Food Ingredients Test: ಆಹಾರದಲ್ಲಿ ಕಲಬೆರಕೆ ಹೆಚ್ಚಳ, ಅಸಲಿ-ನಕಲಿ ಚೆಕ್ ಮಾಡೋಕೆ ಇಲ್ಲಿವೆ ಸುಲಭ ಟಿಪ್ಸ್

ಇಂದಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿರುವುದು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಇದರರ್ಥ ನಿಮ್ಮ ಊಟ ಮಾಡುವ ಆಹಾರದ ತಟ್ಟೆ ಎಷ್ಟೇ ದುಬಾರಿ ಆಗಿದ್ದರೂ ಸಹ ಅದು ಶುದ್ಧ ಮತ್ತು ಆರೋಗ್ಯಕರವಾಗಿದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಂದಿನ ದಿನಗಳಲ್ಲಿ ಜನರು (People) ಕಠಿಣವಾದ ದೈಹಿಕ (Physical) ಕೆಲಸ (Work) ಮಾಡುತ್ತಿದ್ದರು. ಹೀಗಾಗಿ ತಾಕತ್ತಿಗಾಗಿ ಗಟ್ಟಿಯಾದ ಆಹಾರ (Food) ಸೇವಿಸುತ್ತಿದ್ದರು. ಅಂದರೆ ಗೋಧಿ, ಜೋಳ, ಅಕ್ಕಿ, ರಾಗಿ, ಬಾರ್ಲಿ ಸೇರಿದಂತೆ ದ್ವಿದಳ ಧಾನ್ಯಗಳ ಹಿಟ್ಟಿನಿಂದ ಮಾಡಿದ ರೊಟ್ಟಿ ಸೇವನೆ ಮಾಡುತ್ತಿದ್ದರು. ಹೀಗಾಗಿ ಅವರು ಗಟ್ಟಿಯಾಗಿರುತ್ತಿದ್ದರು. ಎಷ್ಟೇ ಕೆಲಸ ಮಾಡಿದರೂ ಸಹ ಅವರು ದಣಿಯುತ್ತಿರಲಿಲ್ಲ. ಮತ್ತು ದುರ್ಬಲರಾಗುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಮನುಷ್ಯ ಎಷ್ಟೇ ಬಲಶಾಲಿ ಆಗಿದ್ದರೂ ಸಹ ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕು ತುಂಬಾ ಸುಸ್ತಾಗುತ್ತಾರೆ. ಇದಕ್ಕೆ ದೊಡ್ಡ ಕಾರಣ ಅಂದ್ರೆ ಅವರು ಸೇವಿಸುವ ಆಹಾರ ಪದಾರ್ಥಗಳು.

  ಆಹಾರದಲ್ಲಿ ಕಲಬೆರಕೆ

  ಆದರೆ ಇಂದಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುತ್ತಿರುವುದು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಇದರರ್ಥ ನಿಮ್ಮ ಊಟ ಮಾಡುವ ಆಹಾರದ ತಟ್ಟೆ ಎಷ್ಟೇ ದುಬಾರಿ ಆಗಿದ್ದರೂ ಸಹ ಅದು ಶುದ್ಧ ಮತ್ತು ಆರೋಗ್ಯಕರವಾಗಿದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

  ಬೇಳೆಕಾಳು, ಅಕ್ಕಿ, ತರಕಾರಿ, ಹಾಲು ಹೀಗೆ ಮುಂತಾದ ದಿನನಿತ್ಯದ ವಸ್ತುಗಳಲ್ಲಿ ಕಲಬೆರಕೆ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಇಂತಹ ಕಲಬೆರಕೆ ಮಾಡಿದ ಆಹಾರದ ಸೇವನೆ ಮಾಡುವುದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಮತ್ತು ಕೆಲವೊಮ್ಮೆ ಈ ಕಲಬೆರಕೆ ಮಾಡಿದ ಆಹಾರ ಸೇವನೆ ಮಾರಣಾಂತಿಕ ಆಗಿರುತ್ತದೆ.

  ಇದನ್ನೂ ಓದಿ: ಬಾಲಿವುಡ್ ಕಿರುತೆರೆಯ ನಟಿಯರ ಆಹಾರ ಯೋಜನೆ ಕ್ರಮ ಹಾಗೂ ಫಿಟ್ನೆಸ್ ರಹಸ್ಯ ಹೀಗಿದೆ

  ಆಹಾರದಲ್ಲಿ ಕಲಬೆರಕೆ ಮತ್ತು ರಾಸಾಯನಿಕಗಳ ಸೇರ್ಪಡೆ ಆರೋಗ್ಯಕ್ಕೆ ಹಾನಿಕರ

  ಇಂತಹ ವಸ್ತುಗಳು ಮತ್ತು ರಾಸಾಯನಿಕಗಳು ಈ ಆಹಾರ ಪದಾರ್ಥಗಳಲ್ಲಿ ಮಿಶ್ರಣವಾಗಿರುತ್ತದೆ. ಇದು ನೇರವಾಗಿ ಮೂತ್ರಪಿಂಡ, ಹೃದಯ, ಶ್ವಾಸಕೋಶ ಮತ್ತು ಕರುಳಿಗೆ ಹಾನಿ ಮಾಡುತ್ತದೆ. ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಆಹಾರ ಪದಾರ್ಥಗಳ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.

  ಇದರಿಂದಾಗಿ ಸರಿಯಾದ ಆಹಾರ ಪದಾರ್ಥ ಆಯ್ಕೆ ಮಾಡುವುದು ತುಂಬಾ ಕಷ್ಟಕರ ಆಗಿದೆ. ಈ ವೇಳೆ ನೀವು ಅಸಲಿ ಮತ್ತು ನಕಲಿ ಹಾಗೂ ಕಲಬೆರಕೆ ಪದಾರ್ಥಗಳನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು FSSAI ಮೂಲಕ ಇಲ್ಲಿ ಹೇಳಲಾಗಿದೆ.

  ಅಸಲಿ ಮತ್ತು ನಕಲಿ ಕೇಸರಿ ಪದಾರ್ಥ ಪರಿಶೀಲಿಸುವುದು ಹೇಗೆ?

  ಇದಕ್ಕಾಗಿ ಮೊದಲು ಗಾಜಿನ ಜಾರ್ ನಲ್ಲಿ 70 ರಿಂದ 80 ಡಿಗ್ರಿಗೆ ನೀರು ಬಿಸಿ ಮಾಡಿ ತುಂಬಿಸಿ. ಅದರ ನಂತರ ಅದರಲ್ಲಿ ಸ್ವಲ್ಪ ಕೇಸರಿ ಪದಾರ್ಥವನ್ನು ಸೇರಿಸಿ. ಕೇಸರಿಯು ಕಲಬೆರಕೆ ಆಗದೇ ಹೋದರೆ ಅದು ಕ್ರಮೇಣ ನೀರಿನಲ್ಲಿ ಹಳದಿ ಬಣ್ಣ ಬಿಡುತ್ತದೆ.

  ಇನ್ನು ಕಲಬೆರಕೆ ಮಾಡಿದ ಕೇಸರಿ ಪದಾರ್ಥವು ಬಿಸಿ ನೀರಿಗೆ ಹಾಕಿದ ಕೂಡಲೇ ಕೃತಕವಾಗಿ ಸೇರಿಸಲಾದ ಬಣ್ಣ ಬಿಡುಗಡೆ ಮಾಡುತ್ತದೆ. ಮತ್ತು ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿರುತ್ತದೆ.

  ಬೇಳೆ ಕಾಳುಗಳಲ್ಲಿ ದತುರದ ಮಿಶ್ರಣ ಮಾಡಲಾಗುತ್ತಿದೆ ಇದನ್ನು ಹೇಗೆ ಪರಿಶೀಲಿಸುವುದು?

  ಗಾಜಿನ ತಟ್ಟೆಯಲ್ಲಿ ಸ್ವಲ್ಪ ಸೊಪ್ಪನ್ನು ಹಾಕಿ. ಜೊತೆಗೆ ಬೇಳೆ ಕಾಳುಗಳನ್ನು ತಟ್ಟೆಗೆ ಹಾಕಿಡಿ. ನಿಮ್ಮ ತಟ್ಟೆಯಲ್ಲಿ ಕೆಲವು ಕಪ್ಪು ಬೀಜಗಳು ಇರುವುದು ಕಂಡರೆ ಅವು ದತುರದ ಬೀಜಗಳು ಎಂದು ಅರ್ಥ ಮಾಡಿಕೊಳ್ಳಿ. ಅದು ವಿಷಕಾರಿಯಾಗಿದೆ. ಆದಾಗ್ಯೂ, ಈ ಬೀಜಗಳು ಉತ್ತಮ ಗುಣಮಟ್ಟದ ದ್ವಿದಳ ಧಾನ್ಯಗಳಲ್ಲಿ ಕಂಡು ಬರುವುದಿಲ್ಲ.

  ಹಸಿರು ತರಕಾರಿಗಳಲ್ಲಿ ಕಲಬೆರಕೆ

  ತರಕಾರಿಗಳಿಗೆ ಗಾಢ ಹಸಿರು ಬಣ್ಣ ನೀಡಲು, ಪ್ಯಾರಾಫಿನ್ ದ್ರವವನ್ನು ಅದರಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಇದನ್ನು ಪರೀಕ್ಷಿಸಲು, ತರಕಾರಿ ಮೇಲೆ ಒದ್ದೆಯಾದ ಹತ್ತಿ ಉಂಡೆಯನ್ನು ಅನ್ವಯಿಸಿ. ಹತ್ತಿಯ ಬಣ್ಣ ಬದಲಾಗದೇ ಇದ್ದರೆ ಕಲಬೆರಕೆ ಇಲ್ಲವೆಂದರ್ಥ. ಒಂದು ವೇಳೆ ಬಣ್ಣ ಹಸಿರು ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆ ಎಂದು ಅರ್ಥ ಮಾಡಿಕೊಳ್ಳಿ.

  ಸಕ್ಕರೆಯಲ್ಲಿ ಯೂರಿಯಾದ ಕಲಬೆರಕೆ ಈ ರೀತಿ ಪರಿಶೀಲಿಸಿ

  ಒಂದು ಲೋಟ ನೀರಿನಲ್ಲಿ ಒಂದು ಚಮಚ ಸಕ್ಕರೆ ಬೆರೆಸಿ ಚೆನ್ನಾಗಿ ಕರಗಿಸಿ. ನಂತರ ಅದನ್ನು ವಾಸನೆ ನೋಡಿ. ಇದು ಅಮೋನಿಯ ವಾಸನೆ ಆಗಿದ್ದರೆ, ಅದು ಕಲಬೆರಕೆ ಎಂದು ಅರ್ಥ ಮಾಡಿಕೊಳ್ಳಿ.

  ಅಸಲಿ ಮತ್ತು ನಕಲಿ ಸೇಲಾ ಅಕ್ಕಿಯನ್ನು ಗುರುತಿಸುವುದು ಹೇಗೆ?

  ಗಾಜಿನ ತಟ್ಟೆಯಲ್ಲಿ ಸ್ವಲ್ಪ ಸೇಲಾ ಅಕ್ಕಿ ಹಾಕಿ. ಈಗ ಅಕ್ಕಿಯ ಮೇಲೆ ನೆನೆಸಿದ ಬಿಳಿ ಬಣ್ಣದ ಸುಣ್ಣ ಸುರಿಯಿರಿ. ಇದು ನಿಜವಾಗಿದ್ದರೆ, ಸುಣ್ಣದ ಕೆಳಭಾಗದ ಅಕ್ಕಿ ಒಂದೇ ಆಗಿರುತ್ತದೆ ಆದರೆ ನಕಲಿ ಅಕ್ಕಿಯ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

  ಇದನ್ನೂ ಓದಿ: ಅನ್ನನಾಳ ಕ್ಯಾನ್ಸರ್ ರೋಗಿಗಳು ಎದುರಿಸುವ ಸಮಸ್ಯೆಗಳು ಯಾವವು? ಸಂಶೋಧನೆ ಏನು ಹೇಳುತ್ತದೆ?

  ಅಸಲಿ ಮತ್ತು ನಕಲಿ ಗೋಧಿ ಪರೀಕ್ಷೆ ಮಾಡುವುದು ಹೇಗೆ?

  ಈ ರೀತಿಯ ಅಸಲಿ ಮತ್ತು ನಕಲಿ ಗೋಧಿಯಲ್ಲಿ ಕಲಬೆರಕೆ ಪರಿಶೀಲಿಸಲು ಎರಡು ಗಾಜಿನ ತಟ್ಟೆಗಳಲ್ಲಿ ಗೋಧಿಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ. ಕಲಬೆರಕೆ ಮಾಡಿದ ಆಹಾರ ಧಾನ್ಯಗಳಲ್ಲಿ ಗಮನಾರ್ಹ ಪ್ರಮಾಣದ ವಿದೇಶಿ ವಸ್ತುಗಳು ಕಂಡು ಬರುತ್ತವೆ.
  Published by:renukadariyannavar
  First published: