Tomato Chutney: 2 ತಿಂಗಳು ಹಾಳಾಗದಂತೆ ಸಂಗ್ರಹಿಸಿಡಬಹುದು ಈ ಟೊಮ್ಯಾಟೋ ಚಟ್ನಿ, ಮಾಡೋದು ಬಹಳ ಸುಲಭ

ಟೊಮೇಟೊ ಚಟ್ನಿ

ಟೊಮೇಟೊ ಚಟ್ನಿ

ಟೊಮೇಟೊ ಚಟ್ನಿ ತಯಾರಿಸಲು ಹೆಚ್ಚಿನ ಸಮಯ ಬೇಕಾಗಿಲ್ಲ. ಅಂತೆಯೇ ಈ ಚಟ್ನಿಯನ್ನು ದೋಸೆ, ಚಪಾತಿ, ಇಡ್ಲಿ ಅನ್ನದೊಂದಿಗೆ ಕೂಡ ಸೇವಿಸಬಹುದಾಗಿದೆ. ಫುಡ್ ವ್ಲಾಗರ್ ಪಾರುಲ್ ಸುಲಭವಾಗಿ ಶೀಘ್ರವೇ ತಯಾರಿಸಬಹುದಾದ ಚಟ್ನಿಯ ಮಾಹಿತಿಯನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದು ಕುಕ್ ವಿದ್ ಪಾರುಲ್ ಎಂಬುದು ಅವರ ವ್ಲಾಗ್ ಹೆಸರಾಗಿದೆ.

ಮುಂದೆ ಓದಿ ...
  • Share this:

ಚಟ್ನಿ (Chutney) ಹಾಗೂ ಉಪ್ಪಿನಕಾಯಿಗೆ (Pickle) ಭಾರತೀಯ ತಿಂಡಿತಿನಿಸುಗಳಲ್ಲಿ ಪ್ರತ್ಯೇಕ ಸ್ಥಾನವಿದೆ. ಯಾವುದೇ ಸಮಾರಂಭದಲ್ಲಿ (Function) ಈ ಚಟ್ನಿ ಹಾಗೂ ಉಪ್ಪಿನಕಾಯಿಯ ಸಮಾರಾಧನೆ ಇದ್ದೇ ಇರುತ್ತದೆ. ಯಾವುದೇ ಬಗೆಯ ಚಟ್ನಿಯಾಗಿರಲು ಅದು ತಿನಿಸಿನ ಸ್ವಾದವನ್ನು (Taste) ಇಮ್ಮಡಿಗೊಳಿಸುವುದು ಖಂಡಿತ. ಟೊಮೇಟೊ ಚಟ್ನಿ (Tomato Chutney), ಮಾವಿನ ಕಾಯಿ ಚಟ್ನಿ, ಈರುಳ್ಳಿ ಚಟ್ನಿ, ಕೊತ್ತಂಬರಿ ಸೊಪ್ಪು, ಪುದೀನಾ, ಮೆಂತ್ಯೆ ಚಟ್ನಿ ಹೀಗೆ ವೈವಿಧ್ಯಮಯವಾದ ಚಟ್ನಿಗಳ ವಿಧಗಳನ್ನು (varieties) ನಾವು ಆಸ್ವಾದಿಸಬಹುದಾಗಿದೆ. ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿರುವ ಪಾಕ ವೈವಿಧ್ಯ ಸರಳವಾಗಿ ತಯಾರಿಸಬಹುದಾದ ಟೊಮೇಟೊ ಚಟ್ನಿಯ ಕುರಿತಾಗಿದೆ.


ಈ ಚಟ್ನಿ ತಯಾರಿಸಲು ಹೆಚ್ಚಿನ ಸಮಯ ಬೇಕಾಗಿಲ್ಲ. ಅಂತೆಯೇ ಈ ಚಟ್ನಿಯನ್ನು ದೋಸೆ, ಚಪಾತಿ, ಇಡ್ಲಿ ಅನ್ನದೊಂದಿಗೆ ಕೂಡ ಸೇವಿಸಬಹುದಾಗಿದೆ. ಫುಡ್ ವ್ಲಾಗರ್ ಪಾರುಲ್ ಸುಲಭವಾಗಿ ಶೀಘ್ರವೇ ತಯಾರಿಸಬಹುದಾದ ಚಟ್ನಿಯ ಮಾಹಿತಿಯನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದು ಕುಕ್ ವಿದ್ ಪಾರುಲ್ ಎಂಬುದು ಅವರ ವ್ಲಾಗ್ ಹೆಸರಾಗಿದೆ.


ಚಟ್ನಿ ತಯಾರಿಸಲು ನಿಮಗೆ ಬೇಕಾಗಿರುವ ಸಾಮಾಗ್ರಿಗಳೆಂದರೆ


  • ಟೊಮೇಟೊ

  • ಎಣ್ಣೆ

  • ಜೀರಿಗೆ

  • ಸಾಸಿವೆ

  • ಇಂಗು

  • ಈರುಳ್ಳಿ

  • ಹಸಿಮೆಣಸು

  • ಶುಂಠಿ

  • ಬೆಳ್ಳುಳ್ಳಿ

  • ಕೊತ್ತಂಬರಿ ಹುಡಿ

  • ಅರಶಿನ

  • ಕಾಶ್ಮೀರಿ, ಮೆಣಸಿನ ಹುಡಿ

  • ಉಪ್ಪು

  • ಬೆಲ್ಲ

  • ಬಿಳಿ ವಿನೇಗರ್


ಇದನ್ನೂ ಓದಿ:  Breakfast Recipe: ಚಪಾತಿ ಉಳಿದಿದೆ ಅಂತ ಬಿಸಾಡಬೇಡಿ, ಈ ವೆರೈಟಿ ತಿಂಡಿ ಮಾಡಿ ಸವಿಯಿರಿ!


ಚಟ್ನಿ ತಯಾರಿಸುವ ವಿಧಾನ


  • ಮೊದಲಿಗೆ ಟೊಮೇಟೊ ಹಣ್ಣನ್ನು ಚೆನ್ನಾಗಿ ತೊಳೆದುಕೊಳ್ಳಿ. ನೀರು ಬಿಸಿ ಮಾಡಿಕೊಂಡು ಅದರಲ್ಲಿ ಕೆಲವು ನಿಮಿಷ ಟೊಮೇಟೊ ಬೇಯಲಿ. ಟೊಮೇಟೊ ಬೆಂದ ನಂತರ ಸಿಪ್ಪೆ ಸುಲಿಯಿರಿ.

  • ಸಿಪ್ಪೆ ಸುಲಿದ ಟೊಮೇಟೊಗಳನ್ನು ತುಂಡರಿಸಿಕೊಳ್ಳಿ ಈಗ ಒಂದು ಕಡಾಯಿ ತೆಗೆದುಕೊಂಡು ಎಣ್ಣೆ ಬಿಸಿಯಾದ ನಂತರ ಜೀರಿಗೆ, ಸಾಸಿವೆ, ಇಂಗು ಹಾಗೂ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದೇ ಕಡಾಯಿಗೆ ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಹುರಿದುಕೊಳ್ಳಿ.

  • ಪ್ರತ್ಯೇಕ ಪಾತ್ರೆ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಹುಡಿ, ಅರಶಿನ ಹುಡಿ ಹಾಗೂ ಕಾಶ್ಮೀರಿ ಮೆಣಸಿನ ಹುಡಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.


ಇದನ್ನೂ ಓದಿ:  Egg Curry: 5 ನಿಮಿಷದಲ್ಲಿ ಮೊಟ್ಟೆ ಕರಿ ಮಾಡಿ! ಇಲ್ಲಿದೆ ಸುಲಭ ವಿಧಾನ

  • ಕಡಾಯಿಗೆ ಈ ಪೇಸ್ಟ್ ಸೇರಿಸಿಕೊಳ್ಳಿ. ಕಡಾಯಿಯಲ್ಲಿರುವ ಖಾದ್ಯದಿಂದ ಎಣ್ಣೆ ಒಸರಲು ಆರಂಭವಾಗುತ್ತಿದ್ದಂತೆ ಬೇಯಿಸಿ ಕತ್ತರಿಸಿದ ಟೊಮೇಟೊವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಇನ್ನು ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬೇಯಲು ಬಿಡಿ.

  • ಇದಕ್ಕೆ ಹುಡಿಮಾಡಿದ ಬೆಲ್ಲ ಸೇರಿಸಿ. ಇದು ಹುಳಿ ಸಿಹಿ ಮಿಶ್ರಿತ ರುಚಿಯನ್ನು ನೀಡುತ್ತದೆ. ಇದೇ ಸಮಯದಲ್ಲಿ ಎಣ್ಣೆಯನ್ನು ಕೂಡ ಸೇರಿಸಬಹುದು. ತದನಂತರ ಮುಚ್ಚಳ ಮುಚ್ಚಿ ಕೆಲವು ನಿಮಿಷ ಬೇಯಲು ಬಿಡಿ. ಕೊನೆಗೆ ಬಿಳಿ ವಿನೇಗರ್ ಸೇರಿಸಿ. ಟೊಮೇಟೊ ಚಟ್ನಿ ಸವಿಯಲು ಸಿದ್ಧ.


ಟೊಮೇಟೊ ಚಟ್ನಿಯನ್ನು ಕೆಡದಂತೆ ಹೇಗೆ ಸಂಗ್ರಹಿಸಬಹುದು – ಪಾರುಲ್ ಸಲಹೆ ಇಲ್ಲಿದೆ ನೋಡಿ

  • ಚಟ್ನಿ ತಯಾರಿಸಲು ನೀವು ಟೊಮೇಟೊಗಳನ್ನು ಹಾಗೆಯೇ ಬಳಸಬಹುದು. ಚಟ್ನಿ ತಯಾರಿಗೂ ಮುನ್ನ ಟೊಮೇಟೊವನ್ನು ಕುದಿಸುವಿಕೆಯ ಹಂತವು ಖಾದ್ಯವನ್ನು ಹಾಳಾಗದಂತೆ ತಡೆಯುತ್ತದೆ ಹಾಗೂ ರುಚಿಯನ್ನು ಹೆಚ್ಚಿಸುತ್ತದೆ.

  • ಖಾದ್ಯ ತಯಾರಿಸುವಾಗ ಸಾಕಷ್ಟು ಎಣ್ಣೆ ಬಳಕೆಮಾಡಿ. ಇದರಿಂದ ಖಾದ್ಯ ಕೆಡುವುದಿಲ್ಲ. ಹೀಗಾಗಿಯೇ ಉಪ್ಪಿನಕಾಯಿ ತಯಾರಿಸುವಾಗ ಕೂಡ ಜನರು ಸಾಕಷ್ಟು ಎಣ್ಣೆಯ ಬಳಕೆ ಮಾಡುತ್ತಾರೆ ಇದರಿಂದ ಉಪ್ಪಿನಕಾಯಿ ಕೆಡದೆ ದೀರ್ಘಕಾಲ ಬಾಳಿಕೆ ಬರುತ್ತದೆ.


ಇದನ್ನೂ ಓದಿ: Breakfast Recipe: ಮಕ್ಕಳು ತಿಂಡಿ ತಿನ್ನೋಕೆ ಹಠ ಮಾಡ್ತಿದ್ರೆ ಸೂಪರ್ ಟೇಸ್ಟೀ ಬೀಟ್​ರೂಟ್​ ಚಪಾತಿ ಮಾಡಿ ಕೊಡಿ

  • ಒದ್ದೆ ಚಮಚ ಅಥವಾ ಸೌಟನ್ನು ಚಟ್ನಿ ತಯಾರಿಸುವಾಗ ಬಳಸದಿರಿ. ಪ್ರತಿಯೊಂದು ಚೆನ್ನಾಗಿ ಒಣಗಿರಲಿ ಹಾಗೂ ಸ್ವಚ್ಛವಾಗಿರಲಿ.

  • ಚಟ್ನಿಯ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸದಿರಿ.

  • ಚಟ್ನಿಯನ್ನು ಗಾಳಿಯಾಡದೇ ಇರುವ ಡಬ್ಬದಲ್ಲಿ ಸಂಗ್ರಹಿಸಿ.

First published: