![]()
ತಿಳಿ ಸಾರು-ಅನ್ನ, ಮೊಸರನ್ನ, ಚಿತ್ರಾನ್ನ ಹೀಗೆ ಅನೇಕ ಅಡುಗೆಗಳಿಗೆ ನೆಂಚಿಕೊಳ್ಳಲು ಅಥವಾ ಸೈಡ್ಸ್ ಆಗಿ ಉಪ್ಪಿನಕಾಯಿ ತಿನ್ನುವುದನ್ನು ನಾವು ನೋಡಿರುತ್ತೇವೆ. ಊಟದ ಜೊತೆಗೆ ಉಪ್ಪಿನಕಾಯಿ ತಿನ್ನುವುದರಲ್ಲಿ ಸಿಗುವ ಖುಷಿಯೇ ಬೇರೆ. ನಿಂಬೆ, ಮಾವು, ನಲ್ಲಿಕಾಯಿ ಹೀಗೆ ನಾನಾ ವಿಧ,ವಿಧವಾದ ಉಪ್ಪಿನಕಾಯಿಯ ರುಚಿಯನ್ನು ಎಲ್ಲರೂ ಸವಿದಿರುತ್ತೀರಾ. ಆದರೆ ಚಿಕನ್ನಲ್ಲೂ ಉಪ್ಪಿನಕಾಯಿ ಮಾಡಬಹುದು ಎಂಬುವುದನ್ನು ಎಂದಾದರೂ ಕೇಳಿದ್ದೀರಾ?
![]()
ಹೌದು, ನಾನ್ವೆಜ್ ಪ್ರಿಯರು ಇನ್ಮುಂದೆ ಚಿಕನ್ನಲ್ಲಿ ಕೂಡ ಉಪ್ಪಿನಕಾಯಿ ಮಾಡಿಕೊಂಡು ಊಟದ ಜೊತೆಗೆ ಸವಿಯಬಹುದು. ಅಂದಹಾಗೇ ಅದು ಹೇಗೆ ಅಂತೀರಾ? ನಿಮಗಾಗಿ ಈ ಚಿಕನ್ ಉಪ್ಪಿನಕಾಯಿ ರೆಸಿಪಿ.
![]()
ಚಿಕನ್ ಉಪ್ಪಿನಕಾಯಿ ಮಸಾಲಾ ಪೌಡರ್ ರುಬ್ಬಿಕೊಳ್ಳಲು ಬೇಕಾಗಿರುವ ಸಾಮಾಗ್ರಿಗಳು: ಚಕ್ಕೆ- 2 ತುಂಡುಗಳು, ಏಲಕ್ಕಿ – 5, ಲವಂಗ – ಸ್ಪಲ್ಪ, ಧನಿಯಾ - 4 ಟೀಸ್ಪೂನ್, ಜೀರಿಗೆ - 2 ಟೀಸ್ಪೂನ್, ಸಾಸಿವೆ - 1 ಟೀಸ್ಪೂನ್, ಮೆಂತ್ಯ - 1 ಟೀಸ್ಪೂನ್.
![]()
ಚಿಕನ್ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು: ಬೋನ್ ಲೆಸ್ ಚಿಕನ್ - 1/2 ಕೆ.ಜಿ., ಅರಿಶಿನ ಪುಡಿ - 1/4 ಚಮಚ, ಉಪ್ಪು - 1 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 4 ಟೇಬಲ್ ಸ್ಪೂನ್, ತುಪ್ಪ - 1 ಕಪ್, ಮೆಣಸಿನ ಪುಡಿ - 1/2 ಕಪ್, ಉಪ್ಪು - 2 ಸ್ಪೂನ್ಗಳು. ನಿಂಬೆ ರಸ - 1 ಚಮಚ, ರುಬ್ಬಿದ ಮಸಾಲಾ ಪುಡಿ.
![]()
ಚಿಕನ್ ಉಪ್ಪಿನಕಾಯಿ ಮಾಡುವವಿಧಾನ: ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಚಕ್ಕೆ, ಏಲಕ್ಕಿ, ಲವಂಗ, ಧನಿಯಾ, ಜೀರಿಗೆ, ಸಾಸಿವೆ, ಮೆಂತ್ಯ ಹಾಕಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
![]()
ಅವುಗಳನ್ನು ಚೆನ್ನಾಗಿ ತಣ್ಣಗಾಗಿಸಿ ಮತ್ತು ಅವುಗಳನ್ನು ಪುಡಿಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ಈಗ ಉಪ್ಪಿನಕಾಯಿ ಚಿಕನ್ಗೆ ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಪಕ್ಕಕ್ಕೆ ಇಡಿ.
![]()
ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ, ಚಿಕನ್ ಮಿಶ್ರಣವನ್ನು ಸೇರಿಸಿ ಮತ್ತು ನೀರು ಬಿಡುವವರಿಗೆ ಚೆನ್ನಾಗಿ ಬೇಯಿಸಿ. ಚಿಕನ್‌ನಲ್ಲಿ ನೀರು ಕುದಿಯುತ್ತಿರುವಾಗ ತುಪ್ಪವನ್ನು ಹಾಕಿ ಗೋಲ್ಡನ್ ಕಲರ್ ಬರುವವರೆಗೆ ಹುರಿಯಿರಿ.
[caption id="attachment_1127495" align="alignnone" width="1600"]
ಚಿಕನ್ ಗೋಲ್ಡನ್ ಬ್ರೌನ್ ಬಂದಾಗ, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇದಾದ ನಂತರ, ರುಬ್ಬಿದ ಮಸಾಲಾ ಪುಡಿ ಸೇರಿಸಿ ಮತ್ತು ಮಿಶ್ರಣ ಮಾಡಿ. ಸ್ಟವ್ ಅನ್ನು ಕಡಿಮೆ ಉರಿಯಲ್ಲಿ ಇರಿಸಿ ಮತ್ತು 3 ನಿಮಿಷ ಬೇಯಿಸಿ.
[/caption]
![]()
ಮಸಾಲಾ ಗ್ರೀನ್ ಆಗಿ ವಾಸನೆ ಬಂದಾಗ, ಸ್ಟವ್ ಆಫ್ ಮಾಡಿ ಮತ್ತು ನಿಂಬೆ ರಸವನ್ನು ಬೆರೆಸಿ. ಈಗ ಚಿಕನ್ ಉಪ್ಪಿನಕಾಯಿ ಸವಿಯಲು ಸಿದ್ಧವಾಗಿದೆ.