Health Tips: ಮಧುಮೇಹ ಕಂಟ್ರೋಲ್ ಮಾಡಲು ನೀವು ಸೇವಿಸುವ ಆಹಾರವೇ ಔಷಧಿಯಂತೆ! ಹೀಗಿರಲಿ ನಿಮ್ಮ ಊಟ

ಕಾರ್ಬೋಹೈಡ್ರೇಟ್ ಬಳಕೆಯನ್ನು ದಿನದಲ್ಲಿ ಶೇಕಡಾ 50-55 ರಷ್ಟು ಕಡಿಮೆ ಮಾಡಲು ಮತ್ತು ಪ್ರೋಟೀನ್ ಸೇವನೆಯನ್ನು ಶೇಕಡಾ 20ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಈ ಅಧ್ಯಯನವು ಮಧುಮೇಹವನ್ನು ತಗ್ಗಿಸಲು ಮುಖ್ಯವಾಗಿ ಆಹಾರ ಪದ್ಧತಿಯನ್ನು ಸೂಚಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರಕ್ತದಲ್ಲಿ ಸಕ್ಕರೆ ಹೆಚ್ಚಾಗಿ ಮಧುಮೇಹ (Diabetes) ರೂಪದಲ್ಲಿ ಹಲವರನ್ನು ಕಾಡುವ ಸಕ್ಕರೆ ಕಾಯಿಲೆ ಸಮಸ್ಯೆ ದೇಶದಲ್ಲಿ ನಾಯಿ ಕೊಡೆಯಂತೆ ಬೆಳೆಯುತ್ತಿದೆ. ವಯಸ್ಸಿನ ಯಾವುದೇ ಮಿತಿಯಿಲ್ಲದೇ ಕಾಣಿಸಿಕೊಳ್ಳುತ್ತಿರುವ ಮಧುಮೇಹ ಇತ್ತೀಚೆಗೆ ಸರ್ವೇ ಸಾಮಾನ್ಯವಾಗುತ್ತಿದೆ. ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಜೀವನ ಪರ್ಯಂತ ಔಷಧಿ (medicine) ತೆಗೆದುಕೊಳ್ಳಬೇಕು ಎಂದು ಹಲವಾರು ಮಂದಿ ತಿಳಿದುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ ಸರಿಯಾದ ಆಹಾರ ಕ್ರಮದಿಂದಲೂ ನಮ್ಮಲ್ಲಿ ಉಂಟಾಗಿರುವ ಸಕ್ಕರೆ ಕಾಯಿಲೆಯನ್ನು ಹಿಮ್ಮೆಟ್ಟಿಸಬಹುದು. ಹೌದು, ಪ್ರೋಟೀನ್ (Protein) ಸೇವನೆಯನ್ನು ಹೆಚ್ಚಿಸಿ, ಕಾರ್ಬೋ ಹೈಡ್ರೇಟ್‌ (Carbohydrate) ಸೇವನೆಯನ್ನು ಕಡಿಮೆ ಮಾಡುವ ಮೂಲಕ ಸಹ ಟೈಪ್ -2 ಮಧುಮೇಹವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.

ಸಕ್ಕರೆ ಕಾಯಿಲೆ ಕುರಿತು ನಡೆಯುತ್ತಿರುವ ಅಧ್ಯಯನಗಳು ಕಾರ್ಬೋಹೈಡ್ರೇಟ್ ಸೇವನೆಯನ್ನು ಶೇಕಡಾ 50-55 ರಷ್ಟು ಕಡಿಮೆ ಮಾಡಲು ಮತ್ತು ಪ್ರೋಟೀನ್ ಸೇವನೆಯನ್ನು ಶೇಕಡಾ 20 ಕ್ಕೆ ಹೆಚ್ಚಿಸಲು ಇದು ಶಿಫಾರಸು ಮಾಡುತ್ತಿವೆ.

ಪ್ರೋಟೀನ್ ಸೇವನೆ ಎಷ್ಟು ಮುಖ್ಯ
ರೋಗದ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಇಂಡಿಯಾ ಡಯಾಬಿಟಿಸ್ (ICMR-INDIAB) ನಡೆಸುತ್ತಿರುವ ಅಧ್ಯಯನದ ಪ್ರಕಾರ. ಕಾರ್ಬೋಹೈಡ್ರೇಟ್ ಬಳಕೆಯನ್ನು ದಿನದಲ್ಲಿ ಶೇಕಡಾ 50-55 ರಷ್ಟು ಕಡಿಮೆ ಮಾಡಲು ಮತ್ತು ಪ್ರೋಟೀನ್ ಸೇವನೆಯನ್ನು ಶೇಕಡಾ 20ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಈ ಅಧ್ಯಯನವು ಮಧುಮೇಹವನ್ನು ತಗ್ಗಿಸಲು ಮುಖ್ಯವಾಗಿ ಆಹಾರ ಪದ್ಧತಿಯನ್ನು ಸೂಚಿಸಿದೆ. ಈ ಅಧ್ಯಯನವನ್ನು ಇತ್ತೀಚೆಗೆ ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಆಹಾರ ಪದ್ಧತಿಯೇ ಮಧುಮೇಹಕ್ಕೆ ಅತ್ಯುತ್ತಮ ಔಷಧ
“ಪ್ರಸ್ತುತ ಭಾರತದಲ್ಲಿ 74 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದು, ಇನ್ನೂ 80 ಮಿಲಿಯನ್ ಜನರು ಮಧುಮೇಹ ಪೂರ್ವದಲ್ಲಿದ್ದಾರೆ. ಅಲ್ಲದೆ, ಪ್ರೀ-ಡಯಾಬಿಟಿಕ್ಸ್ ಮಧುಮೇಹಕ್ಕೆ ವೇಗವಾಗಿ ಪರಿವರ್ತನೆಯಾಗುತ್ತಿದೆ. 2045ರ ವೇಳೆಗೆ ಭಾರತವು 135 ಮಿಲಿಯನ್ ಮಧುಮೇಹಿಗಳನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಮುಂದಿನ 20 ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಅಂಶ" ಎಂದಿದ್ದಾರೆ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಡಾ.ವಿ ಮೋಹನ್.

ಇದನ್ನೂ ಓದಿ: Weight Loss Tips: ಚಾಕೊಲೇಟ್​ ತಿಂದ್ರೆ ತೂಕ ಕಡಿಮೆ ಆಗುತ್ತಂತೆ, ಆಶ್ಚರ್ಯವಾದ್ರೂ ಸತ್ಯ 

“ನಮ್ಮ ಒಟ್ಟು ಕ್ಯಾಲೋರಿ ಸೇವನೆಯ ಸುಮಾರು 60 ರಿಂದ 75 ಪ್ರತಿಶತವು ಕಾರ್ಬೋಹೈಡ್ರೇಟ್‌ಗಳ ರೂಪದಲ್ಲಿದೆ ಮತ್ತು ಕೇವಲ 10 ಪ್ರತಿಶತವು ಪ್ರೋಟೀನ್‌ಗಳನ್ನು ಒಳಗೊಂಡಿದೆ. ಅನ್ನದ ಅತಿಯಾದ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಾವು ಈ ಹಿಂದೆ ಹಲವಾರು ಅಧ್ಯಯನಗಳಲ್ಲಿ ತೋರಿಸಿದ್ದೇವೆ. ಗೋಧಿ ಕೂಡ ಅಷ್ಟೇ ಕೆಟ್ಟದು. ಈಗ, ಒಬ್ಬ ವ್ಯಕ್ತಿಯು ಕಾರ್ಬೋಹೈಡ್ರೇಟ್ ಸೇವನೆಯನ್ನು 50 ರಿಂದ 55 ಪ್ರತಿಶತಕ್ಕೆ ಕಡಿಮೆ ಮಾಡುವಂತೆ ಹೇಳಿದ್ದಾರೆ. ಕಾರ್ಬೋಹೈಡ್ರೇಟ್ ಕಡಿಮೆ ಮಾಡುವುದರ ಜೊತೆಜೊತೆಗೆ ಪ್ರೋಟೀನ್‌ ಹೆಚ್ಚಿಸಲು ಸಲಹೆ ನೀಡಿದ್ದಾರೆ. ಸಸ್ಯ ಪ್ರೋಟೀನ್; ಮೀನು ಮತ್ತು ಕೋಳಿ ಸೇವಿಸಬಹುದು, ಇದು ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.

ಮಧುಮೇಹ ಉಪಶಮನಕ್ಕೆ ಆಹಾರ ಅನುಪಾತ
ಮಧುಮೇಹ ನಿಯಂತ್ರಣ ಮಾಡಲು ಕಾರ್ಬೋಹೈಡ್ರೇಟ್‌ಗಳು ಶಕ್ತಿಯ ಬಳಕೆಯಲ್ಲಿ 49 ರಿಂದ 54 ಪ್ರತಿಶತ ಕಡಿಮೆ ಮಾಡುವುದು, ಪ್ರೋಟೀನ್‌ಗಳು 19 ರಿಂದ 20 ಪ್ರತಿಶತ ಹೆಚ್ಚಿಸುವುದು, ಕೊಬ್ಬು 21 ರಿಂದ 26 ಪ್ರತಿಶತ ಮತ್ತು ಫೈಬರ್‌ 5 ರಿಂದ 6 ಪ್ರತಿಶತ ಇರಬೇಕು ಎನ್ನಲಾಗಿದೆ. ಮಹಿಳೆಯರು ಈ ಅನುಪಾತದಲ್ಲಿ ತಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಪುರುಷರಿಗಿಂತ ಸುಮಾರು ಎರಡು ಪ್ರತಿಶತದಷ್ಟು ಕಡಿಮೆ ಮಾಡಬೇಕಾಗುತ್ತದೆ. ಅದೇ ರೀತಿ, ವಯಸ್ಸಾದವರು ತಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಶೇಕಡಾ ಒಂದರಷ್ಟು ಹೆಚ್ಚು ಕಡಿತಗೊಳಿಸಬೇಕು ಮತ್ತು ಯುವಕರಿಗಿಂತ ಅವರ ಪ್ರೋಟೀನ್ ಸೇವನೆಯನ್ನು ಶೇಕಡಾ ಒಂದರಷಷ್ಟು ಹೆಚ್ಚಿಸಬೇಕು.

ಇದನ್ನೂ ಓದಿ:  Fatty Liver: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಬಗ್ಗೆ ಎಚ್ಚೆತ್ತುಕೊಳ್ಳಿ, ಇಲ್ಲಾ ಅಂದ್ರೆ ಅಪಾಯ ತಪ್ಪಿದ್ದಲ್ಲ

ಇನ್ನೂ ಪೂರ್ವ-ಮಧುಮೇಹದ ಉಪಶಮನಕ್ಕಾಗಿ, 50 ರಿಂದ 56 ಪ್ರತಿಶತ ಕಾರ್ಬೋಹೈಡ್ರೇಟ್‌ಗಳು, 18 ರಿಂದ 20 ಪ್ರತಿಶತ ಪ್ರೋಟೀನ್, 21 ರಿಂದ 27 ಪ್ರತಿಶತ ಕೊಬ್ಬನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಆಹಾರದ ತಟ್ಟೆ ಹೇಗಿರಬೇಕು?
ಮಧುಮೇಹ ನಿಯಂತ್ರಣದಲ್ಲಿ ಆಹಾರ ಸಾಕಷ್ಟು ಪ್ರಮುಖ ಪಾತ್ರ ವಹಿಸುವುದರಿಂದ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಿಮ್ಮ ಪ್ರತಿನಿತ್ಯದ ಆಹಾರ ಪ್ಲೇಟ್‌ ನಲ್ಲಿ ಯಾವುದೇ ಹಸಿರು ಎಲೆಗಳ ತರಕಾರಿಗಳು, ಬೀನ್ಸ್, ಎಲೆಕೋಸು, ಹೂಕೋಸು, ಹಸಿರು ಸೊಪ್ಪು ಇಂತಹುಗಳನ್ನು ಸೇರಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಹಾಗೆಯೇ ಪ್ರೋಟೀನ್‌ ಗಾಗಿ ತಟ್ಟೆಯ ಕಾಲು ಭಾಗ ಮೀನು, ಚಿಕನ್ ಅಥವಾ ಸೋಯಾವನ್ನು ಸೇರಿಸುವುದು ಸೂಕ್ತ. ಇನ್ನೂ ಇದರ ಜೊತೆಗೆ ಸಣ್ಣ ಪ್ರಮಾಣದ ಅನ್ನ ಅಥವಾ ಗರಿಷ್ಠ ಎರಡು ಚಪಾತಿಗಳನ್ನು ಸೇವಿಸಬಹುದು.
Published by:Ashwini Prabhu
First published: