Weight Loss Recipe: ಚಿಯಾ ಬೀಜವನ್ನು ಹೀಗೆ ತಿಂದ್ರೆ ಬೇಗ ತೂಕ ಕಡಿಮೆಯಾಗುತ್ತಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chia Seeds And curd: ಮೊಸರು ಸಹ ಕೊಬ್ಬು ಕರಗಿಸುವ ಅತ್ಯುತ್ತಮ ಆಹಾರವಾಗಿದೆ ಎಂದು ಅವರು ಹೇಳಿದ್ದಾರೆ. ಮೊಸರು “ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು BMI ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

  • Share this:

ತೂಕ ಇಳಿಕೆಯಲ್ಲಿ (weight loss) ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಸರಳ ಆಹಾರಗಳು ನಮ್ಮ ದೇಹದ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಪ್ರಮುಖವಾದದ್ದು ಚಿಯಾ ಬೀಜಗಳು. ಇದರಲ್ಲಿರುವ ಫೈಬರ್, ಪ್ರೋಟೀನ್ ಅಂಶಗಳು ತೂಕ ಇಳಿಕೆಗೆ (weight loss) ಅಪಾರ ಕೊಡುಗೆ ನೀಡುತ್ತದೆ.ಚಿಯಾ ಬೀಜಗಳು ಎಲ್ಲಾ ಪೌಷ್ಠಿಕಾಂಶದಿಂದ ಸಮೃದ್ಧವಾಗಿದ್ದು, ಇದನ್ನು ಹಲವು ರೀತಿಯಲ್ಲಿ ನಮ್ಮ ಆಹಾರದಲ್ಲಿ ಸೇರಿಸಿಕೊಂಡು ಸೇವಿಸಬಹುದು. ಇದನ್ನು ತಿಂಡಿಗೆ ಸ್ಮೂಥಿಯಾಗಿ, ಕೆಲವು ಹಣ್ಣಿನ ಜ್ಯೂಸ್‌ಗಳಲ್ಲಿ (Fruit Juice)  ಅಥವಾ ಹಾಗೆ ನೆನೆಸಿದ ಬೀಜಗಳನ್ನು ನೀರಿಗೆ ಹಾಕಿಕೊಂಡು ಕುಡಿಯಬಹುದು. ಮಕ್ಕಳಿಗೆ ಹಣ್ಣಿನ ಜೊತೆ ಪಡ್ಡಿಂಗ್ ಕೂಡ ಮಾಡಿಕೊಡಬಹುದು.


ಡಯಟ್ ಮಾಡುತ್ತಿರುವವರಿಗೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮೊಸರು ಮತ್ತು ಚಿಯಾ ಸ್ಮೂಥಿಯು ಸಾಕಷ್ಟು ಉತ್ತಮ ಆಯ್ಕೆಯಾಗಿದ್ದು, ಅದನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಆಹಾರ ತಜ್ಞೆ ದಿಶಾ ಬಾತ್ರಾ ತಿಳಿಸಿಕೊಟ್ಟಿದ್ದಾರೆ. ಮೊಸರು ಮತ್ತು ಚಿಯಾ ಸ್ಮೂಥಿಯ ಪಾಕ ವಿಧಾನ ತಿಳಿಯುವ ಮುನ್ನ ಮೊದಲು ಅದರ ಪ್ರಯೋಜನ ಮತ್ತು ಸತ್ವಗಳ ಬಗ್ಗೆ ತಿಳಿಯೋಣ.


ಚಿಯಾ ಬೀಜಗಳಲ್ಲಿರುವ ಪೋಷಕಾಂಶಗಳು
ಚಿಯಾ ಬೀಜಗಳು ಅನೇಕ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಶಿಯಮ್, ಕಬ್ಬಿಣ, ಪೊಟ್ಯಾಶಿಯಮ್, ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಜೊತೆಗೆ ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.


ಚಿಯಾ ಬೀಜಗಳ ಆರೋಗ್ಯ ಪ್ರಯೋಜನ
-ತೂಕ ಇಳಿಕೆ ಜೊತೆಗೆ ಇವು ಖಿನ್ನತೆ, ಉರಿಯೂತದ ಕರುಳಿನ ಕಾಯಿಲೆ ಮತ್ತು ಅಲರ್ಜಿ ಸಮಸ್ಯೆ ನಿವಾರಿಸಲು ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ.
-ಇದು ಮಧುಮೇಹದ ನಿರ್ವಹಣೆಗೆ ಸಹಾಯ ಮಾಡುತ್ತದೆ
-ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.


-ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ


-ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ


ಚಿಯಾ ಬೀಜ ಮತ್ತು ಮೊಸರು ಸ್ಮೂಥಿ
ನೀವು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸಿದರೆ ಚಿಯಾ ಬೀಜಗಳು ಮತ್ತು ಮೊಸರಿನ ಸ್ಮೂಥಿಯನ್ನು ಸೇವಿಸಿ. ಇದು ನಿಮ್ಮ ತೂಕ ನಷ್ಟ ಗುರಿಯನ್ನು ಸಾಧಿಸಲು ಸಹಾಯ ಮಾಡುವ ಸರಳ ಉಪಹಾರವಾಗಿದೆ ಎನ್ನುತ್ತಾರೆ ಫಿಟ್‌ನೆಸ್ ಮತ್ತು ಆರೋಗ್ಯಕರ ಆಹಾರ ತಜ್ಞೆ ದಿಶಾ ಬಾತ್ರಾ.


ಇದನ್ನೂ ಓದಿ: ಜಯನಗರದ ಬೆಸ್ಟ್​ ಬಫೆಟ್​ ರೆಸ್ಟೊರೆಂಟ್​ಗಳಿವು - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ


ಪದಾರ್ಥಗಳು


• 1 ಬೌಲ್ ಮೊಸರು
• ನೆನೆಸಿದ ಚಿಯಾ ಬೀಜಗಳು, 5-6 ಸ್ಪೂನ್
• ½ ಕತ್ತರಿಸಿದ ಸೇಬು
• ಕೆಲವು ದ್ರಾಕ್ಷಿಗಳು


ಈ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಸೇವಿಸಿ. ಚಿಯಾ ಬೀಜಗಳನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟುಕೊಳ್ಳುವುದು ಉತ್ತಮ. ಈ ಎಲ್ಲಾ ಪದಾರ್ಥಗಳು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತದ್ದು ಮತ್ತು ಈ ಸ್ಮೂಥಿ ಮಾಡಲು ಕೇವಲ 5 ನಿಮಿಷ ಸಾಕಾಗುತ್ತದೆ. ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಪೌಷ್ಠಿಕ ಆಹಾರವನ್ನು ನೀವು ಬೆಳಗ್ಗಿನ ತಿಂಡಿ ಅಥವಾ ಸ್ನ್ಯಾಕ್ಸ್ ರೀತಿಯಲ್ಲೂ ಸೇವಿಸಬಹುದು. ಬೇರೆ ಉಪಾಹಾರ ತಯಾರಿಸಲು ಸಮಯವಿಲ್ಲ ಎಂದಾಗ ಇದನ್ನು ಫಟಾಫಟ್ ಆಗಿ ತಯಾರಿಸಿಕೊಂಡು ತಿನ್ನಬಹುದು.


''ಚಿಯಾ ಬೀಜಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ ಮತ್ತು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆಯನ್ನು ಪೂರ್ಣವಾಗಿ ಇರಿಸುತ್ತವೆ. ನಿಮ್ಮ ಹಸಿವನ್ನು ನಿರ್ವಹಿಸಲು ಚಿಯಾ ಸ್ಮೂಥಿ ನಿಮಗೆ ಸಹಾಯ ಮಾಡುತ್ತದೆ" ಎಂದು ಬಾತ್ರಾ ಅವರು ಹೇಳಿದ್ದಾರೆ.


ಇದನ್ನೂ ಓದಿ: ಸರಿಯಾಗಿ ನಿದ್ರೆ ಬರ್ತಿಲ್ವ? ಹಾಗಾದ್ರೆ ಮಲಗುವ ಮುನ್ನ ಇವುಗಳನ್ನು ತಿನ್ನಿ

top videos


    ಮೊಸರು ಸಹ ಕೊಬ್ಬು ಕರಗಿಸುವ ಅತ್ಯುತ್ತಮ ಆಹಾರವಾಗಿದೆ ಎಂದು ಅವರು ಹೇಳಿದ್ದಾರೆ. ಮೊಸರು “ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು BMI ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಇರುವ ಪ್ರೋಬಯಾಟಿಕ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ, ಹೀಗಾಗಿ ತೂಕ ನಷ್ಟ ಪ್ರಕ್ರಿಯೆಯಲ್ಲಿ ಮೊಸರು ಹೆಚ್ಚು ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

    First published: