ಪ್ರತಿ ಭಾರತೀಯನಿಂದ ವರ್ಷಕ್ಕೆ 50 ಕೆಜಿ ಆಹಾರ ವ್ಯರ್ಥ!; ವಿಶ್ವಸಂಸ್ಥೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಾಗತಿಕ ಮಟ್ಟದಲ್ಲಿ, ಪ್ರತಿವರ್ಷ 121 ಕೆಜಿ ಗ್ರಾಹಕ-ಮಟ್ಟದ ಆಹಾರ ವ್ಯರ್ಥವಾಗುತ್ತಿದೆ, ಇದರಲ್ಲಿ 74 ಕೆಜಿ ಮನೆಗಳಲ್ಲಿ ನಡೆಯುತ್ತಿದೆ ಎಂದು ಯುಎನ್‌ಇಪಿ ಪ್ರಕಟಣೆಯಲ್ಲಿ ತಿಳಿಸಿದೆ.

  • Share this:

ಎಷ್ಟೋ ಜನಕ್ಕೆ ದಿನಕ್ಕೆ ಎರಡು ಹೊತ್ತು ಊಟ ಸಹ ಈಗಲೂ ಸಿಗುತ್ತಿಲ್ಲ. ಭಿಕ್ಷೆ ಬೇಡಿ ಹಲವರು ಅರೆ ಹೊಟ್ಟೆ ತುಂಬಿಸಿಕೊಂಡರೆ, ಇನ್ನೂ ಹಲವರಿಗೆ ತಿಂದು ಬಿಸಾಡಿದ ಆಹಾರ, ಇನ್ನು ಕೆಲವರಿಗೆ ಅದೂ ಸಿಗೋದಿಲ್ಲ. ಆದರೆ, ದಿನಕ್ಕೆ 3 - 4 ಹೊತ್ತು ಆಹಾರ ಸೇವಿಸುವವರು ಹೆಚ್ಚು ಆಹಾರ ವ್ಯರ್ಥ ಮಾಡುತ್ತಾರೆ. ಇದರ ಮಟ್ಟ ಎಷ್ಟು ಅಂತೀರಾ..? ವಿಶ್ವಸಂಸ್ಥೆಯ ವರದಿ ಪ್ರಕಾರ, 2019 ರಲ್ಲಿ ಜಾಗತಿಕವಾಗಿ 931 ದಶಲಕ್ಷ ಟನ್ ಆಹಾರ ವ್ಯರ್ಥವಾಗಿದೆ. ಇದು ಭೂಮಿಯನ್ನು ಏಳು ಬಾರಿ ಸುತ್ತುವಷ್ಟು ಸಾಕು ಎಂದು ಹೇಳುತ್ತದೆ. ಅಲ್ಲದೆ, ಭಾರತದಲ್ಲಿ ಮನೆಯ ಆಹಾರ ತ್ಯಾಜ್ಯವು ವರ್ಷಕ್ಕೆ ಸುಮಾರು 68.7 ಮಿಲಿಯನ್ ಟನ್ ಆಗಿದೆ ಎಂದೂ ತಿಳಿಸಿದೆ.


2019 ರಲ್ಲಿ ಸುಮಾರು 931 ದಶಲಕ್ಷ ಟನ್ ಆಹಾರ ತ್ಯಾಜ್ಯ ಉತ್ಪತ್ತಿಯಾಗಿದೆ. ಅದರಲ್ಲಿ ಶೇ. 61 ರಷ್ಟು ಮನೆಗಳಿಂದ, ಶೇ. 26 ರಷ್ಟು ಆಹಾರ ಸೇವೆಗಳಿಂದ ಮತ್ತು ಚಿಲ್ಲರೆ ವ್ಯಾಪಾರದಿಂದ ಶೇ. 13ರಷ್ಟು ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಮತ್ತು ಪಾಲುದಾರ ಸಂಸ್ಥೆ ಡಬ್ಲ್ಯುಆರ್‌ಪಿ ಜಂಟಿಯಾಗಿ ತಯಾರಿಸಿರುವ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021 ಹೇಳುತ್ತದೆ.


"ಒಟ್ಟು ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇಕಡಾ 17ರಷ್ಟು ವ್ಯರ್ಥವಾಗುತ್ತಿರುವುದನ್ನು ಇದು ಸೂಚಿಸುತ್ತದೆ" ಎಂದೂ ವರದಿ ಹೇಳಿದೆ. "ಇದರ ತೂಕವು ಸರಿಸುಮಾರು 23 ಮಿಲಿಯನ್ ಸಂಪೂರ್ಣ ಲೋಡ್‌ ಆಗಿರುವ 40-ಟನ್ ಟ್ರಕ್‌ಗಳ ತೂಕಕ್ಕೆ ಸಮನಾಗಿರುತ್ತದೆ. ಇದು ಭೂಮಿಯನ್ನು ಏಳು ಬಾರಿ ಸುತ್ತುವಷ್ಟು ಸಾಕು" ಎಂದು ವಿಶ್ವಸಂಸ್ಥೆ ಹೇಳಿದೆ.


ಭಾರತದಲ್ಲಿ ಪ್ರತಿ ಮನೆಯ ಆಹಾರ ತ್ಯಾಜ್ಯ ಅಂದಾಜು ವರ್ಷಕ್ಕೆ ತಲಾ 50 ಕೆಜಿ ಅಥವಾ ವರ್ಷಕ್ಕೆ 68,760,163 ಟನ್ ಆಗಿದ್ದು, ಯುಎಸ್‌ನಲ್ಲಿ ಪ್ರತಿ ಮನೆಯ ಆಹಾರ ತ್ಯಾಜ್ಯ ಅಂದಾಜು ವರ್ಷಕ್ಕೆ 59 ಕೆಜಿ, ಅಥವಾ ವರ್ಷಕ್ಕೆ 19,359,951 ಟನ್ ಆಗಿದೆ. ಆದರೆ ಚೀನಾದಲ್ಲಿ ಪ್ರತಿ ಮನೆಗೆ ಅಂದಾಜು ವರ್ಷಕ್ಕೆ 64 ಕೆಜಿ ಅಥವಾ ವರ್ಷಕ್ಕೆ 91,646,213 ಟನ್ ಆಗಿದೆ. ಆದಾಯದ ಮಟ್ಟ ಬೇರೆ ಬೇರೆಯಾಗಿದ್ದರೂ ಆಹಾರ ತ್ಯಾಜ್ಯವನ್ನು ಅಳೆಯುವ ಪ್ರತಿಯೊಂದು ದೇಶದಲ್ಲಿಯೂ ಇದು ಗಣನೀಯವಾಗಿತ್ತು ಎಂದೂ ವರದಿ ಹೇಳಿದೆ. ಈ ತ್ಯಾಜ್ಯದ ಬಹುಪಾಲು ಮನೆಗಳಿಂದ ಬಂದಿದೆ, ಅಂದ್ರೆ ಶೇ. 11 ರಷ್ಟು. ಆಹಾರ ಸೇವೆಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಕ್ರಮವಾಗಿ 5 ಮತ್ತು 2 ಶೇಕಡಾ ವ್ಯರ್ಥ ಮಾಡುತ್ತವೆ.


ಜಾಗತಿಕ ಮಟ್ಟದಲ್ಲಿ, ಪ್ರತಿವರ್ಷ 121 ಕೆಜಿ ಗ್ರಾಹಕ-ಮಟ್ಟದ ಆಹಾರ ವ್ಯರ್ಥವಾಗುತ್ತಿದೆ, ಇದರಲ್ಲಿ 74 ಕೆಜಿ ಮನೆಗಳಲ್ಲಿ ನಡೆಯುತ್ತಿದೆ ಎಂದು ಯುಎನ್‌ಇಪಿ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: Bengaluru Crime: ಚಿನ್ನಾಭರಣಕ್ಕಾಗಿ ಬೆಂಗಳೂರಿನ ವೃದ್ಧೆಯ ಉಸಿರುಗಟ್ಟಿಸಿ ಕೊಲೆ; ಮಹಿಳೆ ಬಂಧನ


"ಹವಾಮಾನ ಬದಲಾವಣೆ, ಪ್ರಕೃತಿ ಮತ್ತು ಜೀವವೈವಿಧ್ಯತೆಯ ನಷ್ಟ, ಮತ್ತು ಮಾಲಿನ್ಯ ಮತ್ತು ತ್ಯಾಜ್ಯವನ್ನು ನಿಭಾಯಿಸುವ ಬಗ್ಗೆ ನಾವು ಗಂಭೀರವಾಗಿ ತಿಳಿದುಕೊಳ್ಳಲು ಬಯಸಿದರೆ, ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಲು ವಿಶ್ವದಾದ್ಯಂತದ ವ್ಯವಹಾರಗಳು, ಸರ್ಕಾರಗಳು ಮತ್ತು ನಾಗರಿಕರು ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದೆ" ಎಂದು ಯುಎನ್‌ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆ್ಯಂಡರ್ಸನ್ ಹೇಳಿದ್ದಾರೆ.


ಜಾಗತಿಕ ಮಟ್ಟದಲ್ಲಿ 8-10 ರಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯು ಸೇವಿಸದ ಆಹಾರದೊಂದಿಗೆ ಸಂಬಂಧಿಸಿದೆ. ಈ ಹಿನ್ನೆಲೆ "ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸುತ್ತದೆ, ಭೂ ಪರಿವರ್ತನೆ ಮತ್ತು ಮಾಲಿನ್ಯದ ಮೂಲಕ ಪ್ರಕೃತಿಯ ನಾಶವನ್ನು ನಿಧಾನಗೊಳಿಸುತ್ತದೆ, ಆಹಾರದ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ಹಸಿವು ಕಡಿಮೆಯಾಗುತ್ತದೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಹಣವನ್ನು ಉಳಿಸುತ್ತದೆ" ಎಂದೂ ಆ್ಯಂಡರ್ಸನ್ ಹೇಳಿದರು.


2019 ರಲ್ಲಿ 690 ದಶಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದರು. ಕೋವಿಡ್ - 19 ಸಾಂಕ್ರಾಮಿಕ ರೋಗದಿಂದಾಗಿ ಈ ಸಂಖ್ಯೆ ತೀವ್ರವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಪ್ಯಾರಿಸ್ ಒಪ್ಪಂದಕ್ಕೆ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳಲ್ಲಿ ಆಹಾರ ತ್ಯಾಜ್ಯವನ್ನು ಸೇರಿಸುವ ಮೂಲಕ ದೇಶಗಳು ಹವಾಮಾನ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಬಹುದು ಮತ್ತು ಇದರಿಂದ ಆಹಾರ ಸುರಕ್ಷತೆಯನ್ನು ಬಲಪಡಿಸುತ್ತದೆ ಮತ್ತು ಮನೆಗಳಿಗೆ ವೆಚ್ಚವನ್ನು ಕಡಿತಗೊಳಿಸಬಹುದು ಎಂದು ವರದಿ ಹೇಳಿದೆ.


"ದೀರ್ಘಕಾಲದವರೆಗೆ, ಮನೆಯಲ್ಲಿನ ಆಹಾರ ತ್ಯಾಜ್ಯವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾತ್ರ ಗಮನಾರ್ಹ ಸಮಸ್ಯೆಯಾಗಿದೆ ಎಂದು ಊಹಿಸಲಾಗಿತ್ತು'' ಎಂದೂ WRAPಸಿಇಒ ಮಾರ್ಕಸ್ ಗವರ್ ಹೇಳಿದರು


ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ಯಶಸ್ಸಿನ ಪುರಾವೆಗಳು ಹೆಚ್ಚುತ್ತಿವೆ ಎಂದು ಆ್ಯಂಡರ್ಸನ್ ಹೇಳಿದರೂ, ಅದು ಗುರಿಯನ್ನು ಸಾಧಿಸಲು ಅಗತ್ಯವಾದ ಪ್ರಮಾಣದಲ್ಲಿ ಅಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

First published: