿಯನ್ನು ತಯಾರಿಸುವುದರೊಂದಿಗೆ ಶುರುವಾಗುತ್ತದೆ.
ಮ್ಯಾಗಿಯನ್ನು ತುಂಬಾ ಜನರು ತಿನ್ನಲು ಇಷ್ಟ ಪಡುತ್ತಾರೆ ಮತ್ತು ಅವರಿಗೆಲ್ಲಾ ಈಗ ಈ ವೀಡಿಯೋ ನೋಡಿ ಮಾವಿನಹಣ್ಣನ್ನು ಅದಕ್ಕೆ ಸೇರಿಸಿದ್ದು ಅಷ್ಟಾಗಿ ಇಷ್ಟವಾಗುವುದಿಲ್ಲ.ಈ ವೀಡಿಯೋದಲ್ಲಿ ಬೀದಿ ಬದಿಯ ಚಿಕ್ಕ ಹೊಟೇಲ್ ಒಂದರಲ್ಲಿ ಮಹಿಳೆಯೊಬ್ಬಳು ಮ್ಯಾಗಿಯನ್ನು ತಯಾರಿಸುವ ಮೂಲಕ ವೀಡಿಯೊ ಶುರುವಾಗಿ ನಂತರದಲ್ಲಿ ಈ ಪ್ರಕ್ರಿಯೆಯಲ್ಲಿ ಅವಳು ಬಹಳಷ್ಟು ಪದಾರ್ಥಗಳನ್ನು ಸೇರಿಸುತ್ತಾಳೆ ಮತ್ತು ಕೊನೆಯಲ್ಲಿ ಮಾವಿನಹಣ್ಣಿನ ಕೆಲವು ತುಂಡುಗಳನ್ನು ಅದರ ಮೇಲೆ ಹಾಕಿ ಆ ಮ್ಯಾಗಿಯನ್ನು ಅಲಂಕಾರ ಮಾಡಿ ನೀಡುತ್ತಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ನಲ್ಲಿ ಹೇಳಿದ್ದೇನು ?
ಈ ವೀಡಿಯೋವನ್ನು ಇದುವರೆಗೂ 115 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ವೀಡಿಯೋ ನೋಡಲು ಬಲು ವಿಚಿತ್ರವಾಗಿದ್ದರೂ ಸಹ ಇದು 5000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಈ ವಿಚಿತ್ರವಾದ ಮಿಶ್ರಣದಿಂದ ನೆಟ್ಟಿಗರು ಸಂಪೂರ್ಣವಾಗಿ ಭಯಭೀತರಾಗಿದ್ದಾರೆ ಎಂದು ಹೇಳಬಹುದು. ಕೆಲವರು ತಮ್ಮ ನೆಚ್ಚಿನ ಹಣ್ಣನ್ನು ಮ್ಯಾಗಿಯಲ್ಲಿ ಏಕೆ ಸೇರಿಸಲಾಯಿತು ಎಂಬುದರ ಬಗ್ಗೆ ಕೋಪೋದ್ರಿಕ್ತ ಕಾಮೆಂಟ್ ಗಳನ್ನು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿ ಕೊಂಡಿದ್ದಾರೆ.
ಇದನ್ನೂ ಓದಿ: Bride Weight Loss: ಮದುವೆ ಡೇಟ್ ಹತ್ತಿರ ಇದ್ಯಾ? ಮದುಮಗಳು ತೂಕ ಇಳಿಸಲು ಕೆಲವು ಸಲಹೆ
ಇದಕ್ಕೆ ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಮ್ಯಾಗಿಯಲ್ಲಿ ಮಾವಿನಹಣ್ಣನ್ನು ಸೇರಿಸುವ ಮೊದಲು ಏನೆಲ್ಲಾ ಸೇರಿಸಿದ್ದಾರೆ, ಹಾಲು ಸೇರಿಸಿ ಮಾಡಿದರೆ ಇದು ಬೇರೆ ರೀತಿಯ ಮ್ಯಾಗಿ ಆಗುತ್ತಿತ್ತು. ಈ ರೀತಿಯ ಮ್ಯಾಂಗೋ ಮ್ಯಾಗಿ ಎಲ್ಲಿಯೂ ಸಿಗುವುದಿಲ್ಲ. ಇದು ಸುಮ್ಮನೆ ವೀಡಿಯೋ ವೈರಲ್ ಮಾಡುವುದಕ್ಕೆ ತಯಾರಿಸಿದ್ದು ಇರಬೇಕು” ಎಂದು ಕಾಮೆಂಟ್ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ