Haircare Tips: ಉದ್ದನೆಯ, ಹೊಳಪುಳ್ಳ ಕೇಶರಾಶಿಗಾಗಿ ಈ ಮೂರು ವಸ್ತುಗಳನ್ನು ಸೇವಿಸಿ

Food diet tips for long, shiny and silky hair: ಕೂದಲಿನ ಬೆಳವಣಿಗೆಗೆ ಮೂರು ಪದಾರ್ಥಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಎಂದು ಪೂಜಾ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ

Tips for long hair

Tips for long hair

  • Share this:
    ಮೃದು, ಉದ್ದನೆಯ ಮತ್ತು ಹೊಳಪುಳ್ಳ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಕೂದಲಿನ ಹೊಳಪು (Long and Shiny Hair) ಮತ್ತು ದೃಢತೆಯನ್ನು ಕಾಪಾಡಲು, ಹಲವಾರು ಬಗೆಯ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು, ನೈಸರ್ಗಿಕವಾದ ರೀತಿಯಲ್ಲಿ ಪ್ರಯತ್ನಿಸುವುದು ಯಾವಾಗಲೂ ಉತ್ತಮ. ಅದರಲ್ಲೂ, ಮನೆಯಲ್ಲಿಯೇ ಸುಲಭವಾಗಿ ಲಭ್ಯವಾಗುವ ಪದಾರ್ಥಗಳನ್ನು ಬಳಸಿ ನಮ್ಮ ಆ ಉದ್ದೇಶವನ್ನು ಪೂರ್ಣಗೊಳಿಸುವುದು ಸಾಧ್ಯವಾದರೆ ಇನ್ನೂ ಒಳ್ಳೆಯದು. ಪೌಷ್ಟಿಕ ತಜ್ಞೆ ಪೂಜಾ ಮಖೀಜಾ, ತಮ್ಮ ಇನ್‍ಸ್ಟಾಗ್ರಾಂ ವಿಡಿಯೋದಲ್ಲಿ (Instagram Video), ಉದ್ದನೆಯ ಕೂದಲನ್ನು (Tips for long and silky hair) ಪಡೆಯುವ ಸರಳ ವಿಧಾನಗಳನ್ನು ಹಂಚಿಕೊಂಡಿದ್ದಾರೆ.

    ಉದ್ದನೆಯ ಮತ್ತು ಹೊಳಪುಳ್ಳ ಕೂದಲನ್ನು ಪಡೆಯುವ ಸರಳ ಉಪಾಯಗಳು (Tips for long, shiny and silky hair): ಕೂದಲಿನ ಬೆಳವಣಿಗೆಗೆ ಮೂರು ಪದಾರ್ಥಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಎಂದು ಪೂಜಾ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ. ಅವರ

    ವಿಡಿಯೋದಲ್ಲಿ ತಿಳಿಸಲಾದ ಮೂರು ಮುಖ್ಯ ಪದಾರ್ಥಗಳು ಈ ಕೆಳಗಿನಂತಿವೆ:
    1) ನೆಲ್ಲಿಕಾಯಿ (Amla):
    ಇದು ಔಷಧೀಯ ಗುಣಗಳುಳ್ಳ ಒಂದು ಆಹಾರ ವಸ್ತುವಾಗಿದ್ದು, ಅದರ ಉಪಯೋಗಗಳನ್ನು ಬಹುಷಃ ಯಾವ ಭಾರತೀಯನೂ ಅಲ್ಲಗಳೆಯುವುದಿಲ್ಲ. ನೆಲ್ಲಿಕಾಯಿ ನಿಸರ್ಗದತ್ತವಾದದ್ದು ಮತ್ತು ಅತ್ಯಧಿಕ ವಿಟಮಿನ್ ಸಿ ಹೊಂದಿದೆ. ಅದರಲ್ಲಿ ಇರುವ ಕೊಲಾಜಿನ್ ಕೂದಲು ಉದ್ದ ಬೆಳೆಯಲು ಕಾರಣ ಎಂದು ಪೂಜಾ ತಿಳಿಸಿದ್ದಾರೆ.
    ನಮ್ಮ ವಯಸ್ಸು, ವಂಶವಾಹಿ ಮತ್ತು ಆಹಾರ ಕ್ರಮಕ್ಕೆಅನುಗುಣವಾಗಿ, ಕೂದಲು ವರ್ಷಕ್ಕೆ ಸುಮಾರು 6 ಇಂಚಿನಷ್ಟು ಉದ್ದ ಬೆಳೆಯುತ್ತದೆ. “ನಾವು ವಯಸ್ಸು ಮತ್ತು ವಂಶವಾಹಿಯ ಅಂಶದ ಬಗ್ಗೆ ಏನನ್ನು ಮಾಡಲು ಸಾಧ್ಯವಿಲ್ಲ, ಆದರೆ ಆಹಾರ ಕ್ರಮದ ಬಗ್ಗೆ ಮಾಡಬಹುದು” ಎನ್ನುತ್ತಾರೆ ಪೂಜಾ.

    2) ಅಗಸೆ ಬೀಜ:
    ಅಗಸೆ ಬೀಜದಲ್ಲಿ ದೇಹಕ್ಕೆ ಉಪಯುಕ್ತವಾದ ಫೈಬರ್ ಮತ್ತು ಪ್ರೋಟೀನ್ ಇದೆ. ಎರಡು ಟೇಬಲ್ ಚಮಚದಷ್ಟು ಅಗಸೆ ಬೀಜದಲ್ಲಿ, 6,400 ಮಿಲಿ ಗ್ರಾಂ ನಷ್ಟು ಒಮೆಗಾ-3 ಫ್ಯಾಟಿ ಆ್ಯಸಿಡ್ ಇರುತ್ತದೆ ಎಂಬುವುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ ಎನ್ನುತ್ತಾರೆ ಪೂಜಾ. ಅದು ನಿಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಸಹಾಯ ಮಾಡುತ್ತದೆ.

    3) ಕರಿಬೇವಿನ ಎಲೆ:
    ಕರಿಬೇವಿನ ಎಲೆಗಳು ಪ್ರತಿಯೊಬ್ಬ ಭಾರತೀಯರ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯ ಇರುವಂತದ್ದು. ತಾನು ನಿತ್ಯವೂ ತರಕಾರಿ ಜ್ಯೂಸ್‍ಗೆ 10-15 ಕರಿಬೇವಿನ ಎಲೆಗಳನ್ನು ಹಾಕಿ ಸೇವಿಸುವುದಾಗಿ ಪೂಜಾ ಹೇಳಿದ್ದಾರೆ. ಅದರಲ್ಲಿರುವ ಬೀಟಾ ಕೆರೋಟಿನ್ ಮತ್ತು ವಿಟಮಿನ್ ಇ (Vitamin E) ಕೂದಲಿಗೆ ಹೊಳಪು ನೀಡುತ್ತದೆ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: Hair Problem: ಕೂದಲು ಅತಿಯಾಗಿ ಉದುರುತ್ತಿವೆಯೇ..? ಅದಕ್ಕೆ ಕಾರಣ ಇದೇ ಇರಬಹುದಾ..!

    ಪೂಜಾ ಮಖೀಜಾ ತನ್ನ ಇನ್‍ಸ್ಟಾಗ್ರಾಂ ಹಿಂಬಾಲಕರಿಗೆ, ಸುಲಭವಾಗಿ ಲಭ್ಯ ಇರುವ ಈ ಮೂರು ಆಹಾರ ಪದಾರ್ಥಗಳನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವು ಮೂಲಕ, ಉದ್ದನೆಯ ಹೊಳಪುಳ್ಳ ಕೂದಲನ್ನು ಪಡೆಯಬಹುದು ಎಂದು ಹೇಳಿದ್ದಾರೆ.

    ಇದನ್ನೂ ಓದಿ: Dark Knees: ಮಂಡಿ-ಮೊಣಕೈ ಕಪ್ಪಾಗಿದೆಯಾ? ಹಾಗಾದ್ರೆ ಇಷ್ಟು ಮಾಡಿ ಸಾಕು

    ಈ ಮೊದಲು , ಕೋವಿಡ್ ನಂತರದ ಉಂಟಾಗುವ ಕೂದಲಿನ ಹಾನಿಯನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದರು. ಏಳು ಬಾದಾಮಿ ಮತ್ತು ಎರಡು ವಾಲ್‍ನಟ್ (Badam and Walnut), ಚಿಯಾ (Chia Seeds), ಕುಂಬಳಕಾಯಿ ಬೀಜ (Pumpkin Seeds), ಅಗಸೆ ಬೀಜ ಮತ್ತು ವರ್ಜಿನ್ ತೆಂಗಿನ ಎಣ್ಣೆಯನ್ನು (Virgin Coconut Oil) ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ಸಲಹೆ ನೀಡಿದ್ದರು ಪೂಜಾ. ಉತ್ತಮ ಪ್ರೋಟೀನ್‍ಗಾಗಿ ಮೊಟ್ಟೆ ಸೇವಿಸಬೇಕು (Eat Eggs for Natural Protein for your hair), ಮೊಟ್ಟೆಯ ಮೂರು ಬಿಳಿ ಭಾಗ ಮತ್ತು ಒಂದು ಹಳದಿ ಭಾಗ ಸಾಕಾಗುತ್ತದೆ ಎಂದು ಪೂಜಾ ಹೇಳಿದ್ದಾರೆ.
    Published by:Sharath Sharma Kalagaru
    First published: