Low Blood Pressure: ರಕ್ತದೊತ್ತಡ- ಮೂಳೆಗಳ ಆರೋಗ್ಯಕ್ಕೆ ಬೇಕು ಹಿಮಾಲಯನ್ ಉಪ್ಪು; ಏನಿದರ ವಿಶೇಷತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದ ಹೇಳುವ ಪ್ರಕಾರ ಹಿಮಾಲಯನ್ ಉಪ್ಪು ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುವ ಅಪರೂಪದ ಅಂಶಗಳಿಂದ ಕೂಡಿದೆ. ಇದು ಉಪ್ಪು ಮತ್ತು ರುಚಿಯಲ್ಲಿ ಸ್ವಲ್ಪ ಸಿಹಿ. ಶಕ್ತಿಯಲ್ಲಿ ತಂಪು. ಮತ್ತು ಜೀರ್ಣಕ್ರಿಯೆಯಲ್ಲಿ ಹಗುರ. ಕಲ್ಲು ಉಪ್ಪಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ.

  • Share this:

ಒಬ್ಬ ವ್ಯಕ್ತಿಯು (Person) ದೈನಂದಿನ (Daily) ಜೀವನವನ್ನು (Life) ಖುಷಿಯಿಂದ ನಡೆಸಲು ಆತನಿಗೆ ಆರೋಗ್ಯ (Health) ತುಂಬಾ ಮುಖ್ಯ. ಅದರಲ್ಲೂ ವಯಸ್ಸಾಗುತ್ತಾ (Aged) ಹೋದಂತೆ ಹಲವು ರೀತಿಯ ಕಾಯಿಲೆಗಳು (Disease) ಸಾಕಷ್ಟು ತೊಂದರೆ ಕೊಡುತ್ತವೆ. ಅವುಗಳಲ್ಲಿ ಇತ್ತೀಚೆಗೆ ಕೆಲವು ಕಾಯಿಲೆಗಳು ಸಾಮಾನ್ಯ ಎಂಬಂತಾಗಿವೆ. ಅಂದ್ರೆ ಬಹುತೇಕರಲ್ಲಿ ಈ ಸಮಸ್ಯೆಗಳು ಕಂಡು ಬರುತ್ತವೆ. ಅವುಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ (Low Blood Pressure) ಸಮಸ್ಯೆ ಕೂಡ ಕಾರಣವಾಗಿದೆ. ಅಧಿಕ ರಕ್ತದೊತ್ತಡವು ಗಂಭೀರ ಸಮಸ್ಯೆ ಆಗಿದೆ. ಜೊತೆಗೆ ಕಡಿಮೆ ರಕ್ತದೊತ್ತಡವು ಆರೋಗ್ಯಕ್ಕೆ ಅಪಾಯದ ಕರೆ ಗಂಟೆಯಾಗಿದೆ. ರಕ್ತದೊತ್ತಡ ಎಷ್ಟಿರಬೇಕು? ಯಾವುದೇ ವ್ಯಕ್ತಿಯ ರಕ್ತದೊತ್ತಡದ ಮಟ್ಟವು 120/80 mm Hg ಆಗಿರಬೇಕು ಎಂದು ತಜ್ಞರು ಹೇಳ್ತಾರೆ.


ಕಡಿಮೆ ರಕ್ತದೊತ್ತಡ


ಒಬ್ಬ ವ್ಯಕ್ತಿಯ ರಕ್ತದೊತ್ತಡವು 90/60mm Hg ಗಿಂತ ಕಡಿಮೆ ಇರುವ ಸ್ಥಿತಿಯನ್ನು ಕಡಿಮೆ ಬಿಪಿ ಅಥವಾ ಹೈಪೊಟೆನ್ಷನ್ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಯ ರಕ್ತದೊತ್ತಡದ ಮಟ್ಟವು 120/80 mm Hg ಆಗಿರಬೇಕು.


ಯಾವುದೇ ವ್ಯಕ್ತಿಯ ರಕ್ತದೊತ್ತಡವು 90/60mm Hg ಗಿಂತ ಕಡಿಮೆಯಾದರೆ, ಆರೋಗ್ಯಕ್ಕೆ ಅಪಾಯವಿದೆ ಎಂದು ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಹೇಳ್ತಾರೆ. ಅವರು ಕಡಿಮೆ ಬಿಪಿ ಸಮಸ್ಯೆ ನಿವಾರಿಸಲು ಅಗ್ಗದ ಮತ್ತು ಪರಿಣಾಮಕಾರಿ ಮಾರ್ಗ್ ಬಗ್ಗೆ ಇಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ


ಹಿಮಾಲಯನ್ ಉಪ್ಪು ಸೇವನೆ ಮಾಡುವುದು ಕಡಿಮೆ ರಕ್ತದೊತ್ತಡಕ್ಕೆ ಉತ್ತಮ ಚಿಕಿತ್ಸೆ


ಆಯುರ್ವೇದ ಹೇಳುವ ಪ್ರಕಾರ, ಹಿಮಾಲಯನ್ ಉಪ್ಪು ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುವ ಅಪರೂಪದ ಅಂಶಗಳಿಂದ ಕೂಡಿದೆ. ಇದು ಉಪ್ಪು ಮತ್ತು ರುಚಿಯಲ್ಲಿ ಸ್ವಲ್ಪ ಸಿಹಿ. ಶಕ್ತಿಯಲ್ಲಿ ತಂಪು. ಮತ್ತು ಜೀರ್ಣಕ್ರಿಯೆಯಲ್ಲಿ ಹಗುರ.


ಕಲ್ಲು ಉಪ್ಪಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಹಿಮಾಲಯನ್ ಉಪ್ಪಿನ ಆಯುರ್ವೇದ ಗುಣಲಕ್ಷಣ


ಉಪ್ಪಿನ ರುಚಿ ಸಾಮಾನ್ಯವಾಗಿ ಪಿತ್ತವನ್ನು ಉಲ್ಬಣ ಮಾಡುತ್ತದೆ. ಆದರೆ ಸೈಂಧವ ಲವಣ, ಸಾಮರ್ಥ್ಯದಲ್ಲಿ ತಂಪಾಗುವಿಕೆ ಪಿತ್ತವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮ ರೋಗಗಳಿಗೆ ಉತ್ತಮ ಆಯ್ಕೆ.


ಅದರ ಉಪ್ಪು ರುಚಿಯಿಂದಾಗಿ ಇದು ಗಾಳಿಯನ್ನು ಸಮತೋಲನ ಮಾಡುತ್ತದೆ. ಮತ್ತು ಲೋಳೆ ಹೊರ ಹಾಕುವ ಮೂಲಕ ಎದೆಯ ಅಸ್ವಸ್ಥತೆ ನಿವಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಕಫ ಸಹ ನಿವಾರಿಸುತ್ತದೆ.


ದೇಹದ ತೇವಾಂಶ ಕಾಪಾಡುತ್ತದೆ


ಸರಳ ನೀರು ಕುಡಿಯುವುದು ವಿಷ ಹೊರ ಹಾಕುತ್ತದೆ. ಆದರೆ ಇದು ಪ್ರಕ್ರಿಯೆಯಲ್ಲಿ ಕೆಲವು ಪ್ರಮುಖ ಖನಿಜಗಳನ್ನು ದುರ್ಬಲ ಮಾಡುತ್ತದೆ. ಮತ್ತು ತೆಗೆದು ಹಾಕುತ್ತದೆ. ಈ ನೀರು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಕಳೆದು ಹೋಗಬಹುದಾದ ಖನಿಜಗಳನ್ನು ಪುನಃ ತುಂಬಿಸುತ್ತದೆ.


ಕಲ್ಲು ಉಪ್ಪು ಕಡಿಮೆ ಬಿಪಿ ನಿಯಂತ್ರಿಸಿ, ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ


ಇದರ ನಿಯಮಿತ ಸೇವನೆಯು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜ ಒದಗಿಸುತ್ತದೆ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಮತ್ತು ಅದರ ಕಬ್ಬಿಣದ ಅಂಶದಿಂದಾಗಿ ರಕ್ತದ ಮಟ್ಟ ಹೆಚ್ಚಿಸುತ್ತದೆ. ರಕ್ತಹೀನತೆಗೆ ಉಪಯುಕ್ತವಾಗಿದೆ.


ಸ್ನಾಯು ಸೆಳೆತ ದೂರ ಮಾಡುತ್ತದೆ


ಸ್ನಾಯು ಸೆಳೆತವನ್ನು ಅನುಭವಿಸುವ ಜನರಲ್ಲಿ ಪೌಷ್ಟಿಕಾಂಶ ಮತ್ತು ಎಲೆಕ್ಟ್ರೋಲೈಟ್ಗಳು ಖಾಲಿಯಾಗುತ್ತವೆ. ಅಂತಹ ಸ್ಥಿತಿಯಲ್ಲಿ, ನೀರಿನಲ್ಲಿ ಒಂದು ಟೀಚಮಚ ಕಲ್ಲು ಉಪ್ಪನ್ನು ಬೆರೆಸಿ ಸೇವಿಸದರೆ ಕೆಲವೇ ನಿಮಿಷಗಳಲ್ಲಿ ಪರಿಹಾರ ಸಿಗುತ್ತದೆ.


ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ


ನೋಯುತ್ತಿರುವ ಗಂಟಲಿಗೆ ಪರಿಹಾರ


ನೀರಿನೊಂದಿಗೆ ಕಲ್ಲು ಉಪ್ಪಿನಿಂದ ಗಾರ್ಗ್ಲಿಂಗ್ ಮಾಡುವುದು ಗಂಟಲು ನೋವಿಗೆ ಸಾಮಾನ್ಯ ಮನೆಮದ್ದು. ಇದು ಡಿಕೊಂಜೆಸ್ಟೆಂಟ್ ಗುಣ ಹೊಂದಿದೆ. ಅದು ನಿಮ್ಮ ಉಸಿರು ಕಟ್ಟುವ ಮೂಗು, ಕೆಮ್ಮನ್ನು ನಿವಾರಿಸಲು ಮತ್ತು ಮೂಗು ಮತ್ತು ಗಂಟಲಿನ ಕುಳಿಗಳನ್ನು ತೆರವುಗೊಳಿಸಲು ಸಹಕಾರಿ.

top videos
    First published: