Sunday Special Non-Veg: ಇಂದು ನಿಮ್ಮ ಮನೆಯಲ್ಲಿ ಮಾಡಿ ಬಾಯಲ್ಲಿ ನೀರೂರಿಸುವ ಬಂಗಾಳಿ ಶೈಲಿಯ ರೇಜಲ್ ಚಿಕನ್

ಬಂಗಾಳಿ ಶೈಲಿಯ ರೇಜಲ್  ಚಿಕನ್

ಬಂಗಾಳಿ ಶೈಲಿಯ ರೇಜಲ್ ಚಿಕನ್

ಇಂದು ಭಾನುವಾರ (Sunday) ಸಖತ್ ಸ್ಪೈಸಿಯಾಗಿ (Spicy), ಟೇಸ್ಟಿಯಾಗಿ (Testy) ಏನಾದ್ರೂ ತಿನ್ನಬೇಕಲ್ಲ ಅಂತ ನೀವು ಯೋಚಿಸ್ತಾ ಇದ್ದೀರಾ? ಅದೇ ಚಿಕನ್ (Chicken), ಮಟನ್ (Mutton), ಮೀನಿಂದ (Fish) ಒಂದೇ ರೀತಿ ಅಡುಗೆ ಮಾಡಿ ಮಾಡಿ ಸಾಕಾಗಿದ್ಯಾ? ಹಾಗಿದ್ರೆ ನಾವು ಇವತ್ತು ನಿಮಗೆ ಹೇಳಿ ಕೊಡ್ತೀವಿ ಬಂಗಾಳಿ ಶೈಲಿಯ ಚಿಕನ್‌ ಅಡುಗೆ. ಅದುವೇ ರೇಜಲ್ ಚಿಕನ್.

ಮುಂದೆ ಓದಿ ...
  • Share this:

ಬಂಗಾಲಿಗಳು (Bengali) ಸಿಹಿ ತಿಂಡಿ (Sweets) ಮಾಡುವುದರಲ್ಲಿ ಸಿದ್ಧ ಹಸ್ತರು. ಜೊತೆಗೆ ನಾನ್ ವೆಜ್‌ (Non Veg) ಅಡುಗೆಗಳನ್ನೂ ಅಷ್ಟೇ ಚೆನ್ನಾಗಿ ಮಾಡುತ್ತಾರೆ. ಈ ಭಾನುವಾರ (Sunday) ಸಖತ್ ಸ್ಪೈಸಿಯಾಗಿ (Spicy), ಟೇಸ್ಟಿಯಾಗಿ (Testy) ಏನಾದ್ರೂ ತಿನ್ನಬೇಕಲ್ಲ ಅಂತ ನೀವು ಯೋಚಿಸ್ತಾ ಇದ್ದೀರಾ? ಅದೇ ಚಿಕನ್ (Chicken), ಮಟನ್ (Mutton), ಮೀನಿಂದ (Fish) ಒಂದೇ ರೀತಿ ಅಡುಗೆ ಮಾಡಿ ಮಾಡಿ ಸಾಕಾಗಿದ್ಯಾ? ಹಾಗಿದ್ರೆ ನಾವು ಇವತ್ತು ನಿಮಗೆ ಹೇಳಿ ಕೊಡ್ತೀವಿ ಬಂಗಾಳಿ ಶೈಲಿಯ ಚಿಕನ್‌ ಅಡುಗೆ. ಅದುವೇ ರೇಜಲ್ ಚಿಕನ್. ಹಾಗಿದ್ರೆ ರೇಜಲ್ ಚಿಕನ್ (Rezala Chicken) ಮಾಡುವುದು ಹೇಗೆ? ಅದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕಾಗುತ್ತದೆ ಇತ್ಯಾದಿಗಳ ಬಗ್ಗೆ ಮಾಹಿತಿ ಇಲ್ಲಿದೆ ಓದಿ, ಈ ವಾರದಿಂದ ನಿಮ್ಮ ಭಾನುವಾರದ ಬಾಡೂಟದ ಪಟ್ಟಿಗೆ ರೇಜಲ್ ಚಿಕನ್ ಸಹ ಸೇರಿಕೊಳ್ಳಲಿ…


ರೇಜಲ್ ಚಿಕನ್‌ಗೆ ಬೇಕಾಗುವ ಸಾಮಗ್ರಿಗಳು


ಚಿಕನ್ – 1 ಕೆಜಿ (ಸಾಮಾನ್ಯ ಅಡುಗೆಗೆ)
ಮೊಸರು – 1 ಕಪ್
ಬೆಳ್ಳುಳ್ಳಿ- ಶುಂಠಿ ಪೇಸ್ಟ್- 3 ಟೀ ಸ್ಪೂನ್
ಗ್ರೀನ್ ಚಿಲ್ಲಿ ಪೇಸ್ಟ್ – 2 ಟೀ ಸ್ಪೂನ್


ಪೆಪ್ಪರ್ ಪೌಡರ್- 1/2 ಟೀ ಸ್ಪೂನ್
ತುಪ್ಪ- 2 ಟೀ ಸ್ಪೂನ್
ಗಸಗಸೆ- 2 ಟೀ ಸ್ಪೂನ್
ಗೋಡಂಬಿ- 10 ರಿಂದ 12
ಎಣ್ಣೆ- 5 ರಿಂದ 6 ಟೀ ಸ್ಪೂನ್
ಏಲಕ್ಕಿ – 5
ಲವಂಗ – 2
ಕಾಳು ಮೆಣಸು – 5
ಒಣ ಮೆಣಸಿನಕಾಯಿ – 5
ಎರಡು ಈರುಳ್ಳಿ ಪೇಸ್ಟ್
ಕೇವರಾ ವಾಟರ್ – 1 ಟೀ ಸ್ಪೂನ್ (ಬೇಕಿದ್ದಲ್ಲಿ ಮಾತ್ರ ಬಳಸಬಹುದು)


ಉಪ್ಪು – ರುಚಿಗೆ ತಕ್ಕಷ್ಟು


ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಮಾಡಿ ಹೆಲ್ದಿ ಎಗ್ ಪಲಾವ್


 ರೇಜಲ್ ಚಿಕನ್‌ ಮಾಡುವ ವಿಧಾನ


* ಮೊದಲಿಗೆ ಮಿಕ್ಸಿಂಗ್ ಬೌಲ್ ನಲ್ಲಿ ಚೆನ್ನಾಗಿ ತೊಳೆದುಕೊಂಡಿರುವ ದೊಡ್ಡ ದೊಡ್ಡ ಪೀಸ್ ಗಳ ಚಿಕನ್ ಹಾಕಿಕೊಳ್ಳಿ
* ಚಿಕನ್ ಹಾಕಿರೋ ಮಿಕ್ಸಿಂಗ್ ಬೌಲ್ ಗೆ ಮೊಸರು, ಬೆಳ್ಳುಳ್ಳಿ-ಪೇಸ್ಟ್, ಗ್ರೀನ್ ಚಿಲ್ಲಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.


* ತಟ್ಟೆ ಮುಚ್ಚಿ ಎರಡು ಗಂಟೆ ಎತ್ತಿಡಿ.


* ಮಿಶ್ರಣವೆಲ್ಲ ಚಿಕನ್ ಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.


* ಮಿಕ್ಸಿ ಜಾರಿಗೆ ಎರಡು ಟೇಬಲ್ ಸ್ಪೂನ್ ಗಸಗಸೆ ಮತ್ತು 10 ರಿಂದ 12 ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.


* ರುಬ್ಬುವಾಗ ಮೂರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿದ್ರೆ ಪೇಸ್ಟ್ ಚೆನ್ನಾಗಿ ಆಗುತ್ತದೆ.
* ಈಗ ಸ್ಟೌವ್ ಮೇಲೆ ಪ್ಯಾನ್ ಇರಿಸಿ 5 ರಿಂದ 6 ಟೀ ಸ್ಪೂನ್ ಎಣ್ಣೆ ಹಾಕಿ. (ಎಣ್ಣೆ ಬದಲಾಗಿ ತುಪ್ಪ ಬಳಸಬಹುದು)
* ಎಣ್ಣೆ ಬಿಸಿ ಆಗುತ್ತಿದ್ದಂತೆ ಏಲಕ್ಕಿ, ಲವಂಗ, ಒಣ ಮೆಣಸಿನಕಾಯಿ ಮತ್ತು ಕಾಳು ಮೆಣಸು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.


* ಇದೇ ಪ್ಯಾನ್ ಗೆ ಈರುಳ್ಳಿ ಪೇಸ್ಟ್ ಮಿಕ್ಸ್ ಮಾಡಿ, ಹಸಿ ವಾಸನೆ ಹೋಗುವರೆಗೂ 8 ರಿಂದ 10 ನಿಮಿಷ ಫ್ರೈ ಮಾಡಿಕೊಳ್ಳಬೇಕು.


* ಮಸಾಲೆ ಘಮ ಘಮ ಎಂದು ಬರುತ್ತಿದ್ದಂತೆ ಮಿಶ್ರಣದಲ್ಲಿರುವ ಚಿಕನ್ ಪೀಸ್ ಗಳನ್ನು ಒಂದೊಂದಾಗಿ ಹಾಕಿ ಪ್ಲಿಪ್ ಮಾಡುತ್ತಿರಬೇಕು.
* ಚಿಕನ್ ಹಾಕಿದ ನಂತರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ ನಂತರ ಈ ಮೊದಲು ರುಬ್ಬಿಟ್ಟಿಕೊಂಡಿರುವ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹಾಕಿ ಕಲಕಿ.
* ನಂತರ 1 ಕಪ್ ನಷ್ಟು ನೀರು ಹಾಕಿ 10 ರಿಂದ 12 ನಿಮಿಷ ಕುದಿಸಿ, ಬಳಿಕ ನಿಮಗೆ ಬೇಕಿದ್ದರೆ ಕೇವರಾ ವಾಟರ್ ಬೆರೆಸಿ.


ಇದನ್ನೂ ಓದಿ: Sunday Special Recipe: ಸಖತ್​ ಸಂಡೇಗೆ ಹಳ್ಳಿ ಸ್ಟೈಲ್​ ಚಿಕನ್​ ಚಾಪ್ಸ್​​ ರೆಸಿಪಿ: ಆಹಾ.. ಸ್ವರ್ಗಕ್ಕೆ ಮೂರೇ ಗೇಣು!

top videos


    ಈಗ ನಿಮ್ಮ ಮನೆಯಲ್ಲಿ ಸಿದ್ದವಾಗಿದೆ ಬಂಗಾಳಿ ಶೈಲಿಯ ರೇಜಲ್ ಚಿಕನ್ ಗ್ರೇವಿ. ಈ ಭಾನುವಾರ ನಿಮ್ಮ ಮನೆಯವರೊಂದಿಗೆ ಕುಳಿತುಕೊಂಡು ಸ್ಪೈಸಿ ಹಾಗೂ ಟೇಸ್ಟಿಯಾಗಿರುವ, ಹೊಸ ಶೈಲಿಯ ಅಡುಗೆ ಸವಿಯಿರಿ.

    First published: