'ವರ್ಲ್ಡ್ ಕಪ್ ಬಿಯರ್'​: 'ಬಿಯರ್ ಆಫ್ ಒಲಿಂಪಿಕ್ಸ್'ನಲ್ಲಿ ಬಿಯರ್​ಗಳ ಸ್ಫರ್ಧೆ

news18
Updated:May 8, 2018, 6:39 PM IST
'ವರ್ಲ್ಡ್ ಕಪ್ ಬಿಯರ್'​: 'ಬಿಯರ್ ಆಫ್ ಒಲಿಂಪಿಕ್ಸ್'ನಲ್ಲಿ ಬಿಯರ್​ಗಳ ಸ್ಫರ್ಧೆ
news18
Updated: May 8, 2018, 6:39 PM IST
ನ್ಯೂಸ್ 18 ಕನ್ನಡ

2018ರ 'ವರ್ಲ್ಡ್ ಕಪ್ ಬಿಯರ್'​ ಸ್ಪರ್ಧೆಯಲ್ಲಿ ಬೆಲ್ಜಿಯಂ ವಿಶ್ವದ ಅತ್ಯುತ್ತಮ ಬಿಯರ್ ತಯಾರಿಸುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ ಸ್ಪರ್ಧೆಯ ವಿಜಯಿ ಬೆಲ್ಜಿಯಂಗೆ 'ಬಿಯರ್ ಆಫ್ ಒಲಿಂಪಿಕ್ಸ್' ಪಟ್ಟವನ್ನು ನೀಡಲಾಯಿತು.​

66 ದೇಶಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ 8230ಕ್ಕಿಂತ ಹೆಚ್ಚಿನ ಬಿಯರ್​ ಮಾದರಿಗಳಿದ್ದವು. ಸ್ಪರ್ಧೆಯ ತೀರ್ಪುಗಾರರಾಗಿ 33 ರಾಷ್ಟ್ರಗಳ 295 ಮಂದಿ ಭಾಗವಹಿಸಿದ್ದರು.

ಬ್ರ್ಯೂ ಎಕ್ಸ್​ಪೊ ಮತ್ತು ಕ್ರಾಫ್ಟ್​ ಬ್ರ್ಯೂವರ್ಸ್ ಕಾನ್ಫೆರೆನ್ಸ್ ಸಂಸ್ಥೆಯು ಈ ಸ್ಪರ್ಧೆಯನ್ನು ಅಮೆರಿಕದಲ್ಲಿ  ಆಯೋಜಿಸಿತ್ತು. ಇದರಲ್ಲಿ ವಿವಿಧ ಬಿಯರ್ ಮಾದರಿಯ ಶೇ.10ರಷ್ಟು ಪದಕವನ್ನು ಗೆಲ್ಲುವ ಮೂಲಕ ಬೆಲ್ಜಿಯಂ ವಿಶ್ವದ ಅತ್ಯುತ್ತಮ ಬಿಯರ್ ತಯಾರಿಸುವ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯಿತು. ಯು.ಎಸ್​ ದೇಶವು 242 ಪದಕಗಳನ್ನು ಗೆಲ್ಲುವುದರೊಂದಿಗೆ ಅತಿ ಹೆಚ್ಚು ಪದಕ ತನ್ನದಾಗಿಸಿಕೊಂಡಿತು. ಹಾಗೆಯೇ ಕೆನಡಾ 14 ಮತ್ತು ಜರ್ಮನಿ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ.

ಅಮೆರಿಕನ್ ಸ್ಟೈಲ್ ಇಂಡಿಯಾ ಪೇಲ್ ಅಲೆ ವಿಭಾಗವನ್ನು ಈ ವರ್ಷದ ಅತ್ಯಂತ ಜನಪ್ರಿಯ ಬಿಯರ್​ ಎಂದು ಘೋಷಿಸಲಾಯಿತು.
First published:May 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ