Monsoon Hair Care: ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಈ ರೀತಿ ಮಾಡಿ ನೋಡಿ

ಈ ಸಮಯದಲ್ಲಿ ಕೂದಲಿಗೆ ಇತರ ಸಮಯಕ್ಕಿಂತಲೂ ಹೆಚ್ಚಿನ ಆರೈಕೆ ಹಾಗೂ ಕಾಳಜಿಯನ್ನು ವಹಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತಲೆಗೂದಲು ಹೆಚ್ಚಿನ ಅವಧಿಯಲ್ಲಿ ಒದ್ದೆಯಾಗಿಯೇ ಇರದಂತೆ ಎಚ್ಚರ ವಹಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ಮಳೆಗಾಲದಲ್ಲಿ (Monsoon) ಕೂದಲಿನ ಆರೈಕೆ ಮಾಡುವುದು ಸವಾಲಿನ ಕೆಲಸವೇ ಸರಿ. ಮಳೆಯ ತೇವಾಂಶದ ಹೆಚ್ಚಳ ಹಾಗೂ ಶಾಖದ ಕೊರತೆಯಿಂದಾಗಿ ಕೂದಲಿನ ಸಮಸ್ಯೆಯು ಉಂಟಾಗುತ್ತದೆ. ಇದರಿಂದ ಕೂದಲು (Hair) ಉದುರುವಿಕೆ ಪ್ರಮಾಣ ಹೆಚ್ಚಾಗುವುದು ಕೂಡ. ಹಾಗೆ ಮಳೆಗಾಲದಲ್ಲಿ ತಲೆ ಸ್ನಾನ (Bath) ಮಾಡಿದ ಬಳಿಕ ತಲೆ ಕೂದಲು ಸರಿಯಾಗಿ ಒಣಗದೆ ಇದ್ದರೆ ತಲೆ ಹೊಟ್ಟಿನ (Dandruff) ಸಮಸ್ಯೆ ಕೂಡ ಎದುರಾಗುತ್ತದೆ.  ಈ ಸಮಯದಲ್ಲಿ ಕೂದಲಿಗೆ ಇತರ ಸಮಯಕ್ಕಿಂತಲೂ ಹೆಚ್ಚಿನ ಆರೈಕೆ ಹಾಗೂ ಕಾಳಜಿಯನ್ನು ವಹಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ತಲೆಗೂದಲು ಹೆಚ್ಚಿನ ಅವಧಿಯಲ್ಲಿ ಒದ್ದೆಯಾಗಿಯೇ ಇರದಂತೆ ಎಚ್ಚರ ವಹಿಸಿ.

    ಒದ್ದೆಯಾದ ನೆತ್ತಿಯನ್ನು ಸರಿಯಾಗಿ ಒಣಗಿಸಲು ಮರೆಯದಿರಿ

    ಒದ್ದೆಯಾದ ನೆತ್ತಿಯು ತಲೆ ದುರ್ವಾಸನೆಗೆ ಕಾರಣವಾಗುತ್ತದೆ. ಅದೇ ಮಳೆಗಾಲದಲ್ಲಿ ಛತ್ರಿ ಹಿಡಿದುಕೊಂಡು ಇದ್ದರೂ ಗಾಳಿಯ ಮುಖಾಂತರ ಬಂದ ಮಳೆ ನೀರು ತಲೆ ಕೂದಲನ್ನು ‌ಒದ್ದೆ ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಹೊರಗಡೆ ಹೋಗಿ ಬಂದ ಕೂಡಲೇ ನೆತ್ತಿಯನ್ನು ಸರಿಯಾಗಿ ಒಣಗಿಸಲು ಮರೆಯದಿರಿ.

    ಇದನ್ನೂ ಓದಿ: Morning Breakfast: ಕೇವಲ ಹಬ್ಬದಲ್ಲಿ ಮಾತ್ರವಲ್ಲದೇ ಬೆಳಗಿನ ತಿಂಡಿಗೂ ಸಾಬುದಾನ ಖಿಚಡಿ ಟ್ರೈ ಮಾಡಿ ನೋಡಿ

    ನಿತ್ಯ ಬಳಕೆಯ ಶ್ಯಾಂಪೂ ಬಳಸಿ

    ಸಾಮಾನ್ಯವಾಗಿ ಮಳೆಗಾಲದಲ್ಲಿ ತಲೆಕೂದಲು ತೇವಾಂಶದಲ್ಲಿ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ನಾವು ಆದಷ್ಟು ಶ್ಯಾಂಪು ಬಳಸಿ ಕೂದಲನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಮಳೆಗಾಲವೆಂದು ಈ ಅಭ್ಯಾಸವನ್ನು ನಿರ್ಲಕ್ಷಿಸಬಾರದು. ವಾರದಲ್ಲಿ ಎರಡು ಮೂರು ಬಾರಿ ಶ್ಯಾಂಪು ಉಪಯೋಗಿಸಿ ತಲೆ ಸ್ನಾನ ಮಾಡುವುದು ಉತ್ತಮ. ಅದೇ ರೀತಿ ಯಾವುದೇ ಕಾರಣಕ್ಕೂ ತಲೆಕೂದಲನ್ನು ಹೆಚ್ಚಿನ ಅವಧಿಯಲ್ಲಿ ಒದ್ದೆಯಾಗಿಯೇ ಇರದಂತೆ ಎಚ್ಚರವಹಿಸಬೇಕು.

    ಒದ್ದೆ ಕೂದಲನ್ನು ಗಂಟು ಕಟ್ಟುವ ಅಭ್ಯಾಸ ಬಿಡಿ

    ಹೆಚ್ಚಿನ ಸಂದರ್ಭದಲ್ಲಿ ನಾವು ಮನೆಯಲ್ಲಿರುವಾಗ ತಲೆಕೂದಲನ್ನು ಗಂಟುಕಟ್ಟಿ ಇಡುತ್ತೇವೆ. ಇದರಿಂದ ನಮಗೆ ತಿಳಿಯದೆ ನಮ್ಮ ಕೂದಲಿಗೆ ಹೆಚ್ಚಿನ ಘಾಸಿ ಆಗುವ ಸಾಧ್ಯತೆ ಇದೆ. ಅದರಲ್ಲೂ ಮಳೆಗಾಲದಲ್ಲಿ ಒದ್ದೆ ತಲೆಯನ್ನು ಈ ರೀತಿ ಗಂಟು ಕಟ್ಟುವ ಅಭ್ಯಾಸ ನಿಮಗಿದ್ದರೆ ತಕ್ಷಣಕ್ಕೆ ಅದನ್ನು ಬಿಟ್ಟು ಬಿಡಿ. ಇದರಿಂದ ಕೂದಲು ಉದುರುವಿಕೆಯ ಮತ್ತು ತಲೆಹೊಟ್ಟಿನ ಸಮಸ್ಯೆ ಎದುರಾಗಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಕೂದಲು ಅರೆಬರೆ ಒಣಗಿದಾಗ ಗಂಟು ಕಟ್ಟಿಕೊಳ್ಳುವ ಸಂದರ್ಭ ಎದುರಾದರೆ ಸಡಿಲವಾಗಿ ಕಟ್ಟಿ ಇಂದಿಗೂ ಕೂದಲಿಗೆ ಹೆಚ್ಚಿನ ಒತ್ತಡವನ್ನು ನೀಡದಿರಿ.

    ಒದ್ದೆಯಾದ ಕೂದಲನ್ನು ತಕ್ಷಣವೇ ಬಾಚಿಕೊಳ್ಳಬೇಡಿ

    ನಿಮ್ಮ ಒದ್ದೆಯಾದ ಕೂದಲನ್ನು ತಕ್ಷಣವೇ ಬಾಚಿಕೊಳ್ಳಬೇಡಿ ಏಕೆಂದರೆ ಅದು ದುರ್ಬಲವಾಗಿರುತ್ತದೆ. ಸರಿಯಾದ ಬಾಚಣಿಗೆಯನ್ನು ಆರಿಸಿ (ಅಗಲ-ಹಲ್ಲಿನ), ಇದರಿಂದ ಅದು ನಿಮ್ಮ ಕೂದಲನ್ನು ಸುಲಭವಾಗಿ ಬಿಡಿಸುತ್ತದೆ. ಬಾಚಣಿಗೆಯ ಹಲ್ಲುಗಳು ನಡುವೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಖಚಿತಪಡಿಸಿಕೊಳ್ಳಿ ಇದರಿಂದ ಬಾಚಣಿಗೆ ಮಾಡುವಾಗ ಕೂದಲು ಒಡೆಯುವುದಿಲ್ಲ. ಅಲ್ಲದೆ, ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ಬಾಚಣಿಗೆಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು.

    ಇದನ್ನೂ ಓದಿ: Drumstick: ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ ಹಿಂಗೆಲ್ಲಾ ಆಗುತ್ತಂತೆ ನೋಡ್ರಿ!

    ಕೂದಲಿಗೆ ಬಣ್ಣ ಹಾಕುವುದನ್ನು ತಪ್ಪಿಸಿ

    ಮಾನ್ಸೂನ್ ಸಮಯದಲ್ಲಿ ನಿಮ್ಮ ಕೂದಲಿಗೆ ಬಣ್ಣ ಹಾಕುವುದನ್ನು ತಪ್ಪಿಸಿ. ನಿಮ್ಮ ಕೂದಲನ್ನು ಬಣ್ಣ ಅಥವಾ ಹೈಲೈಟ್ ಮಾಡುವುದರಿಂದ ಅದು ಇನ್ನಷ್ಟು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಮಳೆ ನೀರು ಬಿದ್ದಾಗ ಇದು ನಿಮ್ಮ ಕೂದಲನ್ನು ಡ್ರೈ ಮಾಡುವ ಸಾಧ್ಯತೆ ಇರುತ್ತದೆ.

    ಪರಿಮಳ ಆದರಿಸಿ ಕೂದಲ ಉತ್ಪನ್ನಗಳನ್ನು ಖರೀದಿಸಬೇಡಿ

    ಕೆಲವರು ಪರಿಮಳವನ್ನು ಆಧರಿಸಿ ಕೂದಲಿನ ಉತ್ಪನ್ನಗಳನ್ನು ಖರೀದಿಸುತ್ತಾರೆ. ಸಿಹಿ ಸುವಾಸನೆಯುಳ್ಳ ಉತ್ಪನ್ನಗಳು ಸಹ ನಿಮ್ಮ ನೆತ್ತಿಯ ಮೇಲೆ ತೈಲಗಳ ಸಂಗ್ರಹವನ್ನು ಉಂಟುಮಾಡಬಹುದು, ಅವುಗಳು ತೊಳೆಯದಿದ್ದರೆ, ಅದರ ಜೊತೆಗೆ ಮಳೆನೀರು ಕೂಡ ಬಿದ್ದಾಗ ನೆತ್ತಿಯ ವಾಸನೆಗೆ ಕಾರಣವಾಬಹುದು. ಇಂತಹ ಕೂದಲಿನ ಉತ್ಪನ್ನವನ್ನು ಮಳೆಗಾಲದಲ್ಲಿ ಆದಷ್ಟು ತ್ಯಜಿಸುವುದು ಉತ್ತಮ.
    Published by:Swathi Nayak
    First published: