Maggi Near Me: ಮ್ಯಾಗಿಯಲ್ಲೂ ಎಷ್ಟೊಂದು ವೆರೈಟಿ ಇದೆ ಗೊತ್ತಾ? ಇಲ್ಲಿ ಸಿಗುತ್ತೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Maggi Eating Places Near Me: ನಿಮಗೆ ಬೇಕಾದ ರೀತಿಯ ಮ್ಯಾಗಿಯನ್ನು ನೀವು ಎಂಜಾಯ್ ಮಾಡಬಹುದು. ಬೆಂಗಳೂರಿನಲ್ಲಿ (Bengaluru) ನೀವು ವಿಭಿನ್ನ ಹಾಗೂ ವಿಚಿತ್ರ ರೀತಿಯ ಮ್ಯಾಗಿ ಹುಡುಕುತ್ತಿದ್ದಾರೆ. ಕೆಲ ಸ್ಥಳಗಳ ಲಿಸ್ಟ್ ಇಲ್ಲಿದೆ.  

  • Share this:

ಮ್ಯಾಗಿ ನೂಡಲ್ಸ್ (Maggi Noodles) ಅಂದ್ರೆ ಮಕ್ಕಳಿಂದ (Child) ಹಿಡಿದು ದೊಡ್ಡವರ ವರೆಗೂ ಇಷ್ಟಪಡುತ್ತಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಮ್ಯಾಗಿ ಇನ್ನೂ ಆರಾಮದಾಯಕ ಆಹಾರಕ್ಕೆ ಸಮಾನಾರ್ಥಕವಾಗಿದೆ ಎಂದರೆ ತಪ್ಪಲ್ಲ. ಅದು ತಡರಾತ್ರಿಯ ತಿಂಡಿ ಅಥವಾ ಸಮಯ ಇಲ್ಲದಿದ್ದಾಗ ಬೇಗ ತಯಾರಿಸಲು ಸುಲಭ ಎಂದಾಗಿರಲಿ ನೂಡಲ್ಸ್ ಜನರಿಗೆ ಬಹಳ ಇಷ್ಟ. ಈಗಂತೂ ವೆರೈಟಿ ವೆರೈಟಿ ಮ್ಯಾಗಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೆ ಬೇಕಾದ ರೀತಿಯ ಮ್ಯಾಗಿಯನ್ನು ನೀವು ಎಂಜಾಯ್ ಮಾಡಬಹುದು. ಬೆಂಗಳೂರಿನಲ್ಲಿ (Bengaluru) ನೀವು ವಿಭಿನ್ನ ಹಾಗೂ ವಿಚಿತ್ರ ರೀತಿಯ ಮ್ಯಾಗಿ ಹುಡುಕುತ್ತಿದ್ದಾರೆ. ಕೆಲ ಸ್ಥಳಗಳ ಲಿಸ್ಟ್ ಇಲ್ಲಿದೆ.  


ಕಿಚನ್ ಆಫ್ ಜಾಯ್, ಇಂದಿರಾ ನಗರ, ಬೆಂಗಳೂರು


ಉತ್ತಮವಾದ, ಸರಳವಾದ ಮ್ಯಾಗಿ ಮಾತ್ರ ಅಲ್ಲ, ಇಲ್ಲಿ  ನಿಮಗೆ ಆಯ್ಕೆ ಮಾಡಲು ಸಾಕಷ್ಟು ವೆರೈಟಿ ಸಿಗುತ್ತದೆ. ಚೀಸ್ ಮ್ಯಾಗಿ ಮತ್ತು ಎಗ್ ಮ್ಯಾಗಿಯಿಂದ ಹಿಡಿದು ಚಿಕನ್ ಸಾಸೇಜ್ ಮ್ಯಾಗಿ, ಚಿಕನ್ ಸಾಸೇಜ್+ಎಗ್+ವೆಜ್ ಮ್ಯಾಗಿ ಮತ್ತು ಮಟನ್ ಖೀಮಾ ಮ್ಯಾಗಿ, ಕಿಚನ್ ಆಫ್ ಜಾಯ್ ಹೀಗೆ ಗಲವಾರು ವಿಧಗಳು ಇಲ್ಲಿ ಸಿಗುತ್ತದೆ.


ವಿಳಾಸ: 2ನೇ ಮಹಡಿ, ಬಾಟಾ ಶೋರೋಂ ಪಕ್ಕ, ಎಲ್ ಬಿ ಶಾಸ್ತ್ರಿ ನಗರ್, ಕಗ್ಗದಾಸಾಪುರ ಬೆಂಗಳೂರು


ಮೊಬೈಲ್ ನಂಬರ್: +918048658343


ಸಮಯ: ಬೆಳಗ್ಗೆ 11 ರಿಂದ ರಾತ್ರಿ 10ರ ವರೆಗೆ


ವಿಳಾಸ: ಇಂದಿರಾ ನಗರ್ ಡಂಬಲ್ ರೋಟ್​, ಎಚ್​ಎಎಲ್​ ಸೆಕೆಂಡ್​ ಸ್ಟೇಜ್​, ಇಂದಿರಾ ನಗರ ಬೆಂಗಳೂರು


ಮೊಬೈಲ್ ನಂಬರ್: + +918048658343


ಸಮಯ: ಬೆಳಗ್ಗೆ 11 ರಿಂದ ರಾತ್ರಿ 10ರ ವರೆಗೆ


ಟೀ ಬ್ರೀವ್​, ದೊಮ್ಮಲೂರು, ಬೆಂಗಳೂರು


ಬಿಸಿಯಾದ ಚಹಾ ಜೊತೆ ಮ್ಯಾಗಿ ಇದ್ದಾರೆ, ಆಹಾ, ಅದರ ಅನುಭವವನ್ನು ಹೇಳುವುದು ಅಸಾಧ್ಯ. ಈ ಟೀ ರೂಮ್-ಕಮ್-ರೆಸ್ಟೋರೆಂಟ್ ಟೀ ಬ್ರೀವ್​ ಕೆಲವು ವಿಶೇಷ ಮ್ಯಾಗಿಗಳನ್ನು ನೀಡುತ್ತದೆ. ಸಸ್ಯಾಹಾರಿ ಅಥವಾ ಚಿಕನ್‌ನ ನಿಮಗೆ ಬೇಕಾದ ಆಯ್ಕೆ ಇರುತ್ತದೆ. ಫ್ರೈಡ್ ಮಸಾಲಾ, ಪೆರಿ ಪೆರಿ, ಚೀಸ್ಆಲಿವ್‌ಗಳು, ಜಲಪೆನೋಸ್ ಮತ್ತು ಇಟಾಲಿಯನ್ ಮಸಾಲೆಗಳ ಮ್ಯಾಗಿ ಸಹ ಇಲ್ಲಿ ಲಭಿಸುತ್ತದೆ.


ವಿಳಾಸ: 172, ಸೆಕೆಂಡ್​ ಕ್ರಾಸ್​, ದೊಮ್ಮಲೂರು, ಬೆಂಗಳೂರು


ಮೊಬೈಲ್​ ನಂಬರ್: +919538612243


ಸಮಯ: ಮಧ್ಯಾಹ್ನ 12 ರಿಂದರಾತ್ರಿ 10ರವರೆಗೆ


ಚಾಯ್​ಪತ್ತಿ, ಇಂದಿರಾನಗರ್, ಬೆಂಗಳೂರು


ಈ ಕೆಫೆ 2010 ರಲ್ಲಿ ಮ್ಯಾಗಿಯ ಟ್ರೆಂಡ್ ಅನ್ನು ಪ್ರಾರಂಭಿಸಿದ ಬೆಂಗಳೂರಿನ ಮೊದಲ ಸ್ಥಳ. ಇದು ಸ್ನೇಹಿತರೊಂದಿಗೆ ವಾರಾಂತ್ಯದ ಹ್ಯಾಂಗ್‌ಔಟ್‌ಗೆ ಸೂಕ್ತವಾಗಿದೆ. ಈ ಪಾಕೆಟ್ ಸ್ನೇಹಿ ಕೆಫೆ ಸರಳ, ಸಸ್ಯಾಹಾರಿ, ಮೊಟ್ಟೆ ಮತ್ತು ಚಿಕನ್ ಮ್ಯಾಗಿಯನ್ನು ಒದಗಿಸುತ್ತದೆ.
ವಿಳಾಸ: 772, 2 ನೇ ಮಹಡಿ. ರಾಯ್ಲ್​ ಎನ್​ಫೀಲ್ಡ್​ ಶೋರೋಂ ಮೇಲೆ, 100 ಫೀಟ್​ ರೋಡ್​, ಇಂದಿರಾ ನಗರ, ಬೆಂಗಳೂರು


ಇದನ್ನೂ ಓದಿ: ಸೂಪರ್ ಪಲಾವ್​ ಸವಿಯೋಕೆ ಬೆಂಗಳೂರಿನ ಟಾಪ್ 5 ಸ್ಥಳಗಳೇ ಬೆಸ್ಟ್


ಮೊಬೈಲ್ ನಂಬರ್: +918041534140


ಸಮಯ: ಬೆಳಗ್ಗೆ 10 ರಿಂದ ರಾತ್ರಿ 12ರವರೆಗೆ


ಚಾಯ್​ ಪಾಯಿಂಟ್​, ಅಶೋಕ ನಗರ, ಬೆಂಗಳೂರು


ಈಗ ನಿಮಗೆ ಅದ್ಭುತವಾದ ಮ್ಯಾಗಿ ಬೇಕು ಎಂದರೆ ಚಾಯ್​ ಪಾಯಿಂಟ್​ಗೆ ಹೋಗಲೇಬೇಕು. ಅಲ್ಲದೇ, ನೀವು ಇಲ್ಲಿಂದ ಆರ್ಡರ್ ಸಹ ಮಾಡಬಹುದು. ಕ್ಲಾಸಿಕ್ ಆಯ್ಕೆಗಳು ಇಲ್ಲಿ ಲಭ್ಯವಿದ್ದು, ಅದು ಭೂಮಿಯ ಮೇಲಿನ ಸ್ವರ್ಗವಾಗಿರುತ್ತದೆ ಎಂದರೆ ತಪ್ಪಲ್ಲ.


ವಿಳಾಸ: ಎಂಜಿ ರಸ್ತೆ, ಕ್ರೇಗ್ ಪಾರ್ಕ್ ಲೇಔಟ್, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918880141000ಸಮಯ: ಬೆಳಗ್ಗೆ 9 ರಿಂದ ರಾತ್ರಿ 10ರ ವರೆಗೆ


the husband gives divorce to his wife who has been doing maggie for daily 3 times ach


ಶಿವಂ ಸ್ನಾಕ್ಸ್ ಕಾರ್ನರ್, ಎಸ್​ಜಿ ಪಲ್ಯ, ಬೆಂಗಳೂರು


ಕ್ರೈಸ್ಟ್ ವಿಶ್ವವಿದ್ಯಾನಿಲಯದ ಸುತ್ತಮುತ್ತಲಿನ ಹಲವಾರು ಜನನಿಬಿಡಾದ ಲೇನ್‌ಗಳ ನಡುವೆ ಚಿಕ್ಕಲಕ್ಷ್ಮಿ ಲೇಔಟ್ ಅಥವಾ ಚಿಕ್ ಲೇನ್ ಎಂಬ ಸ್ಥಳವಿದೆ. ಈ ಲೇನ್‌ನಲ್ಲಿ ಮ್ಯಾಗಿ ಮ್ಯಾನ್ ಎಂದು ಪ್ರಸಿದ್ಧವಾಗಿರುವ ಅಂಗಡಿಯೊಂದಿದೆ. ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರಿಗೆ ವಿವಿಧ ರೀತಿಯ ಮ್ಯಾಗಿಯನ್ನು ಈ ಅಂಗಡಿ ನೀಡುತ್ತದೆ. ದಿ ಮ್ಯಾಗಿ ಮ್ಯಾನ್ ಅಂಗಡಿ ಪಾವ್ ಭಾಜಿ, ರೊಟ್ಟಿ ಸಬ್ಜಿ, ರೋಲ್‌ಗಳು, ಸ್ಯಾಂಡ್‌ವಿಚ್‌ಗಳನ್ನು ಸಹ ನೀಡುತ್ತದೆ. ಇನ್ನು ಇಲ್ಲಿ ಈರುಳ್ಳಿ ಮ್ಯಾಗಿ, ಈರುಳ್ಳಿ ಚಿಲ್ಲಿ ಬಟರ್ ಮ್ಯಾಗಿ, ಚಿಕನ್ ಮ್ಯಾಗಿ, ಆಲೂ ಚೀಸ್ ಮ್ಯಾಗಿ, ಎಗ್ ಚೀಸ್ ಮ್ಯಾಗಿ, ಮಿಕ್ಸ್ ವೆಜ್ ಪನೀರ್ ಮ್ಯಾಗಿ ಮತ್ತು ಹಲವಾರು ವಿಧಗಳ ಮ್ಯಾಗಿ ಲಭ್ಯವಿದೆ.


ಇದನ್ನೂ ಓದಿ: ಈ ಬಾರಿ ಓಣಂ ವಿಶೇಷ ಊಟಕ್ಕೆ ಬೆಂಗ್ಳೂರಿನ ಈ ರೆಸ್ಟೊರೆಂಟ್​ಗಳು ರೆಡಿಯಾಗಿವೆ, ನೀವು ಬುಕ್ ಮಾಡಿದ್ರಾ?


ವಿಳಾಸ: 80 ಫೀಟ್​ ರೋಡ್​, 1 ನೇಮುಖ್ಯರಸ್ತೆ, ಸಿಎಲ್​ ಲೇಔಟ್​, ಎಸ್​ಜಿ ಪಾಳ್ಯ, ಬೆಂಗಳೂರು


ಮೊಬೈಲ್ ನಂಬರ್: +919739671927

top videos


    ಸಮಯ: ಬೆಳಗ್ಗೆ 9 ರಿಂದ ರಾತ್ರಿ 11ರ ವರೆಗೆ

    First published: