Eye Care: ನಿಮ್ಮ ಕಣ್ಣುಗಳಿಗೆ ಕನ್ನಡಕ ಗೆಳೆಯನಾಗಬಾರದು ಎಂದರೆ ಈ ಆಹಾರಗಳನ್ನು ಸೇವಿಸಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕನ್ನಡಕ ಧರಿಸದೇ ನಿಮ್ಮ ಕಣ್ಣಿನ ಸಮಸ್ಯೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಈ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಪ್ರಮುಖ ಆಹಾರ ಪದಾರ್ಥಗಳು ಇಲ್ಲಿವೆ.

  • Share this:

ಮನುಷ್ಯನ ದೇಹದಲ್ಲಿ ಕಣ್ಣು (Eye) ಬಹುಮುಖ್ಯವಾದ ಅಂಗ. ಆರೋಗ್ಯ (Health), ಸುಖ-ಸಂತೋಷ, ನೋವು-ದುಃಖ ಎಲ್ಲವನ್ನು ಖುಷಿಯಿಂದ (Happy) ಅನುಭವಿಸಲು ಕಣ್ಣು ಬೇಕೇ ಬೇಕು. ಕ್ಯಾರೆಟ್ (Carrot) ಮತ್ತು ಇತರ ಹಣ್ಣು (Fruits) ತರಕಾರಿಗಳು (Vegetables) ಕಣ್ಣಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್ ಎ ಇರುವ ಆಹಾರ ಪದಾರ್ಥಗಳು ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಖನಿಜ ಮತ್ತು ಜೀವಸತ್ವಗಳು ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿದೆ. ವಿಟಮಿನ್ ಎ ಕುರುಡುತನದಿಂದ ರಕ್ಷಿಸುತ್ತದೆ, ಮತ್ತು ಗ್ಲುಕೋಮಾವನ್ನು ತಡೆಗಟ್ಟುವಲ್ಲಿ ವಿಟಮಿನ್ ಸಿ ಪಾತ್ರ ವಹಿಸುತ್ತದೆ. ಉತ್ತಮ ದೃಷ್ಟಿಗೆ ಅಗತ್ಯವಾದ ಕೆಲವು ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಕಣ್ಣುಗಳನ್ನು ವಿವಿಧ ಸಮಸ್ಯೆಗಳಿಂದ ರಕ್ಷಿಸುತ್ತವೆ.


ಕಣ್ಣಿನ ಸಮಸ್ಯೆಯನ್ನು ನಿವಾರಿಸಲು ಈಗ ಸ್ಪೆಕ್ಸ್‌ ಅಥವಾ ಕನ್ನಡಕ ಧರಿಸುವುದು ಸಾಮಾನ್ಯವಾಗಿದೆ. ಈ ಕನ್ನಡಕವನ್ನು ಧರಿಸದೇ ಮಕ್ಕಳು ಮತ್ತು ವಯಸ್ಕರರು ಇರಲು ಕೆಲ ಆಹಾರಗಳನ್ನು ಸೇವಿಸುವುದು ತುಂಬಾ ಮುಖ್ಯ. ನಿಮ್ಮ ಕಣ್ಣಿನ ಸಮಸ್ಯೆ, ಮತ್ತು ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಈ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ಕಣ್ಣಿನ ಆರೈಕೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ.


ಮೀನು ಸೇವನೆ: ಮಾಂಸಾಹಾರಿಗಳು ಚಿಕನ್, ಮಟನ್ ಸೇವನೆಗಿಂತ ಮೀನಿನ ಸೇವನೆ ಮಾಡಿದರೆ ಕಣ್ಣಿನ ಸಮಸ್ಯೆ ನಿವಾರಣೆಗೆ ಸಹಕಾರಿ. ಮೀನುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದರಲ್ಲಿ ಒಮೆಗಾ 3 ಸಮೃದ್ಧವಾಗಿದೆ. ಅತ್ಯುತ್ತಮವಾದ ಪೌಷ್ಟಿಕ ಸತ್ವಗಳನ್ನು  ಮೀನುಗಳು ಹೊಂದಿವೆ. ಮೆದುಳಿನ ರಚನೆಗೆ, ಸ್ಮರಣಾಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಕಾರಿಯಾಗಿದೆ.


ಇದನ್ನೂ ಓದಿ: ಕೂತು ಕೆಲಸ ಮಾಡಿ ಬೆನ್ನು,ಕುತ್ತಿಗೆ ನೋವು ಬಂದ್ರೆ ಈ Exerciseಗಳನ್ನು ಮಾಡಿ ನೋಡಿ


ಮೀನುಗಳ ಸೇವನೆ ಹೆಚ್ಚಿನ ಮಟ್ಟದ ಒಮೆಗಾ 3 ಪೌಷ್ಠಿಕತೆಯನ್ನು ನಮಗೆ ನೀಡುತ್ತದೆ. ಅಲ್ಲದೆ, ಇದು ಕಣ್ಣುಗಳು ಆರೋಗ್ಯಕರವಾಗಿರಲು ಹೆಚ್ಚು ಪಾತ್ರ ವಹಿಸುತ್ತದೆ. ಹಾಗಾಗಿ ಮೀನುಗಳನ್ನು ಆಗಾಗ್ಗೆ ಸೇವನೆ ಮಾಡಿ.


ಒಣ ಹಣ್ಣುಗಳು


ಒಣ ಹಣ್ಣುಗಳನ್ನು ಎಲ್ಲರೂ ಸೇವಿಸಲು ಇಷ್ಟ ಪಡುತ್ತಾರೆ. ಒಣ ಹಣ್ಣುಗಳ ಬೆಲೆ ತುಂಬಾ ದುಬಾರಿ. ಆದರೆ ಅಷ್ಟೇ ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಅಂಶಗಳನ್ನು ಹೊಂದಿವೆ. ಒಣ ಹಣ್ಣುಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಉತ್ತಮವಾದ ಆರೋಗ್ಯಕ್ಕೆ, ಸೌಂದರ್ಯಕ್ಕೆ ಕಾರಣವಾಗುತ್ತದೆ. ಪ್ರತಿನಿತ್ಯ ಒಣ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.


ಒಣ ಹಣ್ಣುಗಳಲ್ಲಿ ಕೂಡ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ವಿಟಮಿನ್‌ ಇ ಪ್ರಮಾಣವನ್ನು ಹೆಚ್ಚು ಹೊಂದಿದೆ. ಇದು ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯ ಮತ್ತು ಕಣ್ಣುಗಳ ಹಾನಿಯಿಂದ ರಕ್ಷಣೆ ಮಾಡುತ್ತದೆ.


​ಸಿಟ್ರಸ್‌ ಹಣ್ಣುಗಳು


ನಿಮ್ಮ ಕಣ್ಣುಗಳು ಆರೋಗ್ಯಕರವಾಗಿರಲು ಸಿಟ್ರಸ್‌ ಹಣ್ಣುಗಳು ಸಹಾಯ ಮಾಡುತ್ತದೆ. ಸಿಟ್ರಸ್‌ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ವಿಟಮಿನ್‌ ಸಿ ಹೊಂದಿರುವ ಆಹಾರ ಪದಾರ್ಥಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಇಂತಹ ಆಹಾರಗಳು ನಿಮ್ಮ ಕಣ್ಣಗಳನ್ನು ಅನಾರೋಗ್ಯ ಮತ್ತು ಸಮಸ್ಯೆಯಿಂದ ರಕ್ಷಣೆ ಮಾಡಲು ಸಹಕಾರಿ ಆಗಿವೆ. ಆದ್ದರಿಂದ ನೀವು ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಒಳಿತು. ನಿಂಬೆ ಹಣ್ಣು, ಕಿತ್ತಳೆ ಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಯಥೇಚ್ಚವಾಗಿ ಸೇವನೆ ಮಾಡುವುದು ನಿಮಗೆ ಕಣ್ಣಿನ ಹಾನಿಯಿಂದ ರಕ್ಷಣೆ ನೀಡುತ್ತದೆ.


ಇದನ್ನೂ ಓದಿ: ರಾತ್ರಿಯ ಸಮಯದಲ್ಲಿ ನೀರು ಕುಡಿಯುವ ಮುನ್ನ ಈ ವಿಷಯ ನಿಮ್ಮ ಅರಿವಿಗೆ ಇರಲಿ


​ಮೊಟ್ಟೆಗಳು


ಮೊಟ್ಟೆ ಸೇವನೆ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸಲು ಸಹಾಯಕವಾಗಿವೆ. ಮೊಟ್ಟೆಯಲ್ಲಿರುವ ಲುಟೀನ್‌ ಮತ್ತು ಜಿಯಾಕ್ಸಾಂಥಿನ್‌ನ ಅಂಶವು ದೃಷ್ಟಿ ದೋಷದ ಅಪಾಯವನ್ನು ಕಡಿಮೆ ಮಾಡುತ್ತದೆ. ಮೊಟ್ಟೆಗಳಲ್ಲಿ ವಿಟಮಿನ್‌ ಸಿ ಮತ್ತು ಇ ಸಮೃದ್ಧವಾಗಿದೆ. ಹಾಗಾಗಿ ನಿಮ್ಮ ಉತ್ತಮ ದೃಷ್ಟಿಗೆ ಮೊಟ್ಟೆಗಳನ್ನು ಪ್ರತಿನಿತ್ಯ ಸೇವನೆ ಮಾಡಿ.

top videos


    ಸಿಹಿ ಮೆಣಸು (ಕೆಂಪು ಅಥವಾ ಹಸಿರು), ಕೇಲ್, ಸ್ಟ್ರಾಬೆರಿ, ಕೋಸುಗಡ್ಡೆ, ಕಿತ್ತಳೆ, ಕ್ಯಾಂಟಾಲೌಪ್, ಕಿವಿಸ್ ಮತ್ತು ಹಣ್ಣುಗಳು. ಅಣಬೆಗಳು, ಮಿಸ್ಸೊ, ಸಾಲ್ಮನ್, ಸಾರ್ಡೀನ್ ಗಳು, ಮ್ಯಾಕೆರೆಲ್, ಸಾವಯವ ಎ 2 ಹಾಲುಗಳ ಸೇವನೆ ಮಾಡಿ.

    First published: