ಬಾದಾಮಿ (Almond) ಸೇವನೆಯು (Eating) ದೈಹಿಕ ಆರೋಗ್ಯ (Body Health) ನೀಡುತ್ತದೆ. ಆದರೆ ಬಾದಾಮಿಯ ರೇಟ್ (Rate) ಕೇಳಿದ್ರೆ ಕೆಲವರು ಕೊಂಡುಕೊಳ್ಳಲು ಸಾಧ್ಯವಾಗದೇ ಮನೆಗೆ ವಾಪಸ್ಸಾಗ್ತಾರೆ. ಹಾಗಾಗಿ ಬಾದಾಮಿಯನ್ನು ಎಲ್ಲರೂ ತಿನ್ನಲು ಸಾಧ್ಯವಿಲ್ಲ. ಆದರೆ ಬಾದಾಮಿ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಬಹುತೇಕ ಎಲ್ಲರಿಗೂ ಗೊತ್ತಿದೆ. ಮನೆಗಳಲ್ಲಿ ಬಾದಾಮಿಯನ್ನು ರಾತ್ರಿ ಹುರಿದು ಅಥವಾ ನೆನೆಸಿಟ್ಟು ನಂತರ ಸಿಪ್ಪೆ ತೆಗೆದು ತಿನ್ನುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬಾದಾಮಿಯಲ್ಲಿ ಫೈಬರ್, ಪ್ರೊಟೀನ್, ವಿಟಮಿನ್ ಇ, ಕ್ಯಾಲ್ಸಿಯಂ ಮತ್ತು ಸತುವು ಹೇರಳವಾಗಿದೆ. ಇದು ಮೆದುಳು, ಕಣ್ಣು, ಮೂಳೆಗಳು ಮತ್ತು ದೇಹವನ್ನು ಪೋಷಿಸುತ್ತದೆ.
ಬಾದಾಮಿ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿ
ಬಾದಾಮಿ ತಿನ್ನುವುದು ಹೃದಯ, ಮಧುಮೇಹ, ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ. ಬಾದಾಮಿ ಮಾತ್ರವಲ್ಲ ಅದರ ಸಿಪ್ಪೆ ಕೂಡ ಜಾದೂ ರೀತಿಯಲ್ಲಿ ಕೆಲಸ ಮಾಡುತ್ತದೆ. ಬಾದಾಮಿ ಸಿಪ್ಪೆಯಲ್ಲೂ ಇದೇ ರೀತಿಯ ಪೌಷ್ಟಿಕಾಂಶದ ಅಂಶಗಳು ಸಮೃದ್ಧವಾಗಿವೆ.
ಬಾದಾಮಿ ಸಿಪ್ಪೆಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಇವೆ. ಇದರ ಸೇವನೆಯು ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲು ಮತ್ತು ತ್ವಚೆಗೂ ಸಹ ಪ್ರಯೋಜನಕಾರಿ.
ಇದನ್ನೂ ಓದಿ: ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ತ್ರಿಫಲ ಚೂರ್ಣ, ಇದರ ಬಳಕೆ ಹೇಗೆ ಗೊತ್ತಾ?
ಸಿಪ್ಪೆಯ ಜೊತೆಗೆ ಬಾದಾಮಿ ಸೇವಿಸಿ
ಬಾದಾಮಿ ನೆನೆಸಿಟ್ಟ ನಂತರ ಸಿಪ್ಪೆಯನ್ನ ತೆಗೆದು ತಿನ್ನುವ ಬದಲು, ಸಿಪ್ಪೆಯ ಜೊತೆಗೆ ತಿನ್ನಬೇಕು ಎಂಬುದು ತಜ್ಞರ ಅಭಿಪ್ರಾಯ. ಬಾದಾಮಿ ಸಿಪ್ಪೆಯಲ್ಲಿ ಹಲವು ಪೋಷಕಾಂಶ ಇದೆ. ಇವು ಆರೋಗ್ಯವರ್ಧಕವಾಗಿವೆ.
ಬಾದಾಮಿ ಸಿಪ್ಪೆಯನ್ನು ಹೀಗೆ ಸೇವಿಸಿದ್ರೆ ಹೊಟ್ಟೆ ಸ್ವಚ್ಛವಾಗುತ್ತದೆ
ಬಾದಾಮಿಯ ಕಂದು ಚರ್ಮ ಫೈಬರ್ ಮತ್ತು ಫ್ಲೇವನಾಯ್ಡ್‌ಗಳಲ್ಲಿ ಸಮೃದ್ಧವಾಗಿದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಹೊಟ್ಟೆಯನ್ನು ಸುಲಭವಾಗಿ ಕ್ಲೀನ್ ಮಾಡುತ್ತದೆ. ನೈಸರ್ಗಿಕ ವಿರೇಚಕವಾಗಿ ಕಾರ್ಯ ನಿರ್ವಹಿಸುತ್ತದೆ. ಲಿನ್ಸೆಡ್, ಕಲ್ಲಂಗಡಿ ಬೀಜಗಳು ಮತ್ತು ಸಕ್ಕರೆ ಕ್ಯಾಂಡಿಯೊಂದಿಗೆ ಬಾದಾಮಿ ಸಿಪ್ಪೆಗಳನ್ನು ಪುಡಿ ಮಾಡಿ ಮತ್ತು ಬೆಚ್ಚಗಿನ ಹಾಲಿನೊಂದಿಗೆ ಸೇವಿಸಿ.
ಕೂದಲ ಆರೋಗ್ಯಕ್ಕೆ ಸಹಕಾರಿ
ಬಾದಾಮಿ ಸಿಪ್ಪೆಯಲ್ಲಿ ವಿಟಮಿನ್-ಇ ಹೇರಳವಾಗಿದೆ. ಇದು ಕೂದಲನ್ನು ಆರೋಗ್ಯಕರವಾಗಿಡಲು ಅವಶ್ಯಕ. ಇದನ್ನು ಮೊಟ್ಟೆ, ತೆಂಗಿನೆಣ್ಣೆ ಮತ್ತು ಅಲೋವೆರಾ ಜೆಲ್ ಜೊತೆಗೆ ಹೇರ್ ಮಾಸ್ಕ್ ಆಗಿ ಹಚ್ಚಿ. ಕೂದಲು ಕಾಂತಿಯುತ ಮತ್ತು ಸ್ಟ್ರಾಂಗ್ ಆಗಿರುತ್ತದೆ.
ಚರ್ಮವನ್ನು ನಿರ್ಮಲವಾಗಿರಿಸುತ್ತದೆ
ಬಾದಾಮಿಯಂತೆ ಇದರ ಸಿಪ್ಪೆಗಳು ಕೂಡ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿಡುತ್ತವೆ. ಉತ್ತಮ ಚರ್ಮಕ್ಕಾಗಿ, 1 ಕಪ್ ಬಾದಾಮಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ಅದನ್ನು 1/4 ಕಪ್ ರೋಲ್ಡ್ ಓಟ್ಸ್, 1/4 ಕಪ್ ಗ್ರಾಂ ಹಿಟ್ಟು ಮತ್ತು 1/2 ಕಪ್ ಕಾಫಿಯೊಂದಿಗೆ ರುಬ್ಬಿ ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಿ. ಇದರ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಅಪರ್ಯಾಪ್ತ ಕೊಬ್ಬು ಹೃದಯಕ್ಕೆ ಹೇಗೆ ಪ್ರಯೋಜನಕಾರಿ?
ಬಾದಾಮಿಯು ಅಪರ್ಯಾಪ್ತ ಕೊಬ್ಬು ಹೊಂದಿರುತ್ತದೆ. ಅಂದರೆ ಆರೋಗ್ಯಕರ ಕೊಬ್ಬು. ಈ ಕೊಬ್ಬು ನಿಮ್ಮ ಹೃದಯಕ್ಕೆ ಒಳ್ಳೆಯದು. ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಅಪರ್ಯಾಪ್ತ ಕೊಬ್ಬುಗಳು ನಿಮ್ಮ ಹೃದಯದ ಜೊತೆಗೆ ಹಗಲಿನಲ್ಲಿ ಸಿರೊಟೋನಿನ್ ಮಟ್ಟ ಹೆಚ್ಚಿಸುತ್ತವೆ. ಇದು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಸಹಕಾರಿ. ಬಾದಾಮಿಯಲ್ಲಿ ವಿಟಮಿನ್ ಇ ಕೂಡ ಅಧಿಕವಾಗಿದೆ. ಇದು ಸೋಂಕು ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ಇದನ್ನೂ ಓದಿ: ಇವುಗಳನ್ನು ತಿಂದ್ರೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯೋದಿಲ್ವಂತೆ
ತೂಕ ನಿಯಂತ್ರಿಸುತ್ತದೆ
ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಬಾದಾಮಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ಫೈಬರ್‌ನ ಉತ್ತಮ ಮೂಲ. ದೀರ್ಘ ಕಾಲದವರೆಗೆ ಹೊಟ್ಟೆ ಹಸಿವಾಗದಂತೆ ನೋಡಿಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ