ಬೆಳಗಿನ ತಿಂಡಿ (BreakFast) ರುಚಿಕರ ಹಾಗೂ ಸ್ವಾದಿಷ್ಟವಾಗಿರಬೇಕು ಇಲ್ಲವಾದ್ರೆ ಮಕ್ಕಳು ತಿನ್ನೋದಿಲ್ಲ. ತಾನು ಮಾಡಿದ ಪ್ರತೀ ತಿಂಡಿಯನ್ನು ಮನೆ ಮಂದಿ ಮೆಚ್ಚಬೇಕು ಆಕೆಯನ್ನು ಹೊಗಳಬೇಕು ಎಂಬ ಆಸೆ ಪ್ರತಿ ಮಹಿಳೆಯರಿಗೂ (Women) ಇರುತ್ತದೆ. ಬೆಳಗಿನ ತಿನಿಸು ರುಚಿಕರ ಮತ್ತು ಸರಳವಾಗಿರಬೇಕು ಆಗ ಮಾತ್ರವೇ ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ. ಇಂದು ನಾವು ನಿಮಗಾಗಿ ಸಿದ್ಧಪಡಿಸಿರುವ ವಿಶೇಷ ಬೆಳಗಿನ ತಿನಿಸು ಆಲೂ ರೋಲ್. ಇದು ಮಕ್ಕಳಿಂದ (Children) ಹಿಡಿದು ದೊಡ್ಡವರೂ ಇಷ್ಟಪಡುವ ತಿನಿಸಾಗಿದೆ. ಆಲೂಗಡ್ಡೆ ಸಮ್ಮಿಳಿತವಾಗಿರುವ ಈ ತಂದೂರಿ ಪ್ರೋಟೀನ್, ವಿಟಮಿನ್ ಸಂಮಿಶ್ರವಾಗಿ
ಇದರಲ್ಲಿ ಬಳಸುವ ಆಲೂಗಡ್ಡೆ ಬೇಯಿಸಿದ್ದು ಇದರಿಂದ ಆಲೂಗಡ್ಡೆಯ ಸಾರ ಹಾಗೆಯೇ ಉಳಿಯುತ್ತದೆ. ಇನ್ನೇಕೆ ತಡ, ರುಚಿಕರ ತಂದೂರಿ ಆಲೂ ರೋಲ್ ಅನ್ನು ಮಾಡೋದು ಹೇಗೆ ಎಂದು ತಿಳಿಕೊಳ್ಳೋಣ, ಇಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ ನಿಮ್ಮ ಬೆಳಗಿನ ತಿಂಡಿಯನ್ನು ವೈವಿಧ್ಯಮಯ ಗೊಳಿಸಿ
ರೋಲ್ ಮಾಡಲು
*ಮೈದಾ ಹಿಟ್ಟು - 200 ಗ್ರಾಂಗಳು
*ನೀರು - 1ಕಪ್
*ಉಪ್ಪು
ಇದನ್ನೂ ಓದಿ: BreakFast Recipe: ಬೆಳಗಿನ ತಿಂಡಿಗೆ ಆರೋಗ್ಯಕರ ಮೆಂತ್ಯ, ಪಾಲಕ್ ಸೊಪ್ಪಿನ ಮಸಾಲೆ ರೊಟ್ಟಿ
ಸ್ಟಫ್ಫಿಂಗ್ ಮಾಡಲು
*ಆಲೂಗಡ್ಡೆ - 250 ಗ್ರಾಂಗಳು (ಬೇಯಿಸಿದ್ದು
*ಎಲೆಯುಳ್ಳ ತರಕಾರಿಗಳು - ಕ್ಯಾಬೇಜ್, ಲೆಟಿಸ್ ಸೊಪ್ಪು, ಈರುಳ್ಳಿ (ನಿಮ್ಮ ಆಯ್ಕೆಯದ್ದು)
*ಮೆಣಸಿನಕಾಯಿ - 1 ಸ್ಪೂನ್ (ಪೇಸ್ಟ್) ,
ಮೊಸರು - 40 ಗ್ರಾಮ್ಸ್ ,
ಎಳ್ಳೆಣ್ಣೆ - 2 ಸ್ಪೂನ್ ,
ಸಾಸಿವೆ ಎಣ್ಣೆ - 1 ಸ್ಪೂನ್ ,
ಗರಂ ಮಸಾಲಾ - 1/2 ಸ್ಪೂನ್
ಜೀರಿಗೆ ಹುಡಿ - 1/2 ಸ್ಪೂನ್
ಅರಶಿನ ಹುಡಿ - 1/2 ಸ್ಪೂನ್
ಕಾಳುಮೆಣಸಿನ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1.ಆಲೂಗಡ್ಡೆಯನ್ನು ಬೇಯಿಸಿದ ನಂತರ, ಸಿಪ್ಪೆ ಸುಲಿದು ನಿಮ್ಮ ಅಂಗೈಯಿಂದ ಅದನ್ನು ಹುಡಿಮಾಡಿಕೊಳ್ಳಿ.
2.ಇದೀಗ ಹುಡಿ ಮಾಡಿದ ಆಲೂಗಡ್ಡೆಗಳಿಗೆ, ಮೇರಿನೇಶನ್ (ನೆನೆಸಿಡುವ) ಸಾಮಾಗ್ರಿಗಳ ಎಲ್ಲಾ ಸಾಂಬಾರು ಪದಾರ್ಥಗಳನ್ನು ಸೇರಿಸಿ. ಹುಡಿ ಮಾಡಿದ ಆಲೂಗಡ್ಡೆಯೊಂದಿಗೆ ಈ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ಇದರಿಂದ ತರಕಾರಿಯೊಂದಿಗೆ ಚೆನ್ನಾಗಿ ಮಿಳಿತಗೊಳ್ಳುತ್ತದೆ.
ಇದನ್ನೂ ಓದಿ: Breakfast Recipe: ಅಕ್ಕಿ ರೊಟ್ಟಿ ತಿಂದು ಬೇಜಾರ್ ಆಗಿದ್ರೆ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ
3.ಈ ಮಿಶ್ರಣವನ್ನು 20 ನಿಮಿಷಗಳವರೆಗೆ ಹಾಗೆಯೇ ಬಿಡಿ. 250 ಸೆಲ್ಶಿಯಸ್‌ನಲ್ಲಿ ಓವನ್‌ನನ್ನು ಬಿಸಿ ಮಾಡಿ. ಈ ತಾಪಮಾನದಲ್ಲಿ ಮುಳುಗಿಸಿದ ಆಲೂಗಡ್ಡೆಯನ್ನು ಬೇಯಿಸಿ.
4.ಇದೀಗ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಹಿಟ್ಟು ನಾದಿಕೊಳ್ಳಿ ಮತ್ತು ಇದರಿಂದ ರೋಲ್ ಮಾಡಲು ಪ್ರಾರಂಭಿಸಿ. ಹಿಟ್ಟನ್ನು ಬಳಸಿಕೊಂಡು ಸಾಧ್ಯವಾದಷ್ಟು ರೋಲ್ ಗಳನ್ನು ಮಾಡಿ.
5.ಇದೀಗ ನಿಮ್ಮ ಕೈಗಳನ್ನು ಬಳಸಿಕೊಂಡು ಹಿಟ್ಟಿನ ಮಧ್ಯಭಾಗದಲ್ಲಿ ಬೇಯಿಸಿದ ಆಲೂಗಡ್ಡೆಗಳನ್ನು ಇರಿಸಿ. ವ್ರೇಪ್‌ನಾದ್ಯಂತ ಆಲೂಗಡ್ಡೆಗಳನ್ನು ಹರಡಿಸಿ ಮತ್ತು ಅದನ್ನು ಸುತ್ತಿ.
6.ನೀವು ಸುತ್ತುವ ಮುನ್ನ ಇತರ ತರಕಾರಿಗಳನ್ನು ಬಳಸಬಹುದು.
7.ಈ ಮಿಶ್ರಣದಲ್ಲಿ ಹಸಿರು ಚಟ್ನಿ ಮತ್ತು ಈರುಳ್ಳಿ ರಿಂಗ್ಸ್ ಅನ್ನು ಇರಿಸಿ ಮತ್ತು ಜೊತೆಯಾಗಿ ಸುತ್ತಿಕೊಳ್ಳಿ. ನಿಮ್ಮ ಆಲೂ ರೋಲ್ ಸವಿಯಲು ಸಿದ್ಧವಾಗಿದೆ. ಮಿಂಟ್ ಚಟ್ನಿಯೊಂದಿಗೆ ಈ ತಂದೂರಿ ಆಲೂ ರೋಲ್ ಅನ್ನು ಸವಿಯಲು ನೀಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ