• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Famous Food: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ, ಈ ನಿಲ್ದಾಣಗಳಲ್ಲಿ ಸಿಗುವ ಫೇಮಸ್ ತಿಂಡಿಗಳನ್ನು ಟೇಸ್ಟ್ ಮಾಡೋದನ್ನು ಮಾತ್ರ ಮರೀಬೇಡಿ

Famous Food: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ, ಈ ನಿಲ್ದಾಣಗಳಲ್ಲಿ ಸಿಗುವ ಫೇಮಸ್ ತಿಂಡಿಗಳನ್ನು ಟೇಸ್ಟ್ ಮಾಡೋದನ್ನು ಮಾತ್ರ ಮರೀಬೇಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರೈಲು ಪ್ರಯಾಣದ ವೇಳೆ ಆ ಸ್ಥಳದ ಅತ್ಯುತ್ತಮ ಸ್ಥಳೀಯ ಪರಿಮಳಗಳನ್ನು ನಿಮಗೆ ಒದಗಿಸುವ ಈ ನಿಲ್ದಾಣ ಬದಿಯಲ್ಲಿ ಸಿಗುವ ಆಹಾರಗಳನ್ನು ಪ್ರಯತ್ನಿಸುವ ಮೂಲಕ ನಿಮ್ಮ ಮುಂದಿನ ರೈಲು ಪ್ರಯಾಣವನ್ನು ಇನ್ನಷ್ಟು ಆನಂದದಾಯಕವಾಗಿ ಮಾಡಿಕೊಳ್ಳಿ. ಮುಂದಿನ ಬಾರಿ ನೀವು ಈ ನಿಲ್ದಾಣಗಳಲ್ಲಿ ನಿಂತಾಗ ಈ ಫೇಮಸ್ ತಿಂಡಿಗಳನ್ನು ಟೇಸ್ಟ್ ಮಾಡದೆ ಇರಬೇಡಿ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಜನರು ‘ಈ ರೈಲ್ವೆಗಳಲ್ಲಿ ಚಹಾ (Tea) ತುಂಬಾನೇ ರುಚಿಯಾಗಿರುತ್ತದೆ ಮತ್ತು ಚೆನ್ನಾಗಿ ಕುದಿಸಿರುವುದಿಲ್ಲ, ಊಟವು ಸಹ ಸಪ್ಪೆಯಾಗಿರುತ್ತದೆ’ ಅಂತೆಲ್ಲಾ ಹೇಳಿ ತಮ್ಮ ಮನೆಯಿಂದಲೇ ಊಟವನ್ನು ಕಟ್ಟಿಕೊಂಡು ರೈಲಿನಲ್ಲಿ ಪ್ರಯಾಣಿಸುವುದನ್ನು (Travel) ನಾವು ನೋಡಿರುತ್ತೇವೆ. ಆದರೆ ಇನ್ನೊಂದು ಕಡೆ, ಕೆಲವು ರೈಲ್ವೆ ಸ್ಟೇಷನ್ ಗಳಲ್ಲಿ ಜನರು ಅಲ್ಲಿ ಸಿಗುವಂತಹ ತಿಂಡಿಗಳನ್ನು (Snacks) ನೆನಪಿಟ್ಟುಕೊಂಡಿರುತ್ತಾರೆ ಮತ್ತು ಆ ಸ್ಟೇಷನ್ ಹಾದು ಹೋಗುತ್ತಿದ್ದರೆ, ಅಲ್ಲಿ ರೈಲು ನಿಂತಾಗ ಆ ತಿಂಡಿಯ ರುಚಿಯನ್ನು (Taste) ಸವಿಯದೆ ಇರಲಾರರು.  ಈ ರೈಲು ಪ್ರಯಾಣಗಳು ಅನೇಕ ಕಾರಣಗಳಿಗಾಗಿ ರೋಮಾಂಚನಕಾರಿಯಾಗಿರುತ್ತವೆ. ಹೊಸ ಗಮ್ಯಸ್ಥಾನವನ್ನು ತಲುಪುವ ನಿರೀಕ್ಷೆ, ರೈಲು ಪ್ರಯಾಣದ ಸವಲತ್ತುಗಳೊಂದಿಗೆ, ನೀವು ಏಕಾಂಗಿಯಾಗಿ ಪ್ರಯಾಣಿಸುತ್ತೀರೋ ಅಥವಾ ಸ್ನೇಹಿತರು (Friends) ಮತ್ತು ಕುಟುಂಬದೊಂದಿಗೆ ಪ್ರಯಾಣಿಸುತ್ತೀರೋ ಎಂಬುದನ್ನು ಲೆಕ್ಕಿಸದೆ ಸ್ಮರಣೀಯ ಪ್ರವಾಸಕ್ಕೆ ಕಾರಣವಾಗುತ್ತದೆ.


ರೈಲು ಪ್ರಯಾಣದ ವೇಳೆ ಆ ಸ್ಥಳದ ಅತ್ಯುತ್ತಮ ಸ್ಥಳೀಯ ಪರಿಮಳಗಳನ್ನು ನಿಮಗೆ ಒದಗಿಸುವ ಈ ನಿಲ್ದಾಣ ಬದಿಯಲ್ಲಿ ಸಿಗುವ ಆಹಾರಗಳನ್ನು ಪ್ರಯತ್ನಿಸುವ ಮೂಲಕ ನಿಮ್ಮ ಮುಂದಿನ ರೈಲು ಪ್ರಯಾಣವನ್ನು ಇನ್ನಷ್ಟು ಆನಂದದಾಯಕವಾಗಿ ಮಾಡಿಕೊಳ್ಳಿ. ಮುಂದಿನ ಬಾರಿ ನೀವು ಈ ನಿಲ್ದಾಣಗಳಲ್ಲಿ ನಿಂತಾಗ ಈ ಫೇಮಸ್ ತಿಂಡಿಗಳನ್ನು ಟೇಸ್ಟ್ ಮಾಡದೆ ಇರಬೇಡಿ.


ಸಹಾಯಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನಂತ್ ರೂಪನಗುಡಿ ಅವರು ರೈಲ್ವೆ ನಿಲ್ದಾಣಗಳನ್ನು ಜನಪ್ರಿಯಗೊಳಿಸಿದ ಕೆಲವು ಭಕ್ಷ್ಯಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ ನೋಡಿ. ಆಹಾರ ಪ್ರಿಯರು ಈ ನಿಲ್ದಾಣಗಳಿಗೆ ಹೋದರೆ ಈ ತಿಂಡಿಗಳನ್ನು ಒಮ್ಮೆ ಟೇಸ್ಟ್ ಮಾಡಿ.


  • ತುಂಡ್ಲಾ ರೈಲ್ವೆ ನಿಲ್ದಾಣದಲ್ಲಿ ಆಲೂ ಟಿಕ್ಕಿ
    ಉತ್ತರ ಪ್ರದೇಶದ ಅನೇಕ ನಗರಗಳು ಚಾಟ್ ಗಳಿಗೆ ತುಂಬಾನೇ ಹೆಸರುವಾಸಿಯಾಗಿವೆ ಮತ್ತು ತುಂಡ್ಲಾ ಅವುಗಳಲ್ಲಿ ಒಂದಾಗಿದೆ. ಈ ನಿಲ್ದಾಣದಲ್ಲಿ ನೀವು ಆಯ್ಕೆ ಮಾಡಿಕೊಳ್ಳಲು ವಿವಿಧ ರೀತಿಯ ಸಿಹಿ ಮತ್ತು ಮಸಾಲೆಯುಕ್ತ ಚಾಟ್ ಗಳು ಇಲ್ಲಿ ಲಭ್ಯವಿವೆ ಎಂದು ಹೇಳಬಹುದು. ನಿಮಗೆ ಸಮಯದ ಕೊರತೆಯಿದ್ದರೆ, ನೀವು ಆಲೂ ಟಿಕ್ಕಿಯನ್ನು ಬೇಗನೆ ಆರ್ಡರ್ ಮಾಡಿಕೊಳ್ಳಬಹುದು, ಇದರ ಅನನ್ಯ ರುಚಿ ಒಮ್ಮೆ ನಿಮ್ಮ ನಾಲಿಗೆಗೆ ತಾಕಿದರೆ ಸಾಕು, ನೀವು ಈ ನಿಲ್ದಾಣವನ್ನು ಹುಡುಕಿಕೊಂಡು ಬರುತ್ತೀರಿ.


ಇದನ್ನೂ ಓದಿ:  Potato Halwa: ಫೈಬರ್ ಸಮೃದ್ಧ ಆಲೂಗಡ್ಡೆ ಹಲ್ವಾ ಮಾಡಿ ಸವಿಯಿರಿ, ಆರೋಗ್ಯ ಪ್ರಯೋಜನ ಪಡೆಯಿರಿ

  • ರತ್ಲಾಮ್ ನಿಲ್ದಾಣದಲ್ಲಿ ಸಿಗುವ ಕಾಂದಾ ಪೋಹಾ
    ಮಧ್ಯಪ್ರದೇಶದಲ್ಲಿ ಅವಲಕ್ಕಿಯನ್ನು ತುಂಬಾನೇ ಚೆನ್ನಾಗಿ ಮಾಡಿ ಬಡಿಸಲಾಗುತ್ತದೆ ಮತ್ತು ರಾಜ್ಯದ ವಿಶೇಷತೆಯಾದ ಜೀರವಾನ್ ಮಸಾಲವು ಅದರ ಆಹಾರಕ್ಕೆ ಸಾಟಿಯಿಲ್ಲದ ರುಚಿಯನ್ನು ನೀಡುತ್ತದೆ. ರತ್ಲಾಮ್ ನಿಲ್ದಾಣದ ಅವಲಕ್ಕಿ, ಹಸಿ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ತುಂಬಾನೇ ಟೇಸ್ಟಿ ಆಗಿರುತ್ತದೆ ಮತ್ತು ನೀವು ಮುಂದಿನ ಬಾರಿ ಈ ನಗರವನ್ನು ಹಾದು ಹೋಗುವಾಗ ಇದರ ರುಚಿಯನ್ನು ಒಮ್ಮೆ ನೋಡಲೇಬೇಕು.



  • ಅಮೃತ್ಸರ್ ನಿಲ್ದಾಣದಲ್ಲಿ ಸಿಗುವ ಅಮೃತ್ಸರಿ ಲಸ್ಸಿ
    ನೀವು ಭಾರತದ ಅನೇಕ ಸ್ಥಳಗಳಲ್ಲಿ ಲಸ್ಸಿಯನ್ನು ಕುಡಿದಿರಬಹುದು, ಆದರೆ ನೀವು ಅಮೃತ್‌ಸರಿ ಲಸ್ಸಿಯನ್ನು ಸವಿಯದಿದ್ದರೆ, ನೀವು ಲಸ್ಸಿಯ ಈ ಅನನ್ಯವಾದ ಪಾನೀಯವನ್ನು ಮಿಸ್ ಮಾಡಿಕೊಂಡಂತೆ ಲೆಕ್ಕ. ಪಂಜಾಬ್ ರಾಜ್ಯಗಳಲ್ಲಿ 'ದಹಿ' ಏಕೆ ಪ್ರಮುಖವಾಗಿದೆ ಎಂಬುದಕ್ಕೆ ಒಂದು ಕಾರಣವಿದೆ ಮತ್ತು ಅದು ತುಂಬಾನೇ ಪ್ರಚಾರಕ್ಕೆ ಏಕೆ ಯೋಗ್ಯವಾಗಿದೆ ಎಂದು ತಿಳಿಯಲು ನೀವು ಈ ಲಸ್ಸಿಯನ್ನು ಒಮ್ಮೆಯಾದರೂ ಕುಡಿಯಲೇಬೇಕು.



  • ಕರ್ನಾಟಕದ ಮದ್ದೂರಿನಲ್ಲಿ ಸಿಗುವ ಮದ್ದೂರು ವಡಾ
    ಮದ್ದೂರು ವಡಾ ಅಕ್ಕಿ ಹಿಟ್ಟು, ರವೆ ಮತ್ತು ಕತ್ತರಿಸಿದ ಈರುಳ್ಳಿಯಿಂದ ಮಾಡಿದ ಗರಿಗರಿಯಾದ ಹುರಿದ ಟಿಕ್ಕಿಗಳಾಗಿವೆ. ಈ ಖಾದ್ಯವು ಕರ್ನಾಟಕದ ಮದ್ದೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ, ಮತ್ತು ಅದರ ವಿಶಿಷ್ಟ ರುಚಿಗಾಗಿ ದೇಶಾದ್ಯಂತ ಪ್ರಸಿದ್ಧವಾಗಿದೆ.


ಇದನ್ನೂ ಓದಿ: Ganesh Chaturthi: ಗಣೇಶನಿಗೆ ಪ್ರಿಯವಾದ ಆಹಾರಗಳು ಯಾವುದು? ಮೋದಕ ಪ್ರಿಯನ 'ತಿಂಡಿ' ಹಿಂದಿನ ಕಥೆ!

  • ಕ್ಯಾಲಿಕಟ್ ನಿಲ್ದಾಣದಲ್ಲಿ ಸಿಗುವ ಕೋಯಿಕ್ಕೋಡ್ ಹಲ್ವಾ
    ಸಿಹಿಯಾದ ಜೆಲ್ಲಿಯಂತಹ ಪುಡ್ಡಿಂಗ್ ಅನ್ನು ತೆಂಗಿನಕಾಯಿ ಮತ್ತು ಕೇರಳದ ಸ್ಥಳೀಯ ಮಸಾಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಇದು ಸ್ಥಳೀಯರಿಗೆ ಮತ್ತು ಸ್ಥಳೀಯರಲ್ಲದವರಲ್ಲಿಯೂ ಸಮಾನವಾಗಿ ಪ್ರಸಿದ್ಧ ಭಕ್ಷ್ಯವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಕೇರಳದ ಪಾಕಪದ್ಧತಿಯ ಸಾಂಪ್ರದಾಯಿಕ ರುಚಿಯನ್ನು ಅನುಭವಿಸಲು ನೀವು ಈ ಹಲ್ವಾವನ್ನು ಒಮ್ಮೆಯಾದರೂ ತಿನ್ನಲೇಬೇಕು.

top videos
    First published: