Amla Recipe: ನೆಲ್ಲಿಕಾಯಿ ಚಟ್ನಿ ಮಾಡಲು ಬರುತ್ತಾ? ಐದು ನಿಮಿಷದಲ್ಲಿ ಹೀಗೆ ಮಾಡಿಕೊಳ್ಳಿ

ಆಮ್ಲಾ ಚಟ್ನಿ

ಆಮ್ಲಾ ಚಟ್ನಿ

ನೆಲ್ಲಿಕಾಯಿ ಆರೋಗ್ಯಕ್ಕೂ ಒಳ್ಳೆಯದು ಎಂದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇದು ಸಮೃದ್ಧ ಪೋಷಕಾಂಶಗಳ ಪ್ರೊಫೈಲ್ ಅನ್ನು ಹೊಂದಿದೆ ಮತ್ತು ನಮ್ಮ ಆರೋಗ್ಯಕ್ಕೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡಲು ಸಹಾಯ ಮಾಡುತ್ತದೆ.

  • Share this:

ನೆಲ್ಲಿಕಾಯಿ (Amla) ಆರೋಗ್ಯಕ್ಕೂ (Health) ಒಳ್ಳೆಯದು ಎಂದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇದು ಸಮೃದ್ಧ ಪೋಷಕಾಂಶಗಳ (Rich nutrients) ಪ್ರೊಫೈಲ್ ಅನ್ನು (Profile) ಹೊಂದಿದೆ ಮತ್ತು ನಮ್ಮ ಆರೋಗ್ಯಕ್ಕೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡಲು ಸಹಾಯ ಮಾಡುತ್ತದೆ. ವಾಸ್ತವವಾಗಿ, 2020 ರಿಂದ ಈ ವಿಟಮಿನ್ ಸಿ (Vitamin c) ಇರುವಂತಹ ಹಣ್ಣಿನ (Fruit) ಜನಪ್ರಿಯತೆಯಲ್ಲಿ ಹಠಾತ್ ಏರಿಕೆಯನ್ನು ನಾವು ನೋಡಿದ್ದೇವೆ. ಇಂದು, ಜನರು ತಮ್ಮ ದೈನಂದಿನ ಆಹಾರದಲ್ಲಿ (Food) ನೆಲ್ಲಿಕಾಯಿಯನ್ನು ಅನೇಕ ರೀತಿಗಳಲ್ಲಿ ಸೇವಿಸುತ್ತಾರೆ. ಕೆಲವರು ಇದನ್ನು ಸಿಹಿಯಾದ ಜಾಮ್ ಮಾಡಿಕೊಂಡು ಬ್ರೆಡ್ ಗಳ ಮಧ್ಯದಲ್ಲಿ ಹಾಕಿಕೊಂಡು ತಿಂದರೆ, ಇನ್ನೂ ಕೆಲವರು ಇದನ್ನು ಪುಡಿ ಮಾಡಿಕೊಂಡು, ರಸವನ್ನು, ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.


ಆರೋಗ್ಯಕ್ಕೆ ಉತ್ತಮ ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ತುಂಬಾ ಎಂದು ವಿಜ್ಞಾನ ಮತ್ತು ಆಯುರ್ವೇದ ಎರಡೂ ಒಪ್ಪುತ್ತವೆ. ಪೌಷ್ಟಿಕ ತಜ್ಞೆಯಾದ ರೂಪಾಲಿ ದತ್ತಾ ಅವರು ಹೇಳುವಂತೆ, ನೆಲ್ಲಿಕಾಯಿಯ ಒಂದು ಸರ್ವಿಂಗ್ ವಿಟಮಿನ್ ಸಿ ಯ ದೈನಂದಿನ ಡೋಸ್ ನ 46 ಪ್ರತಿಶತದಷ್ಟು ಭಾಗವನ್ನುನೀಡುತ್ತದೆ, ಇದು ಫ್ರೀ ರಾಡಿಕಲ್ ಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. "ಇದು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೊಲಾಜಿನ್ ಉತ್ಪಾದನೆಗೆ ಅಗತ್ಯವಾಗಿದೆ, ಆದ್ದರಿಂದ ನಿಮ್ಮ ಚರ್ಮ, ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುತ್ತದೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ:   Morning Breakfast: ಬೆಳಗಿನ ತಿಂಡಿಗೆ ಯಾವತ್ತಾದ್ರೂ ಸೂಜಿ ರವೆ ಉಂಡೆ ಟ್ರೈ ಮಾಡಿದ್ದೀರಾ? ರೆಸಿಪಿ ಇಲ್ಲಿದೆ ನೋಡಿ


ನೆಲ್ಲಿಕಾಯಿಯ ಈ ಎಲ್ಲಾ ಪ್ರಯೋಜನಗಳನ್ನು ಪರಿಗಣಿಸಿ, ನಾವು ನಿಮಗೆ ವಿಶಿಷ್ಟವಾದ ನೆಲ್ಲಿಕಾಯಿ ಪಾಕವಿಧಾನವನ್ನು ತೋರಿಸಿ ಕೊಡಲು ಯೋಚಿಸಿದ್ದೇವೆ. ಈ ಹಣ್ಣನ್ನು ನಿಮ್ಮ ದೈನಂದಿನ ಊಟದ ಜೊತೆಗೆ ಒಂದು ರುಚಿಕರವಾದ ಭಕ್ಷ್ಯದ ತರಹ ಜೋಡಿ ಮಾಡಿಕೊಂಡು ಸೇವಿಸಬಹುದು. ಇದು ನೆಲ್ಲಿಕಾಯಿಯಿಂದ ತಯಾರಿಸಿದ ಅತ್ಯುನ್ನತ ಚಟ್ನಿಯಾಗಿದೆ. ಈ ನೆಲ್ಲಿಕಾಯಿ ಚಟ್ನಿಯ ಪಾಕವಿಧಾನವನ್ನು ನಿಮಗಾಗಿ ಹೇಳಿ ಕೊಡುತ್ತೇವೆ, ಇದನ್ನು ಕೇವಲ 5 ನಿಮಿಷಗಳಲ್ಲಿಯೇ ತಯಾರಿಸಿಕೊಳ್ಳಬಹುದು.


ಈ ತ್ವರಿತ ಮತ್ತು ಸುಲಭವಾದ ನೆಲ್ಲಿಕಾಯಿ ಚಟ್ನಿಯ ಪಾಕವಿಧಾನವನ್ನು ಬಾಣಸಿಗ ಅನಾಹಿತಾ ಧೋಂಡಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಹಂಚಿ ಕೊಂಡಿದ್ದಾರೆ. "ನೆಲ್ಲಿಕಾಯಿಯ ಋತು ಶುರುವಾಗಿದೆ ಮತ್ತು ನೀವು ಈ ಪಾಕವಿಧಾನವನ್ನು ತಯಾರಿಸಬೇಕು! ಇದು ತುಂಬಾನೇ ಸುಲಭವಾದ ಪಾಕವಿಧಾನವಾಗಿದ್ದು, ತ್ವರಿತವಾಗಿ ಸಹ ತಯಾರಿಸಬಹುದು. ನೀವು ಬಹುಶಃ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲಾ ಪದಾರ್ಥಗಳನ್ನು ಹೊಂದಿರಬಹುದು" ಎಂದು ಅವರು ಪೋಸ್ಟ್ ನೊಂದಿಗೆ ಬರೆದಿದ್ದಾರೆ.


5 ನಿಮಿಷದಲ್ಲಿಯೇ ನೆಲ್ಲಿಕಾಯಿ ಚಟ್ನಿ ಮಾಡುವ ವಿಧಾನ ನೋಡಿಕೊಳ್ಳಿರಿ:
ಬಾಣಸಿಗ ಅನಾಹಿತಾ ಧೋಂಡಿ ಅವರ ಪಾಕವಿಧಾನ ಇದಾಗಿದೆ. ಈ ನೆಲ್ಲಿಕಾಯಿ ಚಟ್ನಿ ಪಾಕವಿಧಾನದಲ್ಲಿ, ಖಾದ್ಯದ ಪರಿಮಳವನ್ನು ಹೆಚ್ಚಿಸಲು ನಾವು ತಾಜಾ ಆಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಜೀರಿಗೆ ಪುಡಿಯನ್ನು ಸಹ ಬಳಸುತ್ತೇವೆ ಮತ್ತು ಸಹಜವಾಗಿ, ನಮ್ಮ ರುಚಿಗೆ ಅನುಗುಣವಾಗಿ ಉಪ್ಪು ಮತ್ತು ಸಕ್ಕರೆಯನ್ನು ಸಹ ಬಳಸುತ್ತೇವೆ.


ಮೊದಲು, ನೆಲ್ಲಿಕಾಯಿಯನ್ನು ತೊಳೆದು ಅವುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ. ನಂತರ, ಕೊತ್ತಂಬರಿಯನ್ನು ಹೊರತು ಪಡಿಸಿ ಎಲ್ಲಾ ಸಾಮಾಗ್ರಿಗಳನ್ನು ಗ್ರೈಂಡರ್ ಗೆ ಸೇರಿಸಿ ಅದನ್ನು ನಯವಾದ ಪೇಸ್ಟ್ ಮಾಡಲು ರುಬ್ಬಿಕೊಳ್ಳಿರಿ. ನಂತರದಲ್ಲಿ ಕೊನೆಗೆ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಿರಿ.


ಇದನ್ನೂ ಓದಿ:   Fenugreek Seed Benefits: ಮೆಂತೆಕಾಳು ಕಹಿ ಎಂದು ಮೂಗು ಮುರಿಯ ಬೇಡಿ ಇದರಲ್ಲಿ ಅಡಗಿದೆ ಉತ್ತಮ ಮದ್ದಿನ ಗುಣ


ಇಷ್ಟು ಮಾಡಿದರೆ ನಿಮ್ಮ ರುಚಿಕರವಾದ ನೆಲ್ಲಿಕಾಯಿ ಚಟ್ನಿ ಕೇವಲ ಐದು ನಿಮಿಷಗಳಲ್ಲಿಯೇ ತಯಾರಾಗುತ್ತದೆ. ನೀವು ಇದನ್ನು ತಿಂಡಿಗಳ ಜೊತೆ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಊಟದೊಂದಿಗೂ ಸಹ ಆನಂದಿಸಬಹುದು.

First published: