Health Tips: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸುಲಭ ಉಪಾಯ

Children Health: ವಿಟಮಿನ್ ಎ, ಬಿ 2 ,ಡಿ ಕ್ಯಾಲ್ಸಿಯಂ ಮುತ್ತಾದ ಪೋಷಕಾಂಶಗಳು ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಮೂಳೆ ಬೆಳವಣಿಗೆಗೆ ಮತ್ತು ರಕ್ತದ ಶುಚಿತ್ವ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Immunity Power: ಮಕ್ಕಳ ಪಾಲನೆ ಒಂದು ಸವಾಲಿನ ಪ್ರಕ್ರಿಯೆ. ನಿಮ್ಮ ಮಕ್ಕಳು ಚೆನ್ನಾಗಿ ತಿನ್ನುತ್ತಿದ್ದಾರಾ ಇಲ್ಲವೋ ಎಂಬುದೇ ಇತ್ತೀಚಿನ ಪೋಷಕರು ಎದುರಿಸುತ್ತಿರುವ ದೊಡ್ಡ ತೊಂದರೆಗಳು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಲಸಿಕೆಗಳ ಕೊರತೆಯಿಂದಾಗಿ ಪೋಷಕರನ್ನು ಚಿಂತೆಗೀಡು ಮಾಡಿದೆ. ಇಂಥಹ ಸಮಯದಲ್ಲಿ ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೋಷಕರು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆಹಾರದ ಮೂಲಕ ಮಕ್ಕಳಲ್ಲಿ ಶಕ್ತಿ ಹೆಚ್ಚಿಸುವುದು ಅಷ್ಟು ಸುಲಭವಲ್ಲ. ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಗುವಿಗೆ ಪೌಷ್ಟಿಕ-ಸಮೃದ್ಧವಾದ, ಸಮತೋಲಿತ ಆಹಾರ ನೀಡುವುದು ಅವರ ಆರೋಗ್ಯ ಹೆಚ್ಚಿಸಲು ಮತ್ತು ಅವರ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಹಾಗಾದರೆ ಯಾವ ಕೆಲ ಆಹಾರಗಳು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬ ಪಟ್ಟಿ ಇಲ್ಲಿದೆ.

ಮೊಟ್ಟೆ
ಮೊಟ್ಟೆಯಲ್ಲಿರುವ ಪೋಷಕಾಂಶಗಳು, ಹೃದಯ, ಸ್ನಾಯು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸೆಲೆನಿಯಂನಂತಹ ಖನಿಜಗಳು ಮತ್ತು ಬೆಳವಣಿಗೆ ಮತ್ತು ಬೆಳವಣಿಗೆಗೆ ಅಗತ್ಯವಾದ ವಿಟಮಿನ್ಗಳಾದ ಎ, ಬಿ 2 ,ಡಿ ಕ್ಯಾಲ್ಸಿಯಂ ಮುತ್ತಾದ ಪೋಷಕಾಂಶಗಳು ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಮೂಳೆ ಬೆಳವಣಿಗೆಗೆ ಮತ್ತು ರಕ್ತದ ಶುಚಿತ್ವ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮಕ್ಕಳಿಗೆ ಮೊಟ್ಟೆಗಳನ್ನು ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ಸಮಯದಲ್ಲಿ ಮಾತ್ರ ನೀಡುವುದು ಉತ್ತಮ , ಅದರ ಮಧ್ಯೆ ನೀಡುವುದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಮೊಟ್ಟೆಗಳನ್ನು ಕೇವಲ ಬೇಯಿಸಿ ನೀಡುವ ಬದಲು, ಬೇರೆ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ನೀಡುವುದರಿಂದ ಇನ್ನು ಹೆಚ್ಚಿನ ಪೋಷಕಾಂಶಗಳು ದೇಹವನ್ನು ಸೇರುತ್ತದೆ. ಅಲ್ಲದೆ, ಬೆಣ್ಣೆ ಅಥವಾ ತುಪ್ಪವನ್ನು ಬಳಸಿ  ಮೊಟ್ಟೆಯಿಂದ ಆಹಾರ ಪದಾರ್ಥ ತಯಾರಿಸಿ ನೀಡುವುದು ಇನ್ನು ಉತ್ತಮವಾದ ಆಯ್ಕೆ.

ಇದನ್ನೂ ಓದಿ: ಚೆರ್ರಿ ಹಣ್ಣಿನಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ತರಕಾರಿಗಳು

ತರಕಾರಿಗಳಲ್ಲಿರುವ ಪೋಷಕಾಂಶಗಳ ಕಾರಣದಿಂದ ಮಕ್ಕಳಲ್ಲಿ ಆರೋಗ್ಯದ ಬೆಳವಣಿಗೆ ಚನ್ನಾಗಿ ಆಗುತ್ತದೆ. ಸ್ಥಳೀಯವಾಗಿ ಬೆಳೆದ ಹಸಿರು ಎಲೆಗಳ ತರಕಾರಿಗಳಾದ ಕರಿಬೇವಿನ ಎಲೆಗಳು, ನುಗ್ಗೆ ಕಾಯಿ ಎಲೆಗಳು, ಕೊತ್ತಂಬರಿ ಸೊಪ್ಪು, ಪಾಲಾಕ್ ಇತ್ಯಾದಿ ತರಕಾರಿಗಳಲ್ಲಿ ಕಬ್ಬಿಣ ಮತ್ತು ಸತುವಿನಂತಹ ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಮಕ್ಕಳ ರೋಹ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳಿಂದ ಮತ್ತು ಆರೋಗ್ಯ ತೊಂದರೆಗಳಿಂದ ದೂರವಿರಿಸುತ್ತದೆ.

ನಿಮ್ಮ ಮಗುವಿಗೆ ಆಹಾರ ನೀಡುವಾಗ ವಿವಿಧ ತರಕಾರಿಗಳನ್ನು ಬೇರೆ ಬೇರೆ ಆಕಾರದಲ್ಲಿ ಕತ್ತರಿಸಿ ನೀಡುವುದರಿಂದ ಮಕ್ಕಳು ಆಕರ್ಷಿತರಾಗಿ ಹೆಚ್ಚು ತರಕಾರಿ ಸೇವನೆ ಮಾಡುತ್ತಾರೆ, ಇದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಉಪಾಯ. ಇಲ್ಲದಿದ್ದಲ್ಲಿ ಮಕ್ಕಳಿಗೆ ವಿಭಿನ್ನವಾದ ಸಾಸ್ಗಳೊಂದಿಗೆ ತರಕಾರಿಯನ್ನು ನೀಡಿ.

ಡ್ರೈ ಪ್ರೂಟ್ಸ್

ಬಾದಾಮಿ, ವಾಲ್ನಟ್ಸ್, ಗೋಡಂಬಿ, ಅಂಜೂರದ ಹಣ್ಣುಗಳು, ಒಣದ್ರಾಕ್ಷಿ ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು ಒಮೆಗಾ -3 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮಕ್ಕಳು ಇವುಗಳನ್ನು ಸೇವನೆ ಮಾಡಲು ಹಿಂದೆ ಮುಂದು ನೋಡುತ್ತಾರೆ. ಹಾಗಾಗಿ ಇವುಗಳನ್ನು ಸೂಪ್ ಮತ್ತು ಪಾಯಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ನೀಡಿ. ಅಲ್ಲದೇ ಇವುಗಳನ್ನು ತುಪ್ಪದಲ್ಲಿ ಹುರಿದು ನೀಡಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
Published by:Sandhya M
First published: