ಪ್ಲಾಸ್ಟಿಕ್ ನಿಷೇಧ: ಇನ್ಮುಂದೆ ಜ್ಯೂಸ್, ಎಳನೀರು ಕುಡಿಯುವುದಕ್ಕೂ ಸ್ಟ್ರಾ ಸಿಗಲ್ಲ !

news18
Updated:July 2, 2018, 6:01 PM IST
ಪ್ಲಾಸ್ಟಿಕ್ ನಿಷೇಧ: ಇನ್ಮುಂದೆ ಜ್ಯೂಸ್, ಎಳನೀರು ಕುಡಿಯುವುದಕ್ಕೂ ಸ್ಟ್ರಾ ಸಿಗಲ್ಲ !
news18
Updated: July 2, 2018, 6:01 PM IST
-ನ್ಯೂಸ್ 18 ಕನ್ನಡ

ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಸಿಗಬಹುದಾದ ಏಕೈಕ ವಸ್ತು ಯಾವುದೆಂದರೆ ಪ್ಲಾಸ್ಟಿಕ್ ಅನ್ನಬಹುದೇನೊ. ಪ್ಲಾಸ್ಟಿಕ್ ಎಂಬ ವಸ್ತು ಜಗತ್ತಿನಲ್ಲಿ ಅಷ್ಟೊಂದು ಆವರಿಸಿಕೊಂಡಿದೆ. ಇದರ ಬಳಕೆಯಿಂದ ಉಂಟಾಗುವ ಹಾನಿಯ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದರೂ ಎಲ್ಲೂ ಕೂಡ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಷೇಧವಾಗಿಲ್ಲ. ಈ ಕುರಿತು ಎಚ್ಚೆತ್ತಿರುವ ಅನೇಕ ದೇಶಗಳ ಕಂಪನಿಗಳು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಮಹತ್ವದ ಹೆಜ್ಜೆ ಇಡಲಿವೆ.

ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರಪಂಚಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ಒತ್ತಡದ ಪರಿಣಾಮ ಯುರೋಪಿಯನ್ ಒಕ್ಕೂಟ ಬ್ರಿಟನ್, ಭಾರತ ಸೇರಿದಂತೆ ಅನೇಕ ಕಡೆ ಫಾಸ್ಟ್​ಫುಡ್​ನ ದೈತ್ಯ ಕಂಪೆನಿಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಶೀಘ್ರದಲ್ಲೇ ನಿಲ್ಲಿಸಲಾಗುತ್ತದೆ. ಇದರ ಮೊದಲ ಹೆಜ್ಜೆ ಎಂಬಂತೆ ಮೆಕ್​ಡೋನಾಲ್ಡ್ಸ್​ ಸಂಸ್ಥೆ ಪ್ಲಾಸ್ಟಿಕ್ ಸ್ಟ್ರಾ ಬಳಕೆ ಕೊನೆಗೊಳಿಸಲು ಮುಂದಾಗಿದೆ.

ಯುಎಸ್​ ಜರ್ನಲ್ ಸೈನ್ಸ್​ ನಿಯತಕಾಲಿಕೆ ಪ್ರಕಟಿಸಿದ ವರದಿ ಪ್ರಕಾರ ಒಂದು ವರ್ಷದಲ್ಲಿ ಭೂಮಿಯಲ್ಲಿ ಎಂಟು ಮಿಲಿಯನ್ ಟನ್​ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಆಗುತ್ತಿದೆ. ಅಂದರೆ ಪ್ರತಿ ಸೆಕೆಂಡಿಗೆ 250 ಕೆ.ಜಿ ಗಳಷ್ಟು ಪ್ಲಾಸ್ಟಿಕ್​ ಅನ್ನು ಎಸೆಯಲಾಗುತ್ತಿದೆ. ಇದರ ಬಗ್ಗೆ ಜಾಗೃತವಾಗಿರುವ ಯುರೋಪ್ ದೇಶಗಳು ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳ ಮೂಲಕ ಪ್ಲಾಸ್ಟಿಕ್ ಬಳಕೆಯ ಅರಿವು ಮೂಡಿಸುತ್ತಿರುವ ಸಂಘ ಸಂಸ್ಥೆಗಳು, ಇದರಿಂದಾಗುವ ಹಾನಿಯನ್ನು ಜನರಿಗೆ ಮನಮುಟ್ಟಿಸುವಲ್ಲಿ ಸಫಲರಾಗುತ್ತಿದ್ದಾರೆ. ಸ್ಟ್ರಾ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧವೇರಲು ಬ್ರಿಟೀಷ್ ಸರ್ಕಾರ ಈಗಾಗಲೇ ಯೋಚಿಸಿದ್ದು, ಯುರೋಪಿಯನ್ ಒಕ್ಕೂಟದಲ್ಲೂ ಈ ಕುರಿತು ಚರ್ಚೆಗಳು ನಡೆಯುತ್ತಿದೆ.

ಭಾರತದಲ್ಲೂ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು 2022 ಇಸವಿಯೊಳಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸುವ ಇಚ್ಛಾ ಶಕ್ತಿ ಹೊಂದಿದ್ದಾರೆ. ಇದರ ಭಾಗವಾಗಿಯೇ ಮುಂಬೈನಲ್ಲಿ ಇತ್ತೀಚೆಗೆ ಬರ್ಗರ್ ಕಿಂಗ್, ಮೆಕ್​ಡೋನಾಲ್ಡ್ಸ್​ ಮತ್ತು ಸ್ಟಾರ್​ಬಕ್ಸ್ ಕೆಫೆಗಳಲ್ಲಿ ಪ್ಪಾಸ್ಟಿಕ್ ಬಳಸಿರುವುದಕ್ಕೆ ದಂಡ ವಿಧಿಸಲಾಗಿತ್ತು.

2019 ರಲ್ಲಿ ಯುಕೆ ಮತ್ತು ಐರ್ಲೆಂಡ್​ ದೇಶಗಳ ಮೆಕ್​ಡೋನಾಲ್ಡ್ ಸಂಸ್ಥೆಗಳು ಪೇಪರ್ ಸ್ಟ್ರಾ ಬಳಸಲು ತೀರ್ಮಾನಿಸಿದ್ದು, ಫ್ರಾನ್ಸ್​​ನ ಬರ್ಗರ್ ಕಂಪನಿಗಳು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಯೋಚಿಸುತ್ತಿದೆ. ಮೊನಾಕೊದಲ್ಲಿನ ಪಂಚತಾರ ಮಾಂಟೆ ಕಾರ್ಲೊ ಪ್ಯಾಲೇಸ್ ಹೋಟೆಲ್​ನಲ್ಲಿ ಜೈವಿಕ ಸ್ಟ್ರಾಗಳನ್ನು ಪರಿಚಯಿಸಿದೆ. ಕಚ್ಚಾ ಪಾಸ್ತ ಮತ್ತು ಬಿದಿರಿನ ತುಂಡುಗಳಿಂದ ತಯಾರಿಸಿದ ಸ್ಟ್ರಾಗಳನ್ನು ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಇಲ್ಲಿ ಬಳಸಲಾಗುತ್ತಿದೆ.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...