ರಾಗಿ (Ragi) ಪದಾರ್ಥಗಳು ಬೆಳಗಿನ ಉಪಾಹಾರಕ್ಕೆ (Morning Breakfast) ಬೆಸ್ಟ್ ಅಂತಾನೇ ಹೇಳಬಹುದು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಕಬ್ಬಿಣನಾಂಶ ಸಮೃದ್ಧವಾಗಿದೆ. ಇದು ಕಂಪ್ಲೀಟ್ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯ ಆಹಾರವಾಗಿದೆ. ರಾಗಿ ನಮ್ಮನ್ನು ದಿನವಿಡೀ ಶಕ್ತಿಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಬಾರಿ ನೀವು ಬೆಳಗಿನ ತಿಂಡಿಗೆ ಪಾಲಕ್ ರಾಗಿ ರೊಟ್ಟಿಯನ್ನು ಬೆಳಗಿನ ತಿಂಡಿಗೆ ಟ್ರೈ ಮಾಡಬಹುದು. ಇನ್ನೂ ಪಾಲಕ್ ರಾಗಿ ರೊಟ್ಟಿ (Palak Ragi Rotti) ಮಾಡಲು ರಾತ್ರಿಯಂದಲೇ (Night) ಅದಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಪದಾರ್ಥವನ್ನು ಸಿದ್ಧ ಪಡಿಸಿಟ್ಟುಕೊಂಡರೆ ಆರಾಮವಾಗಿ ಬೆಳಗ್ಗೆ ತಿಂಡಿಯನ್ನು ಮಾಡಬಹುದು. ಬೆಳಗ್ಗೆ ಎದ್ದು ರೊಟ್ಟಿಯನ್ನು ಮಾತ್ರ ಸುಡಬೇಕಾಗಿರುತ್ತದೆ. ಅದರಲ್ಲಿಯೂ ಕೆಲಸಕ್ಕೆ (Job) ಹೋಗುವ ಮಹಿಳೆಯರಿಗೆ (Womens) ಇದು ಸುಲಭವಾಗಿ ಮಾಡುವ ತಿಂಡಿಯಾಗಿದೆ. ಸದ್ಯ ಈಗ ಪಾಲಕ್ ರಾಗಿ ರೊಟ್ಟಿ ಮಾಡುವುದೇಗೆ ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.
![]()
ಪಾಲಕ್ ರಾಗಿ ರೊಟ್ಟಿ
ಪಾಲಕ್ ರಾಗಿ ರೊಟ್ಟಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:
- ರಾಗಿ ಹಿಟ್ಟು - 2 ಕಪ್
- ಈರುಳ್ಳಿ - 3
- ತುರಿದ ತೆಂಗಿನಕಾಯಿ - 1/2 ಕಪ್
- ಹಸಿರು ಮೆಣಸಿನಕಾಯಿ - 3
- ಪಾಲಕ್ ಸೊಪ್ಪು – ಸ್ವಲ್ಪ
- ಮೆಂತ್ಯ - ಸ್ವಲ್ಪ
- ಕೊತ್ತಂಬರಿ - 1/4 ಕಪ್
- ಉಪ್ಪು – ಅಗತ್ಯಕ್ಕೆ ತಕ್ಕಷ್ಟು
- ಎಣ್ಣೆ - ಸ್ವಲ್ಪ
- ನೀರು – ಅಗತ್ಯಕ್ಕೆ ತಕ್ಕಷ್ಟು
![]()
ಪಾಲಕ್ ರಾಗಿ ರೊಟ್ಟಿ
ಪಾಲಕ್ ರಾಗಿ ರೊಟ್ಟಿ ಮಾಡುವ ವಿಧಾನ:
- ಈರುಳ್ಳಿ, ಹಸಿರು ಮೆಣಸಿನಕಾಯಿ. ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಕತ್ತರಿಸಿ.
- ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟನ್ನು ತೆಗೆದುಕೊಂಡು ಕತ್ತರಿಸಿದ ಪದಾರ್ಥಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಮತ್ತು ಗಟ್ಟಿಯಾಗುವಂತೆ ಕಲಸಿ. ಹಿಟ್ಟನ್ನು ಚಪಾತಿಗಿಂತ ಸ್ವಲ್ಪ ಸಡಿಲವಾಗಿ ಬೆರೆಸಿಕೊಳ್ಳಿ.
- ಈಗ ಕಲಸಿದ ಹಿಟ್ಟನ್ನು 5 ನಿಮಿಷಗಳ ಕಾಲ ನೆನೆಸಿ. ನಂತರ ದೋಸೆ ಕಲ್ಲನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ.
- ನಂತರ ನಿಂಬೆ ಹಣ್ಣಿನ ಗಾತ್ರದಷ್ಟು ಹಿಟ್ಟನ್ನು ಕೈಗೆ ತೆಗೆದುಕೊಳ್ಳಿ. ಬಾಳೆ ಎಲೆಯ ಮೇಲೆ ಹಾಕಿ ದೋಸೆಯಂತೆ ತಟ್ಟಿ. ತಟ್ಟುವಾಗ ಈರುಳ್ಳಿ ಚೂರುಗಳನ್ನು ಚೆನ್ನಾಗಿ ಒತ್ತಿರಿ.
- ನಂತರ ಸ್ಟವ್ ಮೇಲಿನ ಉರಿಯಲ್ಲಿ ಕಡಿಮೆ ಇಟ್ಟು, ದೋಸೆ ಕಲ್ಲಿನ ಮೇಲೆ ಹಾಕಿ ನಂತರ ಎರಡೂ ಬದಿಗಳಲ್ಲಿ ತಿರುಗಿಸಿ, ಅದು ಬೆಂದಿದ್ಯಾ ಎಂಬುವುದನ್ನು ಖಚಿತಪಡಿಸಿಕೊಂಡು ಎತ್ತಿ ಹಾಕಿ.
- ಈಗ ರುಚಿಕರವಾದ ಪಾಲಕ್ ರಾಗಿ ರೊಟ್ಟಿ ಸವಿಯಲು ಸಿದ್ಧವಾಗಿದೆ. ಇದಕ್ಕೆ ಯಾವುದೇ ಸೈಡ್ ಡಿಶ್ ಅಗತ್ಯವಿಲ್ಲ. ಹಾಗೆಯೇ ತಿಂದರೂ ರುಚಿಕರವಾಗಿರುತ್ತದೆ. ಬೇಕಾದರೆ ಮಸಾಲೆ ಚಟ್ನಿ, ಪುದೀನಾ ಚಟ್ನಿ, ತೆಂಗಿನಕಾಯಿ ಚಟ್ನಿ ಸೇವಿಸಬಹುದು.
ಇಷ್ಟೇ ಅಲ್ಲ ರಾಗಿ ಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು, ದೋಸೆ, ಗಂಜಿ, ಹಾಲ್ವಾಯಿ(ಸಿಹಿ) ಎಂಬ ತಿನಿಸುಗಳನ್ನು ತಯಾರಿಸಬಹುದು. ಮಕ್ಕಳ ಪೌಷ್ಠಿಕ ಆಹಾರವೆಂದರೆ ಒಡರಾಗಿಹಿಟ್ಟು. ಇದು ಅತ್ಯಂತ ಮಿಟಮಿನ್ ಯುಕ್ತ ಅಹಾರ. ಜೀರ್ಣಸಿಕೊಳ್ಳುಲು ಸುಲಭ ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ, ಮುಟ್ಟಾಗಿಯೂ ಇರುತ್ತಾರೆ. ಮಧುಮೇಹ ರೋಗಿಗಳಿಗೆ ವೈದ್ಯರು ರಾಗಿ ಹಿಟ್ಟನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ.