• ಹೋಂ
  • »
  • ನ್ಯೂಸ್
  • »
  • lifestyle
  • »
  • Indian Food: ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಬಾಣಸಿಗ ಯಾರು? ಇಲ್ಲಿದೆ ಮಾಹಿತಿ

Indian Food: ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಬಾಣಸಿಗ ಯಾರು? ಇಲ್ಲಿದೆ ಮಾಹಿತಿ

ವಿಜಯ್ ಕುಮಾರ್

ವಿಜಯ್ ಕುಮಾರ್

ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿರುವ ದಕ್ಷಿಣ ಭಾರತದ ಪಾಕಶೈಲಿಯ ಸೆಮ್ಮ ರೆಸ್ಟೋರೆಂಟ್‌ ಅಲ್ಲಿನ ಪ್ರತಿಷ್ಠಿತ ಮೆಕೆಲಿನ್‌ ಸ್ಟಾರ್‌ ಅವಾರ್ಡ್‌ ಪಡೆದುಕೊಂಡಿದೆ.

  • Trending Desk
  • 4-MIN READ
  • Last Updated :
  • Share this:
  • published by :

ಇಂದು ಪ್ರಪಂಚದಾದ್ಯಂತ ಜನರು ವ್ಯವಹರಿಸ್ತಾರೆ. ಒಂದು ಕಡೆಯ ಜನರು (People) ಮತ್ತೊಂದೆಡೆ ಹೋಗ್ತಾರೆ. ಹಾಗೆ ಹೋದಾಗ ಅವರಿಗೆ ನಮ್ಮ ಊಟ ತಿಂಡಿ ಆಹಾರ ಪದ್ಧತಿ (Food System) ಬೇಕು ಅನ್ನಿಸದೇ ಇರದು. ಹಾಗೆ ನಮ್ಮದೇ ಶೈಲಿಯ ರೆಸ್ಟೋರೆಂಟ್‌ ಸಿಕ್ಕಿದರೆ ಅವರಷ್ಟು ಖುಷಿ ಪಡೋರು ಬೇರೆ ಇರಲ್ಲ. ಇನ್ನು ಪ್ರಪಂಚದ ಬೇರೆ ಬೇರೆ ಭಾಗದ ರುಚಿಯನ್ನು (Taste) ಟೇಸ್ಟ್‌ ಮಾಡೋಕೆ ಇಷ್ಟ ಪಡೋ ಜನರಿರ್ತಾರೆ. ಹಾಗಾಗಿ ಶುಚಿಯಾಗಿ – ರುಚಿಯಾಗಿ ಆಹಾರ ನೀಡೋ ರೆಸ್ಟೋರೆಂಟ್‌ ಗಳು (Restaurants) ಇಂದಿನ ಅಗತ್ಯಗಳಲ್ಲಿ ಒಂದು. ಹಾಗೇ ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿರುವ ದಕ್ಷಿಣ ಭಾರತದ (India) ಪಾಕಶೈಲಿಯ ಸೆಮ್ಮ ರೆಸ್ಟೋರೆಂಟ್‌, ಅಲ್ಲಿನ ಪ್ರತಿಷ್ಠಿತ ಮೆಶೆಲಿನ್‌ ಸ್ಟಾರ್‌ ಅವಾರ್ಡ್‌ ಪಡೆದುಕೊಂಡಿದೆ.


ಹೌದು, ಅದ್ಭುತ ಎಂಬುದಕ್ಕೆ ತಮಿಳಿನ ಆಡುಮಾತಿನಲ್ಲಿ ಸೆಮ್ಮಾ ಅಂತಾರೆ. ಈ ಸೆಮ್ಮ ನ್ಯೂಯಾರ್ಕ್‌ ಜನರನ್ನು ಮೋಡಿ ಮಾಡಿದೆ ಅನ್ನೋದಕ್ಕೆ ಇದು ಮೆಶೆಲಿನ್‌ ಸ್ಟಾರ್‌ ಪಡೆದಿರೋದೇ ಸಾಕ್ಷಿ. ನ್ಯೂಯಾರ್ಕ್‌ ಸಿಟಿಯ ವೆಸ್ಟ್ ವಿಲೇಜ್‌ನಲ್ಲಿ ನೆಲೆಗೊಂಡಿರುವ ಸೆಮ್ಮಾ, ಬಾನ್ ಅಪೆಟಿಟ್ ಪ್ರಕಾರ, ನಗರದಲ್ಲಿನ ಏಕೈಕ ಮಿಶೆಲಿನ್- ಸ್ಟಾರ್‌ ದಕ್ಷಿಣ ಭಾರತೀಯ ರೆಸ್ಟೋರೆಂಟ್ ಆಗಿದೆ.


ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಬಾಣಸಿಗ ವಿಜಯ್


ನ್ಯೂಯಾರ್ಕ್ ನಗರದ ಸೆಮ್ಮಾ ಈ ವರ್ಷ ಮೈಶೆಲಿನ್ ಸ್ಟಾರ್ ಅನ್ನು ಸ್ವೀಕರಿಸಿದೆ. ಇದನ್ನು ಹಾಸ್ಪಿಟಾಲಿಟಿ ಗ್ರೂಪ್ ಅನಾಪೊಲೊಜೆಟಿಕ್ ಫುಡ್ಸ್‌ನ ರೋನಿ ಮಜುಂದಾರ್ ಮತ್ತು ಬಾಣಸಿಗ ಚಿಂತನ್ ಪಟೇಲ್ ನಡೆಸುತ್ತಿದ್ದಾರೆ. ಅಂದಹಾಗೆ ಇದು ಪ್ರಾದೇಶಿಕ, ಗ್ರಾಮೀಣ ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿರುವ ಬಾಣಸಿಗ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿದೆ.


ಸೆಮ್ಮದಲ್ಲಿದೆ ಬಾಯಲ್ಲಿ ನಿರೂರಿಸುವ ಮೆನು!


ಇಲ್ಲಿ ದಕ್ಷಿಣ ಭಾರತೀಯ ಪ್ರಸಿದ್ಧ ನಾನ್‌ ವೆಜ್‌ ತಿನಿಸುಗಳು ಜನರನ್ನು ಆಕರ್ಷಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕುಡಲ್ ವರುವಲ್ (ಮೇಕೆ ಕರುಳು), ಮೀನ್ ಪೊಲ್ಲಿಚಾತು (ಮೀನು), ನಂದು ಮಸಾಲೆ (ಏಡಿ), ನತೈ ಪಿರತ್ತಲ್ (ಬಸವನ ಹುಳು) ಮತ್ತು ಸಹಜವಾಗಿ ದಿಂಡಿಗಲ್ ಬಿರಿಯಾನಿ, ದೋಸೆಗಳು ಮತ್ತು ಪೆಸರಟ್ಟುಗಳಂತಹ ಭಕ್ಷ್ಯಗಳು ಜನರನ್ನು ಸೆಳೆಯುತ್ತವೆ. ಇದನ್ನು ತಯಾರಿಸಲು ಇವರು ತಮಿಳುನಾಡಿನಲ್ಲಿ ಬೆಳೆಯುವ ಪೊನ್ನಿ ಅಕ್ಕಿಯನ್ನು ಸಹ ಬಳಸುತ್ತಾರೆ.


ಇದನ್ನೂ ಓದಿ: ಬಿಜೆಪಿ ನಡೆಯಿಂದ ಬೇಸತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಆಪ್​ ನಾಯಕ!


ಅಂದಹಾಗೆ, ವಿಜಯ್‌ ಕುಮಾರ್‌ ಅವರು ಇಂತಹ ಖಾದ್ಯಗಳನ್ನೇ ತಿಂದು ಬೆಳೆದವರು. ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡ ಅವರು, “ನಮ್ಮಲ್ಲಿ ಬಹಳಷ್ಟು ಅಕ್ಕಿ ಫಾರ್ಮ್‌ಗಳಿವೆ. ನಾವು ಮಧುರೈ ಬಳಿ ಇರುವ ಅಜ್ಜಿಯ ಮನೆಗೆ ರಜಾದಿನಕ್ಕೆಂದು ಹೋಗುತ್ತಿದ್ದೆವು. ಆ ಸಮಯದಲ್ಲಿ ಅವರ ಹೊಲಗಳಲ್ಲಿ ಬಸವನ ಹುಳುವಿನ ಬೇಟೆಗೆಂದು ಹೋಗುತ್ತಿದ್ದೆವು. ಆಗ ಅದು ನಮಗೆ ಮನರಂಜನೆಯಾಗಿತ್ತು. ಅದನ್ನು ತಂದು ಅಜ್ಜಿಗೆ ಕೊಟ್ಟಾಗ ಅವರು ಅದರಿಂದ ಅದ್ಭುತವಾದ ಗ್ರೇವಿಯನ್ನು ತಯಾರಿಸುತ್ತಿದ್ದರು. ಅದೊಂದು ವಿಶಿಷ್ಟವಾದ ಖಾದ್ಯವಾಗಿತ್ತು,” ಎನ್ನುತ್ತಾರೆ.


ಭಾರತೀಯ ಪಾಕಪದ್ಧತಿ


ಇನ್ನು ವಿದೇಶದಲ್ಲಿ ತನ್ನ ರೆಸ್ಟೋರೆಂಟ್ ಉದ್ಯಮದ ಬಗ್ಗೆ ಮಾತನಾಡಿದ ವಿಜಯ್‌, "ನಾವು ನಿಜವಾದ ದಕ್ಷಿಣ ಭಾರತೀಯ ಆಹಾರದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದೇವೆ. ನಾವು ನಿಜವಾದ ಭಾರತೀಯ ಪಾಕಪದ್ಧತಿಯನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಪ್ರತಿ ವರ್ಷ 15 ದಿನಗಳಿಗೆ ತೆರೆಯುತ್ತೆ 'ನರಕದ ದ್ವಾರ', ಅಲೆದಾಡುವ ದೆವ್ವಗಳಿಗೆ ಹಬ್ಬ!


"ಇಲ್ಲಿ ಕೆಲವು ಉತ್ತಮ ಭಾರತೀಯ ರೆಸ್ಟೋರೆಂಟ್‌ಗಳು ಇದ್ದರೂ, ನಮ್ಮ ಪಾಕಪದ್ಧತಿಯ ಪ್ರಾದೇಶಿಕತೆ ಮತ್ತು ಆಳವನ್ನು ಪ್ರತಿನಿಧಿಸುವ ಯಾವುದೂ ಇಲ್ಲ. ನಾವು ಭಾರತದ ನೈಜ ಕಥೆಯನ್ನು ಹೇಳಲು ಬಂದಿದ್ದೇವೆ. ಭಾರತದಲ್ಲಿಯೂ ಸಹ ಈ ಬಹಳಷ್ಟು ಪಾಕವಿಧಾನಗಳನ್ನು ಮರೆತುಬಿಡಲಾಗುತ್ತಿದೆ" ಎಂದು ರೋನಿ ತಿಳಿಸಿದ್ದಾರೆ.


ಒಟ್ಟಾರೆ ಸೆಮ್ಮ ದ ರುಚಿಗೆ ನ್ಯೂಯಾರ್ಕ್‌ ನ ಜನರು ಹಾಗೂ ಅಲ್ಲಿರುವ ಭಾರತೀಯರು ಮನಸೋತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಒಟ್ಟಿನಲ್ಲಿ ನಮ್ಮ ದಕ್ಷಿಣ ಭಾರತೀಯ ರೆಸ್ಟೊರೆಂಟ್‌ ಒಂದು ಅಲ್ಲಿನ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರೋದು ನಮಗೂ ಹೆಮ್ಮೆಯೇ.

top videos
    First published: