Fitness Journey: 76 ವರ್ಷದಲ್ಲೂ ಸೂಪರ್ ಫಿಟ್! ವೃದ್ಧೆಯ ಫಿಟ್ನೆಸ್​ಗೆ ನೆಟ್ಟಿಗರು ಫಿದಾ

ಜಾನ್ ಮೆಕ್‌ಡೊನಾಲ್ಡ್

ಜಾನ್ ಮೆಕ್‌ಡೊನಾಲ್ಡ್

ತಮ್ಮ ದೇಹ ಪರಿವರ್ತನೆಯ ನಂತರ ಈಗ ವೃದ್ಧೆ ಮಾಡೆಲಿಂಗ್ ಮಾಡುತ್ತಿದ್ದಾರೆ. ತನ್ನ 5 ವರ್ಷಗಳ ಪ್ರಯಾಣವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಆಕೆಯ ಚಿತ್ರಗಳನ್ನು ನೋಡಿದ ಜನರು ವೃದ್ಧೆಯನ್ನು ಸಾಕಷ್ಟು ಹೊಗಳಿದ್ದಾರೆ.

  • Share this:

ಕೆಲವು ಜನರು (People) ಫಿಟ್ನೆಸ್ (Fitness) ಬಗ್ಗೆ ತುಂಬಾ ಗೀಳು ಹೊಂದಿರುತ್ತಾರೆ. ಯಾವುದೇ ಗೀಳು (Habit) ಒಮ್ಮೆ ಅಂಟಿಕೊಂಡರೆ ಮುಗಿಯಿತು. ಅದರಿಂದ ಹೊರಗೆ ಬರುವುದು ಸುಲಭವಲ್ಲ, ಹಾಗಾಗಿ ಮನುಷ್ಯ (Human) ಯಾವಾಗಲೂ ಒಳ್ಳೆಯ ಗೀಳು ಹೊಂದಬೇಕು. ವಯಸ್ಸು (Age) ಎಷ್ಟೇ ಇರಲಿ ಆದರೆ ಫಿಟ್ನೆಸ್ ಕಾಳಜಿ ಯಾವಾಗಲೂ ಇರಬೇಕು. ವಯಸ್ಸು ಕೇವಲ ಹೆಸರಿಗೆ ಮಾತ್ರ ಎಂಬುದನ್ನು ಇಲ್ಲೊಬ್ಬ ವೃದ್ಧೆ ತೋರಿಸಿ ಕೊಟ್ಟಿದ್ದಾರೆ. ಕೆನಡಾದ 76 ವರ್ಷದ ಮಹಿಳೆ ಫಿಟ್ನೆಸ್ ಗೀಳಿನ ಮೂಲಕ ತಮ್ಮ ದೇಹದ ಆಕಾರವನ್ನೇ ಬದಲಾಯಿಸಿದ್ದಾರೆ. ಫ್ಯಾಟ್ ಟು ಸ್ಲಿಮ್ ಪರಿವರ್ತನೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.


76 ವರ್ಷದ ವೃದ್ಧೆಯ ದೇಹ ಪರಿವರ್ತನೆ


ತಮ್ಮ ದೇಹ ಪರಿವರ್ತನೆಯ ನಂತರ ಈಗ ವೃದ್ಧೆ ಮಾಡೆಲಿಂಗ್ ಮಾಡುತ್ತಿದ್ದಾರೆ. ತನ್ನ 5 ವರ್ಷಗಳ ಪ್ರಯಾಣವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಆಕೆಯ ಚಿತ್ರಗಳನ್ನು ನೋಡಿದ ಜನರು ವೃದ್ಧೆಯನ್ನು ಸಾಕಷ್ಟು ಹೊಗಳಿದ್ದಾರೆ.


ವೃದ್ಧೆ ಜಾನ್ ಅವರ ಫ್ಯಾಟ್ ಟು ಸ್ಲಿಮ್ ಜರ್ನಿ


ಜಾನ್ ಮೆಕ್‌ಡೊನಾಲ್ಡ್ ಎಂಬ ಈ ಮಹಿಳೆ Instagram ನಲ್ಲಿ 1.6 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಜಾನ್ ಅವರ ವರ್ಕೌಟ್ ವೀಡಿಯೊ ನೋಡಿರುವ ಜನರು ಹುಚ್ಚರಾಗಿದ್ದಾರೆ. ಇತ್ತೀಚೆಗಷ್ಟೇ ಬಿಕಿನಿ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಕ್ಕಾಗಿ ಜಾನ್ ಟ್ರೋಲ್ ಗೆ ಒಳಗಾಗಿದ್ದಾರೆ.


ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು


ಜಾನ್ ಪೋಸ್ಟ್‌ವೊಂದರಲ್ಲಿ, ಅವರು ತಮ್ಮ ಫಿಟ್‌ನೆಸ್ ಪ್ರಯಾಣದ ಬಗ್ಗೆ ಹೇಳಿದ್ದಾರೆ. 5 ವರ್ಷಗಳ ಹಿಂದೆ ಫಿಟ್‌ನೆಸ್ ಬಗ್ಗೆ ಇದ್ದ ಆಲೋಚನೆಗಳು ಈಗ ಬದಲಾಗಿವೆ. ಈಗ ನಾನು ಮೊದಲಿಗಿಂತ ಹೆಚ್ಚು ವಸ್ತುಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಈಗ ನಾನು ಈ ಜೀವನಶೈಲಿಯೊಂದಿಗೆ ಪೂರ್ಣ ಆತ್ಮವಿಶ್ವಾಸದಿಂದ ಬದುಕಬಲ್ಲೆ ಎಂದು ಹೇಳಿದ್ದಾರೆ.


ತನ್ನ ಫಿಟ್‌ನೆಸ್ ಪ್ರಯಾಣದ ಮೂಲಕ ಜನರನ್ನು ಪ್ರೇರೇಪಿಸುತ್ತಿದ್ದಾರೆ ಜಾನ್. ಅವರು ತನ್ನ ಸ್ವಂತ ಯೂಟ್ಯೂಬ್ ಚಾನೆಲ್ ಸಹ ಪ್ರಾರಂಭಿಸಿದ್ದಾರೆ. ಅದು 79,900 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಜಾನ್ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.


ಜಾನ್ ಫಿಟ್ನೆಸ್ ಗೆ ನೆಟ್ಟಿಗರು ಫಿದಾ


ಜಾನ್ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. 'ನಿಮ್ಮ ಫೋಟೋ ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ನಿಮ್ಮ ಸುಂದರ ಕಥೆ ಯಾವಾಗಲೂ ಜನರನ್ನು ಪ್ರೇರೇಪಿಸುತ್ತದೆ. ವಯಸ್ಸಾದ ಪರಿಣಾಮ ನಾವು ಊಹಿಸುವಷ್ಟು ಇರುವುದಿಲ್ಲ” ಎಂದು ಬರೆದಿದ್ದಾರೆ.


ಪ್ರಯಾಣವು ಸುಲಭವಲ್ಲ


ಜನರೊಂದಿಗೆ ತನ್ನ ಕಥೆಯನ್ನು ಜಾನ್ ಹಂಚಿಕೊಂಡಿದ್ದಾರೆ. 'ನನ್ನ ಆರೋಗ್ಯವು ಆಗಾಗ್ಗೆ ಕೆಡುತ್ತಿತ್ತು,  ನನಗೆ ಅಧಿಕ ರಕ್ತದೊತ್ತಡ ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆ ಇತ್ತು. ನನ್ನ ಮೊಣಕಾಲುಗಳು ಊದಿಕೊಳ್ಳುತ್ತಿದ್ದವು ಮತ್ತು ನನ್ನ ಸಂಧಿವಾತ ನೋವು ಭಯಾನಕವಾಗಿತ್ತು. ಮೆಟ್ಟಿಲು ಹತ್ತಲು ಮತ್ತು ಇಳಿಯಲು ಕಷ್ಟವಾಯಿತು. ನಾನು ತುಂಬಾ ಖಿನ್ನತೆಗೆ ಒಳಗಾಗುತ್ತಿದ್ದೆ ಮತ್ತು ನನಗೆ ಬದಲಾವಣೆಯ ಅಗತ್ಯವಿತ್ತು ಎಂದಿದ್ದಾರೆ.


'ನನ್ನ ಮಗಳು ಮಿಚೆಲ್ ಈ ಎಲ್ಲ ವಿಷಯಗಳಿಂದ ನನ್ನನ್ನು ಹೊರ ತರುವಲ್ಲಿ ಸಹಾಯ ಮಾಡಿದಳು. ನಾನು ಈ ಸ್ಥಿತಿಯಲ್ಲಿಯೇ ಇದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ನನಗೆ ಹೆಚ್ಚಿನ ಔಷಧಿಗಳ ಅಗತ್ಯತೆ ಬೀಳುತ್ತದೆ ಎಂದಾಗ ನಾನು ಆನ್‌ಲೈನ್ ಫಿಟ್‌ನೆಸ್ ಕೋರ್ಸ್‌ಗೆ ಸೇರಿಕೊಂಡೆ ಮತ್ತು ನನ್ನ ಅಭ್ಯಾಸಗಳನ್ನು ಬದಲಾಯಿಸಲು ಪ್ರಾರಂಭಿಸಿದೆ.


ನನ್ನ ಮಗಳ ಸಹಾಯದಿಂದ ನಾನು ಅನೇಕ ಹೊಸ ವಿಷಯಗಳನ್ನು ಕಲಿತಿದ್ದೇನೆ. ನಾನು 71 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಐಫೋನ್ ಆಪರೇಟ್ ಮಾಡಲು ಕಲಿತೆ ಎಂದಿದ್ದಾರೆ.


ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ  


ನಾನು ಎಂದಿಗೂ ನನ್ನ ಧೈರ್ಯ ಕಳೆದುಕೊಳ್ಳಲಿಲ್ಲ. ಅಂತಿಮವಾಗಿ ನನ್ನ ಶ್ರಮವು ಕಾಲಾನಂತರದಲ್ಲಿ ಫಲ ನೀಡಿತು. ಜಿಮ್‌ನಲ್ಲಿ ನನ್ನ ಆತ್ಮವಿಶ್ವಾಸವೂ ಈಗ ಸಾಕಷ್ಟು ಹೆಚ್ಚಾಗಿದೆ ಎಂದಿದ್ದಾರೆ.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು