ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ (High Blood Pressure Problem) ತುಂಬಾ ಸಾಮಾನ್ಯಗಿದ್ದು, ಬಹುತೇಕ ಜನರನ್ನು (People) ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯ ವೈದ್ಯಕೀಯ ಸ್ಥಿತಿಯು ಸಾಮಾನ್ಯವಾಗಿ ಕಾಲಾನಂತರದಲ್ಲಿ ಬೆಳವಣಿಗೆ ಆಗುತ್ತದೆ. ಮುಖ್ಯವಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಅನಾರೋಗ್ಯಕರ ಜೀವನಶೈಲಿ, ದೀರ್ಘಕಾಲ ಕುಳಿತುಕೊಳ್ಳುವ ದಿನಚರಿ ಹಾಗೂ ಇತರೆ ಕಾರಣಗಳಿಂದ ಉಂಟಾಗುತ್ತವೆ. ಜೊತೆಗೆ ಇದು ಮಧುಮೇಹ ಮತ್ತು ಸ್ಥೂಲಕಾಯ ಕಾಯಿಲೆಗಳು, ಅಧಿಕ ರಕ್ತದೊತ್ತಡ ಅಪಾಯ ಹೆಚ್ಚಿಸಬಹುದು. ಅಧಿಕ ರಕ್ತದೊತ್ತಡಕ್ಕೆ ಕಂಡು ಹಿಡಿಯಲು ಯಾವುದೇ ನಿರ್ದಿಷ್ಟ ಲಕ್ಷಣಗಳು ಇಲ್ಲ. ಹಾಗಾಗಿ ಇದನ್ನು ಮೂಕ ಕೊಲೆಗಾರ ಎಂದು ಕರೆಯುತ್ತಾರೆ. ಬಿಪಿ ಹೆಚ್ಚಾದರೆ ಯಾವ ತೊಂದರೆಗಳು ಉಂಟಾಗುತ್ತವೆ?
ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು
ಹೆಚ್ಚಿನ ಸಂಗತಿಗಳಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ತಮ್ಮ ಕಾಯಿಲೆಯ ಬಗ್ಗೆ ದೀರ್ಘಕಾಲದವರೆಗೆ ಗೊತ್ತಾಗಲ್ಲ. ಹಾಗಾಗಿ ಈ ವೈದ್ಯಕೀಯ ಸ್ಥಿತಿಯು ದೀರ್ಘಕಾಲದವರೆಗೆ ಚಿಕಿತ್ಸೆ ಪಡೆಯದೆ ಉಳಿಯುತ್ತದೆ. ಇದು ರೋಗಿಯಲ್ಲಿ ಹೃದಯಾಘಾತ, ಬಾಹ್ಯ ನಾಳೀಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ಗರ್ಭಾವಸ್ಥೆಯಲ್ಲಿ ತೊಡಕು, ಕಣ್ಣುಗಳ ನಷ್ಟ, ಬುದ್ಧಿಮಾಂದ್ಯತೆ ಸಮಸ್ಯೆ ಉಂಟು ಮಾಡುತ್ತದೆ.
ಇತ್ತೀಚಿನ ಅಧ್ಯಯನವು ಅಧಿಕ ರಕ್ತದೊತ್ತಡವು ನಿಮ್ಮ ಮೂಳೆಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದಲ್ಲಿನ ರಕ್ತದೊತ್ತಡವು ಮೂಳೆಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.
ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!
ಅಧ್ಯಯನದಲ್ಲಿ ಏನು ಹೇಳಲಾಗಿದೆ?
2022 ರ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸಭೆಯಲ್ಲಿ ಅಧಿಕ ರಕ್ತದೊತ್ತಡದ ಕುರಿತು ಸಂಶೋಧನೆಯನ್ನು ಪ್ರಸ್ತುತಪಡಿಸಲಾಯಿತು. ಅದರ ಪ್ರಕಾರ ಅಧಿಕ ರಕ್ತದೊತ್ತಡವು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ವಯಸ್ಸಾದ ಪ್ರಕ್ರಿಯೆ ವೇಗಗೊಳಿಸಲು ಕೆಲಸ ಮಾಡುತ್ತದೆ. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ.
ಅಧಿಕ ರಕ್ತದ ರೋಗಿಗಳಿಗೆ ಮೂಳೆಗಳ ಪರೀಕ್ಷೆ
ಅಧಿಕ ರಕ್ತದೊತ್ತಡ ಹೊಂದಿರುವ ಜನರು ಆಸ್ಟಿಯೊಪೊರೋಸಿಸ್ಗಾಗಿ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಅಧಿಕ ರಕ್ತದೊತ್ತಡವು ಭಾಗಶಃ ಉರಿಯೂತದ ಕಾಯಿಲೆ ಆಗಿದೆ ಎಂದು ಸಂಶೋಧನಾ ಫಲಿತಾಂಶಗಳು ತೋರಿಸಿವೆ. ಇದು ದೇಹದಲ್ಲಿ ಉರಿಯೂತ ಸಮಸ್ಯೆ ಹೆಚ್ಚಿಸುತ್ತದೆ.
ರಕ್ತದೊತ್ತಡ ಎಷ್ಟು ಇರಬೇಕು?
ಇದು ನಿಮ್ಮ ರಕ್ತದೊತ್ತಡ 140/90 ಆಗಿದ್ದರೆ ಅದನ್ನು ಸಾಮಾನ್ಯ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. 160/100 ರಿಂದ 180/100 ಮಧ್ಯಮ ಅಧಿಕ ರಕ್ತದೊತ್ತಡ, 190/100 ರಿಂದ 180/110 ತೀವ್ರ ಅಧಿಕ ರಕ್ತದೊತ್ತಡ, 200/120 ರಿಂದ 210/120 (ಅತಿ ತೀವ್ರ) ಅಧಿಕ ರಕ್ತದೊತ್ತಡ ಎಂದು ಹೇಳಲಾಗುತ್ತದೆ.
ಆಸ್ಟಿಯೊಪೊರೋಸಿಸ್ ಎಂದರೇನು?
ಆಸ್ಟಿಯೊಪೊರೋಸಿಸ್ ಮೂಳೆಯ ಕಾಯಿಲೆ ಆಗಿದೆ. ಮೂಳೆ ಖನಿಜ ಸಾಂದ್ರತೆ ಮತ್ತು ಮೂಳೆ ದ್ರವ್ಯರಾಶಿ ಕಡಿಮೆಯಾದಾಗ ಬೆಳವಣಿಗೆ ಆಗುತ್ತದೆ. ಇದು ಮೂಳೆಯ ಬಲವನ್ನು ಕಡಿಮೆ ಮಾಡುತ್ತದೆ. ಹಾಗೂ ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತದೆ.
ಋತುಬಂಧಕ್ಕೊಳಗಾದ ಮಹಿಳೆಯರು ಮತ್ತು ವಯಸ್ಸಾದ ಪುರುಷರಲ್ಲಿ ಮುರಿತಗಳಿಗೆ ಆಸ್ಟಿಯೊಪೊರೋಸಿಸ್ ಪ್ರಮುಖ ಕಾರಣ ಆಗಿದೆ. ಈ ಮುರಿತಗಳು ಹೆಚ್ಚಾಗಿ ಸೊಂಟ, ಕಶೇರುಖಂಡ, ಬೆನ್ನುಮೂಳೆ ಅಥವಾ ಮಣಿಕಟ್ಟಿನಲ್ಲಿ ಸಂಭವಿಸುತ್ತವೆ. ಆಸ್ಟಿಯೊಪೊರೋಸಿಸ್ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದರೆ ವಯಸ್ಸಾದಂತೆ ನಿಮ್ಮ ಅಪಾಯವು ಹೆಚ್ಚಾಗುತ್ತದೆ.
ಆಸ್ಟಿಯೊಪೊರೋಸಿಸ್ ಅಪಾಯ ಹೇಗೆ ಕಡಿಮೆ ಮಾಡುವುದು?
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಅನೇಕ ಜನರಿಗೆ ಆಸ್ಟಿಯೊಪೊರೋಸಿಸ್ ಇದೆ. ಅಪಾಯ ಕಡಿಮೆ ಮಾಡಲು ಕೆಲವು ಕ್ರಮ ತೆಗೆದುಕೊಳ್ಳಬಹುದು.
ದೈಹಿಕವಾಗಿ ಸಕ್ರಿಯವಾಗಿರುವುದು, ನಿಯಮಿತ ವ್ಯಾಯಾಮ, ಮದ್ಯಪಾನ ಮಾಡದಿರುವುದು, ಧೂಮಪಾನ ತ್ಯಜಿಸುವುದು, ಭಾರ ಎತ್ತುವಿಕೆ ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸುವುದು.
ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಹೆಚ್ಚುತ್ತಿರುವ ತೂಕಕ್ಕೆ ಮದ್ದು ಅರೆಯಬಹುದು!
ಒಂದು ದಿನದಲ್ಲಿ 6 ಗ್ರಾಂಗಿಂತ ಕಡಿಮೆ ಉಪ್ಪನ್ನು ಸೇವಿಸಿ. ಸಾಕಷ್ಟು ಫೈಬರ್ ಕಡಿಮೆ-ಕೊಬ್ಬಿನ ಆಹಾರ ಸೇರಿಸಿ. ಧಾನ್ಯದ ಅಕ್ಕಿ, ಬ್ರೆಡ್ ಮತ್ತು ಪಾಸ್ಟಾ, ಮತ್ತು ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹಣ್ಣುಗಳ ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ