ಸಾಮಾನ್ಯವಾಗಿ ನಾವು ತುಂಬಾನೇ ಹಸಿದುಕೊಂಡಿರುವಾಗ ಮನೆಯಲ್ಲಿ ಅಡುಗೆ (Cook) ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಬೇಗನೆ ನಮಗೆ ಇಷ್ಟವಾದ ಆಹಾರವನ್ನು ಹೊರಗಡೆಯಿಂದ ಆರ್ಡರ್ (Order) ಮಾಡಿಕೊಳ್ಳುತ್ತೇವೆ. ಹೀಗೆ ಆರ್ಡರ್ ಮಾಡಿಕೊಂಡಾಗ ಕೆಲವೊಮ್ಮೆ ಈ ಆಹಾರಗಳಲ್ಲಿ (Food) ಆ ಹೊಟೇಲ್ ಮತ್ತು ರೆಸ್ಟೋರೆಂಟ್ ನವರು (Restaurant) ಏನಾದರೂ ಎಡವಟ್ಟು ಮಾಡಿಕೊಳ್ಳುವ ಅವಕಾಶಗಳು ಇರುತ್ತವೆ. ಕೆಲವೊಮ್ಮೆ ನಾವು ಹೇಳಿದ್ದೆ ಬೇರೆ, ಅವರು ನೀಡಿದ್ದೆ ಬೇರೆ ಆಗಿರುತ್ತದೆ. ಇನ್ನೂ ಕೆಲವೊಮ್ಮೆ ನಾವು ಹೆಚ್ಚಾಗಿ ಸಾಸ್ ಹಾಕಬೇಡಿ ಅಂತ ಹೇಳಿದರೆ ಅವರು ಹೆಚ್ಚು ಸಾಸ್ ಹಾಕಿ ಕಳುಹಿಸಿರುತ್ತಾರೆ. ಹೀಗೆ ಏನಾದರೊಂದು ಎಡವಟ್ಟುಗಳು ಆಗುತ್ತಲೇ ಇರುತ್ತವೆ, ಇಲ್ಲೊಂದು ದೊಡ್ಡ ಎಡವಟ್ಟು ಆಗಿದೆ ನೋಡಿ.
ಸ್ಯಾಂಡ್ವಿಚ್ ಒಳಗೆ ಸಿಕ್ತು ದೊಡ್ಡ ಚಾಕು
ತುಂಬಾ ಹೊಟ್ಟೆ ಹಸಿವು ಅಂತ ಗರ್ಭಿಣಿ ಮಹಿಳೆಯೊಬ್ಬಳು ಸಬ್ ವೇ ಇಂದ ತನಗೆ ಇಷ್ಟವಾದ ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಿರುತ್ತಾರೆ. ಅವರು ಆರ್ಡರ್ ಮಾಡಿದ ಸ್ಯಾಂಡ್ವಿಚ್ ಸರಿಯಾದ ಸಮಯಕ್ಕೆ ಮನೆಯ ಬಾಗಿಲಿಗೆ ಬಂದು ತಲುಪಿರುತ್ತದೆ. ಆದರೆ ಆಕೆ ಅದನ್ನು ಬಿಚ್ಚಿ ನೋಡಿದಾಗ ಸ್ಯಾಂಡ್ವಿಚ್ ಒಳಗೆ ಒಂದು ದೊಡ್ಡ ಚಾಕು ಇರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ತಾನು ಆರ್ಡರ್ ಮಾಡಿ ತರಿಸಿಕೊಂಡ ಸ್ಯಾಂಡ್ವಿಚ್ ನ ಉದ್ದ ಎಷ್ಟಿದೆಯೋ ಅಷ್ಟು ಉದ್ದದ ಹಳದಿ ಬಣ್ಣದ ಹ್ಯಾಂಡಲ್ ಇರುವ ಚಾಕು ಅದರ ಮಧ್ಯೆ ಇರುವುದನ್ನು ನೋಡಿದ ನೇರಿಸ್ ಮೊಯ್ಸ್ ತುಂಬಾನೇ ಕೋಪಗೊಂಡಳು.
ಸಬ್ ವೇ ಸ್ಯಾಂಡ್ವಿಚ್ ಶಾಪ್ ಗೆ ಕರೆ ಮಾಡಿ ಏನಂದ್ರು ಗೊತ್ತಾ
ಸಫೊಲ್ಕ್ ಲೋಸ್ಟಾಫ್ಟ್ ನ 21 ವರ್ಷದ ಗರ್ಭಿಣಿ ಮಹಿಳೆ ತನ್ನ ಆಹಾರ ತನ್ನ ಮನೆಗೆ ಬಂದಾಗ ಅದನ್ನು ನೋಡಿ ತುಂಬಾನೇ ಸಂತೋಷಗೊಂಡಿದ್ದರು. ಅವಳು ತನ್ನ ಸ್ಯಾಂಡ್ವಿಚ್ ಅನ್ನು ತೆರೆಯುವ ವಿಡಿಯೋವನ್ನು ತನ್ನ ಫೇಸ್‌ಬುಕ್ ಗೆ ಪೋಸ್ಟ್ ಮಾಡಿದಳು.
[embed]https://youtu.be/l6pXwsLbzVw[/embed]
17 ವಾರಗಳ ಗರ್ಭಿಣಿಯಾಗಿರುವ ನೇರಿಸ್ "ನಾನು ಈಗಷ್ಟೇ ಅದನ್ನು ತೆರೆದೆ ಮತ್ತು ಅಲ್ಲಿ ಚಾಕು ಇರುವುದನ್ನು ನೋಡಿ ನಾವಿಬ್ಬರೂ ಒಂದು ಕ್ಷಣ ಆಘಾತಗೊಂಡೆವು. ನನ್ನ ಗಂಡ ಗೊರ್ಲೆಸ್ಟನ್ ಹೈ ಸ್ಟ್ರೀಟ್ ನಲ್ಲಿರುವ ಸಬ್ ವೇ ಗೆ ಕರೆ ಮಾಡಿ 'ನಿಮ್ಮ ಬಳಿಯಿರುವ ಒಂದು ಚಾಕುವನ್ನು ನೀವು ಕಳೆದುಕೊಂಡಿದ್ದೀರಾ, ಕಳೆದು ಕೊಂಡಿದ್ದರೆ ಅದು ನಮ್ಮ ಸ್ಯಾಂಡ್ವಿಚ್ ನಲ್ಲಿ ಬಂದಿದೆ” ಎಂದು ಅವರಿಗೆ ಹೇಳಿದರು. ಅದಕ್ಕೆ ಸಬ್ ವೇ ಅವರು "ನೀವು ನಿಜವಾಗಿಯೂ ಹೇಳುತ್ತಿದ್ದೀರಾ? ಸ್ಯಾಂಡ್ವಿಚ್ ನಲ್ಲಿ ಚಾಕು ಪತ್ತೆಯಾಗಿದೆಯೇ" ಎಂದು ಕೇಳಿದರು.
ಇದನ್ನೂ ಓದಿ: Pink Sauce: ಇದೇನಿದು 'ಪಿಂಕ್ ಸಾಸ್'? ಈ ವೈರಲ್ ವಿಡಿಯೋ ಒಮ್ಮೆ ನೋಡಿ
ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಘಟನೆ ವಿವರಿಸಿದ ಮೋಯ್ಸ್ ಅವರು ಸಬ್ ವೇ ಅವರಿಂದ ಆಗಿರುವ ಈ ಅಚಾತುರ್ಯಕ್ಕಾಗಿ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ಹೀಗೆ ಚಾಕು ಇರುವ ಸ್ಯಾಂಡ್ವಿಚ್ ತಿಂದಿದ್ದರೆ ಎನಾಗುತ್ತಿತ್ತು ಗೊತ್ತಿಲ್ಲ” ಎಂದು ಹೇಳಿದರು.
ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಸಬ್ ವೇ ಸಿಬ್ಬಂದಿಗಳು
"ಇದೇ ರೀತಿಯಾಗಿ ಈ ಚಾಕು ಚಿಕ್ಕ ಮಕ್ಕಳ ಕೈ ಸೇರಿದ್ದರೆ ಏನಾಗುತ್ತಿತ್ತು ಗೊತ್ತೇ? ಅದೃಷ್ಟವಶಾತ್ ಇದು ನನ್ನ ಕೈಗೆ ಸಿಕ್ಕಿದೆ" ಎಂದು ಮೋಯ್ಸ್ ಅವರು ಹೇಳಿದರು. ಈ ವಿಷಯ ತಿಳಿದ ಕೂಡಲೇ ಸಬ್ ವೇ ಸಿಬ್ಬಂದಿಯವರು ಕ್ಷಮಿಸಿ ಎಂದು ಕೇಳಿಕೊಂಡರು ಎಂದು ಸಬ್ ವೇ ಯ ವಕ್ತಾರರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: Viral Video: ಪುಟ್ಟ ಮಗನಲ್ಲಿ ರೆಸ್ಟೋರೆಂಟ್ನ ಬಿಲ್ ಪಾವತಿಸುವಂತೆ ಹೇಳಿದ ತಂದೆ! ನಗು ತರಿಸುವಂತಹ ಉತ್ತರ ನೀಡಿದ ಮಗ
"ಎಲ್ಲಾ ಜನರ ಆರೋಗ್ಯ ಮತ್ತು ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಎಲ್ಲಾ ಫ್ರ್ಯಾಂಚೈಸ್ ಮಾಲೀಕರು ಹೆಚ್ಚಿನ ಆಹಾರ ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮತ್ತು ಯಾವಾಗಲೂ ಗ್ರಾಹಕರ ತೃಪ್ತಿಗಾಗಿ ಉತ್ಪನ್ನಗಳನ್ನು ಚೆನ್ನಾಗಿ ಪೂರೈಸುವ ನಿರೀಕ್ಷೆಯಿದೆ. ಈ ಘಟನೆಯನ್ನು ನಮ್ಮ ಗಮನಕ್ಕೆ ತಂದ ನಂತರ, ನಾವು ಇದನ್ನು ಸಂಪೂರ್ಣವಾಗಿ ತನಿಖೆ ಮಾಡಿದ್ದೇವೆ ಮತ್ತು ತಂಡವು ಗ್ರಾಹಕರಿಗೆ ಮಾಹಿತಿ ನೀಡಿದ ತಕ್ಷಣವೇ ಕ್ಷಮೆಯಾಚಿಸಿದೆ” ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ