ಹೃದಯಾಘಾತ (Heart Attack) ಹಾಗೂ ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು (Human) ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿದೆ. ಏಕಾಏಕಿ ಮನುಷ್ಯನಿಗೆ ಬಂದೆರಗುವ ಹಾರ್ಟ್ ಅಟ್ಯಾಕ್ ವ್ಯಕ್ತಿಯ ಜೀವಕ್ಕೆ (Life) ಕಂಟಕವಾಗಿ ಪರಿಣಮಿಸಿದೆ. ಅದಾಗ್ಯೂ ಹೃದಯ ಸ್ನಾಯುವಿನ ಒಂದು ಭಾಗವು (Part) ಸಾಕಷ್ಟು ರಕ್ತ ಪಡೆಯಲು ಸಾಧ್ಯವಾಗದೇ ಇದ್ದಾಗ ಹೃದಯಾಘಾತ ಸಂಭವಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಹೃದಯಾಘಾತ ಮುಚ್ಚಿ ಹೋಗಿರುವ ಅಪಧಮನಿಗಳ ಕಾರಣದಿಂದ ಉಂಟಾಗುತ್ತದೆ. ಅಪಧಮನಿಗಳಲ್ಲಿನ ಅಡಚಣೆ ಸಾಮಾನ್ಯವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಶೇಖರಣೆಯಿಂದ ಉಂಟಾಗುತ್ತದೆ. ಇದು ಅಪಧಮನಿಗಳಿಗೆ ನಿರ್ಬಂಧ ಒಡ್ಡುತ್ತದೆ. ಇದು ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಹೃದಯ ಕಾಯಿಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೃದಯಾಘಾತ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ
ಹೃದಯಾಘಾತ ಆದ ತಕ್ಷಣ ಮೊದಲು ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಇದು ವ್ಯಕ್ತಿಯ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇಲ್ಲದಿದ್ದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹೃದಯಾಘಾತಕ್ಕೆ ಸಂಸ್ಕರಿಸಿದ ಹಾಗೂ ಜಂಕ್ ಫುಡ್ ಸೇವನೆ, ಕೆಟ್ಟ ಜೀವನಶೈಲಿ, ವ್ಯಾಯಾಮ ಮಾಡದಿರುವುದು, ಬೊಜ್ಜು ಸೇರಿದಂತೆ ಹಲವು ಕಾರಣಗಳಿಂದ ಉಂಟಾಗುತ್ತದೆ.
ಹೀಗಾಗಿ ಕೊಲೆಸ್ಟ್ರಾಲ್ ಮತ್ತು ಇತರ ಕೊಳಕು ವಸ್ತುಗಳು ದೇಹದಲ್ಲಿ ಸಂಗ್ರಹ ಆಗುತ್ತವೆ. ಇದು ನರಗಳಿಗೆ ನಿರ್ಬಂಧ ಒಡ್ಡುತ್ತದೆ. ಮತ್ತು ಇದರಿಂದಾಗಿ ಹೃದಯವು ಆಮ್ಲಜನಕ ಪಡೆಯಲು ಸಾಧ್ಯವಾಗುವುದಿಲ್ಲ. ಮುಂದೆ ಇದು ಹೃದಯಾಘಾತಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: ಬಾದಾಮಿ ತಿಂದು ಸಿಪ್ಪೆ ಎಸೆಯೋ ಮುನ್ನ ಅದರ ಪ್ರಯೋಜನ ತಿಳಿಯಿರಿ!
ಹೃದಯಾಘಾತದ ಲಕ್ಷಣಗಳು ಹೀಗಿವೆ
ಎದೆ ನೋವು,
ದುರ್ಬಲ ಭಾವನೆ,
ದವಡೆ ಮತ್ತು ಕುತ್ತಿಗೆಯಲ್ಲಿ ನೋವು
ಉಸಿರಾಟದ ತೊಂದರೆ ಇತ್ಯಾದಿ.
ಆದಾಗ್ಯೂ ಹೃದಯಾಘಾತದ ಕೆಲವು ಲಕ್ಷಣಗಳು ನಿಮ್ಮ ಮುಖದಲ್ಲಿ ಕಂಡು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ರೋಗ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಂಡರೆ ಹೃದಯಾಘಾತದ ಅಪಾಯವನ್ನು ಕಂಡುಕೊಳ್ಳಬಹುದು. ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬಹುದು.
ನೆತ್ತಿಯ ಮೇಲೆ ಕೂದಲು ಉದುರುವುದು
ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿರುತ್ತದೆ. ಬೋಳು ತಲೆ ಹೃದ್ರೋಗದ ಅಪಾಯಕಾರಿ ಸೂಚನೆ ಆಗಿದೆ. ಸಂಶೋಧಕರ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಪುರುಷರಿಗೆ ಹೋಲಿಸಿದರೆ ಅಧಿಕ ಕೊಲೆಸ್ಟ್ರಾಲ್
ಮತ್ತು ತಲೆ ಬೋಳು ಹೊಂದಿರುವ ಪುರುಷರು ಹೃದಯ ಕಾಯಿಲೆ ಅಪಾಯ ಸುಮಾರು ಮೂರು ಪಟ್ಟು ಹೆಚ್ಚು ಹೊಂದಿರುತ್ತಾರೆ. ಕೂದಲು ಉದುರುವಿಕೆ ಮತ್ತು ಹೃದ್ರೋಗದ ನಡುವಿನ ಜೈವಿಕ ಸಂಪರ್ಕವು ಪುರುಷ ಹಾರ್ಮೋನುಗಳ ಎತ್ತರದ ಮಟ್ಟವನ್ನು ಒಳಗೊಂಡಿದೆ.
ಕಣ್ಣು ರೆಪ್ಪೆಗಳ ಸುತ್ತಲೂ ಕೊಲೆಸ್ಟ್ರಾಲ್ ನಿಕ್ಷೇಪಗಳು
ಕೊಲೆಸ್ಟ್ರಾಲ್ ಕಣ್ಣು ರೆಪ್ಪೆಗಳ ಸುತ್ತಲೂ ಹಳದಿ ಬಣ್ಣ ಉಂಟು ಮಾಡಬಹುದು. ಇದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯುತ್ತಾರೆ. ಇದು ರಕ್ತದ ಅಸಹಜ ಲಿಪಿಡ್ ಮಟ್ಟಕ್ಕೆ ಸಂಬಂಧಪಟ್ಟಿದೆ. ಇದನ್ನು ಡಿಸ್ಲಿಪಿಡೆಮಿಯಾ ಎಂದು ಕರೆಯುತ್ತಾರೆ.
ಡಿಸ್ಲಿಪಿಡೆಮಿಯಾ ಅಪಧಮನಿಗಳ ಗೋಡೆಗಳ ಮೇಲೆ ಕೊಲೆಸ್ಟರಾಲ್ ನಿರ್ಮಾಣ ಅಪಾಯ ಹೆಚ್ಚಿಸುತ್ತದೆ. ಈ ರಚನೆ ಹೃದಯ, ಮೆದುಳು ಮತ್ತು ದೇಹದ ಇತರ ಪ್ರದೇಶಗಳಿಗೆ ರಕ್ತದ ಹರಿವು ನಿರ್ಬಂಧಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಬಾಹ್ಯ ಅಪಧಮನಿ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ.
ಇದನ್ನೂ ಓದಿ: ನೀವು ಬಳಸುವ ಟೂತ್ ಪೇಸ್ಟ್ ನಿಮ್ಮ ಹಲ್ಲುಗಳಿಗೆ ಎಷ್ಟು ಉತ್ತಮ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಕಿವಿಯ ಮಡಿಕೆಗಳು
340 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಕಿವಿಯ ಮಡಿಕೆಗಳು ವಯಸ್ಸಾದ ಮತ್ತು ಪರಿಧಮನಿಯ ಕಾಯಿಲೆಗೆ (ಸಿಎಡಿ) ಸಂಬಂಧಿಸಿದ ಸಂಕೇತ ಆಗಿದೆ. ರೋಗ ಲಕ್ಷಣ ಇರುವವರಲ್ಲಿ ಕಿವಿಯ ಮಡಿಕೆಗಳು ಕಾಣಿಸುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಇಯರ್ಲೋಬ್ ಕ್ರೀಸ್ ಮತ್ತು ಹೃದಯ ರಕ್ತನಾಳದ ನಡುವಿನ ಬಲವಾದ ಸಂಬಂಧವನ್ನು ಒಂದು ವರದಿ ಕಂಡುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ