ಭಾರತೀಯ ಆಹಾರ ಪದ್ಧತಿಯು (Food Style) ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದ್ದು, ವಿಭಿನ್ನ ರೀತಿಯಾದ ಮಸಾಲೆಗಳಿಗೆ (Spice ) ಪ್ರಸಿದ್ಧಿಯಾಗಿದೆ. ಭಾರತೀಯ ಭಕ್ಷ್ಯಗಳಲ್ಲಿ ಬಳಸುವ ಸಾಮಾನ್ಯ ಮಸಾಲೆಗಳಲ್ಲಿ ಒಂದು ಅಜವಾನ (Ajwain). ಬಿಷಪ್ಸ್ ವೀಡ್ (Bishops Weed) ಅಥವಾ ಕ್ಯಾರಮ್ ಸೀಡ್ (Carom Seed) ಎಂದು ಕರೆಯಲ್ಪಡುವ ಅಜವಾನ ಆರೋಗ್ಯಕ್ಕೆ ತುಂಬಾನೇ ಉಪಯುಕ್ತವಾದುದಾಗಿದೆ. ಇದನ್ನು ಹರ್ಬಲ್ ಟೀ ಮತ್ತು ಕರಿದ ಆಹಾರಗಳಲ್ಲಿ ಸೇರಿಸಲಾಗುತ್ತದೆ. ಭಾರತದಲ್ಲಿಅಜವಾನ ಬೆಳೆಯುತ್ತಾರೆ. ವಿಶೇಷವಾಗಿ ರಾಜಸ್ಥಾನದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಾರೆ. ಆಯುರ್ವೇದದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.
ಅಜವಾನದ ಉಪಯೋಗಗಳು:
ಅಜವಾನ ಬೀಜ ನೈಸರ್ಗಿಕವಾಗಿ ಬೆಳೆಯುವಂತದ್ದು ಇದರಲ್ಲಿರುವ ಥೈಮೋಲ್ ಎಂಬ ತೈಲದ ಅಂಶವು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನನಿತ್ಯ ಸೇವಿಸುವ ಆಹಾರದಲ್ಲಿ ಅಜವಾನವನ್ನು ಸೇರಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದು ಇಲ್ಲಿದೆ;
ಇದನ್ನೂ ಓದಿ: Jowar benefits: ಜೋಳ ತಿಂದು ಬೇಗ ತೂಕ ಇಳಿಕೆ ಸಾಧ್ಯ! ತಿನ್ನುವ ರೀತಿ ತಿಳಿದುಕೊಳ್ಳಿ
ಉತ್ತಮ ಜೀರ್ಣಕ್ರಿಯೆ
ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜವಾನ ನೀರನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಅಡುತ್ತದೆ. ಎರಡು ಟೀ ಚಮಚದಷ್ಟು ಅಜವಾನವನ್ನು ರಾತ್ರಿಯಿಡೀ ನೆನೆಸಿಡಬೇಕು. ಬೆಳಗ್ಗೆ ಇದನ್ನು ಕುದಿಸಿ ತಣ್ಣಾಗಾದ ಬಳಿಕ ಕುಡಿಯಬೇಕು.
ತೂಕ ಕಡಿತ
ಜೀರ್ಣಕ್ರಿಯೆಯ ಸಮಸ್ಯೆಯು ಅನಗತ್ಯವಾಗಿ ತೂಕವನ್ನು ಹೆಚ್ಚಿಸುತ್ತದೆ. ಆದರೆ ದಿನನಿತ್ಯ ಅಜವಾನ ನೀರನ್ನು ಕುಡಿಯುವುದರಿಂದ ತೂಕವನ್ನು ಇಳಿಸಬಹುದು.
ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ
ಗರ್ಭೀಣಿಯರಲ್ಲಿ ಮಲಬದ್ಧತೆ ಮತ್ತು ಉಬ್ಬುವಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಪ್ರತಿನಿತ್ಯ ಅಜವಾನ ನೀರನ್ನು ಗರ್ಭೀಣಿಯರು ಕುಡಿಯುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.
ಆ್ಯಸಿಡಿಟಿ ಸಮಸ್ಯೆ ನಿವಾರಣೆ
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು ಮತ್ತು ಜಂಕ್ ಫುಡ್ ಗಳ ಸೇವನೆಯಿಂದ ಆ್ಯಸಿಡಿಟಿಯ ಸಮಸ್ಯೆ ಉಂಟಾಗುತ್ತದೆ. ಸೇವಿಸುವ ಆಹಾರದಲ್ಲಿನ ಅಜವಾನ ಸೇರಿಸುವುದರಿಂದ ಅಥವ ಊಟದ ಬಳಿಕ ಅಜವಾನ ನೀರು ಕುಡಿಯುವುದರಿಂದ ಆ್ಯಸಿಡಿಟಿಯನ್ನು ನಿವಾರಿಸಬಹುದು.
ಕೆಮ್ಮು ನೆಗಡಿಗೆ ಪರಿಹಾರ
ಸಾಮಾನ್ಯವಾಗಿ ಎಲ್ಲರನ್ನೂ ಹೆಚ್ಚಾಗಿ ಬಾಧಿಸುವ ಕಾಯಿಲೆ ಅದು ಕೆಮ್ಮ ಮತ್ತು ನೆಗಡಿ. ತುಳಸಿ ಎಲೆಗಳನ್ನು ಮತ್ತು ಓಂದು ಟೀ ಚಮಚದಷ್ಟು ಅಜವಾನವನ್ನು ಒಟ್ಟಿಗೆ ಕುದಿಸಿ ಸೇವಿಸಿದರೆ ಕೆಮ್ಮ ನೆಗಡಿಯನ್ನು ಗುಣಪಡಿಸಿಕೊಳ್ಳಬಹುದು.
ನಟಿ ಪರಿಣಿತ ಚೋಪ್ರಾ ಅಜ್ವೇನ್ ನೀರು ಪ್ರತಿನಿತ್ಯ ಕುಡಿಯುತ್ತಾರೆ
ನಟಿ ಪರಿಣಿತ ಚೋಪ್ರಾ ಕೂಡ ದೈನಂದಿನ ಅಜವಾನವನ್ನು ಸೇವಿಸುತ್ತಾರೆ. ಜೀರಿಗೆ, ಸೌನ್ಫ್ (ಫೆನ್ನೆಲ್), ಅಜವಾನ ಮತ್ತು ಶುಂಠಿಯ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಗುಣಮುಖಗೊಳಿಸಬಹುದು. ಮತ್ತು ಆರೋಗ್ಯವನ್ನು ಸುರಕ್ಷಿತವಾಗಿಟ್ಟಕೊಳ್ಳಲು ಅಜವಾನ ಸೇವನೆ ಹಿತಕರ ಎಂದು ಅವರು ಹೇಳುತ್ತಾರೆ.
ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ರೋಫೈಲ್ ನಲ್ಲಿ ಹಂಚಿಕೊಂಡ ಅಜವಾನ ನೀರನ್ನು ತಯಾರಿಸುವ ವಿಧಾನ ಇಲ್ಲಿದೆ;
ಪದಾರ್ಥಗಳು:
ಫೆನ್ನೆಲ್ ಬೀಜಗಳು - 1 ಟೀಚಮಚ
ಜೀರಿಗೆ - 1 ಟೀಚಮಚ
ಅಜವಾನ - 1 ಟೀಚಮಚ
ಶುಂಠಿ - 1 ಇಂಚು
ತಯಾರಿಸುವ ವಿಧಾನ:
ಈ ನಾಲ್ಕು ಪದಾರ್ಥಗಳನ್ನು ಒಟ್ಟಿಗೆ 3-4 ನಿಮಿಷಗಳ ಕಾಲ ಕುದಿಸಬೇಕು ಮತ್ತೆ ಆದನ್ನು ತಣ್ಣಾಗಾಗಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಇದನ್ನೂ ಓದಿ: Health Tips: ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಇದೆ ಇಷ್ಟೆಲ್ಲ ಪ್ರಯೋಜನ!
ಅಜವಾನ ನೀರು ಕುಡಿಯುವುದರಿಂದ ಉರಿಯೂತ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ. ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ