Ginger Benefits: ಶುಂಠಿಯಲ್ಲಿದೆ ಆರೋಗ್ಯ ಭಾಗ್ಯ; ಇದರ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ತಾಜಾ ಮತ್ತು ಒಣಗಿದ ಶುಂಠಿಯನ್ನು ಆಹಾರಕ್ಕೆ  ಬಳಸುತ್ತೇವೆ. ನಾವು ಶುಂಠಿಯನ್ನು ಎರಡೂ ರೀತಿಯಲ್ಲಿ ಬಳಸುತ್ತೇವೆ ಆದರೂ, ಯಾವುದು ನಮಗೆ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಾವು ಎಂದಿಗೂ ಯೋಚಿಸುವುದಿಲ್ಲ. ಈ ನಿಟ್ಟಿನಲ್ಲಿ ಹಸಿ ಶುಂಠಿಗಿಂತಲೂ ಒಣಗಿರುವ ಶುಂಠಿ ನಮ್ಮ ದೇಹಕ್ಕೆ ಉತ್ತಮ ಎನ್ನುತ್ತಾರೆ ಆಯುರ್ವೇದ ತಜ್ಞೆ ರೇಖಾ ರಾಧಾಮೋನ್. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದಷ್ಟು ಮಾಹಿತಿನ್ನು ನೀಡಿದ್ದಾರೆ.

ಮುಂದೆ ಓದಿ ...
  • Share this:

ಭಾರತೀಯ ಪಾಕಪದ್ಧತಿಯಲ್ಲಿ ಶುಂಠಿಯು ಒಂದು ಪ್ರಮುಖ ಆಹಾರವಾಗಿದೆ. ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಶುಂಠಿಯನ್ನು ವಿವಿಧ ಔಷಧೀಯ ಗುಣಗಳಿಗಾಗಿ ಬಳಸುತ್ತಿದ್ದಾರೆ. ಜ್ವರ, ಶೀತ, ಕೆಮ್ಮು, ವಾಕರಿಕೆ, ವಾಂತಿ, ಮಲಬದ್ಧತೆ ಮುಂತಾದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ವಿಶೇಷವಾಗಿ ಉಪಯುಕ್ತವಾಗಿದೆ.


ginger peel benefits you must know
ನಾವು ತಾಜಾ ಮತ್ತು ಒಣಗಿದ ಶುಂಠಿಯನ್ನು ಆಹಾರಕ್ಕೆ  ಬಳಸುತ್ತೇವೆ. ನಾವು ಶುಂಠಿಯನ್ನು ಎರಡೂ ರೀತಿಯಲ್ಲಿ ಬಳಸುತ್ತೇವೆ ಆದರೂ, ಯಾವುದು ನಮಗೆ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ನಾವು ಎಂದಿಗೂ ಯೋಚಿಸುವುದಿಲ್ಲ. ಈ ನಿಟ್ಟಿನಲ್ಲಿ ಹಸಿ ಶುಂಠಿಗಿಂತಲೂ ಒಣಗಿರುವ ಶುಂಠಿ ನಮ್ಮ ದೇಹಕ್ಕೆ ಉತ್ತಮ ಎನ್ನುತ್ತಾರೆ ಆಯುರ್ವೇದ ತಜ್ಞೆ ರೇಖಾ ರಾಧಾಮೋನ್. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದಷ್ಟು ಮಾಹಿತಿನ್ನು ನೀಡಿದ್ದಾರೆ.


ಗ್ಯಾಸ್ ಸಮಸ್ಯೆಗೆ ಪರಿಹಾರ: ಹಸಿ ಶುಂಠಿಯನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಒಣ ಶುಂಠಿಯನ್ನು ಬಳಸಬೇಕು ಎಂದು ಹೇಳುತ್ತಾರೆ ಆಯುರ್ವೇದ ತಜ್ಞರು. ಒಣ ಶುಂಠಿಯನ್ನು ಪುಡಿ ಮಾಡಿ ಬಿಸಿನೀರಿನೊಂದಿಗೆ ಬೆರೆಸಿ ಕುಡಿಯಬಹುದು ಅಥವಾ ಚಹಾ ಮಾಡಬಹುದು. ಇದರಿಂದ ಗ್ಯಾಸ್ ಸಮಸ್ಯೆಯನ್ನು ಖಂಡಿತವಾಗಿ ಪರಿಹರಿಸಬಹುದು.


ಮಲಬದ್ಧತೆಗೆ ಪರಿಹಾರ:  ಒಣ ಶುಂಠಿ ಬಹಳ ಉಪಯುಕ್ತವಾಗಿದೆ. ಹೊಟ್ಟೆಯುಬ್ಬರ ಮತ್ತು ಮಲಬದ್ಧತೆಯಿಂದ ಪರಿಹಾರ ಬೇಕಾದರೆ ಸ್ವಲ್ಪ ಪ್ರಮಾಣದ ಹಸಿ ಶುಂಠಿಯನ್ನು ಬಿಸಿನೀರಿನೊಂದಿಗೆ ಬೆರೆಸಿ ಮಕ್ಕಳಿಗೆ ನೀಡಿದರೆ ತಕ್ಷಣವೇ ಪರಿಹಾರ ದೊರೆಯುತ್ತದೆ.


these are ginger skin care benefits
ಸಂಧಿವಾತಕ್ಕೆ ಪರಿಹಾರ: ಸಂಧಿವಾತ ಸಮಸ್ಯೆಯು ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಮಹಿಳೆಯರು ಅನುಭವಿಸುತ್ತಿರುವ ಸಾಮಾನ್ಯ  ಸಮಸ್ಯೆಗಳಲ್ಲಿ ಇದು ಒಂದಾಗಿದೆ. ನೀವು ಇದನ್ನು ಗುಣಪಡಿಸಲು ಒಣ ಶುಂಠಿಯನ್ನು ಬಳಸಬಹುದು. ಒಣ ಶುಂಠಿಯನ್ನು ಪುಡಿ ಮಾಡಿ ನೋವಿರುವ ಜಾಗಕ್ಕೆ ಹಚ್ಚಿದರೆ ಕೀಲು ನೋವು ಸಂಪೂರ್ಣವಾಗಿ ಗುಣವಾಗುತ್ತದೆ. ವಾರದಲ್ಲಿ 2 ದಿನ ಅಥವಾ 3 ದಿನ ಹೀಗೆ ಮಾಡಿದರೆ ನೋವು ಸಂಪೂರ್ಣವಾಗಿ ಮಾಯವಾಗುತ್ತದೆ.


ಕಫವನ್ನು ಕಡಿಮೆ ಮಾಡುತ್ತದೆ: ಋತುಮಾನದ ಜ್ವರ, ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳಿಗೆ ನಾವು ಒಣ ಶುಂಠಿಯನ್ನು ಬಳಸಬಹುದು. ಉಸಿರಾಟದ ತೊಂದರೆಗಳನ್ನು ನಿವಾರಿಸಲು ಒಣ ಶುಂಠಿ ನಮಗೆ ಸಹಾಯ ಮಾಡುತ್ತದೆ.


ಇದಲ್ಲದೆ ತಲೆನೋವು, ಬಾಯಿ ದುರ್ವಾಸನೆ, ಹೊಟ್ಟೆ ಉರಿ ಮುಂತಾದ ನಾನಾ ಸಮಸ್ಯೆಗಳಿಗೆ ಒಣ ಶುಂಠಿ ತುಂಬಾ ಪ್ರಯೋಜನಕಾರಿ. ಆದ್ದರಿಂದ ನೀವು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಒಣ ಶುಂಠಿ ತಿಂದರೆ, ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು