Health Tips : ಮಕ್ಕಳ ಮೆದುಳಿನ ಆರೋಗ್ಯಕ್ಕೆ ಈ ಆಹಾರಗಳನ್ನು ಪ್ರಯತ್ನಿಸಿ

Childrens Health: ಮಕ್ಕಳ ಆರೋಗ್ಯ ನಾವು ನೀಡುವ ಆಹಾರದ ಮೇಲೆ ನಿರ್ಧಾರವಾಗುತ್ತದೆ. ಅವರ ಮೆದುಳಿನ ಆರೋಗ್ಯಕ್ಕೆ ದಿನನಿತ್ಯ ಪೋಷಕಾಂಶಯುಕ್ತ ಆಹಾರವನ್ನು ನೀಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸರಿಯಾದ ಆಹಾರ ಪದ್ಧತಿಯು  ನಿಮ್ಮ ಸ್ಮರಣೆ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದ ಉಳಿದ ಭಾಗಗಳಂತೆ ಮೆದುಳು ಕೂಡ ನಾವು ತಿನ್ನುವ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, ಮಕ್ಕಳು ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದು ಬಹಳ ಮುಖ್ಯ, ಅದು ಮೆದುಳನ್ನು ಉತ್ತೇಜಿಸುತ್ತದೆ. ಮಕ್ಕಳ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇರಿವುದು ಅವರ ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ

ಮೊಟ್ಟೆ

ನಿಮ್ಮ ಮಗುವಿಗೆ ಬೆಳಗಿನ ತಿಂಡಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಸ್ವಲ್ಪ ಪ್ರಮಾಣದ ಆರೋಗ್ಯಕರ ಕೊಬ್ಬಿನ ಅಂಶವನ್ನು ಸೇರಿಸಿ ತಿನ್ನಿಸುವುದು ಅವರು ದಿನವಿಡಿ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ ಮತ್ತು ಹೆಚ್ಚುವರಿ ಬೋನಸ್ ಆಗಿ ಅವುಗಳು ಕೋಲಿನ್ ಅನ್ನು ಹೊಂದಿರುತ್ತವೆ, ಇದು ಮೆಳುಕಿನ ಆರೋಗ್ಯಕ್ಕೆ ಸಹಕಾರಿಯಾಗಿರುವುದರಿಂದ ನೆನಪಿನ ಶಕ್ತಿ ವೃದ್ಧಿಸಲು ಸಹಾಯ ಮಾಡುತ್ತದೆ.

ಎಣ್ಣೆಯುಕ್ತ ಮೀನು

ಎಣ್ಣೆಯುಕ್ತ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು  ಅದು ಮೆದುಳಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ಒಮೆಗಾ -3 ಕೊಬ್ಬಿನಾಮ್ಲಗಳು ಜೀವಕೋಶದ ಬಿಲ್ಡಿಂಗ್ ಬ್ಲಾಕ್‌ಗಳಿಗೆ ಅಗತ್ಯವಾದ ಅಂಶಗಳಾಗಿವೆ. ಸಾಲ್ಮನ್, ಮ್ಯಾಕೆರೆಲ್, ತಾಜಾ ಟ್ಯೂನ, ಟ್ರೌಟ್, ಸಾರ್ಡೀನ್ ಮತ್ತು ಹೆರಿಂಗ್ ನಂತಹ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು ವಾರಕ್ಕೊಮ್ಮೆ ಸೇವಿಸುವುದು ಉತ್ತಮ. ಇದು ಮಕ್ಕಳ ಮೆದುಳಿನ ಕಾರ್ಯವನ್ನು ಸರಾಗಗೊಳಿಸುತ್ತದೆ.

ಇದನ್ನೂ ಓದಿ: ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಟಾಪ್ 5 ಆರೋಗ್ಯ ಪ್ರಯೋಜನಗಳು.

ಓಟ್ ಮೀಲ್ ಮತ್ತು ಓಟ್ಸ್

ಓಟ್ ಮೀಲ್ ಮತ್ತು ಓಟ್ಸ್ ಅತ್ಯುತ್ತಮ ಶಕ್ತಿಯ ಮೂಲಗಳು ಮತ್ತು ಮೆದುಳಿಗೆ ಬೇಕಾಗುವ ಅಂಶವನ್ನು ಪೂರೈಕೆ ಮಾಡುತ್ತದೆ. ಅವುಗಳು ಹೆಚ್ಚಿನ ಫೈಬರ್ ಅಂಶವಿರುವ ಕಾರಣ  ಇದು ಮಕ್ಕಳಿಗೆ ತಿನ್ನಲು ಇಷ್ಟವಾಗುತ್ತದೆ. ಅಲ್ಲದೆ ಇದು ಜಂಕ್ ಫುಡ್ ಅನ್ನು ತಿನ್ನುವುದನ್ನ ತಡೆಯುತ್ತದೆ. . ಅವುಗಳಲ್ಲಿ ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಸತುಗಳಲ್ಲಿ ಅಧಿಕವಾಗಿರುತ್ತವೆ, ಇದು ಮಕ್ಕಳ ಮೆದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.  ಇದರ ಜೊತೆ ಸೇಬು, ಬಾಳೆಹಣ್ಣುಗಳು, ಬೆರಿಹಣ್ಣುಗಳು ಅಥವಾ ಅದರ ಬಾದಾಮಿಯನ್ನು ಸೇರಿಸಿ ಮಕ್ಕಳಿಗೆ ತಿನ್ನಿಸುವುದು ಆರೋಗ್ಯಕ್ಕೆ ಒಳ್ಳೆಯದು.

ತರಕಾರಿಗಳು

ತರಕಾರಿಗಳು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ, ಇದು ಮೆದುಳಿನ ಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಟೊಮ್ಯಾಟೊ, ಸಿಹಿ ಗೆಣಸು, ಕುಂಬಳಕಾಯಿ, ಕ್ಯಾರೆಟ್, ಅಥವಾ ಪಾಲಕ್ ಸೇರಿದಂತೆ ಹಲವು ತರಕಾರಿಗಳನ್ನು ನಿಮ್ಮ ಮಗುವಿನ ಆಹಾರದಲ್ಲಿ ಸೇರಿಸಿದರೆ ಅವರ ಮೆದುಳಿನ ಆರೋಗ್ಯ ಅಭಿವೃದ್ಧಿಗೆ ಬೇಕಾಗುವ ಪೋಷಕಾಂಶಗಳು ಸಿಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವನೆ ಮಾಡಬಾರದು..

ಹಾಲು, ಮೊಸರು ಮತ್ತು ಚೀಸ್

ಹಾಲು, ಮೊಸರು ಮತ್ತು ಚೀಸ್ ನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ವಿಟಮಿನ್  ಬಿ ಗಳಿದ್ದು, ಇವುಗಳು ಮೆದುಳಿನ ಅಂಗಾಂಶ, ನರಪ್ರೇಕ್ಷಕಗಳು ಮತ್ತು ಕಿಣ್ವಗಳ ಬೆಳವಣಿಗೆಗೆ ಅಗತ್ಯವಾಗಿದೆ. ಇವೆಲ್ಲವೂ ಮೆದುಳಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದ್ದು, ಇದು ಬಲವಾದ ಮತ್ತು ಆರೋಗ್ಯಕರ ಹಲ್ಲು ಮತ್ತು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಮಕ್ಕಳ ಕ್ಯಾಲ್ಸಿಯಂ ಅವಶ್ಯಕತೆಗಳು ಅವರ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತವೆ, ಆದರೆ ಪ್ರತಿ ದಿನ ಎರಡರಿಂದ ಮೂರು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಬೇಕು. ಆದರೆ ಕೆಲವೊಂದು ಮಕ್ಕಳು ಹಾಲು ಎಂದರೆ ದೂರ ಓಡಿ ಹೋಗುತ್ತಾರೆ. ಇಂಥಹ ಸಂದರ್ಭದಲ್ಲಿ  ಹಾಲಿನಿಂದ ಗಂಜಿ, ಪ್ಯಾನ್ಕೇಕ್ ಮತ್ತು ಪುಡಿಂಗ್ ತಯಾರಿಸಿ ತಿನ್ನಲು ನೀಡಿ.

ಬೀನ್ಸ್

ಬೀನ್ಸ್ ನಿಮ್ಮ ಮಕ್ಕಳಿಗೆ ಪ್ರೋಟೀನ್ ಮತ್ತು ವಿಟಮಿನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಪಿಂಟೋ ಬೀನ್ಸ್ ನಲ್ಲಿ ಇತರ ಬೀನ್ಸ್ ಗಳಿಗಿಂತ ಒಮೆಗಾ 3 ಹೆಚ್ಚು ಇರುತ್ತದೆ.  ಹಾಗಾಗಿ ಮಕ್ಕಳಿಗೆ ಸಲಾಡ್ ನೀಡುವಾಗ ಬೀನ್ಸ್ ಸೇರಿಸಿ ಕೊಡಿ. ಇಲ್ಲ ಅವುಗಳನ್ನು ಸ್ಯಾಂಡ್ವಿಚ್ ಜೊತೆ ಸಹ ಸೇರಿಸಿ ಕೊಡಬಹುದು.
Published by:Sandhya M
First published: