ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲಿ ಅಡುಗೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆ ಸಾಮಾನ್ಯ. ಕೆಲವೊಂದು ಅಡುಗೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇರಲೇಬೇಕು. ಭಾರತೀಯ ಅಡುಗೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಾಂಸಾಹಾರಿ ಅಡುಗೆಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಕೆ ಸರ್ವೇ ಸಾಮಾನ್ಯ. ಒಂದೊಳ್ಳೆ ರುಚಿಕರ ಮಸಾಲೆ ಮಾಡಲು ಬೆಳ್ಳುಳ್ಳಿ ಮತ್ತು ಈರುಳ್ಳಿ ಇರಲೇಬೇಕು. ಬೆಳ್ಳುಳ್ಳಿ ಮತ್ತು ಈರುಳ್ಳಿ ಅಡುಗೆಗೆ ಕೊಡುವ ರುಚಿ ಮತ್ತು ಪರಿಮಳವನ್ನು ಇಷ್ಟಪಡದವರಿಲ್ಲ. ಆದರೆ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹಸಿ ವಾಸನೆ ಬಹಳಷ್ಟು ಮಂದಿಗೆ ಇಷ್ಟವಾಗುವುದಿಲ್ಲ. ಯಾರು ಅಡುಗೆ ಮಾಡುತ್ತಾರೋ, ಅವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿದ ಬಳಿಕ ಅವುಗಳ ಘಾಟಿನಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ. ಆ ಎರಡು ಪದಾರ್ಥಗಳಲ್ಲಿ ಇರುವ ಕಟು ವಾಸನೆ ಕೈಗಳಿಗೆ ಅಂಟಿಕೊಳ್ಳುತ್ತದೆ. ಹೀಗಾಗಲು ಕಾರಣ ಏನು ಎಂಬುವುದು ನಿಮಗೆ ಗೊತ್ತೇ?
ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಇರುವ ಸಲ್ಫರ್ಅಂಶದಿಂದಾಗಿ ಈ ವಾಸನೆ ಬರುತ್ತದೆ. ಅವೆರಡು ಹೇರಳವಾಗಿ ಸಲ್ಫರ್ ಅಂಶವನ್ನು ಹೊಂದಿರುತ್ತವೆ. ನಿಮಗೆ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಘಾಟು ಇಷ್ಟವಿಲ್ಲವೆಂದರೆ ಅದರಿಂದ ಮುಕ್ತವಾಗಲು ಬಹಳಷ್ಟು ಉಪಾಯಗಳನ್ನು ಹುಡುಕಿರುತ್ತೀರಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ಘಾಟಿನಿಂದ ಕೂಡಲೇ ಮುಕ್ತಿ ಪಡೆಯಲು ಅತ್ಯಂತ ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಖಂಡಿತಾ ಪ್ರಯತ್ನಿಸಿ ಮತ್ತು ಕೈಗಳಿಗೆ ಹತ್ತಿಕೊಳ್ಳುವ ಬೆಳ್ಳುಳ್ಳಿ ಮತ್ತು ಈರುಳ್ಳಿಯ ಘಾಟಿನಿಂದ ಮುಕ್ತಿ ಪಡೆಯಿರಿ.
![Onion, Onion Oil, Hair Fall, Curry Leaves, Coconut Oil,ಈರುಳ್ಳಿ, ಈರುಳ್ಳಿ ಎಣ್ಣೆ, ಕೂದಲು ಉದುರುವಿಕೆ, ಕರಿಬೇವಿನ ಎಲೆ, ಕೊಬ್ಬರಿ ಎಣ್ಣೆ, ಮನೆಮದ್ದು]()
ಈರುಳ್ಳಿ
ಲಿಂಬೆ ರಸ: ನಿಮ್ಮ ಕೈಯಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ತೆಗೆಯಬೇಕೆಂದರೆ ಕೈಗೆ ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಹಾಕಿಕೊಂಡು ತಿಕ್ಕಿಕೊಳ್ಳಿ. ಬಳಿಕ ತಣ್ಣೀರಿನಿಂದ ಕೈ ತೊಳೆಯಿರಿ. ನಿಮ್ಮ ಕೈಗಳಿಗೆ ಅಂಟಿದ ವಾಸನೆ ಸಂಪೂರ್ಣವಾಗಿ ಮಾಯವಾಗುತ್ತದೆ.
ಇದನ್ನೂ ಓದಿ: ದಿವ್ಯಾ ಸುರೇಶ್ಗೆ ಮೊದಲ ಸಲ ಸಿಕ್ತು ಕಿಚ್ಚನ ಚಪ್ಪಾಳೆ: ಸ್ಪರ್ಧಿಯ ಹುಮ್ಮಸ್ಸನ್ನು ಮೆಚ್ಚಿಕೊಂಡ ಸುದೀಪ್
ಉಪ್ಪು ನೀರು: ನಿಮ್ಮ ಕೈಯಿಂದ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ತೆಗೆಯಬೇಕೆಂದರೆ ಇನ್ನೊಂದು ಉಪಾಯ ಉಪ್ಪು. ಹ್ಯಾಂಡ್ವಾಶ್ ಮತ್ತು ಉಪ್ಪನ್ನು ಕೈಗೆ ಹಾಕಿಕೊಂಡು ತಿಕ್ಕಿರಿ. ಅದು ಸ್ಕ್ರಬ್ನಂತೆ ಕೆಲಸ ಮಾಡುತ್ತದೆ.
ಆ್ಯಪಲ್ ವಿನೆಗರ್: ನೀವು ನಿಮ್ಮ ಕೈಗಳಿಗೆ ಹತ್ತಿಕೊಂಡಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯಿಂದ ಮುಕ್ತಿ ಪಡೆಯಬೇಕಾದರೆ ಆ್ಯಪಲ್ ಸೈಡರ್ ವಿನೆಗರನ್ನು ಕೂಡ ಬಳಸಬಹುದು. ಆ್ಯಪಲ್ ಸೈಡರ್ ವಿನೆಗರ್ ಕೆಲವು ಹನಿಗಳನ್ನು ತೆಗೆದುಕೊಂಡು, ನಿಮ್ಮ ಕೈಗೆ ಚೆನ್ನಾಗಿ ತಿಕ್ಕಿಕೊಳ್ಳಿ. ಬಳಿಕ ನೀರಿನಿಂದ ಕೈಗಳನ್ನು ತೊಳೆಯಿರಿ. ವಾಸನೆ ದೂರವಾಗುತ್ತದೆ.
ಇದನ್ನೂಓದಿ: Kangana Ranaut: ಬುಡಾಪೆಸ್ಟ್ನಲ್ಲಿ ನಡೆಯಲಿದೆ ಆ್ಯಕ್ಷನ್ ಸೀಕ್ವೆನ್ಸ್: ಇನ್ಸ್ಟಾ ಫ್ಯಾಮಿಲಿಗಾಗಿ ಫೋಟೋ ಹಂಚಿಕೊಂಡ ಕಂಗನಾ..!
ಟೂತ್ ಪೇಸ್ಟ್: ಟೂತ್ ಪೇಸ್ಟ್ ಕೂಡ, ಕೈಗಳಿಗೆ ಹತ್ತಿಕೊಂಡಿರುವ ಈರುಳ್ಳಿ ಅಥವಾ ಬೆಳ್ಳುಳ್ಳಿಯ ವಾಸನೆಯ ನಿವಾರಣೆಗೆ ಸಹಾಯಕವಾಗಿದೆ. ಆದರೆ ಅದು ಜೆಲ್ ಟೂತ್ ಪೇಸ್ಟ್ ಆಗಿರಬಾರದು ಅಷ್ಟೆ. ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಫ್ಲೋರೈಡ್ ಆಧಾರಿತ ಟೂತ್ಪೇಸ್ಟ್ ಬಳಿಸಿ.
ಸ್ಟೇನ್ಲೆಸ್ ಸ್ಟೀಲ್: ಈ ಸಲಹೆಯನ್ನು ನೀವು ಅಚ್ಚರಿಗೊಳ್ಳಬಹುದು. ಬೆಳ್ಳುಳ್ಳಿ ಅಥವಾ ಈರುಳ್ಳಿ ಕತ್ತರಿಸಿದ ಬಳಿಕ ಯಾವುದಾದರೂ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಯನ್ನು ನೀರಿನಲ್ಲಿ ಕೈಗಳಿಂದ ತಿಕ್ಕಿ ತೊಳೆಯಿರಿ. ಅವುಗಳಲ್ಲಿ ಇರುವ ಸಲ್ಫರ್ ಯಾವ ಲೋಹಕ್ಕಾದರೂ ಪ್ರತಿಕ್ರಿಯಿಸುತ್ತದೆ ಮತ್ತು ಕೈಗಳಿಂದ ವಾಸನೆ ಮಾಯವಾಗುತ್ತದೆ. ಇನ್ನು ಕಾಫಿಯಿಂದ ಕೈ ತೊಳೆದರೂ ಕೈಯಲ್ಲಿರುವ ಯಾವ ವಾಸನೆಯಾದರೂ ಮಾಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ