Curd: ಮೊಸರು, ಮಜ್ಜಿಗೆ ಇಲ್ಲದೇ ಕೂಡ ಹಾಲಿಗೆ ಹೆಪ್ಪು ಹಾಕಬಹುದು; ಅದು ಹೇಗೆ ಅಂತೀರಾ?
Curd: ಮೊಸರು, ಮಜ್ಜಿಗೆ ಇಲ್ಲದೇ ಕೂಡ ಹಾಲಿಗೆ ಹೆಪ್ಪು ಹಾಕಬಹುದು; ಅದು ಹೇಗೆ ಅಂತೀರಾ?
ಸಾಂದರ್ಭಿಕ ಚಿತ್ರ
ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಿಸಿದರೂ, ಹಾಲು ಮೊಸರಾಗಿ ಬದಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚದೆ ಇರುವವರಿಗಾಗಿ ಈ ಸ್ಟೋರಿ. ಮೇಲಿನ ವಿಧಾನದ ಹೊರತಾಗಿ, ನಾವು ಮನೆಯಲ್ಲಿ ಲಭ್ಯವಿರುವ ಕೆಲವು ಸರಳ ವಿಧಾನಗಳನ್ನು ಬಳಸಿಕೊಂಡು ಮೊಸರು ಮಾಡಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಇರುವ ಹಾಲನ್ನು ಮೊಸರಾಗಿ ಪರಿವರ್ತಿಸಲು ಹಾಲಿನೊಂದಿಗೆ ಸ್ವಲ್ಪ ಮೊಸರನ್ನು ಸೇರಿಸಿ ಕೆಲವು ಗಂಟೆಗಳ ಕಾಲ ಬಿಟ್ಟರೆ ಹಾಲು ಮೊಸರಾಗುತ್ತದೆ. ಇದನ್ನು ಹಾಲಿಗೆ ಹೆಪ್ಪಾಕುವುದು ಎಂದೂ ಕರೆಯುತ್ತಾರೆ.
ಆದರೆ ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಿಸಿದರೂ, ಹಾಲು ಮೊಸರಾಗಿ ಬದಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತೋಚದೆ ಇರುವವರಿಗಾಗಿ ಈ ಸ್ಟೋರಿ. ಮೇಲಿನ ವಿಧಾನದ ಹೊರತಾಗಿ, ನಾವು ಮನೆಯಲ್ಲಿ ಲಭ್ಯವಿರುವ ಕೆಲವು ಸರಳ ವಿಧಾನಗಳನ್ನು ಬಳಸಿಕೊಂಡು ಮೊಸರು ಮಾಡಬಹುದು.
ಹಸಿರು ಮೆಣಸಿನಕಾಯಿ: ನಾವು ದೈನಂದಿನ ಅಡುಗೆಯಲ್ಲಿ ಬಳಸುವ ಹಸಿ ಮೆಣಸಿನಕಾಯಿಯಿಂದ ಮೊಸರನ್ನು ಮಾಡಬಹುದು. ಹಾಲು ತುಂಬಿದ ಬಟ್ಟಲನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಸುರಿಯಿರಿ. ನಂತರ ಅದನ್ನು ಒಲೆ ಮೇಲೆ ಇಟ್ಟು, ಅದು ಬೆಚ್ಚಗಾಗುವವರೆಗೆ ಸ್ವಲ್ಪ ಸಮಯದವರೆಗೆ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.
ಹಾಲು ಹಿತಮಿತವಾಗಿ ಬಿಸಿಯಾದಾಗ ಅದನ್ನು ಮತ್ತೆ ಒಂದು ಪಾತ್ರೆಗೆ ಸುರಿಯಿರಿ, ನಂತರ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿದ ಹಸಿ ಮೆಣಸಿನಕಾಯಿಯನ್ನು ಹಾಲಿನೊಂದಿಗೆ ಸೇರಿಸಿ. ಈಗ ಪಾತ್ರೆಯನ್ನು ಮುಚ್ಚಿ, 12 ಗಂಟೆಗಳ ಕಾಲ ಬಿಡಿ. 12 ಗಂಟೆಗಳ ನಂತರ ಹಾಲು ಮೊಸರು ಆಗುತ್ತದೆ.
ಬೆಳ್ಳಿ: ಬೆಳ್ಳಿಯಿಂದ ಮೊಸರು ಮಾಡುತ್ತಾರೆ ಅಂದ್ರೆ ನಂಬ್ತೀರಾ? ನಿಮ್ಮಲ್ಲಿರುವ ಯಾವುದೇ ಬೆಳ್ಳಿಯ ಉಂಗುರ ಅಥವಾ ಬೆಳ್ಳಿ ಸರ ಅಥವಾ ಬೆಳ್ಳಿಯ ನಾಣ್ಯದಿಂದ ನೀವು ಮೊಸರನ್ನು ಸಹ ಮಾಡಬಹುದು. ಆದರೆ ಬೆಳ್ಳಿಯಲ್ಲಿ ಯಾವುದೇ ತುಕ್ಕು ಕಲೆಗಳಿಲ್ಲವೇ ಎಂಬುವುದನ್ನು ಮೊದಲು ಖಚಿತಪಡಿಸಿಕೊಳ್ಳಿ. ನಂತರ ಬೆಳ್ಳಿಯ ನಾಣ್ಯ ಅಥವಾ ಬೆಳ್ಳಿಯ ಆಭರಣಗಳನ್ನು ಮಿತವಾಗಿ ಬಿಸಿ ಮಾಡಿ ಹಾಲಿನಲ್ಲಿ ಹಾಕಿ ಮುಚ್ಚಬೇಕು. 12 ಗಂಟೆಗಳ ನಂತರ ನೀವು ಅದನ್ನು ತೆರೆದರೆ, ಹಾಲು ಮೊಸರು ಆಗುತ್ತದೆ.
ನಿಂಬೆ: ಮಧ್ಯಮ ಬಿಸಿಯಾದ ಹಾಲಿನ ಬಟ್ಟಲನ್ನು ತೆಗೆದುಕೊಂಡು, ನಿಂಬೆ ಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಅದರ ಅರ್ಧದಷ್ಟು ರಸವನ್ನು ಹಾಲಿಗೆ ಹಿಂಡಿ. ನಂತರ ಹಾಲನ್ನು ಮುಚ್ಚಿಡಿ. 12 ಗಂಟೆಗಳ ನಂತರ ಹಾಲು ಮೊಸರು ಆಗುತ್ತದೆ.
ಕೆಂಪು ಮೆಣಸಿನ ಕಾಯಿಗಳು: ಒಣಗಿದ ಕೆಂಪು ಮೆಣಸಿನಕಾಯಿಗಳು ಬಹುತೇಕ ಹಸಿರು ಮೆಣಸಿನಕಾಯಿಯಂತೆ ಕೆಲಸ ಮಾಡುತ್ತವೆ. ಒಂದು ಪಾತ್ರೆಯಲ್ಲಿ ಮಧ್ಯಮ ಪ್ರಮಾಣದ ಬಿಸಿ ಹಾಲನ್ನು ತೆಗೆದುಕೊಂಡು ಅದರಲ್ಲಿ ನಾವು ತೆಗೆದುಕೊಂಡ ಕೆಂಪು ಮೆಣಸಿನಕಾಯಿಯನ್ನು ಹಾಕಿ. 12 ಗಂಟೆಗಳ ಕಾಲ ಅದನ್ನು ಮುಚ್ಚಿ ಮತ್ತು ನಂತರ ಅದನ್ನು ತೆರೆಯಿರಿ. ಆಗ ಹಾಲು ಮೊಸರು ಆಗಿರುತ್ತದೆ.
Published by:Monika N
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ