ಕೆಲವು ಅಭ್ಯಾಸಗಳು (Habits) ಕೆಟ್ಟದ್ದು (Bad) ಎಂದು ಗೊತ್ತಿದ್ದರೂ ಕೂಡ ಜನರಿಗೆ (People) ಆ ರೂಢಿಯಿಂದ ಹೊರ ಬರಲು ತುಂಬಾ ಕಷ್ಟವಾಗುತ್ತದೆ. ನಾವು ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ಚಟಗಳಿಗೆ ದಾಸರಾಗಿರುತ್ತೇವೆ. ಧೂಮಪಾನ, ತಂಬಾಕು, ಎಲೆ-ಅಡಿಕೆ, ಚಿಂಗಮ್ ಅಗಿಯುವುದು ಹೀಗೆ ಹಲವು ಚಟಗಳಿವೆ. ಅದರಲ್ಲಿ ಒಂದು ಉಗುರು ಕಚ್ಚುವ (Nail Biting) ಚಟ. ನಮ್ಮ ಸುತ್ತಮುತ್ತಲಿನ ಜನರು ಉಗುರು ಕಚ್ಚುತ್ತಾ ಇರುವುದನ್ನು ನೀವು ಆಗಾಗ್ಗೆ ನೋಡಿರಬಹುದು. ಸಾಮಾನ್ಯವಾಗಿ ನಾವು ಅಸಮಾಧಾನಗೊಂಡಾಗ, ಹೆಚ್ಚು ಸ್ಟ್ರೆಸ್ ಗೆ ಒಳಗಾದಾಗ ಹಾಗೂ ಇಂತಹ ಟೆನ್ಶನ್ ನಿಂದ ಹೊರ ಬರಲು ಮತ್ತು ಮಾನಸಿಕ ರಕ್ಷಣೆಗಾಗಿ ಉಗುರು ಕಚ್ಚಲು ಆರಂಭಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಉಗುರು ಕಚ್ಚುವ ಚಟ
ಹೀಗಾಗಿ ಇದು ಕಾಲ ಕ್ರಮೇಣ ಕೆಲವರಲ್ಲಿ ಸಾಮಾನ್ಯ ಚಟ ಅಥವಾ ಅಭ್ಯಾಸವಾಗಿ ಮಾರ್ಪಡುತ್ತದೆ. ಉಗುರು ಕಚ್ಚುವವರಲ್ಲಿ ನೀವೂ ಒಬ್ಬರಾಗಿದ್ದರೆ ಎಚ್ಚರಿಕೆ ವಹಿಸಿ. ಉಗುರು ಕಚ್ಚುವ ಚಟವನ್ನು ತುಂಬಾ ಸಾಮಾನ್ಯ ಎಂದು ಪರಿಗಣಿಸುತ್ತಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಅಭ್ಯಾಸದಿಂದ ಅನೇಕ ಅಡ್ಡ ಪರಿಣಾಮಗಳು ವ್ಯಕ್ತಿಯನ್ನು ಬಾಧಿಸುತ್ತವೆ ಎಂದು ವೈದ್ಯರು ಗಂಭೀರವಾಗಿ ಎಚ್ಚರಿಕೆ ನೀಡುತ್ತಾರೆ.
ಉಗುರು ಕಚ್ಚುವ ಅಭ್ಯಾಸವು ದೇಹದಲ್ಲಿ ಹಲವು ಸಮಸ್ಯೆ ಉಂಟು ಮಾಡುತ್ತದೆ. ವೈದ್ಯರ ಪ್ರಕಾರ, ಉಗುರು ಕಚ್ಚುವುದು ಒಂದು ಕೆಟ್ಟ ಅಭ್ಯಾಸ. ಅದು ಸಾಮಾನ್ಯವಾಗಿ ಒತ್ತಡ ಅಥವಾ ಜೀವನದಲ್ಲಿ ಬೇಸರದ ಪ್ರತಿಕ್ರಿಯೆ ಅಥವಾ ಕೆಲವೊಮ್ಮೆ ಪ್ಯಾನಿಕ್ ಆದಾಗ ಉಗುರು ಕಡಿಯಲು ಪ್ರೇರೇಪಿಸುತ್ತದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?
ಸುಮಾರು 30% ವಯಸ್ಕರರು ಕಾಲಾನಂತರದಲ್ಲಿ ತಮ್ಮ ಉಗುರು ಕಚ್ಚುವ ಅಭ್ಯಾಸ ಹೆಚ್ಚು ಹೊಂದಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಉಗುರು ಕಚ್ಚುವುದು ಹಲ್ಲು ಮತ್ತು
ಬಾಯಿಯ ಆರೋಗ್ಯದ ಮೇಲೆ ಅನೇಕ ಅಡ್ಡ ಪರಿಣಾಮಗಳ ಅಪಾಯಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಇದರ ಬಗ್ಗೆ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹಾಗಾದರೆ ನಾವು ಉಗುರು ಕಚ್ಚುವುದರಿಂದ ಆಗುವ ಅನನುಕೂಲಗಳ ಬಗ್ಗೆ ತಿಳಿಯೋಣ.
ತಜ್ಞರು ಏನು ಹೇಳುತ್ತಾರೆ?
ಮೌಖಿಕ ಆರೋಗ್ಯ ತಜ್ಞರ ಪ್ರಕಾರ, ಉಗುರು ನಮ್ಮ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಅಲ್ಲಿ ಬಹಳಷ್ಟು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಇರುತ್ತವೆ. ಯಾರಾದರೂ ತಮ್ಮ ಬೆರಳನ್ನು ಬಾಯಿಯಲ್ಲಿ ಇಟ್ಟಾಗ ಅಥವಾ ಬೆರಳಿನ ಉಗುರುಗಳನ್ನು ಅಗಿದಾಗ ಈ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುವ ಅಪಾಯವು ಹೆಚ್ಚು.
ಇದು ಹೊಟ್ಟೆ, ಬಾಯಿ, ಮತ್ತು ಕೆಲವು ಸಂದರ್ಭಗಳಲ್ಲಿ, ಗಂಭೀರ ಕಾಯಿಲೆಗಳಿಗೆ ಅನೇಕ ರೀತಿಯ ಸೋಂಕು ಉಂಟು ಮಾಡುತ್ತದೆ. ಉಗುರು ಕಚ್ಚುವಿಕೆ ಯಾರು ರೂಢಿಸಿಕೊಂಡಿರುತ್ತಾರೋ ಅವರು ಹೊಟ್ಟೆಯ ಸೋಂಕಿಗೆ ತುಂಬಾ ಸಾಮಾನ್ಯ ಹಾಗೂ ಬೇಗ ತುತ್ತಾಗುತ್ತಾರೆ. ವಿಶೇಷವಾಗಿ ಮಕ್ಕಳಲ್ಲಿ ಇದು ಕಂಡು ಬರುತ್ತದೆ.
ಬಾಯಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ
ಉಗುರು ಕಚ್ಚುವಿಕೆ ಹಲ್ಲು ಮತ್ತು ಒಸಡುಗಳ ಮೇಲೆ ಹಲವು ವಿಧಗಳಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಬಾಯಿ, ಹಲ್ಲು ಮತ್ತು ಉಗುರುಗಳಲ್ಲಿ ಅಡಗಿರುವ ಬ್ಯಾಕ್ಟೀರಿಯಾ ಒಸಡಿಗೆ ಸೇರಿ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಹಲ್ಲುಜ್ಜುವುದು ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.
ಈ ಅಭ್ಯಾಸವು ಹಲ್ಲುಗಳಿಗೆ ತುಂಬಾ ಹಾನಿಕಾರಕ ಎಂದು ಪರಿಗಣಿಸಲಾಗಿದೆ. ಉಗುರು ಕಚ್ಚುವ ಅಭ್ಯಾಸವು ಕೆಟ್ಟ ಮೌಖಿಕ ನೈರ್ಮಲ್ಯ ಉಂಟು ಮಾಡುತ್ತದೆ. ಮತ್ತು ಇದು ಒಸಡು ಸೋಂಕಿಗೆ ಕಾರಣವಾಗುತ್ತದೆ.
ಈ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ
ಉಗುರು ಕಚ್ಚುವ ಅಭ್ಯಾಸವು ಕೆಲ ಸಮಸ್ಯೆ ಉಂಟು ಮಾಡುತ್ತದೆ. ಅದರ ಬಗ್ಗೆ ಎಲ್ಲಾ ಜನರು ಜಾಗ್ರತೆ ವಹಿಸುವುದು ತುಂಬಾ ಮುಖ್ಯ.
- ನಿಮ್ಮ ಉಗುರುಗಳ ಸುತ್ತಲಿನ ಚರ್ಮವು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
- ನಿಮ್ಮ ಉಗುರು ಬೆಳೆಯುವ ಅಂಗಾಂಶಕ್ಕೆ ಹಾನಿಯಾಗುತ್ತದೆ.
- ಉಗುರುಗಳ ವಿನ್ಯಾಸದಲ್ಲಿ ಬದಲಾವಣೆ ಆಗಬಹುದು.
- ಕೊಳಕು ಬೆರಳುಗಳಿಂದಾಗಿ ಶೀತ ಮತ್ತು ಇತರ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ.
- ಉಗುರು ಕಚ್ಚುವುದು ಹಲ್ಲುಗಳಿಗೆ ಹಾನಿ ಮಾಡುತ್ತದೆ
ಇದನ್ನೂ ಓದಿ: ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇರಿಸಿ ಹೀಗೆ ತೂಕ ಇಳಿಸಿಕೊಳ್ಳಿ
ಉಗುರು ಕಚ್ಚುವ ಚಟದಿಂದ ತೊಂದರೆ ಆಗಿದ್ದರೆ ವೈದ್ಯರನ್ನು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಕೂಡಲೇ ಸಂಪರ್ಕಿಸಿ ಪರಿಹಾರ ಪಡೆಯಿರಿ. ಅತಿಯಾದ ಪ್ರಚೋದನೆ, ಹೆದರಿಕೆ ಅಥವಾ ಆತಂಕದ ಸಮಯದಲ್ಲಿ ಉಗುರು ಕಚ್ಚುವಿಕೆ ನಿಯಂತ್ರಿಸಿ, ಮತ್ತು ತಪ್ಪಿಸಿ. ಉಗುರು ಕಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ