ಕೋಲಾರ(ಜೂ.02) ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಮಾಜಿ ಶಾಸಕ ವೈ ಸಂಪಂಗಿ ಬೆನ್ನಿಗೆ ಸದಾ ನಿಲ್ಲುವುದಾಗಿ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ವೇದಿಕೆ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ. ಇತ್ತೀಚೆಗೆ ಸಂಸದ ಮುನಿಸ್ವಾಮಿ ಹಾಗು ಕೆ.ಜಿ.ಎಪ್ ಬಿಜೆಪಿ ಘಟಕ (BJP Unit), ಮಾಜಿ ಶಾಸಕ (Former MLA) ಸಂಪಂಗಿ ರನ್ನ ಪರಿಗಣಿಸದೆ ಕೆಲ ಕಾರ್ಯಕ್ರಮ ನಡೆಸಿದ್ದರು. ಈ ಬಗ್ಗೆ ಹೈ ಕಮಾಂಡ್ ನಾಯಕರಿಗೆ ಸಂಪಂಗಿ ದೂರು ನೀಡಿದ್ದರು ಎನ್ನಲಾಗಿದೆ. ಇದೀಗ ಕೆಜಿಎಪ್ ತಾಲೂಕಿನ ನಾಗಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಪಂಗಿ ಬಣದ ಮುಖಂಡರು ಆಯೋಜಿಸಿದ್ದ ಸಂಪಂಗಿ ಅವರ, 52 ನೇ ಹುಟ್ಟು ಹಬ್ಬದ ಅದ್ದೂರಿ ಕಾರ್ಯಕ್ರಮದಲ್ಲಿ, ಬಿಜೆಪಿ ನಾಯಕರ ದಂಡೇ ಭಾಗಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಮಂಜುನಾಥ್ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ವೇಣುಗೋಪಾಲ್ ಸೇರಿದಂತೆ, ನೂರಾರು ಬಿಜೆಪಿ ನಾಯಕರು, ಹಾಗು 2 ಸಾವಿರಕ್ಕು ಅಧಿಕ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ವೇದಿಕೆಯಲ್ಲಿ ಮಾತನಾಡಿದ ಸಚಿವ ಮುನಿರತ್ನ, ಪಕ್ಷದಲ್ಲಿ ಸಂಪಂಗಿ ಅವರಿಗೆ ಅನ್ಯಾಯ ಆಗಲು ಬಿಡಲ್ಲ, ಅವರ ವಿರುದ್ದ ಯಾವುದೇ ಕುತಂತ್ರವೂ ನಡೆಯದಂತೆ ನಾನು ಅವರ ಬೆನ್ನಿಗೆ ನಿಲ್ಲುವೆ, ಮುಂದಿನ ಚುನಾವಣೆಯಲ್ಲಿ ಸಂಪಂಗಿ ಗೆಲುವು ಖಚಿತ ಎಂದು ಏರುದನಿಯಲ್ಲಿ ವಿರೋದಿಗಳಿಗೆ ಎಚ್ಚರಿಕೆ ನೀಡಿದರು.
ಗಾರ್ಮೆಂಟ್ಸ್ ಪ್ಯಾಕ್ಟರಿ ಘೋಷಣೆ
ಕಾರ್ಯಕ್ರಮದ ನಂತರ ಮಾತನಾಡಿದ ಮಾಜಿ ಶಾಸಕ ವೈ ಸಂಪಂಗಿ, ಸಂಸದ ಮುನಿಸ್ವಾಮಿ ಜೊತೆಗೆ ಅಸಮಾಧಾನ ವಿಚಾರ ಕೇವಲ ವದಂತಿ, ಅವರು ನನ್ನ ಅಣ್ಣನಿದ್ದಂತೆ, ಕೆಜಿಎಪ್ ಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ. ನನ್ನ ಸ್ವಂತ ಜಾಗದಲ್ಲಿ ಗಾರ್ಮೆಂಟ್ಸ್ ಪ್ಯಾಕ್ಟರಿ ತೆರೆಯುವುದಾಗಿ ಘೋಷಿಸಿದರು, ಗಾರ್ಮೆಂಟ್ಸ್ ಪ್ಯಾಕ್ಟರಿಂದ ಸಾವಿರಾರು ಜನರಿಗೆ ಕೆಲಸ ಸಿಗವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ಭ್ರಷ್ಟಾಚಾರ ತನಿಖೆಗೆ ಮನವಿ ಮಾಡಿರುವೆ
ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರ ಒಡನಾಡಿಯಾಗಿರುವ ಡಿಸಿಸಿ ಬ್ಯಾಂಕ್ ವಿರುದ್ದ, ಮತ್ತೊಮ್ಮೆ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಕಿಡಿಕಾರಿದ್ದಾರೆ, ಡಿಸಿಸಿ ಬ್ಯಾಂಕ್‍ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ ಎಂದು, ಕೋಲಾರದ ಕೆಜಿಎಫ್ನಲ್ಲಿ ಸಚಿವ ಮುನಿರತ್ನ ಹೇಳಿಕೆ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಯಾರೊ ಕೆಲವರ ಹಿಡಿತದಲ್ಲಿದ್ದು, ಅವರ ಸ್ವಂತ ಆಸ್ತಿಯಂತೆ ವರ್ತಿಸುತ್ತಿದ್ದಾರೆ ಈ ಬಗ್ಗೆ ತನಿಖೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದರು, ಇನ್ನು ಅವಧಿಗೂ ಮುನ್ನ ಚುನಾವಣೆ ವಿಚಾರವನ್ನ ಸಚಿವ ಮುನಿರತ್ನ ತಳ್ಳಿಹಾಕಿದ್ದು, ಚುನಾವಣೆ ಯಾವುದೇ ಸಮಯದಲ್ಲಾದರು, ಚುನಾವಣೆ ಎದುರಿಸಲು ನಾವು ಸಿದ್ದ, ಚುನಾವಣೆ ಗೋಸ್ಕರ ನಾವು ಕೆಲಸ ಮಾಡಲ್ಲ, ಕೋಲಾರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳನ್ನ ನಾವು ಗೆಲ್ತೀವಿ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: Masjid v/s Mandir: ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್; ಜೂನ್ 4ಕ್ಕೆ ಮಸೀದಿ ಪ್ರವೇಶಿಸ್ತಾರಂತೆ ಹನುಮ ಭಕ್ತರು!
ಬಾಡೂಟಕ್ಕಾಗಿ ಮುಗಿಬಿದ್ದ ಜನರು
52 ನೇ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಪ್ ಮಾಜಿ ಶಾಸಕ ವೈ ಸಂಪಂಗಿ ಆಯೋಜಿಸಿದ್ದ, ಭಾರ್ಜರಿ ಬಾಡೂಟದಲ್ಲಿ, ಬಾಡೂಟಕ್ಕಾಗಿ ನೂರಾರು ಜನರು ಮುಗಿಬಿದ್ದರು, ಅಡುಗೆ ಭಟ್ಟರನ್ನೆ ಪಕ್ಕಕ್ಕೆ ತಳ್ಳಿ ತಾ ಮುಂದು ನಾ ಮುಂದು ಎಂದು ಬಾಡೂಟ ಬಾಚಿಕೊಂಡ ಜನರು, ಕುಳಿತು ಊಟ ಮಾಡುವ ಅವಕಾಶ ಇದ್ದರು ಬಾಡೂಟಕ್ಕಾಗಿ ಭಾರೀ ನೂಕುನುಗ್ಗಲು ಉಂಟಾಯಿತು.
ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಜನರು ಭಾಗಿಯಾಗಿದ್ದು, 2 ಸಾವಿರಕ್ಕು ಅಧಿಕ ಜನರಿಗೆ ಚಿಕನ್ ಬಿರಿಯಾನಿ, ಮಟನ್, ಚಿಕನ್ ಚಾಪ್ಸ್, ಮುದ್ದೆ ಊಟ ವ್ಯವಸ್ತೆ ಮಾಡಲಾಗಿತ್ತು, ಆದರೆ ಮಧ್ಯಾಹ್ನ 3 ಗಂಟೆಯಾದರು ಸರತಿ ಸಾಲಲ್ಲಿ ಊಟ ಸಿಗದ ಹಿನ್ನಲೆ ಒಮ್ಮೆಲೆ ನೂರಾರು ಜನರು ಊಟಕ್ಕಾಗಿ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು, ಜನಜಂಗುಳಿ ಹೆಚ್ಚಾಗುತ್ತಿದ್ದಂತೆ ಅಡಿಗೆ ಪಾತ್ರೆಗಳ ಸುತ್ತುವರೆದ ಜನರು, ಮಟನ್ , ಚಿಕನ್ , ಮುದ್ದೆ ಬಾಚಿಕೊಂಡು ಪಾತ್ರೆಗಳನ್ನು ತೆಗೆದುಕೊಂಡುವ ಹೋಗುವ ದೃಶ್ಯಗಳು ಸಹಜವಾಗಿತ್ತು.
ಇದನ್ನೂ ಓದಿ: Crime News: ಇಬ್ಬರು ಹೆಂಡ್ತಿಯ ಮುದ್ದಿನ ಗಂಡನ ಬರ್ಬರ ಹತ್ಯೆ! 20 ವರ್ಷ ಬಿಟ್ಟು ಬಂದ ತಂದೆಯನ್ನು ಕೊಂದ ಮಗ
ಇನ್ನು ಬಾಡೂಟ ಸವಿಯಲು ಪ್ಲೇಟ್ ಗಳು ಸಿಗದ ಕಾರಣ, ಸಾಂಬಾರ್ ಬಟ್ಟಲು ಗಳಲ್ಲಿ ಬಾಡೂಟ ಹಾಕಿಸಿಕೊಂಡು ಊಟ ಸವಿದರು. ಆದರೆ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರು, ತಾಳ್ಮೆ ಕಳೆದುಕೊಂಡ ಜನರು, ಸರತಿ ಸಾಲಿನಲ್ಲಿ ಕುಳಿತು ಊಟ ಮಾಡುವ ತಾಳ್ಮೆ ಕಳೆದುಕೊಂಡು ಊಟಕ್ಕಾಗಿ ತಾ ಮುಂದು ನಾ ಮುಂದು ಎಂದು ಮುಗಿಬಿದ್ದ ದೃಶ್ಯಗಳು ಕಂಡುಬಂತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ